2022ರಿಂದ ಸಾರ್ವಜನಿಕ ರಸ್ತೆಗಿಳಿಯಲಿವೆ ಚಾಲಕ ರಹಿತ ಕಾರುಗಳು

ವಿವಿಧ ವಾಹನ ಉತ್ಪಾದನೆ ಹಾಗೂ ತಂತ್ರಜ್ಞಾನ ಕಂಪನಿಗಳು ಜಾಗತಿಕವಾಗಿ ಆಟೋಮ್ಯಾಟಿಕ್ ಆಗಿ ಚಲಿಸುವ ಡ್ರೈವರ್ ಲೆಸ್ (ಚಾಲಕ ರಹಿತ) ಕಾರುಗಳ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿವೆ.

2022ರಿಂದ ಸಾರ್ವಜನಿಕ ರಸ್ತೆಗಿಳಿಯಲಿವೆ ಚಾಲಕ ರಹಿತ ಕಾರುಗಳು

ಆದರೆ ಈ ಕಾರುಗಳನ್ನು ಕೆಲವು ಸ್ಥಳಗಳಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಮಾತ್ರ ಚಲಿಸಲು ಅನುಮತಿ ನೀಡಲಾಗಿದೆ. ಈ ಡ್ರೈವರ್ ಲೆಸ್ ಕಾರುಗಳಿಗೆ ಸುರಕ್ಷತಾ ಕಾರಣಗಳಿಗಾಗಿ ಚಾಲಕರ ಕಣ್ಗಾವಲಿನಲ್ಲಿ ಮಾತ್ರ ಕಾರ್ಯನಿರ್ವಹಿಸಲು ಪರವಾನಗಿ ನೀಡಲಾಗಿದೆ.

2022ರಿಂದ ಸಾರ್ವಜನಿಕ ರಸ್ತೆಗಿಳಿಯಲಿವೆ ಚಾಲಕ ರಹಿತ ಕಾರುಗಳು

ಚೀನಾ ದೇಶವು ಇತ್ತೀಚೆಗೆ ಕೆಲವು ನಗರಗಳಲ್ಲಿ ಸಂಪೂರ್ಣ ಡ್ರೈವರ್ ಲೆಸ್ ಕಾರುಗಳ ಚಲನೆಗೆ ಅನುಮತಿ ನೀಡಿದೆ. ಈಗ ಜರ್ಮನಿ ಸರ್ಕಾರವು ಸಾರ್ವಜನಿಕ ರಸ್ತೆಗಳಲ್ಲಿ ಡ್ರೈವರ್ ಲೆಸ್ ಕಾರುಗಳನ್ನು ಚಲಾಯಿಸಲು ಕಾನೂನು ರೂಪಿಸಿದೆ.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

2022ರಿಂದ ಸಾರ್ವಜನಿಕ ರಸ್ತೆಗಿಳಿಯಲಿವೆ ಚಾಲಕ ರಹಿತ ಕಾರುಗಳು

ಹೊಸ ಕಾನೂನನ್ನು ಕಳೆದ ವಾರ ಜರ್ಮನ್ ಸಂಸತ್ತು ಅಂಗೀಕರಿಸಿತು. ಈ ಕಾನೂನನ್ನು ಜರ್ಮನಿಯಲ್ಲಿ ಶೀಘ್ರದಲ್ಲೇ ಜಾರಿಗೊಳಿಸುವ ನಿರೀಕ್ಷೆಗಳಿವೆ. ಇದರಿಂದ ಮುಂದಿನ ವರ್ಷದಿಂದ ಜರ್ಮನಿ ದೇಶದಲ್ಲಿ ಡ್ರೈವರ್ ಲೆಸ್ ಕಾರುಗಳು ಕಂಡು ಬರಲಿವೆ.

2022ರಿಂದ ಸಾರ್ವಜನಿಕ ರಸ್ತೆಗಿಳಿಯಲಿವೆ ಚಾಲಕ ರಹಿತ ಕಾರುಗಳು

ಈ ಕಾನೂನು ಸಾರ್ವಜನಿಕ ರಸ್ತೆಗಳಲ್ಲಿ ಲೆವೆಲ್ 4 ಕಾರುಗಳನ್ನು ಚಾಲಕನ ಮೇಲ್ವಿಚಾರಣೆಯ ಅಗತ್ಯವಿಲ್ಲದೆ ಸಂಪೂರ್ಣವಾಗಿ ಡ್ರೈವರ್ ಲೆಸ್ ಆಗಿ ಚಲಿಸಲು ಅನುಮತಿ ನೀಡುತ್ತದೆ.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

2022ರಿಂದ ಸಾರ್ವಜನಿಕ ರಸ್ತೆಗಿಳಿಯಲಿವೆ ಚಾಲಕ ರಹಿತ ಕಾರುಗಳು

ಈ ಕಾನೂನು ಅಡಿಯಲ್ಲಿ ಡ್ರೈವರ್ ಲೆಸ್ ಕಾರುಗಳನ್ನು ಕೆಲವು ಪ್ರದೇಶಗಳಲ್ಲಿ ಮಾತ್ರ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುತ್ತದೆ. ಆಟೋಬಾಹ್ನ್ ಹಾಗೂ ಸರ್ಕಾರಿ ನಿಯಂತ್ರಿತ ಹೆದ್ದಾರಿಗಳಲ್ಲಿ ಈ ಕಾರುಗಳ ಚಲನೆಗೆ ಅವಕಾಶ ನಿಡುವುದಿಲ್ಲವೆಂದು ಹೇಳಲಾಗಿದೆ.

2022ರಿಂದ ಸಾರ್ವಜನಿಕ ರಸ್ತೆಗಿಳಿಯಲಿವೆ ಚಾಲಕ ರಹಿತ ಕಾರುಗಳು

ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಈ ಕಾರುಗಳನ್ನು ರೋಬೋಟ್ ಟ್ಯಾಕ್ಸಿಗಳು ಎಂದು ಕರೆಯಲಾಗುವ ಡ್ರೈವರ್ ಲೆಸ್ ಟ್ಯಾಕ್ಸಿ ಕಾರುಗಳಾಗಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುವುದು. ವರದಿಗಳ ಪ್ರಕಾರ ಈ ಕಾರುಗಳನ್ನು ಕಂಪನಿ ಉದ್ಯೋಗಿಗಳಿಗೆ ಸಾರಿಗೆ ಹಾಗೂ ವಿತರಣಾ ಸೇವೆಗಳಿಗಾಗಿ ಬಳಸಲಾಗುತ್ತದೆ.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

2022ರಿಂದ ಸಾರ್ವಜನಿಕ ರಸ್ತೆಗಿಳಿಯಲಿವೆ ಚಾಲಕ ರಹಿತ ಕಾರುಗಳು

ಟ್ಯಾಕ್ಸಿ ಕಂಪನಿಗಳು ಈ ರೋಬೋಟ್ ಟ್ಯಾಕ್ಸಿ ಕಾರುಗಳಿಗೆ ವಿಶೇಷ ವಿಮೆ ಮಾಡಿಸುವ ಅಗತ್ಯವಿದೆ. ಈ ಕಾರುಗಳನ್ನು ದೂರದಿಂದಲೇ ಮೇಲ್ವಿಚಾರಣೆ ಮಾಡಲು ಹಾಗೂ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುವುದು ಎಂದು ಹೇಳಲಾಗಿದೆ.

2022ರಿಂದ ಸಾರ್ವಜನಿಕ ರಸ್ತೆಗಿಳಿಯಲಿವೆ ಚಾಲಕ ರಹಿತ ಕಾರುಗಳು

ಡ್ರೈವರ್ ಲೆಸ್ ಬಾಡಿಗೆ ಕಾರುಗಳು ಎಂದೂ ಕರೆಯಲಾಗುವ ರೋಬೋಟ್ ಟ್ಯಾಕ್ಸಿಗಳನ್ನು ಮುಂದಿನ ವರ್ಷ ಜರ್ಮನಿಯಲ್ಲಿ ಪರಿಚಯಿಸಲಾಗುವುದು. ಈ ಮೂಲಕ ಜರ್ಮನಿ ದೇಶವು ಸಾರ್ವಜನಿಕ ರಸ್ತೆಗಳಲ್ಲಿ ಈ ಸೇವೆಯನ್ನು ಜಾರಿಗೊಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Most Read Articles

Kannada
English summary
Germany's new law allows driverless vehicles on public roads from 2022. Read in Kannada.
Story first published: Thursday, May 27, 2021, 20:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X