ಶೀಘ್ರದಲ್ಲಿಯೇ ಫೇಮ್ 2 ವ್ಯಾಪ್ತಿಗೆ ಬರಲಿವೆ ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರುಗಳು

ದೇಶದಲ್ಲಿರುವ ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರುಗಳನ್ನು ಸಹ ಫೇಮ್ 2 ವ್ಯಾಪ್ತಿಗೆ ತರುವ ಸಾಧ್ಯತೆಗಳಿವೆ. ಎಲೆಕ್ಟ್ರಿಕ್ ಹೈಬ್ರಿಡ್ ಅಥವಾ ಮೈಲ್ಡ್ ಹೈಬ್ರಿಡ್ ಕಾರುಗಳಿಗಿಂತ ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರುಗಳು ಕಡಿಮೆ ಪ್ರಮಾಣದ ಹೊರಸೂಸುವಿಕೆ ಪ್ರಮಾಣವನ್ನು ಹೊಂದಿವೆ.

ಶೀಘ್ರದಲ್ಲಿಯೇ ಫೇಮ್ 2 ವ್ಯಾಪ್ತಿಗೆ ಬರಲಿವೆ ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರುಗಳು

ಈ ಕಾರುಗಳು ಹೈಡ್ರೋಜನ್ ಫ್ಯೂಯಲ್ ಸೆಲ್'ಗಳಿಂದ ಚಾಲನೆಯಾಗುತ್ತವೆ. ಇದರಿಂದಾಗಿ ಈ ಕಾರುಗಳು ಪರಿಸರ ಸ್ನೇಹಿಯಾಗಿವೆ. ಈ ಅಂಶಗಳನ್ನು ಪರಿಗಣಿಸಿರುವ ಕೇಂದ್ರ ಸರ್ಕಾರವು ಶೀಘ್ರದಲ್ಲೇ ಅವುಗಳನ್ನು ಫೇಮ್ -2 ಯೋಜನೆಯಡಿಯಲ್ಲಿ ಸೇರಿಸಲು ನಿರ್ಧರಿಸಬಹುದು.

ಶೀಘ್ರದಲ್ಲಿಯೇ ಫೇಮ್ 2 ವ್ಯಾಪ್ತಿಗೆ ಬರಲಿವೆ ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರುಗಳು

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಹಾಗೂ ಮಾರಾಟವನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರವು 2015ರಲ್ಲಿ ಫೇಮ್ 2 ಯೋಜನೆಯನ್ನು ಆರಂಭಿಸಿತು. ಈ ಯೋಜನೆಯ ಎರಡನೇ ಹಂತವನ್ನು 2019ರ ಏಪ್ರಿಲ್‌ನಿಂದ ಆರಂಭಿಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಶೀಘ್ರದಲ್ಲಿಯೇ ಫೇಮ್ 2 ವ್ಯಾಪ್ತಿಗೆ ಬರಲಿವೆ ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರುಗಳು

ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರಿನ ತಂತ್ರಜ್ಞಾನವು ಅಭಿವೃದ್ಧಿಯಾದಂತೆ ವಾಹನ ತಯಾರಕ ಕಂಪನಿಗಳು ಇವುಗಳನ್ನು ಫೇಮ್ 2 ಯೋಜನೆಯಡಿ ಸೇರಿಸಲು ಪ್ರಯತ್ನಿಸುತ್ತಿದ್ದಾರೆ.

ಶೀಘ್ರದಲ್ಲಿಯೇ ಫೇಮ್ 2 ವ್ಯಾಪ್ತಿಗೆ ಬರಲಿವೆ ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರುಗಳು

ಹೈಡ್ರೋಜನ್ ಫ್ಯೂಯಲ್ ಸೆಲ್'ಗಳಿಂದ ಚಾಲನೆಯಾಗುವ ವಾಹನಗಳು ಎಲೆಕ್ಟ್ರಿಕ್ ವಾಹನಗಳಂತೆ ಪರಿಸರ ಸ್ನೇಹಿಯಾಗಿರುವುದರಿಂದ ಅವುಗಳನ್ನು ಸಹ ಫೇಮ್ ಯೋಜನೆಯಲ್ಲಿ ಸೇರಿಸಬೇಕೆಂದು ವಾಹನ ತಯಾರಕ ಕಂಪನಿಗಳು ಒತ್ತಾಯಿಸುತ್ತಿವೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಶೀಘ್ರದಲ್ಲಿಯೇ ಫೇಮ್ 2 ವ್ಯಾಪ್ತಿಗೆ ಬರಲಿವೆ ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರುಗಳು

ಹ್ಯುಂಡೈ ಹಾಗೂ ಮಾರುತಿ ಸುಜುಕಿಯಂತಹ ಕಂಪನಿಗಳು ದೇಶದಲ್ಲಿ ಹೈಡ್ರೋಜನ್ ಫ್ಯೂಯಲ್ ಸೆಲ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿವೆ. ಹ್ಯುಂಡೈ ಕಂಪನಿಯು ಭಾರತದ ಹೊರಗೆ ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರಿನ ಮೂಲ ಮಾದರಿಯನ್ನು ತಯಾರಿಸಿದೆ.

ಶೀಘ್ರದಲ್ಲಿಯೇ ಫೇಮ್ 2 ವ್ಯಾಪ್ತಿಗೆ ಬರಲಿವೆ ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರುಗಳು

ಹೈಡ್ರೋಜನ್ ಫ್ಯೂಯಲ್ ಸೆಲ್ ಪರಿಸರ ಸ್ನೇಹಿ ಸಾರಿಗೆ ಕ್ಷೇತ್ರದಲ್ಲಿ ಬಹು ದೊಡ್ಡ ಕ್ರಾಂತಿಯಾಗಿದೆ ಎಂಬುದು ಹ್ಯುಂಡೈ ಕಂಪನಿಯ ಅಭಿಪ್ರಾಯ. ಕಂಪನಿಗಳಿಗೆ ಸರ್ಕಾರದ ನೆರವು ದೊರೆತಾಗ ಮಾತ್ರ ಈ ವಾಹನಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ಸಾಧ್ಯವಾಗಲಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಶೀಘ್ರದಲ್ಲಿಯೇ ಫೇಮ್ 2 ವ್ಯಾಪ್ತಿಗೆ ಬರಲಿವೆ ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರುಗಳು

ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ 38 ಕಂಪನಿಗಳು ಭಾರತದಲ್ಲಿ ಫೇಮ್ -2 ಯೋಜನೆಯಡಿ ನೋಂದಣಿಯಾಗಿವೆ. ಭಾರಿ ಕೈಗಾರಿಕಾ ಇಲಾಖೆಯ ಅಂಕಿಅಂಶಗಳ ಪ್ರಕಾರ ಇದುವರೆಗೆ ದೇಶದಲ್ಲಿ 69, 804 ವಾಹನಗಳು ಫೇಮ್ 2 ಯೋಜನೆಯಡಿ ಮಾರಾಟವಾಗಿವೆ.

ಶೀಘ್ರದಲ್ಲಿಯೇ ಫೇಮ್ 2 ವ್ಯಾಪ್ತಿಗೆ ಬರಲಿವೆ ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರುಗಳು

ಇವುಗಳಲ್ಲಿ 54,179 ದ್ವಿಚಕ್ರ ವಾಹನಗಳು, 14,000 ತ್ರಿಚಕ್ರ ವಾಹನಗಳು ಹಾಗೂ 1,524 ನಾಲ್ಕು ಚಕ್ರ ವಾಹನಗಳು ಸೇರಿವೆ. ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಜನರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Hydrogen fuel cell cars to come under Fame 2 scheme soon. Read in Kannada.
Story first published: Thursday, April 15, 2021, 20:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X