ಆಯ್ದ ಕಾರು ಮಾದರಿಗಳ ಮೇಲೆ ಕೊಡುಗೆಗಳನ್ನು ಘೋಷಿಸಿದ ಹೋಂಡಾ ಕಾರ್ಸ್ ಇಂಡಿಯಾ

ಹೋಂಡಾ ಕಾರ್ಸ್ ಇಂಡಿಯಾ ಜುಲೈ ತಿಂಗಳಿನಲ್ಲಿ ತನ್ನ ಆಯ್ದ ಕಾರುಗಳ ಮೇಲೆ ರೂ.39,000ಗಳವರೆಗೆ ಕೊಡುಗೆ ನೀಡಲಿದೆ. ಈ ಕೊಡುಗೆಗಳು ಹೋಂಡಾ ಅಮೇಜ್, ಡಬ್ಲ್ಯುಆರ್-ವಿ ಹಾಗೂ ಜಾಝ್ ಕಾರುಗಳ ಮೇಲೆ ಲಭ್ಯವಿರಲಿವೆ.

ಆಯ್ದ ಕಾರು ಮಾದರಿಗಳ ಮೇಲೆ ಕೊಡುಗೆಗಳನ್ನು ಘೋಷಿಸಿದ ಹೋಂಡಾ ಕಾರ್ಸ್ ಇಂಡಿಯಾ

ಹೊಸ ತಲೆಮಾರಿನ ಹೋಂಡಾ ಸಿಟಿ ಕಾರಿನ ಮೇಲೆ ಕಂಪನಿಯು ಯಾವುದೇ ರಿಯಾಯಿತಿ ನೀಡುತ್ತಿಲ್ಲ. ಇದರ ಜೊತೆಗೆ ಹೋಂಡಾ ಕಂಪನಿಯು ಕಾರುಗಳ ಆನ್‌ಲೈನ್ ಬುಕ್ಕಿಂಗ್'ಗಳನ್ನು ಸಹ ಆರಂಭಿಸಿದೆ. ಇದರಿಂದ ಗ್ರಾಹಕರು ಮನೆಯಲ್ಲಿ ಕುಳಿತು ಕೊಂಡೇ ಹೋಂಡಾ ಕಾರುಗಳನ್ನು ಬುಕ್ಕಿಂಗ್ ಮಾಡಬಹುದು. ಹೋಂಡಾ ಕಂಪನಿಯು ಯಾವ ಕಾರುಗಳ ಮೇಲೆ ಕೊಡುಗೆಗಳನ್ನು ನೀಡುತ್ತಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಆಯ್ದ ಕಾರು ಮಾದರಿಗಳ ಮೇಲೆ ಕೊಡುಗೆಗಳನ್ನು ಘೋಷಿಸಿದ ಹೋಂಡಾ ಕಾರ್ಸ್ ಇಂಡಿಯಾ

ಹೋಂಡಾ ಅಮೇಜ್

ಹೋಂಡಾ ಅಮೇಜ್ ಕಾಂಪ್ಯಾಕ್ಟ್ ಸೆಡಾನ್‌ ಕಾರಿನ ಮೇಲೆ ಕಂಪನಿಯು ರೂ.39,243 ಕೊಡುಗೆ ನೀಡುತ್ತಿದೆ. ಅಮೇಜ್‌ ಕಾರಿನ ವಿಎಂಟಿ ಹಾಗೂ ಎಕ್ಸ್‌ಎಂಟಿ ಪೆಟ್ರೋಲ್ ಮಾದರಿಗಳ ಮೇಲೆ ರೂ.5,000 ನಗದು ರಿಯಾಯಿತಿ ನೀಡಲಾಗುತ್ತದೆ. ಅಥವಾ ಎಫ್‌ಒಸಿ ಅಕ್ಸೇಸರಿಸ್'ಗಳ ಮೇಲೆ ರೂ.5,998 ರಿಯಾಯಿತಿ ಪಡೆಯಬಹುದು.

ಆಯ್ದ ಕಾರು ಮಾದರಿಗಳ ಮೇಲೆ ಕೊಡುಗೆಗಳನ್ನು ಘೋಷಿಸಿದ ಹೋಂಡಾ ಕಾರ್ಸ್ ಇಂಡಿಯಾ

ಜೊತೆಗೆ ರೂ.10,000ಗಳ ವಿನಿಮಯ ಬೋನಸ್ ನೀಡಲಾಗುತ್ತದೆ. ಇನ್ನು ಎಸ್‌ಎಂಟಿ ಪೆಟ್ರೋಲ್ ಮಾದರಿ ಮೇಲೆ ರೂ.20,000 ಅಥವಾ ಎಫ್‌ಒಸಿ ಅಕ್ಸೇಸರಿಸ್'ಗಳ ಮೇಲೆ ರೂ.24,243 ರಿಯಾಯಿತಿ ನೀಡಲಾಗುತ್ತದೆ. ಈ ಮಾದರಿಯ ಮೇಲೆ ರೂ.15 ಸಾವಿರಗಳ ವಿನಿಮಯ ಬೋನಸ್ ಸಹ ನೀಡಲಾಗುತ್ತದೆ.

ಆಯ್ದ ಕಾರು ಮಾದರಿಗಳ ಮೇಲೆ ಕೊಡುಗೆಗಳನ್ನು ಘೋಷಿಸಿದ ಹೋಂಡಾ ಕಾರ್ಸ್ ಇಂಡಿಯಾ

ಹೋಂಡಾ ಡಬ್ಲ್ಯೂಆರ್-ವಿ

ಹೋಂಡಾ ಡಬ್ಲ್ಯುಆರ್-ವಿ ಕಾರಿನ ಮೇಲೆ ರೂ.16,058 ಕೊಡುಗೆ ನೀಡಲಾಗುತ್ತದೆ. ಇದರಲ್ಲಿ, ಎಫ್‌ಒಸಿ ಅಕ್ಸೇಸರಿಸ್'ಗಳ ಮೇಲೆ ರೂ.6,058ಗಳ ರಿಯಾಯಿತಿ ರೂ.5,000ಗಳ ನಗದು ರಿಯಾಯಿತಿ ಪಡೆಯಬಹುದು. ಇದರ ಜೊತೆಗೆ ಕಾರಿನ ಮೇಲೆ ರೂ.10,000ಗಳ ವಿನಿಮಯ ಬೋನಸ್ ಸಹ ಪಡೆಯಬಹುದು.

ಆಯ್ದ ಕಾರು ಮಾದರಿಗಳ ಮೇಲೆ ಕೊಡುಗೆಗಳನ್ನು ಘೋಷಿಸಿದ ಹೋಂಡಾ ಕಾರ್ಸ್ ಇಂಡಿಯಾ

ಹೋಂಡಾ ಜಾಝ್

ಕಂಪನಿಯು ಹೋಂಡಾ ಜಾಝ್ ಕಾರಿನ ಮೇಲೆ ರೂ.16,095ಗಳ ಕೊಡುಗೆ ನೀಡುತ್ತದೆ. ಇದರಲ್ಲಿ ಗ್ರಾಹಕರಿಗೆ ರೂ.5,000 ನಗದು ರಿಯಾಯಿತಿ ಅಥವಾ ಎಫ್‌ಒಸಿ ಅಕ್ಸೇಸರಿಸ್'ಗಳ ಮೇಲೆ ರೂ.6,095ಗಳ ರಿಯಾಯಿತಿ ನೀಡುವ ಆಯ್ಕೆಯನ್ನು ನೀಡಲಾಗಿದೆ.

ಆಯ್ದ ಕಾರು ಮಾದರಿಗಳ ಮೇಲೆ ಕೊಡುಗೆಗಳನ್ನು ಘೋಷಿಸಿದ ಹೋಂಡಾ ಕಾರ್ಸ್ ಇಂಡಿಯಾ

ಇದರ ಜೊತೆಗೆ ಈ ಕಾರಿನ ಮೇಲೆ ರೂ.10,000ಗಳ ವಿನಿಮಯ ಬೋನಸ್ ಸಹ ನೀಡಲಾಗುತ್ತದೆ. ಅಸ್ತಿತ್ವದಲ್ಲಿರುವ ಹೋಂಡಾ ಗ್ರಾಹಕರಿಗೆ ಕಂಪನಿಯು ರೂ.5,000ಗಳ ಲಾಯಲ್ಟಿ ಬೋನಸ್ ಹಾಗೂ ರೂ.9,000ಗಳ ವಿನಿಮಯ ಬೋನಸ್ ನೀಡುತ್ತದೆ.

ಆಯ್ದ ಕಾರು ಮಾದರಿಗಳ ಮೇಲೆ ಕೊಡುಗೆಗಳನ್ನು ಘೋಷಿಸಿದ ಹೋಂಡಾ ಕಾರ್ಸ್ ಇಂಡಿಯಾ

ಹೋಂಡಾ ಕಂಪನಿಯ ಈ ಕೊಡುಗೆಗಳು ಜುಲೈ 31ರವರೆಗೆ ಲಭ್ಯವಿರಲಿವೆ. ಮಾದರಿ, ಸರಣಿ ಹಾಗೂ ನಗರಗಳಿಗೆ ಅನುಸಾರವಾಗಿ ಈ ಕೊಡುಗೆಗಳು ಬದಲಾಗುತ್ತವೆ ಎಂದು ಕಂಪನಿ ಹೇಳಿದೆ.

ಆಯ್ದ ಕಾರು ಮಾದರಿಗಳ ಮೇಲೆ ಕೊಡುಗೆಗಳನ್ನು ಘೋಷಿಸಿದ ಹೋಂಡಾ ಕಾರ್ಸ್ ಇಂಡಿಯಾ

ಹೋಂಡಾ ಕಂಪನಿಯ ಈ ಕೊಡುಗೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು ಹತ್ತಿರದಲ್ಲಿರುವ ಹೋಂಡಾ ಕಾರು ಮಾರಾಟಗಾರರನ್ನು ಸಂಪರ್ಕಿಸಬಹುದು. ಕಾರ್ಪೊರೇಟ್ ಗ್ರಾಹಕರಿಗೆ ಕಂಪನಿಯು ಈ ಎಲ್ಲಾ ಮಾದರಿಗಳ ಮೇಲೆ ವಿಶೇಷ ಕೊಡುಗೆಗಳನ್ನು ನೀಡುತ್ತದೆ.

ಆಯ್ದ ಕಾರು ಮಾದರಿಗಳ ಮೇಲೆ ಕೊಡುಗೆಗಳನ್ನು ಘೋಷಿಸಿದ ಹೋಂಡಾ ಕಾರ್ಸ್ ಇಂಡಿಯಾ

ಸ್ಟಾಕ್ ಇರುವವರೆಗೆ ಮಾತ್ರ ಈ ಕೊಡುಗೆಗಳು ಅನ್ವಯವಾಗುತ್ತವೆ. ಹೋಂಡಾ ಕಾರ್ಸ್ ಕಂಪನಿಯ ಜೂನ್ ತಿಂಗಳ ಮಾರಾಟದ ಬಗ್ಗೆ ಹೇಳುವುದಾದರೆ ಕಂಪನಿಯು ಕಳೆದ ತಿಂಗಳು 4,767 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿದೆ.

ಆಯ್ದ ಕಾರು ಮಾದರಿಗಳ ಮೇಲೆ ಕೊಡುಗೆಗಳನ್ನು ಘೋಷಿಸಿದ ಹೋಂಡಾ ಕಾರ್ಸ್ ಇಂಡಿಯಾ

ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು 2,032 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು. ಹೋಂಡಾ ಕಂಪನಿಯು ಈ ವರ್ಷದ ಜೂನ್‌ ತಿಂಗಳಿನಲ್ಲಿ1,241 ಯುನಿಟ್ ಕಾರುಗಳನ್ನು ರಫ್ತು ಮಾಡಿದ್ದರೆ, ಕಳೆದ ವರ್ಷದ ಜೂನ್ ತಿಂಗಳಿನಲ್ಲಿ 385 ಯುನಿಟ್ ಕಾರುಗಳನ್ನು ರಫ್ತು ಮಾಡಿತ್ತು.

Most Read Articles

Kannada
English summary
Honda cars India offers up to Rs.39000 discount on selected models. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X