ಜಿಎಂಸಿ ಹಮ್ಮರ್ ಎಲೆಕ್ಟ್ರಿಕ್ ಟ್ರಕ್ ಪರ್ಫಾಮೆನ್ಸ್ ವೀಡಿಯೋ ಬಿಡುಗಡೆ

ಜನರಲ್ ಮೋಟಾರ್ಸ್ ಸಂಸ್ಥೆಯು ಕೊನೆಗೂ ತನ್ನ ಹಮ್ಮರ್ ಎಲೆಕ್ಟ್ರಿಕ್ ಟ್ರಕ್ ಅನ್ನು ಇತ್ತೀಚೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಿತ್ತು. ಈ ಹೊಸ ಜಿಎಂಸಿ ಹಮ್ಮರ್ ಎಲೆಕ್ಟ್ರಿಕ್ ಟ್ರಕ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ.

ಜಿಎಂಸಿ ಹಮ್ಮರ್ ಎಲೆಕ್ಟ್ರಿಕ್ ಟ್ರಕ್ ಪರ್ಫಾಮೆನ್ಸ್ ವೀಡಿಯೋ ಬಿಡುಗಡೆ

ಈ ಹೊಸ ಹಮ್ಮರ್ ಇವಿ ಪಿಕಪ್ ಟ್ರಕ್ ಅಥವಾ ಎಲೆಕ್ಟ್ರಿಕ್ ಟ್ರಕ್ ಮುಂದಿನ ವರ್ಷದಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಎಲೆಕ್ಟ್ರಿಕ್ ವಾಹನವನ್ನು ಡೆಟ್ರಾಯಿಟ್ ಮತ್ತು ಹ್ಯಾಮ್‌ಟ್ರಾಮ್ಕ್‌ನ ಜನರಲ್ ಮೋಟಾರ್ಸ್ ಸಂಸ್ಥೆಯ(ಜಿಎಂಸಿ) ಸ್ಥಾವರದಲ್ಲಿ ಉತ್ಪಾದಿಸಲಾಗುತ್ತದೆ. ಈ ಹಮ್ಮರ್ ಇವಿ ಪಿಕಪ್ ಟ್ರಕ್ ಆಫ್‌ರೋಡಿಂಗ್ ಸಾಮರ್ಥ್ಯದ ಬಗ್ಗೆ ಅನುಮಾನಗಳು ವ್ಯಕ್ತಪಡಿಸಿದ್ದರು. ಆದರೆ ಇದನ್ನು ಒರಟಾದ ಭೂಪ್ರದೇಶಗಳಲ್ಲಿ ಸಾಗುವ ವೀಡಿಯೋ ಮೂಲಕ ಈ ಅನುಮಾನಗಳನ್ನು ಬಹಿರಂಗಪಡಿಸಿದ್ದರು.

ಜಿಎಂಸಿ ಹಮ್ಮರ್ ಎಲೆಕ್ಟ್ರಿಕ್ ಟ್ರಕ್ ಪರ್ಫಾಮೆನ್ಸ್ ವೀಡಿಯೋ ಬಿಡುಗಡೆ

ಇದೀಗ ಜನರಲ್ ಮೋಟಾರ್ಸ್ ಸಂಸ್ಥೆಯು ಹಮ್ಮರ್ ಇವಿ ಪಿಕಪ್ ಟ್ರಕ್ ಮಾದರಿಯ ಮತ್ತೊಂದು ವೀಡಿಯೋವನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಮಂಜಿನ ಪ್ರದೇಶದಲ್ಲಿ ಜಿಎಂಸಿ ಹಮ್ಮರ್ ಇವಿ ಪಿಕಪ್ ಟ್ರಕ್ ಉತ್ತಮ ಪರ್ಫಾಮೆನ್ಸ್ ಅನ್ನು ನೀಡಿದೆ. ಆಫ್-ರೋಡ್ ನಲ್ಲಿ ಮಾತ್ರವಲ್ಲದೇ ಸ್ನೋ ಮೋಡ್ ನಲ್ಲಿಯು ತನ್ನ ಶಕ್ತಿಯನ್ನು ಪ್ರದರ್ಶಿಸಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಜಿಎಂಸಿ ಹಮ್ಮರ್ ಎಲೆಕ್ಟ್ರಿಕ್ ಟ್ರಕ್ ಪರ್ಫಾಮೆನ್ಸ್ ವೀಡಿಯೋ ಬಿಡುಗಡೆ

ಜಿಎಂಸಿ ನಿರ್ಮಿಸಿರುವ ಮೊದಲ ಎಲೆಕ್ಟ್ರಿಕ್ ಸೂಪರ್ ಟ್ರಕ್" ಇದಾಗಿದೆ. ಹೊಸ ಜಿಎಂಸಿ ಹಮ್ಮರ್ ಇವಿ 1,000 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಹಮ್ಮರ್ ನಲ್ಲಿ 24-ಮಾಡ್ಯೂಲ್, ಡಬಲ್-ಸ್ಟ್ಯಾಕ್ಡ್ ಅಲ್ಟಿಯಮ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇನ್ನು ಹಮ್ಮರ್ ಇವಿ ಸರಿಸುಮಾರು 563 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯವಿದೆ.

ಜಿಎಂಸಿ ಹಮ್ಮರ್ ಎಲೆಕ್ಟ್ರಿಕ್ ಟ್ರಕ್ ಪರ್ಫಾಮೆನ್ಸ್ ವೀಡಿಯೋ ಬಿಡುಗಡೆ

ಹಮ್ಮರ್ ಇವಿ 800 ವೋಲ್ಟ್ ವೇಗದ ಚಾರ್ಜಿಂಗ್ ವ್ಯವಸ್ಥಯನ್ನು ಹೊಂದಿದೆ. ಈ ವಾಹನವನ್ನು ಕೇವಲ 10 ನಿಮಿಷ ಚಾರ್ಜ್ ಮಾಡಿದರೆ 100 ಕಿ.ಮೀ ನಷ್ಟು ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಹಮ್ಮರ್ ಇವಿ ಉತ್ತಮ ಪರ್ಫಾಮೆನ್ಸ್ ಮಾದರಿಯಾಗಿದೆ. ಕೇವಲ 3 ಸೆಕೆಂಡುಗಳಲ್ಲಿ ಈ ಹಮ್ಮರ್ ಇವಿ 0-60 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಜಿಎಂಸಿ ಹಮ್ಮರ್ ಎಲೆಕ್ಟ್ರಿಕ್ ಟ್ರಕ್ ಪರ್ಫಾಮೆನ್ಸ್ ವೀಡಿಯೋ ಬಿಡುಗಡೆ

ಈ ವಾಹನದಲ್ಲಿ 35 ಇಂಚಿನ ಟಯರ್ ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ 4ಡಬ್ಲ್ಯುಡಿಯನ್ನು ಅಳವಡಿಸಿದ್ದಾರೆ.ಈ ಹಮ್ಮರ್ ಇವಿಯಲ್ಲಿ ವಿಶಿಷ್ಟವಾದ ಡ್ರೈವಿಂಗ್ ಮೋಡ್ ಅನ್ನು ಸಹ ಹೊಂದಿದೆ. ಇದನ್ನು 'ಕ್ರ್ಯಾಬ್ ಮೋಡ್' ಎಂದು ಕರೆಯಲಾಗುತ್ತದೆ. ಇದು ಆಫ್-ರೋಡ್ ನಲ್ಲಿ ಹೆಚ್ಚು ಉಪಯೋಗವಾಗುವ ಪೀಚರ್ ಆಗಿದೆ.

ಜಿಎಂಸಿ ಹಮ್ಮರ್ ಎಲೆಕ್ಟ್ರಿಕ್ ಟ್ರಕ್ ಪರ್ಫಾಮೆನ್ಸ್ ವೀಡಿಯೋ ಬಿಡುಗಡೆ

ಹಮ್ಮರ್ ಇವಿಯಲ್ಲಿ 13.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರಲಿದೆ. ಇದರಲ್ಲಿ ಕ್ಲೈಮೆಂಟ್ ಕಂಟ್ರೋಲ್ ಫೀಚರ್ ಅನ್ನು ಹೊಂದಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಈ ವಾಹನವು ಅಡಾಪ್ಟಿವ್ ಏರ್ ಸಸ್ಪೆಂಕ್ಷನ್ (ಇದು 6 ಇಂಚುಗಳಷ್ಟು ಗ್ರೌಂಡ್ ಕ್ಲಿಯರೆನ್ಸ್ ಹೆಚ್ಚಿಸಬಹುದು), ಇನ್ನು ಆಫ್-ರೋಡಿಂಗ್‌ಗಾಗಿ ಅಂಡರ್‌ಬಾಡಿ ಅರ್ಮರ್ ಮತ್ತು ಕಾರಿನ ಸುತ್ತಲಿನ ದೃಶ್ಯವನ್ನು ಒದಗಿಸಲು 18 ಕ್ಯಾಮೆರಾಗಳನ್ನು ಸಹ ನೀಡುತ್ತದೆ.

ಜಿಎಂಸಿ ಹಮ್ಮರ್ ಎಲೆಕ್ಟ್ರಿಕ್ ಟ್ರಕ್ ಪರ್ಫಾಮೆನ್ಸ್ ವೀಡಿಯೋ ಬಿಡುಗಡೆ

ಹಿಂದಿನ ತಕೆಮಾರಿನ ಹಮ್ಮರ್ ಎಸ್‍ಯುವಿ ರೂಪದಲ್ಲಿ ಮಾರಾಟವಾಗುತ್ತಿತ್ತು. ಈ ಆಫ್-ರೋಡ್ ಹಮ್ಮರ್ ಎಸ್‍‍ಯುವಿಯು ಕಠಿಣವಾದ ಅಡೆತಡೆಗಳಲ್ಲಿ ಸುಲಭವಾಗಿ ಸಾಗುತ್ತದೆ. ಆಫ್ ರೋಡ್ ವಾಹನ ಪ್ರಿಯರ ಮೆಚ್ಚಿನ ಎಸ್‍‍ಯುವಿಯಾಗಿತ್ತು. ಅಮೆರಿಕಾದ ಸೈನ್ಯ ಯುಎಸ್ ಸೈನ್ಯ, ಯುಎಸ್ ಮೆರೈನ್ ಕಾಪ್ಸ್ ಮತ್ತು ಇತರ ಅರೆಸೈನಿಕ ಪಡೆಗಳಿಗೂ ಇದು ಮೆಚ್ಚಿನ ಎಸ್‍ಯುವಿಯಾಗಿದೆ.

ಜಿಎಂಸಿ ಹಮ್ಮರ್ ಎಲೆಕ್ಟ್ರಿಕ್ ಟ್ರಕ್ ಪರ್ಫಾಮೆನ್ಸ್ ವೀಡಿಯೋ ಬಿಡುಗಡೆ

ಇನ್ನು ಹೊಸ ಹಮ್ಮರ್ ಇವಿ ರೂಫ್ ಪ್ಯಾನೆಲ್ ಗಳನ್ನು ಸಹ ಪಡೆಯುತ್ತದೆ, ಅದು ಮುಂಭಾಗದ ಬೂಟ್‌ನೊಳಗೆ ಹೊಂದಿಕೊಳ್ಳುತ್ತದೆ. ಹೊಸ ಹಮ್ಮರ್ ಇವಿಯಲ್ಲಿ ಆಲ್-ಎಲ್ಇಡಿ ಲೈಟಿಂಗ್ ಅನ್ನು ಅಳವಡಿಸಿದೆ. ಈ ವಾಹನವು ಬಾಕ್ಸಿ-ಲುಕ್ ನೊಂದಿಗೆ ಆಕರ್ಷಕ ವಿನ್ಯಾಸವನ್ನು ಹೊಂದಿದೆ.

More from DriveSpark

Article Published On: Thursday, February 18, 2021, 20:59 [IST]
English summary
GMC Hummer EV Does Donuts In Snow. Read In Kananda.
Read more on ಹಮ್ಮರ್ hummer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+