ಹಮ್ಮರ್ ಇವಿ ಹರಾಜಿನಿಂದ ಬಂದ ರೂ.18.15 ಕೋಟಿ ಫೌಂಡೇಶನ್‌ಗೆ ನೀಡಿದ ಜಿಎಂಸಿ
ಜಿಎಂಸಿ ಹಮ್ಮರ್ ಇವಿಯ ಮೊಟ್ಟಮೊದಲಯುನಿಟ್ ಅನ್ನು ಅಮೆರಿಕದಲ್ಲಿ ನಡೆದ ಬ್ಯಾರೆಟ್ ಜಾಕ್ಸನ್ ಹರಾಜಿನಲ್ಲಿ ರೂ.18.15 ಕೋಟಿಗೆ ಹರಾಜಾಗಿದೆ. ಹರಾಜಿನಿಂದ ಬಂದ ಸಂಪೂರ್ಣ ಮೊತ್ತವನ್ನು ಟನಲ್ ಟು ಟವರ್ಸ್ ಫೌಂಡೇಶನ್‌ಗೆ ನೀಡಲಾಗುತ್ತದೆ.

ಸೆಪ್ಟೆಂಬರ್ 11, 2001ರಂದು ನಡೆದ ದಾಳಿಯಲ್ಲಿ ಇತರರನ್ನು ಉಳಿಸಲು ತನ್ನ ಪ್ರಾಣವನ್ನು ತ್ಯಾಗ ಮಾಡಿದ ಅಗ್ನಿಶಾಮಕ ಸಿಬ್ಬಂದಿ ಸ್ಟೀಫನ್ ಸಿಲ್ಲರ್ ಅವರನ್ನು ಸ್ಮರಣೆಯನ್ನು ಗೌರವಿಸಲು ಟನಲ್ ಟು ಟವರ್ಸ್ ಫೌಂಡೇಶನ್ ಸ್ಥಾಪಿಸಲಾಯಿತು. ಈ ಫೌಂಡೇಶನ್ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಇನ್ನು ಜಿಎಂಸಿ ಹಮ್ಮರ್ ಟ್ರಕ್ ಉಳಿದ ಎರಡು ಮಾದರಿಗಳು ಉತ್ತಮ ಮೊತ್ತಕ್ಕೆ ಹರಾಜಿಗಿದೆ.

ಹಮ್ಮರ್ ಇವಿ ವಾಹನವನ್ನು ಡೆಟ್ರಾಯಿಟ್ ಮತ್ತು ಹ್ಯಾಮ್‌ಟ್ರಾಮ್ಕ್‌ನ ಜನರಲ್ ಮೋಟಾರ್ಸ್ ಸಂಸ್ಥೆಯ(ಜಿಎಂಸಿ) ಸ್ಥಾವರದಲ್ಲಿ ಉತ್ಪಾದಿಸಲಾಗುತ್ತದೆ. ಹಮ್ಮರ್ ಇವಿ ಮಾದರಿಯನ್ನು ಎಸ್‍ಯುವಿ ಮಾದರಿಯಲ್ಲಿಯು ಕೂಡ ಬಿಡುಗಡೆಗೊಳಿಸಲಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಜಿಎಂಸಿ ಕಂಪನಿಯು ತನ್ನ ಹಮ್ಮರ್ ಮಾದರಿಯನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಅನಾವರಣಗೊಳಿಸಿದೆ. ಜಿಎಂಸಿ ನಿರ್ಮಿಸಿರುವ ಮೊದಲ ಎಲೆಕ್ಟ್ರಿಕ್ ಸೂಪರ್ ಟ್ರಕ್" ಇದಾಗಿದೆ. ಹೊಸ ಜಿಎಂಸಿ ಹಮ್ಮರ್ ಇವಿ 1,000 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ.

ಹಮ್ಮರ್ ನಲ್ಲಿ 24-ಮಾಡ್ಯೂಲ್, ಡಬಲ್-ಸ್ಟ್ಯಾಕ್ಡ್ ಅಲ್ಟಿಯಮ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇನ್ನು ಹಮ್ಮರ್ ಇವಿ ಸರಿಸುಮಾರು 563 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಹಮ್ಮರ್ ಇವಿ 800 ವೋಲ್ಟ್ ವೇಗದ ಚಾರ್ಜಿಂಗ್ ವ್ಯವಸ್ಥಯನ್ನು ಹೊಂದಿದೆ. ಈ ವಾಹನವನ್ನು ಕೇವಲ 10 ನಿಮಿಷ ಚಾರ್ಜ್ ಮಾಡಿದರೆ 100 ಕಿ.ಮೀ ನಷ್ಟು ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಹಮ್ಮರ್ ಇವಿ ಉತ್ತಮ ಪರ್ಫಾಮೆನ್ಸ್ ಮಾದರಿಯಾಗಿದೆ. ಕೇವಲ 3 ಸೆಕೆಂಡುಗಳಲ್ಲಿ ಈ ಹಮ್ಮರ್ ಇವಿ 0-60 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

ಈ ವಾಹನದಲ್ಲಿ 35 ಇಂಚಿನ ಟಯರ್ ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ 4ಡಬ್ಲ್ಯುಡಿಯನ್ನು ಅಳವಡಿಸಿದ್ದಾರೆ. ಈ ಹಮ್ಮರ್ ಇವಿಯಲ್ಲಿ ವಿಶಿಷ್ಟವಾದ ಡ್ರೈವಿಂಗ್ ಮೋಡ್ ಅನ್ನು ಸಹ ಹೊಂದಿದೆ. ಇದನ್ನು 'ಕ್ರ್ಯಾಬ್ ಮೋಡ್' ಎಂದು ಕರೆಯಲಾಗುತ್ತದೆ. ಇದು ಆಫ್-ರೋಡ್ ನಲ್ಲಿ ಹೆಚ್ಚು ಉಪಯೋಗವಾಗುವ ಫೀಚರ್ ಆಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹಮ್ಮರ್ ಇವಿಯಲ್ಲಿ 13.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರಲಿದೆ. ಇದರಲ್ಲಿ ಕ್ಲೈಮೆಂಟ್ ಕಂಟ್ರೋಲ್ ಫೀಚರ್ ಅನ್ನು ಒಳಗೊಂಡಿದೆ.

ಈ ವಾಹನವು ಅಡಾಪ್ಟಿವ್ ಏರ್ ಸಸ್ಪೆಂಕ್ಷನ್ (ಇದು 6 ಇಂಚುಗಳಷ್ಟು ಗ್ರೌಂಡ್ ಕ್ಲಿಯರೆನ್ಸ್ ಹೆಚ್ಚಿಸಬಹುದು), ಇನ್ನು ಆಫ್-ರೋಡಿಂಗ್‌ಗಾಗಿ ಅಂಡರ್‌ಬಾಡಿ ಅರ್ಮರ್ ಮತ್ತು ಕಾರಿನ ಸುತ್ತಲಿನ ದೃಶ್ಯವನ್ನು ಒದಗಿಸಲು 18 ಕ್ಯಾಮೆರಾಗಳನ್ನು ಸಹ ನೀಡುತ್ತದೆ.

ಹಿಂದಿನ ತಲೆಮಾರಿನ ಹಮ್ಮರ್ ಎಸ್‍ಯುವಿ ರೂಪದಲ್ಲಿ ಮಾರಾಟವಾಗುತ್ತಿತ್ತು. ಈ ಆಫ್-ರೋಡ್ ಹಮ್ಮರ್ ಎಸ್‍ಯುವಿಯು ಕಠಿಣವಾದ ಅಡೆತಡೆಗಳಲ್ಲಿ ಸುಲಭವಾಗಿ ಸಾಗುತ್ತದೆ. ಆಫ್ ರೋಡ್ ವಾಹನ ಪ್ರಿಯರ ಮೆಚ್ಚಿನ ಎಸ್‍ಯುವಿಯಾಗಿತ್ತು. ಅಮೆರಿಕಾದ ಸೈನ್ಯ ಯುಎಸ್ ಸೈನ್ಯ, ಯುಎಸ್ ಮೆರೈನ್ ಕಾಪ್ಸ್ ಮತ್ತು ಇತರ ಅರೆಸೈನಿಕ ಪಡೆಗಳಿಗೂ ಇದು ಮೆಚ್ಚಿನ ಎಸ್‍ಯುವಿಯಾಗಿತ್ತು.

ಅಮೆರಿಕಾದ ಪಡೆಗಳು ಕಾರ್ಯಾಚರಣೆಗಾಗಿ ವಿಶೇಷವಾಗಿ ತಯಾರಿಸಿ ಹಮ್ಮರ್ ಅನ್ನು ಬಳಸುತ್ತಿದ್ದರು. ಹಮ್ಮರ್ ಎಸ್‍ಯುವಿಯನ್ನು ಮೊದಲ ಬಾರಿಗೆ 1992ರಲ್ಲಿ ಬಿಡುಗಡೆ ಮಾಡಿದ್ದರು. ಹಮ್ಮರ್‍ನ ಉತ್ಪಾದನೆಯನ್ನು 2010ರಲ್ಲಿ ಸ್ಥಗಿತಗೊಳಿಸಲಾಗಿತ್ತು.


Click it and Unblock the Notifications








