ಕಾರು ಲಾಕ್, ಅನ್ ಲಾಕ್ ಮಾಡಲು ಹೊಸ ಫೀಚರ್ ಬಿಡುಗಡೆಗೊಳಿಸಲಿದೆ ಗೂಗಲ್

ಗೂಗಲ್ ತನ್ನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗಾಗಿ ಆಂಡ್ರಾಯ್ಡ್ 12 ಓಎಸ್ ಪರಿಚಯಿಸಲು ಸಜ್ಜಾಗಿದೆ. ಈ ಓ‌ಎಸ್ ಹೊಸ ಯುಐ, ಪರ್ಫಾಮೆನ್ಸ್ ಇಂಪ್ರೂಮೆಂಟ್ ಸೇರಿದಂತೆ ಹಲವು ಹೊಸ ಫೀಚರ್'ಗಳನ್ನು ಹೊಂದಿದೆ.

ಕಾರು ಲಾಕ್, ಅನ್ ಲಾಕ್ ಮಾಡಲು ಹೊಸ ಫೀಚರ್ ಬಿಡುಗಡೆಗೊಳಿಸಲಿದೆ ಗೂಗಲ್

ಈ ಹೊಸ ಫೀಚರ್'ಗಳಲ್ಲಿ ಡಿಜಿಟಲ್ ಕಾರ್ ಕೀ ಸಹ ಸೇರಿದೆ. ಈ ಕೀ ಕಾರಿನೊಳಗೆ ಪ್ರವೇಶಿಸುವುದನ್ನು ಸುಲಭಗೊಳಿಸುತ್ತದೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್'ನಲ್ಲಿರುವ ಈ ಫೀಚರ್ ಮೂಲಕ ಕಾರನ್ನು ಲಾಕ್ ಮಾಡಬಹುದು, ಅನ್ ಲಾಕ್ ಮಾಡಬಹುದು ಹಾಗೂ ಸ್ಟಾರ್ಟ್ ಮಾಡಬಹುದು.

ಕಾರು ಲಾಕ್, ಅನ್ ಲಾಕ್ ಮಾಡಲು ಹೊಸ ಫೀಚರ್ ಬಿಡುಗಡೆಗೊಳಿಸಲಿದೆ ಗೂಗಲ್

ಈ ಫೀಚರ್ ಮೂಲಕ ಫಿಸಿಕಲ್ ಕೀಗಳನ್ನು ಸದಾ ಕಾಲ ಜೊತೆಯಲ್ಲಿ ಕೊಂಡೊಯ್ಯುವ ಅಗತ್ಯವಿಲ್ಲ. ಈ ಡಿಜಿಟಲ್ ಕೀ ಹೊಸ ಅಲ್ಟ್ರಾ ವೈಡ್ ಬ್ಯಾಂಡ್ (ಯುಡಬ್ಲ್ಯೂಬಿ) ತಂತ್ರಜ್ಞಾನವನ್ನು ಬಳಸುತ್ತದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಕಾರು ಲಾಕ್, ಅನ್ ಲಾಕ್ ಮಾಡಲು ಹೊಸ ಫೀಚರ್ ಬಿಡುಗಡೆಗೊಳಿಸಲಿದೆ ಗೂಗಲ್

ಈ ತಂತ್ರಜ್ಞಾನವು ಸಣ್ಣ ರಾಡಾರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಕಾರಿನೊಳಗೆ ಪ್ರವೇಶಿಸಲು ಫೋನ್ ಅನ್ನು ಜೇಬಿನಿಂದ ಹೊರ ತೆಗೆಯುವ ಅವಶ್ಯಕತೆಯಿಲ್ಲ. ಇದು ಎನ್‌ಎಫ್‌ಸಿ ಅಡ್ಜಸ್ಟಬಲ್ ಕಾರುಗಳೊಂದಿಗೆ ಕಾರ್ಯ ನಿರ್ವಹಿಸುತ್ತದೆ.

ಕಾರು ಲಾಕ್, ಅನ್ ಲಾಕ್ ಮಾಡಲು ಹೊಸ ಫೀಚರ್ ಬಿಡುಗಡೆಗೊಳಿಸಲಿದೆ ಗೂಗಲ್

ಇದರಲ್ಲಿ ಕಾರಿನ ಡೋರ್ ಮೇಲೆ ಫೋನ್‌ ಅನ್ನು ಮುಟ್ಟುವುದರಿಂದ ಕಾರು ಅನ್ ಲಾಕ್ ಆಗುತ್ತದೆ. ಈ ಡಿಜಿಟಲ್ ಕೀಯನ್ನು ಸ್ನೇಹಿತರು ಹಾಗೂ ಕುಟುಂಬದ ಸದಸ್ಯರ ಜೊತೆಗೆ ಶೇರ್ ಮಾಡಿ ಕೊಳ್ಳಬಹುದು.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಕಾರು ಲಾಕ್, ಅನ್ ಲಾಕ್ ಮಾಡಲು ಹೊಸ ಫೀಚರ್ ಬಿಡುಗಡೆಗೊಳಿಸಲಿದೆ ಗೂಗಲ್

ಈ ರೀತಿಯ ತಂತ್ರಜ್ಞಾನವನ್ನು ಪರಿಚಯಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ. 2020ರ ಜೂನ್ ತಿಂಗಳಿನಲ್ಲಿ ಖ್ಯಾತ ಸ್ಮಾರ್ಟ್ ಫೋನ್ ತಯಾರಕ ಕಂಪನಿಯಾದ ಆಪಲ್ ಐಒಎಸ್ 14 ಸಾಫ್ಟ್ ವೇರ್ ಅಪ್ ಡೇಟ್'ನಲ್ಲಿ ಈ ರೀತಿಯ ಫೀಚರ್ ಅನ್ನು ಪರಿಚಯಿಸಿತ್ತು.

ಕಾರು ಲಾಕ್, ಅನ್ ಲಾಕ್ ಮಾಡಲು ಹೊಸ ಫೀಚರ್ ಬಿಡುಗಡೆಗೊಳಿಸಲಿದೆ ಗೂಗಲ್

ಕನೆಕ್ಟೆಡ್ ಕಾರ್ ಟೆಕ್ನಾಲಜಿ ಹೊಂದಿರುವ ಕಾರುಗಳು ಸಹ ಕಾರು ತಯಾರಕ ಕಂಪನಿಗಳು ಅಭಿವೃದ್ಧಿಪಡಿಸಿರುವ ನಿರ್ದಿಷ್ಟ ಅಪ್ಲಿಕೇಶನ್‌ ಮೂಲಕ ಈ ರೀತಿಯ ಫೀಚರ್'ಗಳನ್ನು ಹೊಂದಿವೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಕಾರು ಲಾಕ್, ಅನ್ ಲಾಕ್ ಮಾಡಲು ಹೊಸ ಫೀಚರ್ ಬಿಡುಗಡೆಗೊಳಿಸಲಿದೆ ಗೂಗಲ್

ಆದರೆ ಈ ಫೀಚರ್ ಬಗ್ಗೆ ಇರುವ ಒಂದು ಎಚ್ಚರಿಕೆಯೆಂದರೆ, ಸುರಕ್ಷತಾ ಕಾರಣಗಳಿಗಾಗಿ ಕಾರಿನ ಕೀಯನ್ನು ಜೊತೆಯಲ್ಲಿ ಕೊಂಡೊಯ್ಯಬೇಕಾಗುತ್ತದೆ. ಆಂಡ್ರಾಯ್ಡ್ 12ನಲ್ಲಿ ಡಿಜಿಟಲ್ ಕಾರ್ ಕೀ ಬಳಸಲು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಅಗತ್ಯವಿದೆ.

ಕಾರು ಲಾಕ್, ಅನ್ ಲಾಕ್ ಮಾಡಲು ಹೊಸ ಫೀಚರ್ ಬಿಡುಗಡೆಗೊಳಿಸಲಿದೆ ಗೂಗಲ್

ಸದ್ಯಕ್ಕೆ ಗೂಗಲ್ ಕಂಪನಿಯು ಈ ಡಿಜಿಟಲ್ ಕಾರ್ ಕೀ ಫೀಚರ್ ಅನ್ನು ಆಯ್ದ ಸ್ಮಾರ್ಟ್ ಫೋನ್‌ಗಳಾದ ಗೂಗಲ್ ಪಿಕ್ಸೆಲ್ ಹಾಗೂ ಸ್ಯಾಮ್‌ಸಂಗ್ ಗ್ಯಾಲಕ್ಸಿಗಳಲ್ಲಿ ಮಾತ್ರ ಪರಿಚಯಿಸಲಿದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಕಾರು ಲಾಕ್, ಅನ್ ಲಾಕ್ ಮಾಡಲು ಹೊಸ ಫೀಚರ್ ಬಿಡುಗಡೆಗೊಳಿಸಲಿದೆ ಗೂಗಲ್

ಈ ಫೀಚರ್ ಅನ್ನು ಮೊದಲು ಬಿಎಂಡಬ್ಲ್ಯು ಐ 4 ಎಲೆಕ್ಟ್ರಿಕ್ ಕಾರಿನಲ್ಲಿ ಬಳಸಲಾಗುವುದು. ಅದಾದ ನಂತರ ನಿಧಾನವಾಗಿ ಈ ಫೀಚರ್ ಅನ್ನು ಇತರ ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳಲ್ಲಿ ಬಳಸಲಿವೆ.

Most Read Articles

Kannada
English summary
Google to introduce car lock, unlock feature in Android 12 OS. Read in Kannada.
Story first published: Thursday, May 20, 2021, 14:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X