ಆಯ್ದ ಕಾರು ಮಾದರಿಗಳ ಮೇಲೆ ದೊರೆಯಲಿವೆ ಭಾರೀ ವರ್ಷಾಂತ್ಯದ ಕೊಡುಗೆಗಳು

ಇನ್ನು ಕೆಲವೇ ದಿನಗಳಲ್ಲಿ 2021 ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರನ್ನು ಆಕರ್ಷಿಸಲು ಕೆಲವು ಕಾರು ತಯಾರಕ ಕಂಪನಿಗಳು ತಮ್ಮ ಆಯ್ದ ಕಾರು ಮಾದರಿಗಳ ಮೇಲೆ ವರ್ಷಾಂತ್ಯದ ರಿಯಾಯಿತಿ ಹಾಗೂ ಕೊಡುಗೆಗಳನ್ನು ಘೋಷಿಸುತ್ತಿವೆ. ನಿಸ್ಸಾನ್, ದಟ್ಸನ್, ಹೋಂಡಾ, ಹ್ಯುಂಡೈನಂತಹ ಕೆಲವು ಜನಪ್ರಿಯ ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ಘೋಷಿಸಿವೆ.

ಆಯ್ದ ಕಾರು ಮಾದರಿಗಳ ಮೇಲೆ ದೊರೆಯಲಿವೆ ಭಾರೀ ವರ್ಷಾಂತ್ಯದ ಕೊಡುಗೆಗಳು

ಈ ವರ್ಷದ ಕೊನೆಯಲ್ಲಿ ಆಯ್ದ ಕಾರು ಮಾದರಿಗಳ ಮೇಲೆ ಲಭ್ಯವಿರುವ ಕೊಡುಗೆಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಅಂದ ಹಾಗೆ ಈ ಕೊಡುಗೆಗಳು ಡಿಸೆಂಬರ್ 31ರವರೆಗೆ ಅಥವಾ ಸ್ಟಾಕ್ ಮುಗಿಯುವವರೆಗೆ ಮಾತ್ರ ಲಭ್ಯವಿರಲಿವೆ. ಈ ಎಲ್ಲಾ ಕೊಡುಗೆಗಳು ಡೀಲರ್‌ಶಿಪ್ ಮಟ್ಟ ಅಥವಾ ಸ್ಥಳೀಯ ಬದಲಾವಣೆಗೆ ಒಳಪಟ್ಟಿರುತ್ತವೆ

ಆಯ್ದ ಕಾರು ಮಾದರಿಗಳ ಮೇಲೆ ದೊರೆಯಲಿವೆ ಭಾರೀ ವರ್ಷಾಂತ್ಯದ ಕೊಡುಗೆಗಳು

1. ಹೋಂಡಾ ಸಿಟಿ (Honda City)

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು 2021ರ ಕೊನೆಗೆ ತನ್ನ 5 ನೇ ತಲೆಮಾರಿನ ಹೋಂಡಾ ಸಿಟಿ ಸೆಡಾನ್‌ ಕಾರಿನ ಮೇಲೆ ಗರಿಷ್ಠ ರೂ. 45,108 ಗಳವರೆಗೆ ಕೊಡುಗೆಗಳನ್ನು ಘೋಷಿಸಿದೆ. ಈ ಕೊಡುಗೆಗಳು ಈ ಕಾರಿನ ಮಾದರಿಗಳಿಗೆ ಅನ್ವಯಿಸುತ್ತದೆ.

ಆಯ್ದ ಕಾರು ಮಾದರಿಗಳ ಮೇಲೆ ದೊರೆಯಲಿವೆ ಭಾರೀ ವರ್ಷಾಂತ್ಯದ ಕೊಡುಗೆಗಳು

ಇದರಲ್ಲಿ ರೂ. 7,500 ವರೆಗಿನ ನಗದು ರಿಯಾಯಿತಿ ಅಥವಾ ರೂ. 8,108 ರವರೆಗಿನ ಪರಿಕರಗಳನ್ನು ಒಳಗೊಂಡಿದೆ. ಹೋಂಡಾ ಸಿಟಿ ಗ್ರಾಹಕರು ಕಾರು ವಿನಿಮಯದಲ್ಲಿ ರೂ. 15,000 ಗಳ ರಿಯಾಯಿತಿ ಪಡೆಯಬಹುದು. ಇನ್ನು ಈ ಕಾರಿನ ಹೆಚ್ಚುವರಿ ಪ್ರಯೋಜನಗಳಲ್ಲಿ ರೂ. 5,000 ಲಾಯಲ್ಟಿ ಬೋನಸ್, ರೂ. 9,000 ಹೋಂಡಾ ಕಾರ್ ಎಕ್ಸ್ಚೇಂಜ್ ಬೋನಸ್ ಹಾಗೂ ರೂ. 8,000 ಕಾರ್ಪೊರೇಟ್ ರಿಯಾಯಿತಿ ಸೇರಿವೆ.

ಆಯ್ದ ಕಾರು ಮಾದರಿಗಳ ಮೇಲೆ ದೊರೆಯಲಿವೆ ಭಾರೀ ವರ್ಷಾಂತ್ಯದ ಕೊಡುಗೆಗಳು

2. ಹುಂಡೈ ಗ್ರಾಂಡ್ i10 ನಿಯೋಸ್ (Hyundai Grand i10 Nios)

ಈ ತಿಂಗಳು ಹ್ಯುಂಡೈ ಗ್ರಾಂಡ್ i10 ನಿಯೋಸ್‌ ಕಾರಿನ ಮೇಲೆ ಗರಿಷ್ಠ ರೂ. 50,000 ಗಳವರೆಗೆ ಕೊಡುಗೆಗಳನ್ನು ಪಡೆಯಬಹುದು. ಈ ಪ್ರಯೋಜನಗಳು ಟರ್ಬೊ ಮಾದರಿಗಳಿಗೆ ಮಾತ್ರ ಅನ್ವಯಿಸುತ್ತವೆ. ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಿಗಾಗಿ ರೂ. 25,000 ವರೆಗೆ ಪ್ರಯೋಜನಗಳನ್ನು ನೀಡಲಾಗುತ್ತದೆ. ಕಂಪನಿಯು ಸ್ಪೋರ್ಟ್ಸ್ ಪೆಟ್ರೋಲ್ ಡಿಟಿ ಮಾದರಿಗಳ ಮೇಲೆ ಯಾವುದೇ ವಿಶೇಷ ಕೊಡುಗೆಗಳನ್ನು ನೀಡುತ್ತಿಲ್ಲ. ಸಿ‌ಎನ್‌ಜಿ ಮಾದರಿಯ ಮೇಲೆ ರೂ.17,300 ವರೆಗೆ ರಿಯಾಯಿತಿ ನೀಡಲಾಗುತ್ತದೆ.

ಆಯ್ದ ಕಾರು ಮಾದರಿಗಳ ಮೇಲೆ ದೊರೆಯಲಿವೆ ಭಾರೀ ವರ್ಷಾಂತ್ಯದ ಕೊಡುಗೆಗಳು

3. ರೆನಾಲ್ಟ್ ಡಸ್ಟರ್ (Renault Duster)

ರೆನಾಲ್ಟ್ ಇಂಡಿಯಾ ಈ ತಿಂಗಳು ಡಸ್ಟರ್ ಎಸ್‌ಯುವಿ ಮೇಲೆ ಗರಿಷ್ಠ ರೂ. 1.3 ಲಕ್ಷಗಳವರೆಗೆ ಕೊಡುಗೆಗಳನ್ನು ನೀಡುತ್ತಿದೆ. ಇದರಲ್ಲಿ ರೂ. 50,000 ಗಳ ವಿನಿಮಯ ಬೋನಸ್, ರೂ. 50,000 ಗಳ ನಗದು ರಿಯಾಯಿತಿ (RXZ 1.5 ಲೀಟರ್ ಹೊರತುಪಡಿಸಿ) ಹಾಗೂ ರೂ. 30,000 ಗಳವರೆಗೆ ಕಾರ್ಪೊರೇಟ್ ರಿಯಾಯಿತಿಗಳು ಸೇರಿವೆ.

ಆಯ್ದ ಕಾರು ಮಾದರಿಗಳ ಮೇಲೆ ದೊರೆಯಲಿವೆ ಭಾರೀ ವರ್ಷಾಂತ್ಯದ ಕೊಡುಗೆಗಳು

ರೆನಾಲ್ಟ್ ಡಸ್ಟರ್ ಗ್ರಾಹಕರು ಕಂಪನಿಯಿಂದ ರೂ. 1.10 ಲಕ್ಷಗಳವರೆಗೆ ವಿಶೇಷ ಲಾಯಲ್ಟಿ ಕೊಡುಗೆಗಳಿಗೆ ಅರ್ಹರಾಗಿರುತ್ತಾರೆ. ಕಂಪನಿಯ ಸ್ಕ್ರ್ಯಾಪ್‌ಪೇಜ್ ಕಾರ್ಯಕ್ರಮದ ಅಡಿಯಲ್ಲಿ ಡಸ್ಟರ್ ಕಾರಿನ ಮೇಲೆ ರೂ. 10,000 ಗಳವರೆಗೆ ಸ್ಕ್ರ್ಯಾಪಿಂಗ್‌ ವಿನಿಮಯ ಕೊಡುಗೆಗಳನ್ನು ನೀಡಲಾಗುತ್ತದೆ.

ಆಯ್ದ ಕಾರು ಮಾದರಿಗಳ ಮೇಲೆ ದೊರೆಯಲಿವೆ ಭಾರೀ ವರ್ಷಾಂತ್ಯದ ಕೊಡುಗೆಗಳು

4. ನಿಸ್ಸಾನ್ ಕಿಕ್ಸ್ (Nissan Kicks)

ನಿಸ್ಸಾನ್ ಕಿಕ್ಸ್ ಕಾರಿನ ಮೇಲೆ ರೂ. 1 ಲಕ್ಷಗಳವರೆಗಿನ ಕೊಡುಗೆಗಳನ್ನು ನೀಡಲಾಗುತ್ತದೆ. ಈ ಕೊಡುಗೆಗಳಲ್ಲಿ ರೂ. 15,000 ನಗದು ಲಾಭ, ರೂ. 70,000 ವಿನಿಮಯ ಬೋನಸ್, ರೂ. 5,000 ಆನ್‌ಲೈನ್ ಬುಕಿಂಗ್ ಬೋನಸ್ ಹಾಗೂ ರೂ. 10,000 ಕಾರ್ಪೊರೇಟ್ ಲಾಭಗಳು ಸೇರಿವೆ.

ಆಯ್ದ ಕಾರು ಮಾದರಿಗಳ ಮೇಲೆ ದೊರೆಯಲಿವೆ ಭಾರೀ ವರ್ಷಾಂತ್ಯದ ಕೊಡುಗೆಗಳು

ನಿಸ್ಸಾನ್ ಕಿಕ್ಸ್ ಕಾಂಪ್ಯಾಕ್ಟ್ 1.5 ಲೀಟರ್ ಪೆಟ್ರೋಲ್ ಮಾದರಿಯ ಮೇಲೆ ಖರೀದಿದಾರರು ರೂ. 45,000 ಗಳವರೆಗೆ ಉಳಿಸಬಹುದು. ಇದು ರೂ. 10,000 ಗಳ ನಗದು ಲಾಭ, ರೂ. 20,000 ಗಳ ವಿನಿಮಯ ಬೋನಸ್ ಅನ್ನು ಒಳಗೊಂಡಿದೆ. ಕಿಕ್ಸ್ ಕಾರಿನ ಆನ್‌ಲೈನ್ ಬುಕ್ಕಿಂಗ್'ನಲ್ಲಿ ರೂ. 5,000 ಬೋನಸ್ ಹಾಗೂ ರೂ. 10,000 ಕಾರ್ಪೊರೇಟ್ ಪ್ರಯೋಜನಗಳನ್ನು ನೀಡಲಾಗುತ್ತದೆ.

ಆಯ್ದ ಕಾರು ಮಾದರಿಗಳ ಮೇಲೆ ದೊರೆಯಲಿವೆ ಭಾರೀ ವರ್ಷಾಂತ್ಯದ ಕೊಡುಗೆಗಳು

5. ಮಹೀಂದ್ರಾ ಅಲ್ಟುರಾಸ್ ಜಿ4 (Mahindra Alturas G 4)

ಈ ತಿಂಗಳು ಮಹೀಂದ್ರಾ ಅಲ್ಟುರಾಸ್ ಎಸ್‌ಯುವಿ ಖರೀದಿ ಮೇಲೆ ರೂ. 81,500 ವರೆಗೆ ರಿಯಾಯಿತಿ ನೀಡಲಾಗುತ್ತದೆ. ಇದರಲ್ಲಿ ರೂ. 50,000 ವರೆಗೆ ಎಕ್ಸ್‌ಚೇಂಜ್ ಬೋನಸ್, ರೂ. 11,500 ವರೆಗೆ ಕಾರ್ಪೊರೇಟ್ ಕೊಡುಗೆ ಹಾಗೂ ರೂ. 20,000 ವರೆಗಿನ ಇತರ ಕೊಡುಗೆಗಳು ಸೇರಿವೆ. ಈ ಕೊಡುಗೆಗಳು ಡೀಲರ್‌ಶಿಪ್‌ಗೆ ಅನುಗುಣವಾಗಿ ಬದಲಾಗಬಹುದು.

ಆಯ್ದ ಕಾರು ಮಾದರಿಗಳ ಮೇಲೆ ದೊರೆಯಲಿವೆ ಭಾರೀ ವರ್ಷಾಂತ್ಯದ ಕೊಡುಗೆಗಳು

ಇನ್ನು ದೇಶದಲ್ಲಿ 7 ಲಕ್ಷಕ್ಕೂ ಹೆಚ್ಚು ಗ್ರಾಹಕರು ಕಾರುಗಳ ವಿತರಣೆ ಪಡೆಯಲು ಕಾಯುತ್ತಿದ್ದಾರೆ ಎಂದು ವರದಿಗಳಾಗಿವೆ. ಸೆಮಿಕಂಡಕ್ಟರ್ ಗಳ ಕೊರತೆಯಿಂದಾಗಿ ವಾಹನ ತಯಾರಕ ಕಂಪನಿಗಳು ಉತ್ಪಾದನೆಯನ್ನು ಕಡಿಮೆ ಮಾಡಿ ವಿತರಣೆಯನ್ನು ಮುಂದೂಡಿವೆ. ಇದರ ನಡುವೆ ವಾಹನಗಳ ಬೆಲೆಯಲ್ಲಿ ಹೆಚ್ಚಳವಾಗುತ್ತಿರುವುದರಿಂದ ಗ್ರಾಹಕರು ಹೆಚ್ಚು ಬೆಲೆ ತೆರಬೇಕಾಗುತ್ತದೆ.

ಆಯ್ದ ಕಾರು ಮಾದರಿಗಳ ಮೇಲೆ ದೊರೆಯಲಿವೆ ಭಾರೀ ವರ್ಷಾಂತ್ಯದ ಕೊಡುಗೆಗಳು

ಹೊಸದಾಗಿ ಬಿಡುಗಡೆಯಾಗುವ ವಾಹನಗಳ ವಿತರಣೆ ಪಡೆಯಲು ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯಬೇಕಾಗುತ್ತದೆ. ಕೋವಿಡ್ ಕಾರಣಕ್ಕೆ ವಿಶ್ವಾದಾದ್ಯಂತ ಬಹುತೇಕ ಎಲ್ಲಾ ಕಂಪನಿಗಳು ತಮ್ಮ ನೌಕರರಿಗೆ ವರ್ಕ್ ಫ್ರಂ ಆಯ್ಕೆಯನ್ನು ನೀಡಿದವು. ಇದರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ಬೇಡಿಕೆ ಹೆಚ್ಚಾಯಿತು. ಇದರಿಂದ ಸಹಜವಾಗಿಯೇ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ ಗಳಲ್ಲಿ ಬಳಸುವ ಸೆಮಿಕಂಡಕ್ಟರ್‌ಗಳಿಗೆ ಬೇಡಿಕೆ ಹೆಚ್ಚಾಯಿತು.

ಆಯ್ದ ಕಾರು ಮಾದರಿಗಳ ಮೇಲೆ ದೊರೆಯಲಿವೆ ಭಾರೀ ವರ್ಷಾಂತ್ಯದ ಕೊಡುಗೆಗಳು

ಆದರೆ ಬೇಡಿಕೆಗೆ ತಕ್ಕಂತೆ ಸೆಮಿಕಂಡಕ್ಟರ್ ಗಳನ್ನು ಪೂರೈಸಲಾಗುತ್ತಿಲ್ಲ. ಇದರಿಂದಾಗಿ ವಾಹನಗಳ ಉತ್ಪಾದನೆಯಾಗುತ್ತಿಲ್ಲ. ಇತ್ತೀಚಿಗೆ ಬಿಡುಗಡೆಯಾಗುವ ಕಾರುಗಳಲ್ಲಿ ಅತ್ಯಾಧುನಿಕ ಫೀಚರ್ ಗಳನ್ನು ನೀಡಲಾಗುತ್ತದೆ. ಆ ಕಾರುಗಳಲ್ಲಿ ಸೆಮಿಕಂಡಕ್ಟರ್ ಗಳನ್ನು ಬಳಸಲಾಗುತ್ತದೆ. ಕೆಲವು ಕಂಪನಿಗಳು ಕಾರುಗಳನ್ನು ಉತ್ಪಾದಿಸುತ್ತಿವೆಯಾದರೂ ಆ ಕಾರುಗಳಲ್ಲಿ ಆಧುನಿಕ ಫೀಚರ್ ಗಳನ್ನು ಅಳವಡಿಸುತ್ತಿಲ್ಲ.

ಆಯ್ದ ಕಾರು ಮಾದರಿಗಳ ಮೇಲೆ ದೊರೆಯಲಿವೆ ಭಾರೀ ವರ್ಷಾಂತ್ಯದ ಕೊಡುಗೆಗಳು

ಇನ್ನು ಕೆಲವು ಕಂಪನಿಗಳು ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸಿವೆ. ಇದರಿಂದಾಗಿ ವಾಹನಗಳ ವಿತರಣೆಗೆ ಕಾಯುತ್ತಿರುವ ಗ್ರಾಹಕರು ಮುಂಬರುವ ದಿನಗಳಲ್ಲಿ ಹೆಚ್ಚು ಬೆಲೆ ಪಾವತಿಸಬೇಕಾಗುತ್ತದೆ. ಉತ್ಪಾದನಾ ವೆಚ್ಚದ ಹೆಚ್ಚಳವಾಗಿರುವುದರಿಂದ ಕಂಪನಿಗಳು ಕಾರುಗಳ ಬೆಲೆಯನ್ನು ಹೆಚ್ಚಿಸುತ್ತಿವೆ. ವರ್ಷದ ಆರಂಭದಿಂದ ಇಲ್ಲಿಯವರೆಗೆ ವಾಹನಗಳ ಬೆಲೆಯನ್ನು 6%ನಷ್ಟು ಹೆಚ್ಚಿಸಲಾಗಿದೆ.

Most Read Articles

Kannada
English summary
Huge year end car discount offers on selected car models details
Story first published: Monday, December 20, 2021, 10:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X