ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Ford Equator Sport ಎಸ್‍ಯುವಿ

ಫೋರ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಿರಬಹುದು ಆದರೆ ಇದು ನಮ್ಮ ನೆರೆಯ ಮಾರುಕಟ್ಟೆಯಲ್ಲಿ ಸಾಕಷ್ಟು ಸಕ್ರಿಯವಾಗಿದೆ. ಅದರ ಚೀನೀ ಪಾಲುದಾರ - ಜಿಯಾಂಗ್ಲಿಂಗ್ ಮೋಟಾರ್ಸ್ ಸಹಯೋಗದೊಂದಿಗೆ, ಅಮೇರಿಕನ್ ಕಾರು ತಯಾರಕರು ಚೀನಾದ ಮತ್ತೊಂದು ನಿರ್ದಿಷ್ಟ ಮಾದರಿಯನ್ನು ಪರಿಚಯಿಸಿದ್ದಾರೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Ford Equator Sport ಎಸ್‍ಯುವಿ

ಫೋರ್ಡ್ ಈಕ್ವೇಟರ್ ಸ್ಪೋರ್ಟ್ ಎಸ್‍ಯುವಿಯನ್ನು ಅಧಿಕೃತವಾಗಿ ಗುವಾಂಗ್‌ಝೌ ಆಟೋ ಶೋನಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನವನ್ನು ಮಾಡಿದೆ. ಹೊಸ ಫೋರ್ಡ್ ಈಕ್ವೇಟರ್ ಸ್ಪೋರ್ಟ್ ಎಸ್‍ಯುವಿಯು ಹೆಚ್ಚು ಮೈಲ್ಡ್-ರೋಡರ್ ಆಗಿದೆ. ಈ ಹೊಸ ಫೋರ್ಡ್ ಈಕ್ವೇಟರ್ ಸ್ಪೋರ್ಟ್ ಮಾದರಿಯು ಹೋಂಡಾ ಸಿಆರ್-ವಿ ಎಸ್‍ಯುವಿಗೆ ಪೈಪೋಟಿ ನೀಡುತ್ತದೆ. ದೊಡ್ಡದಾದ ಮೂರು-ಸಾಲಿನ ಸ್ಟ್ಯಾಂಡರ್ಡ್ ಈಕ್ವೇಟರ್ ಎಸ್‍ಯುವಿಯು ಈ ವರ್ಷದ ಮಾರ್ಚ್‌ನಲ್ಲಿ ಜಾಗತಿಕವಾಗಿ ಪಾದಾರ್ಪಣೆ ಮಾಡಿತು.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Ford Equator Sport ಎಸ್‍ಯುವಿ

ಪ್ರಮುಖ ವ್ಯತ್ಯಾಸವು ಸಾಕಷ್ಟು ಸ್ಪಷ್ಟವಾಗಿ ಅದರ ಆಯಾಮಗಳೊಂದಿಗೆ ಪ್ರಾರಂಭವಾಗುತ್ತದೆ. ವಿನ್ಯಾಸ ಶೈಲಿಯ ಸಾಮ್ಯತೆಗಳಿಗಾಗಿ, ಈಕ್ವಟರ್ ಸ್ಪೋರ್ಟ್ ಮುಂಭಾಗದಲ್ಲಿ ಅದೇ ದೊಡ್ಡ ರೇಡಿಯೇಟರ್ ಗ್ರಿಲ್ ಅನ್ನು ಹೊಂದಿದೆ, ಇದು ಸಿ-ಆಕಾರದ ಡಿಆರ್ಎಲ್ ಗಳೊಂದಿಗೆ ತೆಳುವಾದ ಎಲ್ಇಡಿ ಹೆಡ್‌ಲೈಟ್‌ಗಳಿಂದ ಸುತ್ತುವರಿಯಲ್ಪಟ್ಟಿದೆ. ಸಿಲ್ವರ್ ಬಣ್ಣದ ಸ್ಕಿಡ್ ಪ್ಲೇಟ್ ಜೊತೆಗೆ ದಪ್ಪನಾದ ಮುಂಭಾಗದ ಬಂಪರ್ ಎಸ್‍ಯುವಿಗೆ ಒರಟಾದ ಲುಕ್ ಅನ್ನು ನೀಡುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Ford Equator Sport ಎಸ್‍ಯುವಿ

ಸೈಡ್ ಪ್ರೊಫೈಲ್ ಬೃಹತ್ ವ್ಹೀಲ್ ಅರ್ವಾರ್ ಗಳು ಮತ್ತು ಬ್ಲ್ಯಾಕ್ ಹೊದಿಕೆಗಳಿಂದ ಸುತ್ತುವ ಡೋರ್ ಸಿಲ್‌ಗಳೊಂದಿಗೆ ಮಸ್ಕಲರ್ ಆಕರ್ಷಣೆಯನ್ನು ಸೇರಿಸುತ್ತದೆ. 20-ಇಂಚಿನ 5-ಸ್ಪೋಕ್ ಅಲಾಯ್ ವ್ಹೀಲ್ ಗಳ ಜೊತೆಗೆ ಸೈಡ್ ಪ್ಯಾನೆಲ್‌ಗಳಲ್ಲಿ ಕ್ರೀಸ್‌ಗಳು ಎಸ್‍ಯುವಿಗೆ ಅತ್ಯಾಧುನಿಕತೆಯ ಲುಕ್ ಅನ್ನು ನೀಡುತ್ತದೆ. ಹಿಂಭಾಗದಲ್ಲಿ, ಟೈಲ್‌ಲೈಟ್‌ಗಳನ್ನು ಸಂಪರ್ಕಿಸುವ ಎಲ್‌ಇಡಿ ಸ್ಟ್ರಿಪ್ ಹೊಂದಿಲ್ಲ,

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Ford Equator Sport ಎಸ್‍ಯುವಿ

ಪ್ರಮುಖ ವ್ಯತ್ಯಾಸವೆಂದರೆ ಈಕ್ವಟರ್ ಸ್ಪೋರ್ಟ್‌ನ ಸಣ್ಣ ಆಯಾಮಗಳು. ಎಸ್‌ಯುವಿಯು 2,765 ಎಂಎಂ ವೀಲ್‌ಬೇಸ್ ಅನ್ನು ನೀಡುತ್ತದೆ, ಇದು ದೊಡ್ಡ ಈಕ್ವಟರ್ ಕ್ಕಿಂತ 140 ಎಂಎಂ ಚಿಕ್ಕದಾಗಿದೆ. ಒಟ್ಟಾರೆ ಉದ್ದವು 4630 ಎಂಎಂ ಆಗಿದೆ, ಇದು ದಕ್ಷಿಣ ಅಮೆರಿಕಾದ ಮಾರುಕಟ್ಟೆಗಳಲ್ಲಿ ಫೋರ್ಡ್ ಮಾರಾಟ ಮಾಡುವ ಟೆರಿಟರಿ ಮಿಡ್ ಎಸ್‍ಯುವಿಗೆ ಹೋಲುತ್ತದೆ. ಈಕ್ವಟರ್ ಸ್ಪೋರ್ಟ್ 1750 ಎಂಎಂ ಎತ್ತರದಲ್ಲಿದೆ, ಇದು ಸ್ಟ್ಯಾಂಡರ್ಡ್ ಈಕ್ವಟರ್ ಹೋಲುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Ford Equator Sport ಎಸ್‍ಯುವಿ

ಕ್ಯಾಬಿನ್‌ನ ಒಳಗಿನ ದೊಡ್ಡ ಬದಲಾವಣೆಯೆಂದರೆ ಸೀಟ್ ವಿನ್ಯಾಸವಾಗಿದ್ದು, ಇದು ದೊಡ್ಡ ಮಾದರಿಯಲ್ಲಿ ಬೋರ್ಡರ್‌ಗಳಲ್ಲಿ ಆರು ಅಥವಾ ಏಳು ಮಂದಿಗೆ ವಿರುದ್ಧವಾಗಿ ಈಕ್ವಟರ್ ಸ್ಪೋರ್ಟ್‌ನಲ್ಲಿ ಐದು ಪ್ರಯಾಣಕರಿಗೆ ಅವಕಾಶ ಕಲ್ಪಿಸುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Ford Equator Sport ಎಸ್‍ಯುವಿ

ಇದನ್ನು ಹೊರತುಪಡಿಸಿ, ಇದು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇಗಾಗಿ ಡ್ಯುಯಲ್-ಸ್ಕ್ರೀನ್ ಲೇಔಟ್‌ನೊಂದಿಗೆ ಹೆಚ್ಚು ಕಡಿಮೆ ಅದೇ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಪಡೆಯುತ್ತದೆ. ಕ್ಯಾಬಿನ್ ಒಟ್ಟಾರೆ ನೋಟವು ಆಕರ್ಷಕವಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Ford Equator Sport ಎಸ್‍ಯುವಿ

ಹೊಸ ಈಕ್ವೇಟರ್ ಸ್ಪೋರ್ಟ್ ಎಸ್‍ಯುವಿಯಲ್ಲಿ ಹೊಸ 1.5-ಲೀಟರ್, ನಾಲ್ಕು ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 170 ಬಿಹೆಚ್‍ಪಿ ಪವರ್ ಮತ್ತು 260 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮೂಲಕ ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Ford Equator Sport ಎಸ್‍ಯುವಿ

ಈ ಹೊಸ ಈಕ್ವೇಟರ್ ಸ್ಪೋರ್ಟ್ ಎಸ್‍ಯುವಿಯು 180 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿರುತ್ತದೆ. ಇನ್ನು ಸ್ಟ್ಯಾಂಡರ್ಡ್ ಈಕ್ವೇಟರ್ ಎಸ್‍ಯುವಿ ಮಾದರಿಯು 2.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು ಡಿಸಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Ford Equator Sport ಎಸ್‍ಯುವಿ

ಅಮೆರಿಕಾ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಫೋರ್ಡ್ 1990ರ ದಶಕದಿಂದಲೂ ಭಾರತೀಯ ಮಾರುಕಟ್ಟೆಯಲ್ಲಿ ವಾಹನಗಳನ್ನು ಮಾರಾಟ ಮಾಡುತ್ತಿತ್ತು. ಈ ಫೋರ್ಡ್ ಕಂಪನಿಯು ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಾರ್ಯಚರಣೆ ನಡೆಸುತ್ತಿರುವ ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ಫೋರ್ಡ್ ಕಂಪನಿಯು ಕಳೆದ 10 ವರ್ಷಗಳಿಂದ ಭಾರತದಲ್ಲಿ ಸುಮಾರು 2 ಬಿಲಿಯನ್ ಡಾಲರ್ ನಷ್ಟವನ್ನು ಅನುಭವಿಸಿದೆ. ಫೋರ್ಡ್ ಭಾರತದಲ್ಲಿ ಉತ್ಪಾದನೆಯನ್ನು ನಿಲ್ಲಿಸುವ ಸುದ್ದಿಯಯು ಫೋರ್ಡ್ ಅಭಿಮಾನಿಗಳು ಮಾತ್ರವಲ್ಲ, ವಿಮರ್ಶಕರಿಗೂ ಬೇಸರವಾಗಿತ್ತು.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Ford Equator Sport ಎಸ್‍ಯುವಿ

ಫೋರ್ಡ್ 25 ವರ್ಷಗಳಿಗಿಂತ ಹೆಚ್ಚು ಕಾಲ ಭಾರತದಲ್ಲಿ ಕಾರ್ಯಚರಣೆಯನ್ನು ನಡೆಸಿದೆ. ಭಾರತದಲ್ಲಿ ಉತ್ಪಾದನೆಯನ್ನು ನಿಲ್ಲಿಸುವ ಮುನ್ನ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಎಂಡೀವರ್ ಎಸ್‍ಯುವಿಯನ್ನು ಉಳಿಸಲು ಪ್ರಯತ್ನಿಸಿತು. ಆದರೆ ಅದದು ಯಶ್ವಸಿಯಾಗಿಲ್ಲ. ಹೊಸ ವರದಿ ಪ್ರಕಾರ, ಫೋರ್ಡ್ ಎಂಡೀವರ್ ಎಸ್‍ಯುವಿಯನ್ನು ಭಾರತಕ್ಕೆ ಮರಳಿ ತರಲು ಫೋರ್ಡ್ ಚಿಂತಿಸುತ್ತಿದೆ. ಚೆನ್ನೈನಲ್ಲಿನ ಅದರ ಉತ್ಪಾದನಾ ಘಟಕದ ಹೊರತಾಗಿ, ಎಂಡೀವರ್ ಅನ್ನು ಥೈಲ್ಯಾಂಡ್, ವಿಯೆಟ್ನಾಂ ಮತ್ತು ಚೀನಾದಲ್ಲಿ ಉತ್ಪಾದಿಸಲಾಗುತ್ತಿದೆ. ಅಲ್ಲಿ ಈ ಎಸ್‍ಯುವಿ ಮಾದರಿಗೆ ಎವರೆಸ್ಟ್ ಎಂದು ನಾಮಕರಣ ಮಾಡಲಾಗಿದೆ. ಫೋರ್ಡ್ 2.0-ಲೀಟರ್ ಬೈ-ಟರ್ಬೊ ಡೀಸೆಲ್ ಎಂಜಿನ್‌ನೊಂದಿಗೆ ಎಂಡೀವರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಬಹುದು ಎಂದು ವರದಿಗಳು ಸೂಚಿಸುತ್ತವೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Ford Equator Sport ಎಸ್‍ಯುವಿ

ಇನ್ನು ಭಾರತದ ಬಿಡುಗಡೆಗೆ ಸಂಬಂಧಿಸಿದಂತೆ, ಭಾರತದಲ್ಲಿ ಈಕ್ವಟರ್ ಎಸ್‌ಯುವಿ ಅಥವಾ ಈಕ್ವೇಟರ್ ಸ್ಪೋರ್ಟ್ ಅನ್ನು ಬಿಡುಗಡೆ ಮಾಡುವ ಯಾವುದೇ ಯೋಜನೆಗಳಿಲ್ಲ. ಫೋರ್ಡ್ ಅವರು ಮುಸ್ತಾಂಗ್ ಅಥವಾ ಮ್ಯಾಕ್-ಇ ನಂತಹ ಉನ್ನತ-ಮಟ್ಟದ ಪ್ರೀಮಿಯಂ ಮಾದರಿಗಳ ಮೇಲೆ ಕೇಂದ್ರೀಕರಿಸುವುದಾಗಿ ಹೇಳಿದ್ದಾರೆ. ಇವುಗಳನ್ನು ಸಿಬ್ವಿಯು ಗಳಾಗಿ ಆಮದು ಮಾಡಿಕೊಳ್ಳಲಾಗುತ್ತದೆ. ಸಿಬಿಯು ಆಗಿ ಬರುವುದರಿಂದ ಈ ಮಾದರಿಗಳಿಗೆ ಗಮನಾರ್ಹವಾಗಿ ಹೆಚ್ಚಿನ ಬೆಲೆಯನ್ನು ಹೊಂದಿರುತ್ತದೆ.

More from DriveSpark

Article Published On: Monday, November 22, 2021, 11:31 [IST]
English summary
Ford introduced new equator sport suv with 1 5 turbo petrol engine details
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+