ಜೂನ್ ತಿಂಗಳ ಮಾರಾಟದಲ್ಲಿ ಟಾಟಾ ಸಫಾರಿ ಎಸ್‍ಯುವಿಯನ್ನು ಹಿಂದಿಕ್ಕಿದ ಹ್ಯುಂಡೈ ಅಲ್ಕಾಜರ್

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಎಸ್‍ಯುವಿ ಪೋರ್ಟ್ಫೋಲಿಯೊವನ್ನು ಮತ್ತಷ್ಟು ಬಲಪಡಿಸಲು 7-ಸೀಟರ್ ಅಲ್ಕಾಜರ್ ಮಾದರಿಯನ್ನು ಕಳೆದ ತಿಂಗಳು ಬಿಡುಗಡೆಗೊಳಿಸಿತು, ಈ ಹೊಸ ಹ್ಯುಂಡೈ ಅಲ್ಕಾಜರ್ 7-ಸೀಟರ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ.

ಜೂನ್ ತಿಂಗಳ ಮಾರಾಟದಲ್ಲಿ ಟಾಟಾ ಸಫಾರಿ ಎಸ್‍ಯುವಿಯನ್ನು ಹಿಂದಿಕ್ಕಿದ ಹ್ಯುಂಡೈ ಅಲ್ಕಾಜರ್

ಹ್ಯುಂಡೈ ಕಂಪನಿಯು ಈ ಅಲ್ಕಾಜರ್ ಎಸ್‍ಯುವಿಯನ್ನು ಕಳೆದ ತಿಂಗಳ 18 ರಂದು ಬಿಡುಗಡೆಗೊಳಿಸಲಾಗಿತ್ತು. ಈ ಎಸ್‍ಯುವಿ ಬಿಡುಗಡೆಯಾದ ಮೊದಲ ತಿಂಗಳಿನಲ್ಲೇ ಭರ್ಜರಿ ಮಾರಾಟವನ್ನು ಕಂಡಿದೆ. ಕಳೆದ ತಿಂಗಳು ಅಲ್ಕಾಜರ್ ಮಾದರಿಯ 3,103 ಯುನಿಟ್‌ಗಳನ್ನು ಹ್ಯುಂಡೈ ಕಂಪನಿಯು ಮಾರಾಟಗೊಳಿಸಿದೆ. 2021ರ ಜೂನ್ ತಿಂಗಳ ಮಾರಾಟದಲ್ಲಿ ಹ್ಯುಂಡೈ ಅಲ್ಕಾಜರ್ ಎಸ್‍ಯುವಿಯು ತನ್ನ ಪ್ರತಿಸ್ಪರ್ಧಿಗಳಾದ ಎಂಜಿ ಹೆಕ್ಟರ್ ಪ್ಲಸ್ ಮತ್ತು ಟಾಟಾ ಸಫಾರಿ ಎಸ್‍ಯುವಿಗಳನ್ನು ಹಿಂದಿಕ್ಕಿದೆ.

ಜೂನ್ ತಿಂಗಳ ಮಾರಾಟದಲ್ಲಿ ಟಾಟಾ ಸಫಾರಿ ಎಸ್‍ಯುವಿಯನ್ನು ಹಿಂದಿಕ್ಕಿದ ಹ್ಯುಂಡೈ ಅಲ್ಕಾಜರ್

ಕಳೆದ ತಿಂಗಳು ಟಾಟಾ ಮೋಟಾರ್ಸ್ ಕಂಪನಿಯು ಸಫಾರಿ ಮಾದರಿಯ 1,730 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇನ್ನು ಎಂಜಿ ಮೋಟಾರ್ಸ್ ಕಂಪನಿಯು ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಮಾದರಿಗಳ 3,002 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

ಜೂನ್ ತಿಂಗಳ ಮಾರಾಟದಲ್ಲಿ ಟಾಟಾ ಸಫಾರಿ ಎಸ್‍ಯುವಿಯನ್ನು ಹಿಂದಿಕ್ಕಿದ ಹ್ಯುಂಡೈ ಅಲ್ಕಾಜರ್

ಆದರೆ 7 ಸೀಟರ್ ಎಸ್‍ಯುವಿ ವಿಭಾಗದಲ್ಲಿ ಮಹೀಂದ್ರಾ ಸ್ಕಾರ್ಪಿಯೋ ತನ್ನ ಎಲ್ಲ ಪ್ರತಿಸ್ಪರ್ಧಿಗಳನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ತಿಂಗಳು ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ ಮಾದರಿಯ 4,160 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇನ್ನು 7 ಸೀಟರ್ ಎಸ್‍ಯುವಿ ವಿಭಾಗದಲ್ಲಿ ಹ್ಯುಂಡೈ ಅಲ್ಕಾಜರ್ ಎಸ್‍ಯುವಿಯು ತನ್ನ ಪ್ರಮುಖ ಪ್ರತಿಸ್ಪರ್ಧಿ ಟಾಟಾ ಸಫಾರಿ ಮಾದರಿಯನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ.

ಜೂನ್ ತಿಂಗಳ ಮಾರಾಟದಲ್ಲಿ ಟಾಟಾ ಸಫಾರಿ ಎಸ್‍ಯುವಿಯನ್ನು ಹಿಂದಿಕ್ಕಿದ ಹ್ಯುಂಡೈ ಅಲ್ಕಾಜರ್

ಹ್ಯುಂಡೈ ಅಲ್ಕಾಜರ್ ಪ್ರತಿಸ್ಪರ್ಧಿಯಾದ ಟಾಟಾ ಸಫಾರಿ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದು ಬ್ರ್ಯಾಂಡ್‌ನ ಒಮೆಗಾ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ, ಇದನ್ನು ಲ್ಯಾಂಡ್ ರೋವರ್ ಡಿ8 ಪ್ಲಾಟ್‌ಫಾರ್ಮ್‌ನಿಂದ ಪಡೆಯಲಾಗಿದೆ. ಸಫಾರಿ ಎಸ್‍ಯುವಿಯು ಹ್ಯಾರಿಯರ್ ಮಾದರಿಯ ಮೂರು-ಸಾಲಿನ ಆವೃತ್ತಿಯಾಗಿದೆ.

ಜೂನ್ ತಿಂಗಳ ಮಾರಾಟದಲ್ಲಿ ಟಾಟಾ ಸಫಾರಿ ಎಸ್‍ಯುವಿಯನ್ನು ಹಿಂದಿಕ್ಕಿದ ಹ್ಯುಂಡೈ ಅಲ್ಕಾಜರ್

ಟಾಟಾ ಸಫಾರಿ ಎಸ್‍ಯುವಿಯಲ್ಲಿ 2.0-ಲೀಟರ್, ಟರ್ಬೋಚಾರ್ಜ್ಡ್, ಇನ್-ಲೈ ನಾಲ್ಕು ಸಿಲಿಂಡರ್, ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 168 ಬಿಹೆಚ್‌ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆರು ಸ್ಪೀಡ್ ಮ್ಯಾನುವಲ್ ಮತ್ತು ಆರು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

ಜೂನ್ ತಿಂಗಳ ಮಾರಾಟದಲ್ಲಿ ಟಾಟಾ ಸಫಾರಿ ಎಸ್‍ಯುವಿಯನ್ನು ಹಿಂದಿಕ್ಕಿದ ಹ್ಯುಂಡೈ ಅಲ್ಕಾಜರ್

ಇನ್ನು ಹ್ಯುಂಡೈ ಅಲ್ಕಾಜರ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದರ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,16.30 ಲಕ್ಷದಿಂದ ರೂ.19.99 ಲಕ್ಷಗಳಾಗಿದೆ. ಈ ಹ್ಯುಂಡೈ ಅಲ್ಕಾಜರ್ ಎಸ್‍ಯುವಿಯು ಅಕರ್ಷಕ ವಿನ್ಯಾಸವನ್ನು ಹೊಂದಿದೆ,

ಜೂನ್ ತಿಂಗಳ ಮಾರಾಟದಲ್ಲಿ ಟಾಟಾ ಸಫಾರಿ ಎಸ್‍ಯುವಿಯನ್ನು ಹಿಂದಿಕ್ಕಿದ ಹ್ಯುಂಡೈ ಅಲ್ಕಾಜರ್

ಹ್ಯುಂಡೈ ಅಲ್ಕಾಜರ್ ಎಸ್‍ಯುವಿಯು ಸ್ಪ್ಲಿಟ್-ಶೈಲಿಯ ಎಲ್ಇಡಿ ಹೆಡ್‌ಲ್ಯಾಂಪ್‌, 3ಡಿ ಹನಿಕೊಂಬ್ ಗ್ರಿಲ್, ಹೊಸ ವಿನ್ಯಾಸದ ಬಂಪರ್ ವಿನ್ಯಾಸ, ಎಲ್ಇಡಿ ಟೈಲ್ ಲ್ಯಾಂಪ್, ಎಲ್ಇಡಿ ಟರ್ನ್ ಇಂಡಿಕೇಟರ್, ವಿವಿಧ ಮಾದರಿಗಳಿಗೆ ಅನುಗುಣವಾಗಿ 17 ಮತ್ತು 18-ಇಂಚಿನ ಅಲಾಯ್ ವೀಲ್ಹ್, ರೂಫ್ ರೈಲ್ಸ್, ಫ್ಲಕ್ಸ್ ಸ್ಕಫ್ ಪ್ಲೇಟ್, ಶಾರ್ಕ್ ಫಿನ್ ಅಂಟೆನಾ ಮತ್ತು ಬಾಡಿ ಕ್ಲ್ಯಾಡಿಂಗ್ ಹೊಂದಿದೆ.

ಜೂನ್ ತಿಂಗಳ ಮಾರಾಟದಲ್ಲಿ ಟಾಟಾ ಸಫಾರಿ ಎಸ್‍ಯುವಿಯನ್ನು ಹಿಂದಿಕ್ಕಿದ ಹ್ಯುಂಡೈ ಅಲ್ಕಾಜರ್

ಇನ್ನು ಈ ಎಸ್‍ಯುವಿಯ ಇಂಟಿರಿಯರ್ ನಲ್ಲಿ, 10.25 ಇಂಚಿನ ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 10.25 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಬ್ಲ್ಯೂ ಲಿಂಕ್ ಕನೆಕ್ಟ್ ಟೆಕ್ನಾಲಜಿ, ವಾಯ್ಸ್ ಕಮಾಂಡರ್, ಮೂರು ಸಾಲಿಗೂ ಎಸಿ ವೆಂಟ್ಸ್, ಬ್ಲೈಂಡ್ ವಿಂಡೋ ಮಾನಿಟರ್ ಮತ್ತು ಆ್ಯಂಬಿಯೆಂಟ್ ಲೈಟಿಂಗ್ ಅನ್ನು ಹೊಂದಿದೆ.

ಜೂನ್ ತಿಂಗಳ ಮಾರಾಟದಲ್ಲಿ ಟಾಟಾ ಸಫಾರಿ ಎಸ್‍ಯುವಿಯನ್ನು ಹಿಂದಿಕ್ಕಿದ ಹ್ಯುಂಡೈ ಅಲ್ಕಾಜರ್

ಇದರೊಂದಿಗೆ ಸೀಟ್ ಬ್ಲ್ಯಾಟ್ ಟೇಬಲ್, ಆಟೋ ಏರ್ ಪ್ಯೂರಿಫೈರ್, ರಿಮೋಟ್ ಎಂಜಿನ್ ಸ್ಟಾರ್ಟ್, ಕ್ಲೈಮೆಟ್ ಕಂಟ್ರೋಲ್, ಪನೊರಮಿಕ್ ಸನ್‌ರೂಫ್ ಸೇರಿದಂತೆ ಹಲವಾರು ಪ್ರೀಮಿಯಂ ಪೀಚರ್ಸ್ ಗಳನ್ನು ಕೂದ ಹೊಂದಿವೆ. ಇನ್ನು ಈ ಹೊಸ ಎಸ್‍ಯುವಿಯಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 2.0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಗಳನ್ನು ನೀಡಲಾಗಿದೆ.

Most Read Articles

Kannada
English summary
Hyundai Alcazar Beats Tata Safari In June 2021 Sales. Read In Kananda.
Story first published: Saturday, July 10, 2021, 12:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X