ಮಾರಾಟದಲ್ಲಿ ಹೊಸ ದಾಖಲೆ ಬರೆದ ಫೋರ್ಡ್ ಮಸ್ಟಾಂಗ್ ಸ್ಪೋರ್ಟ್ಸ್ ಕಾರು

ಫೋರ್ಡ್ ಅಮೆರಿಕಾದ ಖ್ಯಾತ ಕಾರು ತಯಾರಕ ಕಂಪನಿಯಾಗಿದೆ. ಫೋರ್ಡ್ ಕಂಪನಿಯ ಮಸ್ಟಾಂಗ್ ಕಾರು ಮತ್ತೊಮ್ಮೆ ವಿಶ್ವದ ಅತಿ ಹೆಚ್ಚು ಮಾರಾಟವಾದ ಸ್ಪೋರ್ಟ್ಸ್ ಕಾರ್ ಹಾಗೂ ಸ್ಪೋರ್ಟ್ಸ್ ಕೂಪೆ ಕಾರ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.

ಮಾರಾಟದಲ್ಲಿ ಹೊಸ ದಾಖಲೆ ಬರೆದ ಫೋರ್ಡ್ ಮಸ್ಟಾಂಗ್ ಸ್ಪೋರ್ಟ್ಸ್ ಕಾರು

ಫೋರ್ಡ್ ಕಂಪನಿಯು 2020ರಲ್ಲಿ ಮಸ್ಟಾಂಗ್ ಕೂಪೆಯ 80,577 ಯುನಿಟ್‌ಗಳನ್ನು ಜಾಗತಿಕವಾಗಿ ಮಾರಾಟ ಮಾಡಿದೆ ಎಂದು ಹೆಚ್‌ಐಎಸ್ ಮಾರ್ಕಿಟ್ ನಡೆಸಿದ ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಈ ಕಾರು ಜಾಗತಿಕ ಸ್ಪೋರ್ಟ್ಸ್ ಕೂಪೆ ಮಾರುಕಟ್ಟೆಯಲ್ಲಿ 15.1%ರಷ್ಟು ಪಾಲನ್ನು ಹೊಂದಿದೆ.

ಮಾರಾಟದಲ್ಲಿ ಹೊಸ ದಾಖಲೆ ಬರೆದ ಫೋರ್ಡ್ ಮಸ್ಟಾಂಗ್ ಸ್ಪೋರ್ಟ್ಸ್ ಕಾರು

2019ರಲ್ಲಿ ಫೋರ್ಡ್ ಮಸ್ಟಾಂಗ್ ಒಟ್ಟು ಮಾರುಕಟ್ಟೆಯಲ್ಲಿ 14.8%ರಷ್ಟು ಪಾಲನ್ನು ಹೊಂದಿತ್ತು. ಫೋರ್ಡ್ ಮಸ್ಟಾಂಗ್ ಕಳೆದ ಆರು ವರ್ಷಗಳಿಂದ ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಪೋರ್ಟ್ಸ್ ಕೂಪೆ ಕಾರು ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಮಾರಾಟದಲ್ಲಿ ಹೊಸ ದಾಖಲೆ ಬರೆದ ಫೋರ್ಡ್ ಮಸ್ಟಾಂಗ್ ಸ್ಪೋರ್ಟ್ಸ್ ಕಾರು

ಮುಂದಿನ ಎರಡು ವರ್ಷಗಳಲ್ಲಿ ಫೋರ್ಡ್ ಮಸ್ಟಾಂಗ್ ವಿಶ್ವದ ಅತಿ ಹೆಚ್ಚು ಮಾರಾಟವಾಗುವ ಸ್ಪೋರ್ಟ್ಸ್ ಕಾರ್ ಆಗಿರಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ ಕಂಪನಿಯು ಈ ಸೆಗ್'ಮೆಂಟಿನ ಸರಿಯಾದ ಮಾರಾಟ ಅಂಕಿಅಂಶಗಳನ್ನು ಬಹಿರಂಗಪಡಿಸಿಲ್ಲ.

ಮಾರಾಟದಲ್ಲಿ ಹೊಸ ದಾಖಲೆ ಬರೆದ ಫೋರ್ಡ್ ಮಸ್ಟಾಂಗ್ ಸ್ಪೋರ್ಟ್ಸ್ ಕಾರು

ಇದರ ಜೊತೆಗೆ ಕಳೆದ ವರ್ಷ ಬುಲ್ಲಿಟ್ ಹಾಗೂ ಶೆಲ್ಬಿ ಕಾರುಗಳ ಮಾರಾಟವು 52.7%ನಷ್ಟು ಹೆಚ್ಚಾಗಿದೆ. 2021ರ ಮಾದರಿಗಾಗಿ ಫೋರ್ಡ್ ಕಂಪನಿಯು ಬುಲ್ಲಿಟ್, ಶೆಲ್ಬಿ ಜಿಟಿ 350 ಆರ್ ಹಾಗೂ ಶೆಲ್ಬಿ ಜಿಟಿ 350 ಕಾರುಗಳನ್ನು ಸ್ಥಗಿತಗೊಳಿಸುತ್ತಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಮಾರಾಟದಲ್ಲಿ ಹೊಸ ದಾಖಲೆ ಬರೆದ ಫೋರ್ಡ್ ಮಸ್ಟಾಂಗ್ ಸ್ಪೋರ್ಟ್ಸ್ ಕಾರು

ಕಂಪನಿಯು ಈ ಕಾರುಗಳ ಬದಲು ಮ್ಯಾಕ್ 1 ಅನ್ನು ಸೇರಿಸಲು ನಿರ್ಧರಿಸಿದೆ. ಶೆಲ್ಬಿ ಜಿಟಿ 500 ಮಾದರಿಯೂ ಸಹ ಮುಂದುವರೆಯಲಿದೆ. ವರದಿಗಳ ಪ್ರಕಾರ ಫೋರ್ಡ್ ಮಸ್ಟಾಂಗ್ 61,090 ಯುನಿಟ್ ಮಾರಾಟದೊಂದಿಗೆ 6 ವರ್ಷಗಳ ಕಾಲ ಅಮೆರಿಕಾದಲ್ಲಿ ಹೆಚ್ಚು ಮಾರಾಟವಾದ ಸ್ಪೋರ್ಟ್ಸ್ ಕಾರ್ ಆಗಿದೆ.

ಮಾರಾಟದಲ್ಲಿ ಹೊಸ ದಾಖಲೆ ಬರೆದ ಫೋರ್ಡ್ ಮಸ್ಟಾಂಗ್ ಸ್ಪೋರ್ಟ್ಸ್ ಕಾರು

ಅಮೆರಿಕಾ ಈ ಕಾರಿನ ದೊಡ್ಡ ಮಾರುಕಟ್ಟೆಯಾಗಿದೆ. ಈ ಕಾರಿನ ಒಟ್ಟು ಮೂರನೇ ಎರಡರಷ್ಟು ಮಾರಾಟವು ಅಮೆರಿಕಾದಲ್ಲಿ ಆಗಿದೆ. 2020ರಲ್ಲಿ ಟೆಕ್ಸಾಸ್'ನಲ್ಲಿ 8,600 ಯುನಿಟ್, ಕ್ಯಾಲಿಫೋರ್ನಿಯಾದಲ್ಲಿ 6,200 ಯುನಿಟ್ ಹಾಗೂ ಫ್ಲೋರಿಡಾದಲ್ಲಿ 5,864 ಯುನಿಟ್ ಮಸ್ಟಾಂಗ್ ಕಾರುಗಳನ್ನು ಮಾರಾಟ ಮಾಡಲಾಗಿದೆ.

MOSTREAD: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಮಾರಾಟದಲ್ಲಿ ಹೊಸ ದಾಖಲೆ ಬರೆದ ಫೋರ್ಡ್ ಮಸ್ಟಾಂಗ್ ಸ್ಪೋರ್ಟ್ಸ್ ಕಾರು

ಕರೋನಾ ಸಾಂಕ್ರಾಮಿಕದಿಂದಾಗಿ ಈ ಕಾರಿನ ಒಟ್ಟು ಮಾರಾಟವು 2019ರಿಂದ 15.7%ನಷ್ಟು ಕಡಿಮೆಯಾಗಿದೆ. ಫೋರ್ಡ್ ಮಸ್ಟಾಂಗ್ ಕಾರಿನಲ್ಲಿ 5.0-ಲೀಟರ್ ವಿ 8 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಮಾರಾಟದಲ್ಲಿ ಹೊಸ ದಾಖಲೆ ಬರೆದ ಫೋರ್ಡ್ ಮಸ್ಟಾಂಗ್ ಸ್ಪೋರ್ಟ್ಸ್ ಕಾರು

ಈ ಎಂಜಿನ್ 396 ಬಿಹೆಚ್‌ಪಿ ಪವರ್ ಹಾಗೂ 515 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಫೋರ್ಡ್ ಕಂಪನಿಯು ಈ ಎಂಜಿನ್‌ನೊಂದಿಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ನೀಡಿದೆ.

MOSTREAD: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಮಾರಾಟದಲ್ಲಿ ಹೊಸ ದಾಖಲೆ ಬರೆದ ಫೋರ್ಡ್ ಮಸ್ಟಾಂಗ್ ಸ್ಪೋರ್ಟ್ಸ್ ಕಾರು

ಹೊಸ ಬಿಎಸ್ 6 ಮಾಲಿನ್ಯ ನಿಯಮಗಳು ಜಾರಿಯಾದ ನಂತರ ಈ ಕಾರಿನ ಮಾರಾಟವನ್ನು ದೇಶಿಯ ಮಾರುಕಟ್ಟೆಯಲ್ಲಿ ನಿಲ್ಲಿಸಲಾಗಿದೆ. ಫೋರ್ಡ್ ಕಂಪನಿಯು ಶೀಘ್ರದಲ್ಲೇ ಹೊಸ ಬಿಎಸ್ 6 ಮಸ್ಟಾಂಗ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

Most Read Articles

Kannada
Read more on ಫೋರ್ಡ್ ford
English summary
Ford Mustang sports car creates new record in sales. Read in Kannada.
Story first published: Friday, April 30, 2021, 21:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X