ವಾಹನ ಸವಾರರೇ ಗಮನಿಸಿ: ಇನ್ಮುಂದೆ ಫಾಸ್ಟ್‌ಟ್ಯಾಗ್ ಮೂಲಕವೂ ಇಂಧನ ಖರೀದಿಸಿ

ಇನ್ನು ಮುಂದೆ ವಾಹನ ಸವಾರರು ದೇಶದ ಆಯ್ದ ಪೆಟ್ರೋಲ್ ಬಂಕ್'ಗಳಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಇಂಧನ ಖರೀದಿಸಬಹುದು. ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ಹಾಗೂ ಐಸಿಐಸಿಐ ಬ್ಯಾಂಕ್ ಸಹಭಾಗಿತ್ವದಲ್ಲಿ ಪೆಟ್ರೋಲ್ ಬಂಕ್'ಗಳಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಕ್ಯಾಶ್ ಲೆಸ್ ಹಾಗೂ ಕಾಂಟ್ಯಾಕ್ಟ್ ಲೆಸ್ ಸೇವೆಗೆ ಚಾಲನೆ ನೀಡಲಾಗಿದೆ.

ವಾಹನ ಸವಾರರೇ ಗಮನಿಸಿ: ಇನ್ಮುಂದೆ ಫಾಸ್ಟ್‌ಟ್ಯಾಗ್ ಮೂಲಕವೂ ಇಂಧನ ಖರೀದಿಸಿ

ಐಸಿಐಸಿಐ ಬ್ಯಾಂಕಿನೊಂದಿಗೆ ಲಿಂಕ್ ಆಗಿರುವ ಫಾಸ್ಟ್‌ಟ್ಯಾಗ್ ಬಳಕೆದಾರರು ದೇಶಾದ್ಯಂತವಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್'ಗಳಲ್ಲಿ ಈ ಪ್ರಯೋಜನಗಳನ್ನು ಪಡೆಯಬಹುದು. ಈ ಬಗ್ಗೆ ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.

ವಾಹನ ಸವಾರರೇ ಗಮನಿಸಿ: ಇನ್ಮುಂದೆ ಫಾಸ್ಟ್‌ಟ್ಯಾಗ್ ಮೂಲಕವೂ ಇಂಧನ ಖರೀದಿಸಿ

ಐಸಿಐಸಿಐ ಬ್ಯಾಂಕ್ ಫಾಸ್ಟ್‌ಟ್ಯಾಗ್ ಬಳಕೆದಾರರು ಇನ್ನು ಮುಂದೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್'ಗಳಲ್ಲಿ ಸಂಪೂರ್ಣ ಡಿಜಿಟಲೀಕರಣಗೊಂಡ ಅನುಭವವನ್ನು ಪಡೆಯಬಹುದು. ಫಾಸ್ಟ್‌ಟ್ಯಾಗ್ ಮೂಲಕ ಇಂಧನ ತುಂಬುವುದು ಸುಲಭವಾಗಲಿದೆ ಎಂದು ಹೇಳಿಕೆಯಲ್ಲಿ ಹೇಳಲಾಗಿದೆ.

ವಾಹನ ಸವಾರರೇ ಗಮನಿಸಿ: ಇನ್ಮುಂದೆ ಫಾಸ್ಟ್‌ಟ್ಯಾಗ್ ಮೂಲಕವೂ ಇಂಧನ ಖರೀದಿಸಿ

ಮೊದಲ ಹಂತದಲ್ಲಿ, ಈ ಸೌಲಭ್ಯವು ಭಾರತದಾದ್ಯಂತವಿರುವ ಸುಮಾರು 3,000 ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್'ಗಳಲ್ಲಿ ಲಭ್ಯವಿರಲಿದೆ. ಇಂಡಿಯನ್ ಆಯಿಲ್'ನ ಆಟೋಮೆಷನ್ ಸಿಸ್ಟಂ ಮೂಲಕ ಈ ಸಿಸ್ಟಂ ಕಾರ್ಯನಿರ್ವಹಿಸುತ್ತದೆ.

ವಾಹನ ಸವಾರರೇ ಗಮನಿಸಿ: ಇನ್ಮುಂದೆ ಫಾಸ್ಟ್‌ಟ್ಯಾಗ್ ಮೂಲಕವೂ ಇಂಧನ ಖರೀದಿಸಿ

ಈ ಸಿಸ್ಟಂ ಇಂಧನ ತುಂಬುವ ಪ್ರಕ್ರಿಯೆಯಲ್ಲಿ ಯಾವುದೇ ಹಸ್ತಚಾಲಿತ ಹಸ್ತಕ್ಷೇಪವನ್ನು ಇಲ್ಲವಾಗಿಸುತ್ತದೆ. ಪೆಟ್ರೋಲ್, ಡೀಸೆಲ್ ಹಾಗೂ ಲೂಬ್ರಿಕಂಟ್‌ಗಳಿಗೆ ಐಸಿಐಸಿಐ ಬ್ಯಾಂಕಿನ ಫಾಸ್ಟ್‌ಟ್ಯಾಗ್ ಮೂಲಕ ಪಾವತಿಸಬಹುದು.

ವಾಹನ ಸವಾರರೇ ಗಮನಿಸಿ: ಇನ್ಮುಂದೆ ಫಾಸ್ಟ್‌ಟ್ಯಾಗ್ ಮೂಲಕವೂ ಇಂಧನ ಖರೀದಿಸಿ

ಈ ಸೌಲಭ್ಯವನ್ನು ಪಡೆಯಲು ಬಯಸುವ ಗ್ರಾಹಕರು ಇಂಧನ ತುಂಬುವ ಆಪರೇಟರ್‌ಗೆ ತಿಳಿಸಬೇಕು. ಆಪರೇಟರ್ ವಾಹನದ ಫಾಸ್ಟ್‌ಟ್ಯಾಗ್ / ಕಾರ್ ನಂಬರ್ ಪ್ಲೇಟ್ ಅನ್ನು ಸ್ಕ್ಯಾನ್ ಮಾಡುತ್ತಾನೆ.

ವಾಹನ ಸವಾರರೇ ಗಮನಿಸಿ: ಇನ್ಮುಂದೆ ಫಾಸ್ಟ್‌ಟ್ಯಾಗ್ ಮೂಲಕವೂ ಇಂಧನ ಖರೀದಿಸಿ

ನಂತರ ಇಂಧನ ತುಂಬಲು ಒಟಿಪಿಯನ್ನು ಗ್ರಾಹಕರ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಪಿಒಎಸ್ ಯಂತ್ರದಲ್ಲಿ ಒಟಿಪಿಯನ್ನು ನಮೂದಿಸಿದ ನಂತರ, ವಹಿವಾಟು ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ವಾಹನ ಸವಾರರೇ ಗಮನಿಸಿ: ಇನ್ಮುಂದೆ ಫಾಸ್ಟ್‌ಟ್ಯಾಗ್ ಮೂಲಕವೂ ಇಂಧನ ಖರೀದಿಸಿ

ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸಲು ಫಾಸ್ಟ್‌ಟ್ಯಾಗ್ ಬಳಸಲಾಗುತ್ತದೆ. ಟೋಲ್ ಸಂಗ್ರಹ ಪ್ರಕ್ರಿಯೆಯನ್ನು ವೇಗವಾಗಿಸಲು ಹಾಗೂ ಸುಗಮವಾಗಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಕಾಯುವ ಸಮಯವನ್ನು ಕಡಿಮೆ ಮಾಡಲು ಫಾಸ್ಟ್‌ಟ್ಯಾಗ್ ನೆರವಾಗುತ್ತದೆ.

ವಾಹನ ಸವಾರರೇ ಗಮನಿಸಿ: ಇನ್ಮುಂದೆ ಫಾಸ್ಟ್‌ಟ್ಯಾಗ್ ಮೂಲಕವೂ ಇಂಧನ ಖರೀದಿಸಿ

ಭಾರತದಾದ್ಯಂತ ಸುಮಾರು 3.50 ಕೋಟಿ ವಾಹನಗಳಿಗೆ ಫಾಸ್ಟ್‌ಟ್ಯಾಗ್ ನೀಡಲಾಗಿದೆ. ಫಾಸ್ಟ್‌ಟ್ಯಾಗ್ ಒಂದು ಸ್ಟಿಕ್ಕರ್ ಆಗಿದ್ದು, ಅದನ್ನು ವಾಹನಗಳ ಮುಂಭಾಗದ ಗಾಜಿನ ಮೇಲೆ ಅಳವಡಿಸಲಾಗುತ್ತದೆ.

ವಾಹನ ಸವಾರರೇ ಗಮನಿಸಿ: ಇನ್ಮುಂದೆ ಫಾಸ್ಟ್‌ಟ್ಯಾಗ್ ಮೂಲಕವೂ ಇಂಧನ ಖರೀದಿಸಿ

ಫಾಸ್ಟ್‌ಟ್ಯಾಗ್ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್‌ಎಫ್‌ಐಡಿ) ಟೆಕ್ನಾಲಜಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಟೋಲ್ ಪ್ಲಾಜಾ ಮೂಲಕ ವಾಹನಗಳುಹಾದುಹೋದಾಗ ಟೋಲ್ ಶುಲ್ಕವು ಆಟೋಮ್ಯಾಟಿಕ್ ಆಗಿ ಬ್ಯಾಂಕ್ ಅಥವಾ ಫಾಸ್ಟ್‌ಟ್ಯಾಗ್‌ಗೆ ಲಿಂಕ್ ಮಾಡಲಾದ ಪ್ರಿಪೇಯ್ಡ್ ಖಾತೆಯಿಂದ ಕಡಿತಗೊಳ್ಳುತ್ತದೆ.

ವಾಹನ ಸವಾರರೇ ಗಮನಿಸಿ: ಇನ್ಮುಂದೆ ಫಾಸ್ಟ್‌ಟ್ಯಾಗ್ ಮೂಲಕವೂ ಇಂಧನ ಖರೀದಿಸಿ

ಇದರಿಂದ ಟೋಲ್ ಶುಲ್ಕ ಪಾವತಿಸಲು ವಾಹನಗಳು ಟೋಲ್ ಪ್ಲಾಜಾಗಳಲ್ಲಿ ವಾಹನಗಳು ನಿಲ್ಲುವುದು ತಪ್ಪುತ್ತದೆ. ಈಗ ಉತ್ಪಾದನೆಯಾಗುವ ಎಲ್ಲಾ ನಾಲ್ಕು ಚಕ್ರ ವಾಹನಗಳು, ಬಸ್ಸುಗಳು, ಟ್ರಕ್'ಗಳು, ಲಾರಿಗಳು ಹಾಗೂ ವಾಣಿಜ್ಯ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ವಾಹನ ಸವಾರರೇ ಗಮನಿಸಿ: ಇನ್ಮುಂದೆ ಫಾಸ್ಟ್‌ಟ್ಯಾಗ್ ಮೂಲಕವೂ ಇಂಧನ ಖರೀದಿಸಿ

ದ್ವಿಚಕ್ರ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸುವ ಸ್ಥಾಪಿಸುವ ಅಗತ್ಯವಿಲ್ಲ. ಫಾಸ್ಟ್‌ಟ್ಯಾಗ್ ಅನ್ನು ದೇಶದ ಯಾವುದೇ ಟೋಲ್ ಬೂತ್‌ನಲ್ಲಿ ಖರೀದಿಸಬಹುದು. ಫಾಸ್ಟ್‌ಟ್ಯಾಗ್ ಖರೀದಿಸಲು ವಾಹನ ನೋಂದಣಿ ದಾಖಲೆಗಳ ಅಗತ್ಯವಿದೆ.

ವಾಹನ ಸವಾರರೇ ಗಮನಿಸಿ: ಇನ್ಮುಂದೆ ಫಾಸ್ಟ್‌ಟ್ಯಾಗ್ ಮೂಲಕವೂ ಇಂಧನ ಖರೀದಿಸಿ

ಟೋಲ್ ಪ್ಲಾಜಾಗಳಲ್ಲದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೊಟಕ್ ಬ್ಯಾಂಕ್ ಸೇರಿದಂತೆ 22 ಬ್ಯಾಂಕ್'ಗಳ ಮೂಲಕ ಫಾಸ್ಟ್‌ಟ್ಯಾಗ್ ಖರೀದಿಸಬಹುದು. ಕೆಲವು ಇ ಕಾಮರ್ಸ್ ಪ್ಲಾಟ್‌ಫಾರಂಗಳಾದ ಪೇಟಿಎಂ, ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್'ಗಳ ಮೂಲಕವೂ ಫಾಸ್ಟ್‌ಟ್ಯಾಗ್ ಅನ್ನು ಖರೀದಿಸಬಹುದು.

Most Read Articles

Kannada
English summary
Fuel can be purchased through fastag at fuel stations. Read in Kannada.
Story first published: Thursday, July 22, 2021, 17:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X