ಈ ಎಕ್ಸ್‌ಪ್ರೆಸ್‌ವೇಯಲ್ಲಿ ಸಾಗುವ ಎಲ್ಲಾ ವಾಹನಗಳಿಗೂ ಈ ಆ್ಯಪ್ ಕಡ್ಡಾಯ

ಗ್ರೇಟರ್ ನೋಯ್ಡಾ ಹಾಗೂ ಆಗ್ರಾ ನಗರಗಳನ್ನು ಸಂಪರ್ಕಿಸುವ ಯಮುನಾ ಎಕ್ಸ್‌ಪ್ರೆಸ್ ವೇಯಲ್ಲಿ ಸಾಗಲು ಹೈವೇ ಸಾಥಿ ಮೊಬೈಲ್ ಆ್ಯಪ್ ಅನ್ನು ಕಡ್ಡಾಯಗೊಳಿಸಲಾಗಿದೆ. ಈ ಎಕ್ಸ್‌ಪ್ರೆಸ್‌ವೇಯಲ್ಲಿ ಸಾಗುವ ಪ್ರತಿಯೊಬ್ಬ ವಾಹನ ಸವಾರರು ತಮ್ಮ ಮೊಬೈಲ್ ಫೋನ್‌ನಲ್ಲಿ ಈ ಆ್ಯಪ್ ಹೊಂದುವ ಅಗತ್ಯವಿದೆ ಎಂದು ಹೆದ್ದಾರಿ ಪ್ರಾಧಿಕಾರ ಹೇಳಿದೆ.

ಈ ಎಕ್ಸ್‌ಪ್ರೆಸ್‌ವೇಯಲ್ಲಿ ಸಾಗುವ ಎಲ್ಲಾ ವಾಹನಗಳಿಗೂ ಈ ಆ್ಯಪ್ ಕಡ್ಡಾಯ

ಸದ್ಯಕ್ಕೆ ಈ ಆ್ಯಪ್ ಅನ್ನು ಆಂಡ್ರಾಯ್ಡ್ ಸಾಧನಗಳಿಗಾಗಿ ಮಾತ್ರ ಬಿಡುಗಡೆಗೊಳಿಸಲಾಗಿದೆ. ಈ ಆ್ಯಪ್ ಹೆದ್ದಾರಿಯಲ್ಲಿ ಸಾಗುವ ವಾಹನ ಸವಾರರಿಗೆ ಸುರಕ್ಷತಾ ನಿಯಮಗಳನ್ನು ತಿಳಿಸುತ್ತದೆ ಎಂದು ಎಕ್ಸ್‌ಪ್ರೆಸ್‌ವೇ ಪ್ರಾಧಿಕಾರವು ತಿಳಿಸಿದೆ. ಈ ಆ್ಯಪ್ ನಲ್ಲಿ ತಿಳಿಸಿರುವ ಮಾರ್ಗಸೂಚಿಗಳನ್ನು ವಾಹನ ಸವಾರರು ಪಾಲಿಸಬೇಕು ಎಂದು ಪ್ರಾಧಿಕಾರವು ಹೇಳಿದೆ.

ಈ ಎಕ್ಸ್‌ಪ್ರೆಸ್‌ವೇಯಲ್ಲಿ ಸಾಗುವ ಎಲ್ಲಾ ವಾಹನಗಳಿಗೂ ಈ ಆ್ಯಪ್ ಕಡ್ಡಾಯ

ಸುರಕ್ಷತಾ ಕಾರಣಗಳಿಗಾಗಿ ಹಾಗೂ ಎಕ್ಸ್‌ಪ್ರೆಸ್‌ವೇಯನ್ನು ಸುರಕ್ಷಿತವಾಗಿಸಲು ಈ ಆ್ಯಪ್ ಕಡ್ಡಾಯಗೊಳಿಸಲಾಗಿದೆ ಎಂದು ಯಮುನಾ ಎಕ್ಸ್‌ಪ್ರೆಸ್‌ವೇ ಪ್ರಾಧಿಕಾರದ ಸಿಇಒ ಡಾ.ಅನ್ವೀರ್ ಸಿಂಗ್ ಅಧಿಸೂಚನೆ ಹೊರಡಿಸಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈ ಎಕ್ಸ್‌ಪ್ರೆಸ್‌ವೇಯಲ್ಲಿ ಸಾಗುವ ಎಲ್ಲಾ ವಾಹನಗಳಿಗೂ ಈ ಆ್ಯಪ್ ಕಡ್ಡಾಯ

ಹೈವೇ ಸಾಥಿ ಎಂಬುದು ಚಾಲನಾ ಪರಿಹಾರದ ಅಪ್ಲಿಕೇಶನ್‌ ಆಗಿದೆ. ಈ ಆ್ಯಪ್ ಹೆದ್ದಾರಿ ಅಪಘಾತಗಳ ಬಗ್ಗೆ, ಟ್ರಾಫಿಕ್ ಜಾಮ್‌ ಬಗ್ಗೆ ಹಾಗೂ ಹವಾಮಾನ ವರದಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತದೆ. ಟೋಲ್ ತೆರಿಗೆಯನ್ನು ಡಿಜಿಟಲ್ ರೂಪದಲ್ಲಿ ಪಾವತಿಸಲು ಈ ಆ್ಯಪ್ ಅವಕಾಶ ನೀಡುತ್ತದೆ.

ಈ ಎಕ್ಸ್‌ಪ್ರೆಸ್‌ವೇಯಲ್ಲಿ ಸಾಗುವ ಎಲ್ಲಾ ವಾಹನಗಳಿಗೂ ಈ ಆ್ಯಪ್ ಕಡ್ಡಾಯ

ಈ ಆ್ಯಪ್ ಕ್ರೆಡಿಟ್ ಕಾರ್ಡ್ ಸೇರಿದಂತೆ ಬ್ಯಾಂಕಿಂಗ್ ಕಾರ್ಡ್ ಮೂಲಕ ಪಾವತಿಯನ್ನು ಸ್ವೀಕರಿಸುತ್ತದೆ. ಪೇಟಿಎಂ, ಮೊಬಿಕ್ವಿಕ್, ಗೂಗಲ್ ಪೇ, ಏರ್ ಟೆಲ್ ಮನಿ ಹಾಗೂ ಇತರ ಯುಪಿಐ ಆಧಾರಿತ ಪಾವತಿ ಆ್ಯಪ್ ಗಳ ಇ-ವ್ಯಾಲೆಟ್ ಮೂಲಕ ಪಾವತಿ ಸೌಲಭ್ಯವನ್ನು ಒದಗಿಸುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಎಕ್ಸ್‌ಪ್ರೆಸ್‌ವೇಯಲ್ಲಿ ಸಾಗುವ ಎಲ್ಲಾ ವಾಹನಗಳಿಗೂ ಈ ಆ್ಯಪ್ ಕಡ್ಡಾಯ

ವಾಹನ ಸವಾರರು ತಮ್ಮ ಪ್ರಯಾಣದ ಬಗೆಗಿನ ವಿವಿಧ ಮಾಹಿತಿಯನ್ನು ಈ ಆ್ಯಪ್ ನಲ್ಲಿ ಪಡೆಯಬಹುದು. ಪ್ರಯಾಣದ ಸಮಯ, ತುರ್ತು ಸೇವೆಗಳ ಸಂಪರ್ಕ, ಟ್ರಾಫಿಕ್ ಜಾಮ್, ವೇಗ ಮಿತಿ, ರಸ್ತೆ ಪರಿಸ್ಥಿತಿಗಳಂತಹ ಅನೇಕ ಮಾಹಿತಿಗಳನ್ನು ಈ ಆ್ಯಪ್ ಒದಗಿಸುತ್ತದೆ. ಕ್ಯಾಬ್ ಆಪರೇಟರ್‌ಗಳಿಗೆ ಆನ್ ಬೋರ್ಡ್ ಯುನಿಟ್ ಆಯ್ಕೆಯ ಮೂಲಕ ತಮ್ಮ ವಾಹನಗಳನ್ನು ಟ್ರ್ಯಾಕ್ ಮಾಡಲು ಈ ಆ್ಯಪ್ ಅನುಮತಿ ನೀಡುತ್ತದೆ.

ಈ ಎಕ್ಸ್‌ಪ್ರೆಸ್‌ವೇಯಲ್ಲಿ ಸಾಗುವ ಎಲ್ಲಾ ವಾಹನಗಳಿಗೂ ಈ ಆ್ಯಪ್ ಕಡ್ಡಾಯ

ಕ್ಯಾಬ್ ಮಾಲೀಕರು ತಮ್ಮ ಕಾರಿನ ವೇಗ ಹಾಗೂ ಕಾರು ಇರುವ ಸ್ಥಳವನ್ನು ಈ ಆ್ಯಪ್ ಮೂಲಕ ಪರಿಶೀಲಿಸಬಹುದು. ಈ ವರ್ಷದಿಂದ ಚಳಿಗಾಲದ ತಿಂಗಳುಗಳಲ್ಲಿ ಯಮುನಾ ಎಕ್ಸ್‌ಪ್ರೆಸ್ ವೇಯಲ್ಲಿನ ವೇಗ ಮಿತಿಯನ್ನು ಕಡಿಮೆಗೊಳಿಸಲಾಗಿದೆ. ಮಂಜು ಬಿದ್ದು ವಾಹನಗಳ ಗೋಚರತೆ ಕಡಿಮೆಯಾಗುವ ಕಾರಣ, ಇಡೀ ಎಕ್ಸ್‌ಪ್ರೆಸ್ ವೇಯ ವೇಗದ ಮಿತಿಯನ್ನು ಪ್ರತಿ ಗಂಟೆಗೆ 100 ಕಿ.ಮೀಗಳಿಂದ ಗಂಟೆಗೆ 75 ಕಿ.ಮೀಗಳಿಗೆ ಇಳಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಎಕ್ಸ್‌ಪ್ರೆಸ್‌ವೇಯಲ್ಲಿ ಸಾಗುವ ಎಲ್ಲಾ ವಾಹನಗಳಿಗೂ ಈ ಆ್ಯಪ್ ಕಡ್ಡಾಯ

ದಟ್ಟವಾದ ಮಂಜಿನಿಂದಾಗಿ ಪ್ರತಿವರ್ಷ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಹಲವಾರು ಅಪಘಾತಗಳು ಸಂಭವಿಸುತ್ತವೆ. ಈ ಅಪಘಾತಗಳಿಂದಾಗಿ ವಾಹನ ಸವಾರರು ಗಾಯಗೊಳ್ಳುವುದರ ಜೊತೆಗೆ ಕೆಲವೊಮ್ಮೆ ಪಾಣ ಹಾನಿಯು ಸಂಭವಿಸುತ್ತಿದೆ. ಈ ವೇಗದ ಮಿತಿಯು ಡಿಸೆಂಬರ್ 15ರಿಂದ ಫೆಬ್ರವರಿ 15ರವರೆಗೆ ಜಾರಿಯಲ್ಲಿರಲಿದೆ.

ಈ ಎಕ್ಸ್‌ಪ್ರೆಸ್‌ವೇಯಲ್ಲಿ ಸಾಗುವ ಎಲ್ಲಾ ವಾಹನಗಳಿಗೂ ಈ ಆ್ಯಪ್ ಕಡ್ಡಾಯ

ಅಪಘಾತಗಳ ಸಂಖ್ಯೆಯಲ್ಲಿ ಯಮುನಾ ಎಕ್ಸ್‌ಪ್ರೆಸ್ ವೇ ಅಗ್ರಸ್ಥಾನದಲ್ಲಿದೆ. 2012 - 2018ರ ನಡುವೆ ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ 4,900 ಅಪಘಾತಗಳುಸಂಭವಿಸಿವೆ. ಈ ಪೈಕಿ 718 ಮಂದಿ ಸಾವನ್ನಪ್ಪಿದ್ದರೆ, 7,671 ಮಂದಿ ಗಾಯಗೊಂಡಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಎಕ್ಸ್‌ಪ್ರೆಸ್‌ವೇಯಲ್ಲಿ ಸಾಗುವ ಎಲ್ಲಾ ವಾಹನಗಳಿಗೂ ಈ ಆ್ಯಪ್ ಕಡ್ಡಾಯ

ಹೆಚ್ಚಿನ ಸಂಖ್ಯೆಯ ಅಪಘಾತಗಳು ಯಮುನಾ ಎಕ್ಸ್‌ಪ್ರೆಸ್‌ವೇಯನ್ನು ಸಾವಿನ ಬಲೆಗೆ ತಳ್ಳಿವೆ. ಈ ಕಾರಣಕ್ಕೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಈ ಆ್ಯಪ್ ಅನ್ನು 2016ರಲ್ಲಿ ಅಭಿವೃದ್ಧಿಪಡಿಸಲಾಯಿತು. ಈಗ ಈ ಎಕ್ಸ್‌ಪ್ರೆಸ್‌ವೇಯಲ್ಲಿ ಸಾಗುವ ಎಲ್ಲಾ ವಾಹನ ಸವಾರರಿಗೂ ಕಡ್ಡಾಯಗೊಳಿಸಲಾಗಿದೆ.

Most Read Articles

Kannada
English summary
Highway Saathi app mandatory for all vehicles to travel on Yamuna expressway. Read in Kannada.
Story first published: Thursday, February 18, 2021, 10:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X