ಟೆಸ್ಲಾ ಕಂಪನಿಗೆ ಪೈಪೋಟಿ ನೀಡಲು ಹೊಸ ಎಲೆಕ್ಟ್ರಿಕ್ ಟ್ರಕ್ ಅನಾವರಣಗೊಳಿಸಿದ ಚೀನಾ ಕಂಪನಿ

ವಾಯು ಮಾಲಿನ್ಯದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪೆಟ್ರೋಲ್, ಡೀಸೆಲ್‌ನಲ್ಲಿ ಎಂಜಿನ್ ನಿಂದ ಚಲಿಸುವ ವಾಹನಗಳು ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತವೂ ಸೇರಿದಂತೆ ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪರಿಸರವನ್ನು ಸಂರಕ್ಷಿಸುವ ಸಲುವಾಗಿ ಎಲ್ಲಾ ವಾಹನ ತಯಾರಕ ಕಂಪನಿಗಳು ಬ್ಯಾಟರಿ ಚಾಲಿತ ವಾಹನಗಳ ಉತ್ಪಾದನೆಗೆ ಮುಂದಾಗಿವೆ.

ಟೆಸ್ಲಾ ಕಂಪನಿಗೆ ಪೈಪೋಟಿ ನೀಡಲು ಹೊಸ ಎಲೆಕ್ಟ್ರಿಕ್ ಟ್ರಕ್ ಅನಾವರಣಗೊಳಿಸಿದ ಚೀನಾ ಕಂಪನಿ

ಸ್ಕೂಟರ್, ಬೈಕ್ ಹಾಗೂ ಕಾರು ಸೇರಿದಂತೆ ಬಹುತೇಕ ಎಲ್ಲಾ ವಾಹನಗಳನ್ನು ಎಲೆಕ್ಟ್ರಿಕ್ ಆಗಿ ಬದಲಿಸಲಾಗುತ್ತಿದೆ. ವಿಶ್ವದ ಹಲವೆಡೆ ಎಲೆಕ್ಟ್ರಿಕ್ ಟ್ರಕ್'ಗಳನ್ನು ಸಹ ಬಿಡುಗಡೆಗೊಳಿಸಲಾಗುತ್ತಿದೆ. Tesla ಕಂಪನಿಯು ತನ್ನ ಎಲೆಕ್ಟ್ರಿಕ್ ಕಾರುಗಳನ್ನು ವಿಶ್ವಾದ್ಯಂತ ಮಾರಾಟ ಮಾಡುತ್ತದೆ. Tesla ಕಾರುಗಳು ವಿಶ್ವಾದ್ಯಂತ ಜನಪ್ರಿಯತೆಯನ್ನು ಸಹ ಪಡೆದಿವೆ. ಕಂಪನಿಯು ಪ್ರೀಮಿಯಂ ಎಲೆಕ್ಟ್ರಿಕ್ ಕಾರುಗಳ ಜೊತೆಗೆ ವಾಣಿಜ್ಯ ಬಳಕೆಗಾಗಿ ಟೆಸ್ಲಾ ಸೆಮಿ ಎಂಬ ಎಲೆಕ್ಟ್ರಿಕ್ ಟ್ರಕ್ ಮಾದರಿಯನ್ನು ಸಹ ಬಿಡುಗಡೆ ಮಾಡಿದೆ.

ಟೆಸ್ಲಾ ಕಂಪನಿಗೆ ಪೈಪೋಟಿ ನೀಡಲು ಹೊಸ ಎಲೆಕ್ಟ್ರಿಕ್ ಟ್ರಕ್ ಅನಾವರಣಗೊಳಿಸಿದ ಚೀನಾ ಕಂಪನಿ

ಈ ಎಲೆಕ್ಟ್ರಿಕ್ ಟ್ರಕ್'ಗೆ ಪೈಪೋಟಿ ನೀಡಲು ಚೀನಾ ಮೂಲದ ವಾಹನ ತಯಾರಕ ಕಂಪನಿಯಾದ Geely ತನ್ನ ಅಡಿ ಕಾರ್ಯ ನಿರ್ವಹಿಸುವ Farizon Auto ಮೂಲಕ ಹೊಸ ಎಲೆಕ್ಟ್ರಿಕ್ ಟ್ರಕ್ ಮಾದರಿಯನ್ನು ಅನಾವರಣಗೊಳಿಸಿದೆ. Farizon Autoದ ಹೊಸ ಎಲೆಕ್ಟ್ರಿಕ್ ಟ್ರಕ್ ಮಾದರಿಗೆ HomeTruck ಎಂದು ಹೆಸರಿಡಲಾಗಿದೆ. ಹೊಸ ಎಲೆಕ್ಟ್ರಿಕ್ ಟ್ರಕ್ ಅನ್ನು ಚೀನಾದಲ್ಲಿ ಮಾತ್ರವಲ್ಲದೆ ವಿಶ್ವದ ವಿವಿಧ ದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಟೆಸ್ಲಾ ಕಂಪನಿಗೆ ಪೈಪೋಟಿ ನೀಡಲು ಹೊಸ ಎಲೆಕ್ಟ್ರಿಕ್ ಟ್ರಕ್ ಅನಾವರಣಗೊಳಿಸಿದ ಚೀನಾ ಕಂಪನಿ

ಹೊಸ HomeTruck ಎಲೆಕ್ಟ್ರಿಕ್ ಟ್ರಕ್ ಮೂರು ವಿಭಿನ್ನ ಇಂಧನ ಮಾದರಿಗಳಲ್ಲಿ ಬರಲಿದೆ ಎಂದು ಹೇಳಲಾಗಿದೆ. ಬ್ಯಾಟರಿ ಮಾತ್ರವಲ್ಲದೆ ಈ ಟ್ರಕ್ ಅನ್ನು ಮೆಥನಾಲ್ ಇಂಧನದೊಂದಿಗೂ ಸಹ ಬಿಡುಗಡೆಗೊಳಿಸಲಾಗುವುದು ಎಂದು ಹೇಳಲಾಗಿದೆ. ಈ ಎಲೆಕ್ಟ್ರಿಕ್ ಟ್ರಕ್ ನಲ್ಲಿರುವ ಬ್ಯಾಟರಿಯನ್ನು ಹೊರ ತೆಗೆದು ಹಾಕಬಹುದು.

ಟೆಸ್ಲಾ ಕಂಪನಿಗೆ ಪೈಪೋಟಿ ನೀಡಲು ಹೊಸ ಎಲೆಕ್ಟ್ರಿಕ್ ಟ್ರಕ್ ಅನಾವರಣಗೊಳಿಸಿದ ಚೀನಾ ಕಂಪನಿ

ಇದರಿಂದ ದೂರದ ಪ್ರಯಾಣ ಮಾಡುವಾಗ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬಹುದು. ಚೀನಾದ ಎಲ್ಲಾ ಹೆದ್ದಾರಿಗಳಲ್ಲಿ ಇನ್ ಬಿಲ್ಟ್ ಬ್ಯಾಟರಿ ರಿಪ್ಲೇಸ್ ಸೌಲಭ್ಯವನ್ನು ನೀಡಲಾಗಿದೆ. ಇದರಿಂದ ಚಾಲಕರು ಚಾರ್ಜ್ ಮಾಡಿದ ಬ್ಯಾಟರಿಯನ್ನು ಕೆಲವೇ ನಿಮಿಷಗಳಲ್ಲಿ ಬದಲಾಯಿಸುವ ಮೂಲಕ ಪ್ರಯಾಣವನ್ನು ಮುಂದುವರಿಸಬಹುದು.

ಟೆಸ್ಲಾ ಕಂಪನಿಗೆ ಪೈಪೋಟಿ ನೀಡಲು ಹೊಸ ಎಲೆಕ್ಟ್ರಿಕ್ ಟ್ರಕ್ ಅನಾವರಣಗೊಳಿಸಿದ ಚೀನಾ ಕಂಪನಿ

ಟ್ರಕ್‌ನಲ್ಲಿರುವ ಕ್ಯಾಬಿನ್‌ ಕಾರಣಕ್ಕೆ ಈ ವಾಹನಕ್ಕೆ ಈ ಹೆಸರನ್ನು ಇಡಲಾಗಿದೆ ಎಂದು ಹೇಳಲಾಗಿದೆ. ಈ ಕ್ಯಾಬಿನ್ ಚಾಲಕರು ಮನೆಯಲ್ಲಿರುವಂತಹ ವಾತಾವರಣವನ್ನು ನೀಡುತ್ತದೆ. ಇದರಿಂದ ಚಾಲಕರು ಆಯಾಸವಿಲ್ಲದೆ ಹೆಚ್ಚು ದೂರ ಪ್ರಯಾಣಿಸಲು ಸಾಧ್ಯವಾಗುತ್ತದೆ. ಈ ಟ್ರಕ್‌ನ ಕ್ಯಾಬಿನ್‌ನಲ್ಲಿ ಅಡುಗೆ ಸೌಲಭ್ಯ, ಕಾಫಿ ತಯಾರಿಸುವ ಸೌಲಭ್ಯ, ರೆಫ್ರಿಜರೇಟರ್, ಸಣ್ಣ ಬೆಡ್ ಸೌಲಭ್ಯ, ವಾಷಿಂಗ್ ಮೆಷಿನ್, ಬಾತ್ರೂಮ್ ಹಾಗೂ ಟಾಯ್ಲೆಟ್'ಗಳಿವೆ.

ಟೆಸ್ಲಾ ಕಂಪನಿಗೆ ಪೈಪೋಟಿ ನೀಡಲು ಹೊಸ ಎಲೆಕ್ಟ್ರಿಕ್ ಟ್ರಕ್ ಅನಾವರಣಗೊಳಿಸಿದ ಚೀನಾ ಕಂಪನಿ

ಟ್ರಕ್ ಅನ್ನು ಟ್ರ್ಯಾಕ್ ಮಾಡಲು ನಿಖರವಾದ ಕ್ಯಾಮೆರಾ ನೀಡಲಾಗಿದೆ. ಈ ಟ್ರಕ್ ನಲ್ಲಿರುವ ಸೀಟುಗಳು ಚಾಲಕರಿಗೆ ಅತ್ಯುತ್ತಮ ಸವಾರಿಯನ್ನು ಒದಗಿಸುತ್ತವೆ. ವರದಿಗಳ ಪ್ರಕಾರ HomeTruck ಎಲೆಕ್ಟ್ರಿಕ್ ಟ್ರಕ್‌ನಲ್ಲಿ ಲೆವೆಲ್ 4 ಎಂಬ ಚಾಲಕರಹಿತ ತಂತ್ರಜ್ಞಾನವನ್ನು ಪರಿಚಯಿಸಲಾಗುವುದು. ಈ ಮಾದರಿಯು 2030 ರಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಗಳಿವೆ.

ಟೆಸ್ಲಾ ಕಂಪನಿಗೆ ಪೈಪೋಟಿ ನೀಡಲು ಹೊಸ ಎಲೆಕ್ಟ್ರಿಕ್ ಟ್ರಕ್ ಅನಾವರಣಗೊಳಿಸಿದ ಚೀನಾ ಕಂಪನಿ

ಪ್ರಪಂಚದ ಬಹುತೇಕ ಎಲ್ಲಾ ದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಪರಿಸರ ಸ್ನೇಹಿಯಾಗಿವೆ. ಇದರ ಜೊತೆಗೆ ಪೆಟ್ರೋಲ್, ಡೀಸೆಲ್ ಮೇಲೆ ವ್ಯಯಿಸುವ ಹಣವನ್ನು ಉಳಿಸಬಹುದು. ಭಾರತದಲ್ಲಿಯೂ ಎಲೆಕ್ಟ್ರಿಕ್ ವಾಹನಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಇನ್ನೂ ಹಲವಾರು ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂಜರಿಯುತ್ತಿದ್ದಾರೆ.

ಟೆಸ್ಲಾ ಕಂಪನಿಗೆ ಪೈಪೋಟಿ ನೀಡಲು ಹೊಸ ಎಲೆಕ್ಟ್ರಿಕ್ ಟ್ರಕ್ ಅನಾವರಣಗೊಳಿಸಿದ ಚೀನಾ ಕಂಪನಿ

ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಹಲವು ಗಂಟೆ ಕಾಯಬೇಕು ಎಂಬುದು ಈ ಹಿಂಜರಿಕೆಗೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಇವಿಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಜನರು ಎಲೆಕ್ಟ್ರಿಕ್ ವಾಹನ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಈಗ ಅತಿ ವೇಗದಲ್ಲಿ ಚಾರ್ಜ್ ಆಗುವ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ವರದಿಯಾಗಿದೆ.

ಟೆಸ್ಲಾ ಕಂಪನಿಗೆ ಪೈಪೋಟಿ ನೀಡಲು ಹೊಸ ಎಲೆಕ್ಟ್ರಿಕ್ ಟ್ರಕ್ ಅನಾವರಣಗೊಳಿಸಿದ ಚೀನಾ ಕಂಪನಿ

ಕಂಪನಿಯೊಂದು ಅತಿ ವೇಗದಲ್ಲಿ ಚಾರ್ಜ್ ಆಗುವ ತಂತ್ರಜ್ಞಾನವನ್ನು ಹೊಂದಿರುವ ಬ್ಯಾಟರಿಯನ್ನು ಅಭಿವೃದ್ಧಿಪಡಿಸಿದೆ ಎಂದು ವರದಿಯಾಗಿದೆ. ಈ ಹೊಸ ಬ್ಯಾಟರಿ ಕೇವಲ 90 ಸೆಕೆಂಡುಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಹೇಳಲಾಗಿದೆ. ಇಂಗ್ಲೆಂಡ್ ಮೂಲದ ಮಹ್ಲೆ ಹಾಗೂ ಅಲೋಟ್ರೋಪ್ ಎನರ್ಜಿ ಎಂಬ ಎರಡು ಕಂಪನಿಗಳು ಹೊಸ ಹೈ ಸ್ಪೀಡ್ ರೀಚಾರ್ಜೆಬಲ್ ಬ್ಯಾಟರಿಯನ್ನು ಅಭಿವೃದ್ಧಿಪಡಿಸಲು ಕೈಜೋಡಿಸಿವೆ.

ಟೆಸ್ಲಾ ಕಂಪನಿಗೆ ಪೈಪೋಟಿ ನೀಡಲು ಹೊಸ ಎಲೆಕ್ಟ್ರಿಕ್ ಟ್ರಕ್ ಅನಾವರಣಗೊಳಿಸಿದ ಚೀನಾ ಕಂಪನಿ

ಎಲೆಕ್ಟ್ರಿಕ್ ವಾಹನಗಳ ಜಗತ್ತಿನಲ್ಲಿ ಕ್ರಾಂತಿಯನ್ನುಂಟು ಮಾಡಲು ಈ ಬ್ಯಾಟರಿಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಬ್ಯಾಟರಿಯನ್ನು ಸದ್ಯಕ್ಕೆ ಕಾನ್ಸೆಪ್ಟ್ ಮಾದರಿಯಾಗಿ ಮಾತ್ರ ಅಭಿವೃದ್ಧಿಪಡಿಸಲಾಗಿದೆ. ಬ್ಯಾಟರಿಯನ್ನು ಶೀಘ್ರವೇ ಬಳಸಲು ಸಾಧ್ಯವಾಗುವಂತೆ ಅಭಿವೃದ್ಧಿಪಡಿಸಲು ಕಂಪನಿಯು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಈ ಎರಡೂ ಕಂಪನಿಗಳು ಕಾರ್ಯ ನಿರತವಾಗಿವೆ.

ಟೆಸ್ಲಾ ಕಂಪನಿಗೆ ಪೈಪೋಟಿ ನೀಡಲು ಹೊಸ ಎಲೆಕ್ಟ್ರಿಕ್ ಟ್ರಕ್ ಅನಾವರಣಗೊಳಿಸಿದ ಚೀನಾ ಕಂಪನಿ

ವೇಗವಾಗಿ ಚಾರ್ಜ್ ಆಗುವ ಈ ಬ್ಯಾಟರಿಯು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸ ಬಯಸುವ ಜನರಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಸ್ಪಷ್ಟವಾಗಿ ಹೇಳುವುದಾದರೆ ಈ ಬ್ಯಾಟರಿಯ ರಚನೆಯು ಚಾರ್ಜ್ ಮಾಡಲು ಹೆಚ್ಚು ಸಮಯ ಕಾಯುವುದನ್ನು ನಿವಾರಿಸಲಿದೆ. ಈಗ ಮಾರುಕಟ್ಟೆಯಲ್ಲಿರುವ ಬಹುತೇಕ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಗರಿಷ್ಠ 6 ರಿಂದ 8 ಗಂಟೆಗಳ ಅಗತ್ಯವಿದೆ.

ಟೆಸ್ಲಾ ಕಂಪನಿಗೆ ಪೈಪೋಟಿ ನೀಡಲು ಹೊಸ ಎಲೆಕ್ಟ್ರಿಕ್ ಟ್ರಕ್ ಅನಾವರಣಗೊಳಿಸಿದ ಚೀನಾ ಕಂಪನಿ

ಇನ್ನು ವೇಗದ ಚಾರ್ಜಿಂಗ್ ಕೇಂದ್ರಗಳಲ್ಲಿ ಚಾರ್ಜ್ ಮಾಡಿದರೆ 3 ರಿಂದ 4 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು. ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿಯಲ್ಲಿ ಹೊಸ ಸೂಪರ್ ಫಾಸ್ಟ್ ಚಾರ್ಜಿಂಗ್ ಬ್ಯಾಟರಿಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಬ್ಯಾಟರಿಯನ್ನು ಲಿಥಿಯಂ ಕಾರ್ಬನ್ ನಿಂದ ಉತ್ಪಾದಿಸಲಾಗಿದೆ.

ಟೆಸ್ಲಾ ಕಂಪನಿಗೆ ಪೈಪೋಟಿ ನೀಡಲು ಹೊಸ ಎಲೆಕ್ಟ್ರಿಕ್ ಟ್ರಕ್ ಅನಾವರಣಗೊಳಿಸಿದ ಚೀನಾ ಕಂಪನಿ

ಈ ಬ್ಯಾಟರಿಯನ್ನು ಉತ್ಪಾದಿಸಲು ಬಹಳ ಅಪರೂಪದ ವಸ್ತುಗಳ ಅಗತ್ಯವಿದೆ ಎಂದು ಹೇಳಲಾಗಿದೆ. ಆದರೆ ಸಾಂಪ್ರದಾಯಿಕ ಬ್ಯಾಟರಿಯನ್ನು ತಯಾರಿಸಲು ಬಳಸುವ ಅದೇ ಉತ್ಪನ್ನಗಳಿಂದಲೇ ಈ ಬ್ಯಾಟರಿಯನ್ನು ಸಹ ತಯಾರಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದರಿಂದ ಹೊಸ ಹೈ ಸ್ಪೀಡ್ ಚಾರ್ಜಿಂಗ್ ಬ್ಯಾಟರಿಯು ಸಾಮಾನ್ಯ ಬ್ಯಾಟರಿಯಂತೆಯೇ ಮಾರಾಟಕ್ಕೆ ಬರುವ ನಿರೀಕ್ಷೆಗಳಿವೆ.

Most Read Articles

Kannada
English summary
Geely farizon electric truck to rival tesla semi electric truck details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X