ಬಿಡುಗಡೆಗೆ ಸಜ್ಜಾಗುತ್ತಿದೆ ಐಷಾರಾಮಿ ಜೆನೆಸಿಸ್ ಜಿ70 ಶೂಟಿಂಗ್ ಬ್ರೇಕ್ ಕಾರು

ದಕ್ಷಿಣ ಕೊರಿಯಾ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಜೆನೆಸಿಸ್ ತನ್ನ ಜಿ70 ಶೂಟಿಂಗ್ ಬ್ರೇಕ್ ಕಾರಿನ ಚಿತ್ರಗಳನ್ನು ಬಹಿರಂಗಪಡಿಸಿದೆ. ಈ ಹೊಸ ಜೆನೆಸಿಸ್ ಜಿ70 ಶೂಟಿಂಗ್ ಬ್ರೇಕ್ ಕಾರು ಜಿ70 ಸೆಡಾನ್ ಅನ್ನು ಆಧರಿಸಿದೆ ಮತ್ತು ಇದನ್ನು ನಿರ್ದಿಷ್ಟವಾಗಿ ಯುರೋಪಿಯನ್ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಐಷಾರಾಮಿ ಜೆನೆಸಿಸ್ ಜಿ70 ಶೂಟಿಂಗ್ ಬ್ರೇಕ್ ಕಾರು

ಜೆನೆಸಿಸ್ ಜಿ70 ಶೂಟಿಂಗ್ ಬ್ರೇಕ್ ಕಾರು ಯುರೋಪಿನ ಮಾರುಕಟ್ಟೆಗಳಲ್ಲಿ ಇದೇ ವರ್ಷದಲ್ಲಿ ಬಿಡುಗಡೆಯಾಗಲಿದೆ. ಜಿ70 ಸೆಡಾನ್ ಅನ್ನು ಕಳೆದ ವರ್ಷ ಅನಾವರಣಗೊಳಿಸಲಾಯಿತು ಮತ್ತು ಈಗ ಜೆನೆಸಿಸ್ ಅದೇ ಕಾರಿನ ಮಾದರಿಯನ್ನು ಪ್ರದರ್ಶಿಸಿದೆ. ಜೆನೆಸಿಸ್ ಜಿ70 ಶೂಟಿಂಗ್ ಬ್ರೇಕ್ ಕಾರು ಐಷಾರಾಮಿ ಲುಕ್ ಅನ್ನು ಹೊಂದಿದೆ. ಈ ಕಾರು ಇತರ ಜೆನೆಸಿಸ್ ಕಾರುಗಳ ರೀತಿಯಲ್ಲೇ ಆಯಾಮಗಳನ್ನು ಹೊಂದಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಐಷಾರಾಮಿ ಜೆನೆಸಿಸ್ ಜಿ70 ಶೂಟಿಂಗ್ ಬ್ರೇಕ್ ಕಾರು

ಈ ಹೊಸ ಜೆನೆಸಿಸ್ ಜಿ70 ಕಾರು 4,685 ಎಂಎಂ ಉದ್ದ, 1,850 ಎಂಎಂ ಅಗಲ ಮತ್ತು 1,400 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಹೊಸ ಕಾರು 2,835 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಇನ್ನು ಈ ಕಾರಿನ ಬೂಟ್ ಸ್ಪೇಸ್ 40 ಪ್ರತಿಶತ ಹೆಚ್ಚಾಗಿದೆ ಎಂದು ಜೆನೆಸಿಸ್ ಹೇಳಿಕೊಂಡಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಬಿಡುಗಡೆಗೆ ಸಜ್ಜಾಗುತ್ತಿದೆ ಐಷಾರಾಮಿ ಜೆನೆಸಿಸ್ ಜಿ70 ಶೂಟಿಂಗ್ ಬ್ರೇಕ್ ಕಾರು

ಜೆನೆಸಿಸ್ ಜಿ70 ಶೂಟಿಂಗ್ ಬ್ರೇಕ್ ಕಾರು ಜಿ70 ಸೆಡಾನ್‌ಗೆ ಹೋಲುತ್ತದೆಯಾದರೂ, ಕೆಲವು ಸಣ್ಣ ಬದಲಾವಣೆಗಳಿವೆ. ಉದಾಹರಣೆಗೆ, ಕ್ರೆಸ್ಟ್ ಗ್ರಿಲ್ ಕ್ವಾಡ್ ಹೆಡ್‌ಲ್ಯಾಂಪ್‌ಗಳು ಮತ್ತು ಹಿಂಭಾಗದ ಸ್ಪಾಯ್ಲರ್ ಎರಡೂ ಕಾರುಗಳ ನಡುವೆ ಗಮನಾರ್ಹವಾದ ವ್ಯತಿರಿಕ್ತತೆಯನ್ನು ಸೃಷ್ಟಿಸುತ್ತದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಐಷಾರಾಮಿ ಜೆನೆಸಿಸ್ ಜಿ70 ಶೂಟಿಂಗ್ ಬ್ರೇಕ್ ಕಾರು

ಇನ್ನು ಈ ಹೊಸ ಕಾರಿ ಜಿ70 ಸೆಡಾನ್ ಅನ್ನು ಆಧರಿಸಿರುವುದರಿಂದ, ಈ ಕಾರಿನಲ್ಲಿ ಅದೇ 2.0-ಲೀಟರ್ ಟರ್ಬೋಚಾರ್ಜ್ಡ್ ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಮತ್ತು ಆಲ್-ವೀಲ್-ಡ್ರೈವ್ ಸಿಸ್ಟಂ ಅನ್ನು ಕೂಡ ನೀಡಲಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಬಿಡುಗಡೆಗೆ ಸಜ್ಜಾಗುತ್ತಿದೆ ಐಷಾರಾಮಿ ಜೆನೆಸಿಸ್ ಜಿ70 ಶೂಟಿಂಗ್ ಬ್ರೇಕ್ ಕಾರು

ಇನ್ನು ಈ ಕಾರಿನಲ್ಲಿ ಲೀಟರ್ ವಿ 6 ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿರಬಹುದು. ಇನ್ನು ಈ ಹೊಸ ಜೆನೆಸಿಸ್ ಜಿ70 ಶೂಟಿಂಗ್ ಬ್ರೇಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಐಷಾರಾಮಿ ಜೆನೆಸಿಸ್ ಜಿ70 ಶೂಟಿಂಗ್ ಬ್ರೇಕ್ ಕಾರು

ಆದರೆ ಭಾರತದಲ್ಲಿ ಜೆನೆಸಿಸ್ ಕಂಪನಿಯು ಜಿ80 ಎಂಬ ಐಷಾರಾಮಿ ಸೆಡಾನ್ ಸ್ಪಾಟ್ ಟೆಸ್ಟ್ ನಡೆಸುವಾಗ ಕಾಣಿಸಿಕೊಂಡಿದೆ. ಹೊಸ ಜೆನೆಸಿಸ್ ಜಿ80 ಕಾರು ಮೊದಲ ಬಾರಿಗೆ ಮುಂಬೈನಲ್ಲಿ ಸ್ಪಾಟ್ ಟೆಸ್ಟ್ ನಡೆಸುವಾಗ ಕಾಣಿಸಿಕೊಂಡಿದೆ. ಐಷಾರಾಮಿ ಜೆನೆಸಿಸ್ ಜಿ80 ಸೆಡಾನ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಇ-ಕ್ಲಾಸ್ ಮತ್ತು ಬಿಎಂಡಬ್ಲ್ಯು 5 ಸೀರಿಸ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಬಿಡುಗಡೆಗೆ ಸಜ್ಜಾಗುತ್ತಿದೆ ಐಷಾರಾಮಿ ಜೆನೆಸಿಸ್ ಜಿ70 ಶೂಟಿಂಗ್ ಬ್ರೇಕ್ ಕಾರು

ಜಿ80 ಸೆಡಾನ್ ನಲ್ಲಿ ಎರಡು ಪೆಟ್ರೋಲ್ ಹಾಗೂ ಒಂದು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿರುತ್ತದೆ. ಇದರಲ್ಲಿ 2.5-ಲೀಟರಿನ 4-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ 304 ಬಿಹೆಚ್‌ಪಿ ಪವರ್ ಹಾಗೂ 422 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು 3.5-ಲೀಟರಿನ ಟರ್ಬೋಚಾರ್ಜ್ಡ್ ವಿ6 ಪೆಟ್ರೋಲ್ ಎಂಜಿನ್ 380 ಬಿಹೆಚ್‌ಪಿ ಪವರ್ ಹಾಗೂ 530 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಐಷಾರಾಮಿ ಜೆನೆಸಿಸ್ ಜಿ70 ಶೂಟಿಂಗ್ ಬ್ರೇಕ್ ಕಾರು

ಇದರ 2.2-ಲೀಟರಿನ 4-ಸಿಲಿಂಡರ್ ಡೀಸೆಲ್ ಎಂಜಿನ್ 210 ಬಿಹೆಚ್‌ಪಿ ಪವರ್ ಹಾಗೂ 441 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೊಸ ಜಿವಿ80 ಸೆಡಾನ್ ಕಾರಿನ ಎಕ್ಸ್ ಟಿರಿಯರ್ ಹಾಗೂ ಇಂಟಿರಿಯರ್ ನಲ್ಲಿ ಅನೇಕ ಸ್ಟೈಲಿಂಗ್ ಕಾಂಪೋನೆಂಟ್ ಗಳನ್ನು ಒಳಗೊಂಡಿದೆ. ಅದರೆ ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ.

Most Read Articles

Kannada
English summary
Genesis Debuts G70 Shooting Brake. Read In Kannada.
Story first published: Friday, May 14, 2021, 12:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X