ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಜೆನೆಸಿಸ್ ಜಿ80 ಸ್ಪೋರ್ಟ್ ಕಾರು

ಐಷಾರಾಮಿ ಕಾರು ತಯಾರಕ ಕಂಪನಿಯಾದ ಜೆನೆಸಿಸ್ ತನ್ನ ಹೊಸ ಜಿ80 ಸ್ಪೋರ್ಟ್ ಮಿಡ್ ಸೆಡಾನ್ ಅನ್ನು ಅನಾವರಣಗೊಳಿಸಿದೆ. ಈ ಹೊಸ ಜೆನೆಸಿಸ್ ಜಿ80 ಸ್ಪೋರ್ಟ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಜಿ80 ಸೆಡಾನ್ ವಿನ್ಯಾಸವನ್ನು ಆಧರಿಸಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಜೆನೆಸಿಸ್ ಜಿ80 ಸ್ಪೋರ್ಟ್ ಕಾರು

ಆದರೆ ಹೊಸ ಜೆನೆಸಿಸ್ ಜಿ80 ಸ್ಪೋರ್ಟ್ ಸೆಡಾನ್ ಹೊರಭಾಗದಲ್ಲಿ ಸ್ವಲ್ಪ ಅಗ್ರೇಸಿವ್ ಶೈಲಿಯನ್ನು ಹೊಂದಿದೆ. ಇನ್ನು ಒಳಭಾಗದಲ್ಲಿ ಸಣ್ಣ ಬದಲಾವಣೆಗಳು ಮತ್ತು ಹೊಸ ಫೀಚರ್ಸ್ ಗಳನ್ನು ಪಡಿದುಕೊಂಡಿದೆ. ಜೆನೆಸಿಸ್ ಜಿ80 ಸ್ಪೋರ್ಟ್ ಕಾರು ಕ್ಯಾವೆಂಡಿಷ್ ರೆಡ್ ಎಂಬ ಹೊಸ ಬಣ್ಣವನ್ನು ನೀಡಿದೆ. ಬಣ್ಣದ ಹೆಸರು ಕೆನಡಾದ ಪ್ರಿನ್ಸ್ ಎಡ್ವರ್ಡ್ ದ್ವೀಪದ ಉತ್ತರ ಕರಾವಳಿಯ ಬಂಡೆಯ ಪಕ್ಕದಿಂದ ಸ್ಫೂರ್ತಿ ಪಡೆದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಜೆನೆಸಿಸ್ ಜಿ80 ಸ್ಪೋರ್ಟ್ ಕಾರು

ಈ ಹೊಸ ಜೆನೆಸಿಸ್ ಜಿ80 ಸ್ಪೋರ್ಟ್ ಕಾರಿನ ಮುಂಭಾಗದಲ್ಲಿ ರೇಡಿಯೇಟರ್ ಗ್ರಿಲ್ ಜೊತೆಗೆ ವಿಶಿಷ್ಟ ವಿನ್ಯಾಸವನ್ನು ಹೊಂದಿರುತ್ತದೆ. ಇನ್ನು ಮುಂಭಾಗದ ಬಂಪರ್ ಗ್ರಿಲ್ ಅಸ್ಸೆಂಟ್, ಹೆಡ್‌ಲ್ಯಾಂಪ್‌ಗಳ ಸುತ್ತಲಿನ ಕಪ್ಪು ಬೆಜೆಲ್‌ಗಳು ಅದರ ಸ್ಪೋರ್ಟಿ ವಿನ್ಯಾಸವನ್ನು ಹೆಚ್ಚಿಸುತ್ತವೆ ಎಂದು ಐಷಾರಾಮಿ ವಾಹನ ತಯಾರಕ ಸಂಸ್ಥೆ ಹೇಳಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಜೆನೆಸಿಸ್ ಜಿ80 ಸ್ಪೋರ್ಟ್ ಕಾರು

ಜೆನೆಸಿಸ್ ಕಾರು ಒಂದೇ ರೀತಿಯ ಸ್ಪ್ಲಿಟ್ ಲೈಟ್ ಕ್ಲಸ್ಟರ್ ಅನ್ನು ಹೊಂದಿವೆ. ಹೆಡ್‌ಲೈಟ್‌ಗಳಿಗೆ ಎಲ್‌ಇಡಿ ಬಲ್ಬ್‌ಗಳನ್ನು ಜೋಡಿಸಲಾಗಿದೆ. ಈ ಹೆಡ್‌ಲೈಟ್‌ಗಳು ಇಂಡಿಕೇಟರ್ ಗಳಾಗಿಯೂ ಕಾರ್ಯನಿರ್ವಹಿಸುತ್ತವೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಜೆನೆಸಿಸ್ ಜಿ80 ಸ್ಪೋರ್ಟ್ ಕಾರು

ಈ ಸೆಡಾನ್‌ನಲ್ಲಿ ರೂಫ್ ಅನ್ನು ವಿಶೇಷವಾಗಿ ಹಿಂದಿನ ಡೋರ್ ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಹೊರಭಾಗದಲ್ಲಿರುವ ಬೆಲ್ಟ್ ಲೈನ್ ಅನ್ನು ಕಾರಿನ ಚಲನೆಗೆ ತಕ್ಕಂತೆ ಪ್ಯಾರಾಲೆಲ್ ಆಗಿ ನೀಡಲಾಗಿದೆ. ವಿಂಡೋ ಫ್ರೇಮ್, ಲೋ ಡೋರ್ ಪ್ಯಾನೆಲ್, ಫೆಂಡರ್ ವೆಂಟ್ ಹಾಗೂ ಹಿಂಭಾಗದ ಬಂಪರ್‌ ಗಳನ್ನು ಹೊಂದಿರುವ ಕಾರು ಆಕರ್ಷಕವಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಜೆನೆಸಿಸ್ ಜಿ80 ಸ್ಪೋರ್ಟ್ ಕಾರು

ಇನ್ನು ಟೇಲ್‌ಲೈಟ್‌ಗಳನ್ನು ಸಹ ಇದೇ ರೀತಿ ನೀಡಲಾಗುತ್ತದೆ. ಆದರೆ ಇಂಡಿಕೇಟರ್ ಗಳು ಸ್ವಲ್ಪ ದಪ್ಪವಾದ ಸ್ಟ್ರಿಪ್ ಗಳನ್ನು ಹೊಂದಿವೆ. ಫೆಂಡರ್‌ಗಳಲ್ಲಿ ಅಳವಡಿಸಲಾಗಿರುವ ಹಿಂಭಾಗದ ಇಂಡಿಕೇಟರ್ ಗಳನ್ನು ಕಾರಿನ ಹೊರಭಾಗದ ಕಲರ್ ಪ್ಯಾನೆಲ್ ನಿಂದ ಬೇರ್ಪಡಿಸಲಾಗಿದೆ. ಇವುಗಳು ಪ್ಯಾರಾಲೆಲ್ ಆಗಿರುವ ಎಲ್‌ಇಡಿ ಸ್ಟ್ರಿಪ್ ಗಳನ್ನು ಒಳಗೊಂಡಿವೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಜೆನೆಸಿಸ್ ಜಿ80 ಸ್ಪೋರ್ಟ್ ಕಾರು

ಕಾರಿನಲ್ಲಿ ಮೂರು-ಸ್ಪೋಕ್ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ, ಡ್ಯಾಶ್‌ಬೋರ್ಡ್ ಮೂರು ವಿಭಿನ್ನ ವಿನ್ಯಾಸಗಳಲ್ಲಿ ಬರಲಿದೆ, ಇದು ಸ್ಪೋರ್ಟ್-ಎಕ್ಸ್ ಕ್ಲೊಸಿವ್ ಅಲ್ಯೂಮಿನಿಯಂ, ನೈಜ ಇಂಗಾಲ ಮತ್ತು ಡೈಮೆಂಡ್ ಮಾದರಿಯ ಹೈಬ್ರಿಡ್ ಮಾದರಿಯ ವಿನ್ಯಾಸವನ್ನು ಒಳಗೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಜೆನೆಸಿಸ್ ಜಿ80 ಸ್ಪೋರ್ಟ್ ಕಾರು

ಜಿ80 ಸೆಡಾನ್ ಕಾರು ಕ್ರೂಸ್ ಕಂಟ್ರೋಲ್, ಆಕ್ಟಿವ್ ಬ್ಲೈಂಡ್-ಸ್ಪಾಟ್ ಮಾನಿಟರಿಂಗ್, ಆಟೋಮ್ಯಾಟಿಕ್ ಬ್ರೇಕ್, ರಿಮೋಟ್ ಪಾರ್ಕಿಂಗ್ ಹಾಗೂ ಜೆನೆಸಿಸ್ ಕಾರ್ಬ್ ಸಿಸ್ತಂಗಳನ್ನು ಹೊಂದಿದೆ. ಚಾಲಕರು ಕಾರಿನ ಇನ್ಫೋಟೇನ್‌ಮೆಂಟ್ ಸ್ಕ್ರೀನ್ ಮೂಲಕ ಈ ಕಾರ್ ಅನ್ನು ಕಂಟ್ರೋಲ್ ಮಾಡಬಹುದು.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಜೆನೆಸಿಸ್ ಜಿ80 ಸ್ಪೋರ್ಟ್ ಕಾರು

ಈ ನಿರ್ದಿಷ್ಟ ವಿನ್ಯಾಸದ ಮಾದರಿಯನ್ನು ಗ್ರಾಹಕರು ಆಯ್ಕೆ ಮಾಡಬಹುದು. ಈ ಕಾರಿನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಡ್ಯಾಶ್‌ಬೋರ್ಡ್‌ನಲ್ಲಿ ಇನ್ ಫೋಟೆನ್ ಮೆಂಟ್ ಡಿಸ್ ಪ್ಲೇಗಳನ್ನು ನೀಡಲಾಗಿದೆ. ಸೆಂಟರ್ ಕನ್ಸೋಲ್‌ನಲ್ಲಿರುವ ಗೇರ್ ಸೆಲೆಕ್ಟರ್ ಸರ್ಕ್ಯೂಲರ್ ಶೇಪಿನಲ್ಲಿದೆ. ಜೆನೆಸಿಸ್ ಕ್ಯಾಬಿನ್ ಅನ್ನು ವುಡ್ ಹಾಗೂ ಲೆದರ್ ನಿಂದ ವಿನ್ಯಾಸಗೊಳಿಸಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಹೊಸ ಜೆನೆಸಿಸ್ ಜಿ80 ಸ್ಪೋರ್ಟ್ ಕಾರು

ಇನ್ನು ಹೊಸ ಟ್ರಿಮ್ ಜಿ-ಮ್ಯಾಟ್ರಿಕ್ಸ್ ಮಾದರಿಯೊಂದಿಗೆ 20 ಇಂಚಿನ ಡಾರ್ಕ್ ಅಲಾಯ್ ವ್ಹೀಲ್ ಅನ್ನು ಸಹ ಹೊಂದಿರುತ್ತದೆ. ಈ ಕಾರಿನ ಎಂಜಿನ್ ಮತ್ತು ಇತರ ಮಾಹಿತಿಗಳು ಮುಂದಿನ ದಿನಗಳಲ್ಲಿ ಬಹಿರಂಗವಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
New Genesis G80 Sport Unveiled. Read In Kannada.
Story first published: Monday, July 5, 2021, 20:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X