ವಿಶ್ವಾದ್ಯಂತ ಕೋನಾ ಎಲೆಕ್ಟ್ರಿಕ್ ಕಾರುಗಳನ್ನು ರಿಕಾಲ್ ಮಾಡಲಿದೆ ಹ್ಯುಂಡೈ

ಹ್ಯುಂಡೈ ಕಂಪನಿಯು ಕೋನಾ ಎಲೆಕ್ಟ್ರಿಕ್ ಕಾರನ್ನು ಭಾರತವೂ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಮಾರಾಟ ಮಾಡುತ್ತದೆ. ಹೆಚ್ಚಿನ ವ್ಯಾಪ್ತಿ ಹಾಗೂ ಹೆಚ್ಚು ಫೀಚರ್'ಗಳನ್ನು ಹೊಂದಿರುವ ಕಾರಣಕ್ಕೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರಿನತ್ತ ಆಕರ್ಷಿತರಾಗುತ್ತಿದ್ದಾರೆ.

ವಿಶ್ವಾದ್ಯಂತ ಕೋನಾ ಎಲೆಕ್ಟ್ರಿಕ್ ಕಾರುಗಳನ್ನು ರಿಕಾಲ್ ಮಾಡಲಿದೆ ಹ್ಯುಂಡೈ

ಈಗ ಹ್ಯುಂಡೈ ಎಲೆಕ್ಟ್ರಿಕ್ ಕೋನಾ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಗಳು ವರದಿಯಾಗಿವೆ. ವಿಶ್ವದ ವಿವಿಧ ದೇಶಗಳಲ್ಲಿ ಮಾರಾಟವಾದ ಹದಿನೈದು ಹ್ಯುಂಡೈಕೋನಾ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ವಿಶ್ವಾದ್ಯಂತ ಕೋನಾ ಎಲೆಕ್ಟ್ರಿಕ್ ಕಾರುಗಳನ್ನು ರಿಕಾಲ್ ಮಾಡಲಿದೆ ಹ್ಯುಂಡೈ

ದಕ್ಷಿಣ ಕೊರಿಯಾದಲ್ಲಿ 11 ಕೋನಾ ಎಲೆಕ್ಟ್ರಿಕ್ ಕಾರುಗಳಿಗೆ ಬೆಂಕಿ ಬಿದ್ದಿದ್ದರೆ, ಕೆನಡಾದಲ್ಲಿ ಎರಡು, ಫಿನ್ ಲ್ಯಾಂಡ್ ಹಾಗೂ ಆಸ್ಟ್ರಿಯಾದಲ್ಲಿ ತಲಾ ಒಂದುಕೋನಾ ಎಲೆಕ್ಟ್ರಿಕ್ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವಿಶ್ವಾದ್ಯಂತ ಕೋನಾ ಎಲೆಕ್ಟ್ರಿಕ್ ಕಾರುಗಳನ್ನು ರಿಕಾಲ್ ಮಾಡಲಿದೆ ಹ್ಯುಂಡೈ

ಇದರಿಂದ ವಿಶ್ವಾದ್ಯಂತ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿರುವ ಗ್ರಾಹಕರು ಆತಂಕಕ್ಕೀಡಾಗಿದ್ದಾರೆ. ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರುಗಳಲ್ಲಿಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ದಕ್ಷಿಣ ಕೊರಿಯಾದ ಸಾರಿಗೆ ಇಲಾಖೆ ತನಿಖೆ ನಡೆಸುತ್ತಿದೆ.

ವಿಶ್ವಾದ್ಯಂತ ಕೋನಾ ಎಲೆಕ್ಟ್ರಿಕ್ ಕಾರುಗಳನ್ನು ರಿಕಾಲ್ ಮಾಡಲಿದೆ ಹ್ಯುಂಡೈ

ಈ ತನಿಖೆಯಲ್ಲಿ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿನ ಬ್ಯಾಟರಿಯಲ್ಲಿನ ತೊಂದರೆಯಿಂದಾಗಿ ಬೆಂಕಿ ಸಂಭವಿಸಿರುವುದು ಕಂಡುಬಂದಿದೆ. ಹ್ಯುಂಡೈ ಕಂಪನಿಯು ಬ್ಯಾಟರಿ ನಿರ್ವಹಣೆಗಾಗಿ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ವಿಶ್ವಾದ್ಯಂತ ಕೋನಾ ಎಲೆಕ್ಟ್ರಿಕ್ ಕಾರುಗಳನ್ನು ರಿಕಾಲ್ ಮಾಡಲಿದೆ ಹ್ಯುಂಡೈ

ಆದರೂ ಬ್ಯಾಟರಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸಮಸ್ಯೆ ಉಲ್ಬಣವಾಗುತ್ತಿರುವುದನ್ನು ಮನಗೊಂಡ ಹ್ಯುಂಡೈ ಕಂಪನಿಯು ಕೋನಾ ಎಲೆಕ್ಟ್ರಿಕ್ ಕಾರುಗಳನ್ನು ರಿಕಾಲ್ ಮಾಡಲು ನಿರ್ಧರಿಸಿದೆ.

ವಿಶ್ವಾದ್ಯಂತ ಕೋನಾ ಎಲೆಕ್ಟ್ರಿಕ್ ಕಾರುಗಳನ್ನು ರಿಕಾಲ್ ಮಾಡಲಿದೆ ಹ್ಯುಂಡೈ

ಹ್ಯುಂಡೈ ಕಂಪನಿಯು ತನ್ನ ಕೋನಾ ಕಾರುಗಳಿಗೆ ಬ್ಯಾಟರಿಗಳನ್ನು ಪೂರೈಸುವ ಎಲ್‌ಜಿ ಕೆಮ್ ಕಂಪನಿಯ ಜೊತೆಗೂ ಮಾತುಕತೆ ನಡೆಸಿದೆ. ಆದರೆ ತಾನು ಹೇಳಿದ ರೀತಿಯಲ್ಲಿ ಹ್ಯುಂಡೈ ಕಂಪನಿಯು ಚಾರ್ಜಿಂಗ್ ತಂತ್ರಜ್ಞಾನವನ್ನು ಅನುಸರಿಸಲಿಲ್ಲವೆಂದು ಎಲ್‌ಜಿ ಕೆಮ್ ಕಂಪನಿ ದೂರಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವಿಶ್ವಾದ್ಯಂತ ಕೋನಾ ಎಲೆಕ್ಟ್ರಿಕ್ ಕಾರುಗಳನ್ನು ರಿಕಾಲ್ ಮಾಡಲಿದೆ ಹ್ಯುಂಡೈ

ಗ್ರಾಹಕರ ಹಿತದೃಷ್ಟಿಯ ಸಲುವಾಗಿ ಎರಡೂ ಕಂಪನಿಗಳು ವಿಶ್ವದಾದ್ಯಂತ ಮಾರಾಟವಾಗುವ ಕೋನಾ ಎಲೆಕ್ಟ್ರಿಕ್ ಕಾರುಗಳ ಬ್ಯಾಟರಿಗಳನ್ನು ಬದಲಾಯಿಸಲು ನಿರ್ಧರಿಸಿವೆ. ಈ ಹಿನ್ನೆಲೆಯಲ್ಲಿ 2018 - 2020ರ ನಡುವೆ ತಯಾರಾದ 82,000 ಕೋನಾ ಎಲೆಕ್ಟ್ರಿಕ್ ಕಾರುಗಳನ್ನು ರಿಕಾಲ್ ಮಾಡಬೇಕಾಗಿದೆ.

ವಿಶ್ವಾದ್ಯಂತ ಕೋನಾ ಎಲೆಕ್ಟ್ರಿಕ್ ಕಾರುಗಳನ್ನು ರಿಕಾಲ್ ಮಾಡಲಿದೆ ಹ್ಯುಂಡೈ

ಬ್ಯಾಟರಿಗಳನ್ನು ಬದಲಿಸುವವರೆಗೂ ಕೋನಾ ಎಲೆಕ್ಟ್ರಿಕ್ ಕಾರುಗಳಲ್ಲಿರುವ ಬ್ಯಾಟರಿಗಳನ್ನು 90%ಗಿಂತ ಹೆಚ್ಚು ಚಾರ್ಜ್ ಮಾಡಬಾರದು ಎಂದು ಹ್ಯುಂಡೈ ಕಂಪನಿಯು ತನ್ನ ಗ್ರಾಹಕರಿಗೆ ಸೂಚಿಸಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಿಶ್ವಾದ್ಯಂತ ಕೋನಾ ಎಲೆಕ್ಟ್ರಿಕ್ ಕಾರುಗಳನ್ನು ರಿಕಾಲ್ ಮಾಡಲಿದೆ ಹ್ಯುಂಡೈ

ಕೋನಾ ಎಲೆಕ್ಟ್ರಿಕ್ ಕಾರುಗಳಲ್ಲಿರುವ ಬ್ಯಾಟರಿಗಳನ್ನು ಬದಲಿಸಲು ಹ್ಯುಂಡೈ ಕಂಪನಿಗೆ 900 ಮಿಲಿಯನ್ ಡಾಲರ್ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಘಟನೆಯು ಅತಿದೊಡ್ಡ ರಿಕಾಲ್'ಗಳಲ್ಲಿ ಒಂದಾಗಿದೆ.

Most Read Articles

Kannada
English summary
Hyundai company to recall Kona electric cars to replace batteries worldwide. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X