ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Honda ಎಸ್‍ಯುವಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ Honda ಎಸ್‍ಯುವಿಯು Hyundai creta ಮಾದರಿಗೆ ಪೈಪೋಟಿಯಾಗಿ ಬರಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Honda ಎಸ್‍ಯುವಿ

ಹೋಂಡಾ ಕಾರ್ಸ್ ಇಂಡಿಯಾ ಇತ್ತೀಚೆಗೆ Amaze facelift ಅನ್ನು ಮೈನರ್ ಕಾಸ್ಮೆಟಿಕ್ ಮತ್ತು ಫೀಚರ್ ಅಪ್‌ಗ್ರೇಡ್‌ಗಳೊಂದಿಗೆ ಬಿಡುಗಡೆಗೊಳಿಸಿದ್ದರು. ಈ ಸಂದರ್ಭದಲ್ಲಿ ಹೋಂಡಾ ಕಾರ್ಸ್ ಇಂಡಿಯಾ, ಕಂಪನಿಯ ಹಿರಿಯ ಉಪಾಧ್ಯಕ್ಷ ಮತ್ತು ನಿರ್ದೇಶಕರಾದ Rajesh Goel ಮಾತನಾಡಿ, ಭಾರತೀಯ ಮಾರುಕಟ್ಟೆಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಹೊಸ ಎಸ್‍ಯುವಿಯನ್ನು ಅಭಿವೃದ್ದಿ ಪಡಿಸುತ್ತಿರುವುದಾಗಿ ಹೇಳಿದ್ದಾರೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Honda ಎಸ್‍ಯುವಿ

Honda ಕಂಪನಿಯು ಆರಂಭದಲ್ಲಿ ಎಚ್‌ಆರ್-ವಿ ತರಲು ಯೋಜಿಸಿದ್ದರು ಆದರೆ ಅದನ್ನು ಶೇಕಡಾ 30 ಕ್ಕಿಂತ ಹೆಚ್ಚು ಸ್ಥಳೀಕರಿಸಲಾಗದ ಕಾರಣ 2019 ರಲ್ಲಿ ಯೋಜನೆಗಳನ್ನು ಕೈಬಿಡಲಾಯಿತು. Amaze ಮೂಲದ ಕಾಂಪ್ಯಾಕ್ಟ್ ಎಸ್‌ಯುವಿ ಮುಂದಿನ ವರ್ಷ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ವರದಿಗಳಾಗಿತ್ತು. ಆಧುನಿಕ ಖರೀದಿದಾರರ ಅವಶ್ಯಕತೆಗಳನ್ನು ಪೂರೈಸಲು ಹೋಂಡಾ ಸಬ್-4 ಮೀಟರ್ ಮತ್ತು ಮಿಡ್ ಸೈಜ್ ಎಸ್‍ಯುವಿಯನ್ನು ತರುತ್ತದೆ ಎಂದು 2018 ರಲ್ಲಿ ವರದಿಗಳಾಗಿತ್ತು.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Honda ಎಸ್‍ಯುವಿ

ಕಳೆದ ಮೂರು ವರ್ಷಗಳಲ್ಲಿ 10 ಕ್ಕೂ ಹೆಚ್ಚು ಮಾದರಿಗಳು ಲಭ್ಯವಿರುವುದರಿಂದ ಕಾಂಪ್ಯಾಕ್ಟ್ ಎಸ್‌ಯುವಿ ಜಾಗವನ್ನು ಸ್ಥಿರವಾಗಿ ಹೆಚ್ಚಿಸಲಾಗಿದೆ. ಇದರಿಂದ ಹೋಂಡಾ ಕಂಪನಿಯು ಮಿಡ್ ಸೈಜ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಈ ಹೊಸ ಮೀಡ್ ಸೈಜ್ ಎಸ್‍ಯುವಿ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Honda ಎಸ್‍ಯುವಿ

ಈ ಹೊಸ Honda ಮಿಡ್ ಸೈಜ್ ಎಸ್‍ಯುವಿಯನ್ನು ಆಂತರಿಕವಾಗಿ 31XA ಎಂಬ ಕೋಡ್ ನೇಮ್ ನೀಡಲಾಗಿತ್ತು. ಇದನ್ನು ಇತ್ತೀಚೆಗೆ Honda ಕಂಪನಿಯು ಇಂಡೋನೇಷ್ಯಾದಲ್ಲಿ ಹೊಸ N7X ಕಾನ್ಸೆಪ್ಟ್ ಮಾದರಿಯಾಗಿ ಅನಾವರಣಗೊಳಿಸಿತು. ಈ ಎಸ್‍ಯುವಿಯಲ್ಲಿ ಮಲ್ಟಿ-ಸ್ಲ್ಯಾಟ್ ಕ್ರೋಮ್ ಲಾಡೆನ್ ಗ್ರಿಲ್ ಮತ್ತು ಸ್ಲಿಮ್ ಆಗಿರುವ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ. ಹೆಡ್‌ಲ್ಯಾಂಪ್ ವಿನ್ಯಾಸವು ಹೊಸ ಸಿಟಿ ಸೆಡಾನ್‌ನಿಂದ ಸ್ಫೂರ್ತಿ ಪಡೆದಿದೆ. ಗ್ರಿಲ್ ಮಧ್ಯದಲ್ಲಿ ದೊಡ್ಡ ಪ್ರಮುಖ Honda ಬ್ಯಾಡ್ಜ್ ಅನ್ನು ಇರಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Honda ಎಸ್‍ಯುವಿ

ಇದರೊಂದಿಗೆ ಡ್ಯುಯಲ್-ಎಲ್ಇಡಿ ಡಿಆರ್ಎಲ್ ಸೆಟಪ್ ಇದೆ, ಒಂದು ಎಲ್ಇಡಿ ಡಿಆರ್ಎಲ್ ಅನ್ನು ಹೆಡ್ ಲ್ಯಾಂಪ್ ಮೇಲೆ ಮತ್ತು ಇನ್ನೊಂದನ್ನು ಬಂಪರ್ ಮೇಲೆ ಇರಿಸಲಾಗಿದೆ. ಕೆಳಗಿನ ಬಂಪರ್ ವಿಶಾಲವಾದ ವೈಡ್ ಏರ್ ಡ್ಯಾಮ್ ಅನ್ನು ಹೊಂದಿದೆ. ಹೊಸ Honda N7X ಕಾನ್ಸೆಪ್ಟ್‌ನ ಸೈಡ್ ಪ್ರೊಫೈಲ್ ನಲ್ಲಿ ಬೆಟ್ ಲೈನ್ ಬೆಲ್ಟ್‌ಲೈನ್ ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Honda ಎಸ್‍ಯುವಿ

ಇದರಲ್ಲಿ ಬ್ಲ್ಯಾಕ್ ಪ್ಲಾಸ್ಟಿಕ್ ಕ್ಲಾಡಿಂಗ್‌ನೊಂದಿಗೆ ರೌಂಡ್ ವ್ಹೀಲ್ ಅರ್ಚಾರ್ ಅನ್ನು ಪಡೆಯುತ್ತದೆ. ಈ ಎಸ್‍ಯುವಿ ಸಿಟಿ ಸೆಡಾನ್‌ನಲ್ಲಿ ನೀಡಲಾಗುವಂತೆಯೇ ಸಿಗ್ನೇಚರ್ ಎಲ್‌ಇಡಿ ಅಂಶಗಳೊಂದಿಗಿನ ಟೈಲ್ ಲ್ಯಾಂಪ್ ಅನ್ನು ಒಳಗೊಂಡಿರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Honda ಎಸ್‍ಯುವಿ

ಹೊಸ Honda ಮಿಡ್ ಎಸ್‍ಯುವಿಯಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಈ ಎಂಜಿನ್ 121 ಬಿಹೆಚ್‌ಪಿ ಮತ್ತು 145 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ನೊಂದಿಗೆ ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Honda ಎಸ್‍ಯುವಿ

ಇನ್ನು ಹೋಂಡಾ ಕಂಪನಿಯು ತನ್ನ 2021ರ Amaze ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೋಂಡಾ ಅಮೇಜ್ ಕಾರಿನ ಆರಂಭಿಕ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.6.32 ಲಕ್ಷಗಳಾಗಿದೆ. ಈ ಹೊಸ ಹೋಂಡಾ ಅಮೇಜ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ರೂ,21,000 ಟೋಕನ್ ಮೊತ್ತವನ್ನು ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Honda ಎಸ್‍ಯುವಿ

ಹೋಂಡಾ ಕಾಂಪ್ಯಾಕ್ಟ್-ಸೆಡಾನ್ ನ ಹಳೆಯ ಮಾದರಿಯ ಮೇಲೆ ಅಮೇಜ್ ಫೇಸ್‌ಲಿಫ್ಟ್‌ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿದೆ. ಈ ಹೋಂಡಾ ಅಮೇಜ್ ಫೇಸ್‌ಲಿಫ್ಟ್‌ ಕಾಂಪ್ಯಾಕ್ಟ್ ಸೆಡಾನ್ ಹೃದಯ ಭಾಗ ಎಂದೇ ಹೇಳಬಹುದಾದ ಎಂಜಿನ್ ಬಗ್ಗೆ ಹೇಳುವುದಾದರೆ, ಅದರ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಇದನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗಿದೆ. ಇದು 1.2ಎಲ್ ಪೆಟ್ರೋಲ್ ಮತ್ತು 1.5ಎಲ್ ಡೀಸೆಲ್ ಎಂಬ ಎಂಜಿನ್ ಗಳಾಗಿವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Honda ಎಸ್‍ಯುವಿ

ಇನ್ನು ಇದರಲ್ಲಿ 1.2ಎಲ್ ಪೆಟ್ರೋಲ್ ಎಂಜಿನ್ 89 ಬಿಹೆಚ್‍ಪಿ ಪವರ್ ಮತ್ತು 110 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.5ಎಲ್ ಡೀಸೆಲ್ ಎಂಜಿನ್ 99 ಬಿಹೆಚ್‍ಪಿ ಪವರ್ ಮತ್ತು 200 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ ಡೀಸೆಲ್ ಆಟೋಮ್ಯಾಟಿಕ್ ರೂಪಾಂತರವು 78 ಬಿಹೆಚ್‍ಪಿ ಪವರ್ ಮತ್ತು 160 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಸ್ಪೀಡ್ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಅಪ್‌ಡೇಟ್ ಮಾಡಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Honda ಎಸ್‍ಯುವಿ

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಹೋಂಡಾ ಇತ್ತೀಚೆಗೆ ಭಾರತದಲ್ಲಿ ಎಲಿವೇಟ್ ಎಂಬ ಹೆಸರಿಗಾಗಿ ಟ್ರೇಡ್‌ಮಾರ್ಕ್ ನೋಂದಾಯಿಸಿದೆ. ಭಾರತೀಯ ಮಾರುಕಟ್ಟೆಯ ಬಿಡುಗಡೆಯಾಗಲಿರುವ ಹೊಸ ಹೋಂಡಾ ಎಸ್‍ಯುವಿಗೆ ಎಲಿವೇಟ್ ಎಂಬ ಹೆಸರನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ. ಇನ್ನು ಈ ಹೊಸ Honda ಮಿಡ್ ಸೈಜ್ ಎಸ್‍ಯುವಿ ಭಾರತದಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಹೋಂಡಾ honda
English summary
Honda confirms new mid size suv for the indian market details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X