BH ಸೀರಿಸ್ ನೋಂದಣಿ ಸಂಖ್ಯೆ ಪಡೆಯಲು ಯಾವೆಲ್ಲಾ ನಿಯಮಗಳಿವೆ? ಇಲ್ಲಿ ತಿಳಿಯಿರಿ..

ದೇಶಾದ್ಯಂತ ಚಾಲ್ತಿಯಲ್ಲಿ ವಾಹನ ನೋಂದಣಿ ಉಪಕ್ರಮದಡಿ ಮಹತ್ವದ ಬದಲಾವಣೆ ಪರಿಚಯಿಸಿರುವ ಕೇಂದ್ರ ಸಾರಿಗೆ ಇಲಾಖೆಯು ಅಂತಾರಾಜ್ಯ ವಾಹನಗಳ ವರ್ಗಾವಣೆ ಪ್ರಕ್ರಿಯೆಯನ್ನು ಸರಳಗೊಳಿಸಿದ್ದು, ಹೊಸ ಯೋಜನೆಯಡಿ ಸರಳ ವಿಧಾನಗಳ ಮೂಲಕ BH ಸೀರಿಸ್ ನೋಂದಣಿ ಸಂಖ್ಯೆಯನ್ನು ಪಡೆದುಕೊಳ್ಳಬಹುದಾಗಿದೆ.

BH ಸೀರಿಸ್ ನೋಂದಣಿ ಸಂಖ್ಯೆ ಪಡೆಯಲು ಯಾವೆಲ್ಲಾ ನಿಯಮಗಳಿವೆ? ಇಲ್ಲಿ ತಿಳಿಯಿರಿ..

ಪ್ರಸ್ತುತ ಮೋಟಾರ್ ವಾಹನಗಳ ಕಾಯ್ದೆಯಲ್ಲಿ ಯಾವುದೇ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳಿ ಅಲ್ಲಿಯೇ ನೆಲೆಯೂರುವ ವಾಹನ ಮಾಲೀಕರು ನಿಗದಿತ ಅವಧಿಯ ನಂತರ ಆ ರಾಜ್ಯದ ನೋಂದಣಿ ಪಡೆದುಕೊಳ್ಳಬೇಕಾಗುತ್ತದೆ. ಆದರೆ ಚಾಲ್ತಿಯಲ್ಲಿರುವ ಅಂತಾರಾಜ್ಯ ವಾಹನ ವರ್ಗಾವಣೆ ಪ್ರಕ್ರಿಯೆಯು ಸಾಕಷ್ಟು ವಿಳಂಭವಾಗುತ್ತಿರುವುದಕ್ಕೆ ಕೇಂದ್ರ ಸಾರಿಗೆ ಇಲಾಖೆ ದೇಶಾದ್ಯಂತ ತಡೆ ರಹಿತವಾಗಿ ಸಂಚರಿಸಲು ಹೊಸ ಮಾದರಿಯ ನೋಂದಣಿಯನ್ನು ಜಾರಿಗೆ ತಂದಿದೆ.

BH ಸೀರಿಸ್ ನೋಂದಣಿ ಸಂಖ್ಯೆ ಪಡೆಯಲು ಯಾವೆಲ್ಲಾ ನಿಯಮಗಳಿವೆ? ಇಲ್ಲಿ ತಿಳಿಯಿರಿ..

ಮೋಟಾರ್ ವಾಹನ ಕಾಯ್ದೆ 1988ರ ಸೆಕ್ಷನ್ 47ರ ಅಡಿಯಲ್ಲಿ ಹೊಸ ಬದಲಾವಣೆಗಳನ್ನು ಪರಿಚಯಿಸಿರುವ ಕೇಂದ್ರ ಸಾರಿಗೆ ಇಲಾಖೆಯು ಒಂದು ರಾಜ್ಯದ ವಾಹನವನ್ನು ಮತ್ತೊಂದು ರಾಜ್ಯಕ್ಕೆ ವರ್ಗಾವಣೆಗೊಳಿಸುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ.

BH ಸೀರಿಸ್ ನೋಂದಣಿ ಸಂಖ್ಯೆ ಪಡೆಯಲು ಯಾವೆಲ್ಲಾ ನಿಯಮಗಳಿವೆ? ಇಲ್ಲಿ ತಿಳಿಯಿರಿ..

ಹೊಸ ಭಾರತ್ ಸೀರಿಸ್(BH) ವಾಹನ ನೋಂದಣಿ ವ್ಯವಸ್ಥೆಯು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಾಹನ ನೋಂದಣಿ ವರ್ಗಾವಣೆಯನ್ನು ಸುಲಭಗೊಳಿಸಲಿದ್ದು, ಒಂದೇ ಬಾರಿಗೆ ರಸ್ತೆ ತೆರಿಗೆ ಪಾವತಿಸುವ ಮೂಲಕ ದೇಶದ ಯಾವುದೇ ರಾಜ್ಯದಲ್ಲಿ ಮುಕ್ತವಾಗಿ ಸಂಚರಿಸಬಹುದಾಗಿದೆ.

BH ಸೀರಿಸ್ ನೋಂದಣಿ ಸಂಖ್ಯೆ ಪಡೆಯಲು ಯಾವೆಲ್ಲಾ ನಿಯಮಗಳಿವೆ? ಇಲ್ಲಿ ತಿಳಿಯಿರಿ..

ಹೊಸ BH ಸೀರಿಸ್ ನೋಂದಣಿಯನ್ನು ಮೊದಲ ಹಂತದಲ್ಲಿ ರಕ್ಷಣಾ ಸಿಬ್ಬಂದಿ ವಾಹನಗಳಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ, ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಗಳಿಗೆ (ಪಿಎಸ್‌ಯು) ಮತ್ತು ನಾಲ್ಕಕ್ಕಿಂತಲೂ ಹೆಚ್ಚು ರಾಜ್ಯಗಳಲ್ಲಿ ಕಚೇರಿಗಳನ್ನು ಹೊಂದಿರುವ ಕಾರ್ಪೊರೆಟ್ ಕಂಪನಿಗಳ ಖಾಸಗಿ ನೌಕರರ ಸಹ ಹೊಸ ನೋಂದಣಿ ಸಂಖ್ಯೆಯನ್ನು ಪಡೆದುಕೊಳ್ಳಬಹುದಾಗಿದೆ.

BH ಸೀರಿಸ್ ನೋಂದಣಿ ಸಂಖ್ಯೆ ಪಡೆಯಲು ಯಾವೆಲ್ಲಾ ನಿಯಮಗಳಿವೆ? ಇಲ್ಲಿ ತಿಳಿಯಿರಿ..

ಹೊಸ ನೋಂದಣಿ ಪ್ರಕ್ರಿಯೆಯೂ ಸೆಪ್ಟೆಂಬರ್ 15ರಿಂದ ಅಧಿಕೃತವಾಗಿ ಚಾಲನೆ ಪಡೆದುಕೊಳ್ಳಲಿದ್ದು, ಏಕರೂಪದ ನೋಂದಣಿ ಪ್ರಕ್ರಿಯೆಯನ್ನು ಪ್ರತಿ ಎರಡು ವರ್ಷಗಳಿಗೆ ಒಂದು ಬಾರಿ ನವೀಕರಿಸಬೇಕಾಗುತ್ತದೆ.

BH ಸೀರಿಸ್ ನೋಂದಣಿ ಸಂಖ್ಯೆ ಪಡೆಯಲು ಯಾವೆಲ್ಲಾ ನಿಯಮಗಳಿವೆ? ಇಲ್ಲಿ ತಿಳಿಯಿರಿ..

ಅರ್ಜಿ ಸಲ್ಲಿಸುವುದು ಹೇಗೆ?

ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಫಾರಂ ನಂ.60 ಭರ್ತಿ ಮಾಡಬೇಕಿದ್ದು, ಸಂಪೂರ್ಣ ವಾಸದ ಸ್ಥಳದ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಒಂದು ಸರ್ಕಾರಿ ನೌಕರರಾಗಿದ್ದರೆ ಪೂರ್ಣ ವಿಳಾಸದ ಜೊತೆಗೆ ಉದ್ಯೋಗ ಸ್ಥಳದ ಮಾಹಿತಿಯನ್ನು ಸಹ ಕಡ್ಡಾಯವಾಗಿ ಭರ್ತಿ ಮಾಡಬೇಕಾಗುತ್ತದೆ.

BH ಸೀರಿಸ್ ನೋಂದಣಿ ಸಂಖ್ಯೆ ಪಡೆಯಲು ಯಾವೆಲ್ಲಾ ನಿಯಮಗಳಿವೆ? ಇಲ್ಲಿ ತಿಳಿಯಿರಿ..

ನೋಂದಣಿ ಪ್ರಕ್ರಿಯೆ ಹೊಸ ಮತ್ತು ಬಳಕೆ ಮಾಡಿದ ವಾಹನಗಳ ಮರುನೋಂದಣಿಗೂ ಒಂದೇ ಮಾದರಿಯಲ್ಲಿ ಅರ್ಜಿ ಸ್ವಿಕರಿಸಲಿದ್ದು, ಹೊಸ BH ಸರಣಿ ನೋಂದಣಿಯು ನೋಂದಣಿಯಾದ ದಿನದಿಂದ 14 ವರ್ಷಗಳಿಗೆ ಅನ್ವಯವಾಗುತ್ತದೆ.

BH ಸೀರಿಸ್ ನೋಂದಣಿ ಸಂಖ್ಯೆ ಪಡೆಯಲು ಯಾವೆಲ್ಲಾ ನಿಯಮಗಳಿವೆ? ಇಲ್ಲಿ ತಿಳಿಯಿರಿ..

BH ಸರಣಿ ನೋಂದಣಿ ಪಡೆದುಕೊಂಡ ನಂತರ ಪ್ರತಿ 2 ವರ್ಷಗಳಿಗೆ ಒಂದು ಬಾರಿ ನವೀಕರಣ ಮಾಡಬೇಕಿದ್ದು, 14 ವರ್ಷಗಳ ನಂತರ ಪ್ರತಿ ವರ್ಷಕ್ಕೊಮ್ಮೆ ನವೀಕರಣ ಒಳಗೊಂಡಿರುತ್ತದೆ.

BH ಸೀರಿಸ್ ನೋಂದಣಿ ಸಂಖ್ಯೆ ಪಡೆಯಲು ಯಾವೆಲ್ಲಾ ನಿಯಮಗಳಿವೆ? ಇಲ್ಲಿ ತಿಳಿಯಿರಿ..

ಯಾವ ವಾಹನಕ್ಕೆ ಎಷ್ಟು ತೆರಿಗೆ?

ಕೇಂದ್ರ ಸಾರಿಗೆ ನೀಡಿರುವ ಮಾಹಿತಿಯ ಪ್ರಕಾರ BH ಸೀರಿಸ್ ನೋಂದಣಿ ಪಡೆದುಕೊಳ್ಳಲಿರುವ ರೂ.10 ಲಕ್ಷದೊಳಗಿನ ವಾಹನಗಳಿಗೆ ಶೇ. 8 ರಷ್ಟು ತೆರಿಗೆ, ರೂ.10 ಲಕ್ಷದಿಂದ ರೂ.20 ಲಕ್ಷದ ಒಳಗಿನ ವಾಹನಗಳಿಗೆ ಶೇ. 10 ರಷ್ಟ ತೆರಿಗೆ ಮತ್ತು ರೂ. 20 ಲಕ್ಷ ಮೇಲ್ಪಟ್ಟ ವಾಹನಗಳಿಗೆ ಶೇ. 12ರಷ್ಟು ತೆರಿಗೆ ವಿಧಿಸಲಾಗುತ್ತದೆ.

BH ಸೀರಿಸ್ ನೋಂದಣಿ ಸಂಖ್ಯೆ ಪಡೆಯಲು ಯಾವೆಲ್ಲಾ ನಿಯಮಗಳಿವೆ? ಇಲ್ಲಿ ತಿಳಿಯಿರಿ..

ಡೀಸೆಲ್ ವಾಹನಗಳಿಗೆ ಹೆಚ್ಚುವರಿ ತೆರಿಗೆ!

ಹೌದು, BH ಸೀರಿಸ್ ನೋಂದಣಿ ಪಡೆದುಕೊಳ್ಳಲಿರುವ ವಾಹನಗಳಲ್ಲಿ ಪೆಟ್ರೋಲ್ ಮಾದರಿಗಳಿಂತ ಡೀಸೆಲ್ ವಾಹನಗಳು ಮೂಲ ತೆರಿಗೆ ದರಕ್ಕಿಂತ ಶೇ. 2 ರಷ್ಟು ಹೆಚ್ಚುವರಿ ತೆರಿಗೆ ಪಡೆದುಕೊಳ್ಳಲಿದ್ದು, ಇವಿ ವಾಹನಗಳಿಗೆ ರಿಯಾಯ್ತಿ ನೀಡಲಾಗಿದೆ.

BH ಸೀರಿಸ್ ನೋಂದಣಿ ಸಂಖ್ಯೆ ಪಡೆಯಲು ಯಾವೆಲ್ಲಾ ನಿಯಮಗಳಿವೆ? ಇಲ್ಲಿ ತಿಳಿಯಿರಿ..

ಎಲೆಕ್ಟ್ರಿಕ್ ವಾಹನಗಳಿಗೆ ವಿನಾಯ್ತಿ

BH ಸೀರಿಸ್ ನೋಂದಣಿ ಪಡೆದುಕೊಳ್ಳಲಿರುವ ಎಲೆಕ್ಟ್ರಿಕ್ ವಾಹನಗಳಿಗೆ ಮೂಲ ತೆರಿಗೆ ದರಕ್ಕಿಂತ ಶೇ. 2 ರಷ್ಟು ಕಡಿಮೆ ತೆರಿಗೆ ವಿಧಿಸಲು ನಿರ್ಧರಿಸಿದ್ದು, ಇವಿ ವಾಹನಗಳ ತೆರಿಗೆ ಸ್ತರವು ಬ್ಯಾಟರಿ ಪ್ಯಾಕ್ ಅವಲಂಬಿಸಿ ತೆರಿಗೆ ದರ ನಿರ್ಧರವಾಗುತ್ತದೆ.

BH ಸೀರಿಸ್ ನೋಂದಣಿ ಸಂಖ್ಯೆ ಪಡೆಯಲು ಯಾವೆಲ್ಲಾ ನಿಯಮಗಳಿವೆ? ಇಲ್ಲಿ ತಿಳಿಯಿರಿ..

ಸದ್ಯ ಚಾಲ್ತಿಯಲ್ಲಿರುವ ಅಂತಾರಾಜ್ಯ ವಾಹನ ವರ್ಗಾವಣೆ ಪ್ರಕ್ರಿಯೆಯು ಹಲವಾರು ಗೊಂದಲಗಳಿಂದಾಗಿ ವರ್ಗಾವಣೆಯ ಪ್ರಕ್ರಿಯೆಯಲ್ಲಿ ಸಾಕಷ್ಟು ವಿಳಂಬವಾಗುತ್ತಿದ್ದು, ಭಾರತ್​ ಸರಣಿಯಡಿ ತಮ್ಮ ವಾಹನವನ್ನು ನೋಂದಣಿ ಮಾಡಿಕೊಂಡರೆ, ಅವರು ಇನ್ನೊಂದು ರಾಜ್ಯಕ್ಕೆ ಹೋಗಿ ವಾಸ್ತವ್ಯ ಹೂಡಬೇಕಾಗಿ ಸಂದರ್ಭ ಎದುರಾದರೆ ಅಲ್ಲಿ ಅವರು ಮರು ನೋಂದಣಿ ಮಾಡಿಸಿಕೊಳ್ಳುವ ಅಗತ್ಯ ಇರುವುದಿಲ್ಲ.

BH ಸೀರಿಸ್ ನೋಂದಣಿ ಸಂಖ್ಯೆ ಪಡೆಯಲು ಯಾವೆಲ್ಲಾ ನಿಯಮಗಳಿವೆ? ಇಲ್ಲಿ ತಿಳಿಯಿರಿ..

ಈ ಮೊದಲು ವಾಹನ ಮಾಲೀಕರು ತಮ್ಮ ವಾಹನದೊಟ್ಟಿಗೆ ಬೇರೆ ರಾಜ್ಯಗಳಿಗೆ ಸ್ಥಳಾಂತರಗೊಂಡಾಗ ಮೊದಲಿದ್ದ ರಾಜ್ಯದದಿಂದ ಆಕ್ಷೇಪಣೆ ಪ್ರಮಾಣ ಪತ್ರ ಪಡೆದುಕೊಂಡು ಹೊಸದಾಗಿ ನೆಲೆಯೂರಬೇಕಾದ ರಾಜ್ಯದಲ್ಲಿ ನೋಂದಣಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬೇಕಿತ್ತು.

BH ಸೀರಿಸ್ ನೋಂದಣಿ ಸಂಖ್ಯೆ ಪಡೆಯಲು ಯಾವೆಲ್ಲಾ ನಿಯಮಗಳಿವೆ? ಇಲ್ಲಿ ತಿಳಿಯಿರಿ..

ಜೊತೆಗೆ ನೆಲೆಯೂರಬೇಕಾದ ರಾಜ್ಯದಲ್ಲಿ ಸ್ಥಳೀಯ ವಿಳಾಸದೊಂದಿಗೆ ನೋಂದಣಿ ಗುರುತು ಪಡೆದು Pro-Rata ರಸ್ತೆ ತೆರಿಗೆ ಪಾವತಿ ಮಾಡಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಹೀಗಾಗಿ ಇದೊಂದು ದೀರ್ಘಾಕಾಲಿಕ ಪ್ರಕ್ರಿಯೆಯಾಗಿದ್ದು, ಇದಕ್ಕಾಗಿ ಸ್ವಯಂಪ್ರೇರಿತವಾಗಿ ಭಾರತ್​ ಸರಣಿ (BH-Series) ನೋಂದಣಿ ಸೌಲಭ್ಯ ಪರಿಚಯಿಸಿದೆ.

Most Read Articles

Kannada
English summary
How To Apply For BH Series Registration?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X