25ನೇ ವರ್ಷದ ಸಂಭ್ರಮಕ್ಕಾಗಿ ಸ್ಮಾರ್ಟ್ ಕೇರ್ ಕ್ಲಿನಿಕ್ ಅಭಿಯಾನ ಘೋಷಿಸಿದ ಹ್ಯುಂಡೈ ಇಂಡಿಯಾ

ಹ್ಯುಂಡೈ ಇಂಡಿಯಾ(Hyundai India) ಕಂಪನಿಯು ಭಾರತದಲ್ಲಿ ಉದ್ಯಮ ಕಾರ್ಯಾಚರಣೆ ಆರಂಭಿಸಿ 25 ವರ್ಷ ಪೂರ್ಣಗೊಳಿಸಿದ ಸಂಭ್ರಮಕ್ಕಾಗಿ ತನ್ನ ಗ್ರಾಹಕರಿಗೆ ವಿಶೇಷ ಅಭಿಯಾನ ಘೋಷಣೆ ಮಾಡಿದ್ದು, ಹೊಸ ಸ್ಮಾರ್ಟ್ ಕೇರ್ ಕ್ಲಿನಿಕ್ ಅಭಿಯಾನದಡಿ ಹ್ಯುಂಡೈ ಕಾರು ಮಾಲೀಕರು ವಿವಿಧ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

25ನೇ ವರ್ಷದ ಸಂಭ್ರಮಕ್ಕಾಗಿ ಸ್ಮಾರ್ಟ್ ಕೇರ್ ಕ್ಲಿನಿಕ್ ಅಭಿಯಾನ ಘೋಷಿಸಿದ ಹ್ಯುಂಡೈ ಇಂಡಿಯಾ

ಸ್ಮಾರ್ಟ್ ಕೇರ್ ಕ್ಲಿನಿಕ್ ಅಭಿಯಾನವನ್ನು ಹ್ಯುಂಡೈ ಇಂಡಿಯಾ ಕಂಪನಿಯು ದೇಶಾದ್ಯಂತ ಹರಡಿರುವ ತನ್ನ ಅಧಿಕೃತ ಸರ್ವಿಸ್ ಸೆಂಟರ್‌ಗಳಲ್ಲಿ ಹತ್ತು ದಿನಗಳ ಕಾಲ ನಡೆಸಲು ನಿರ್ಧರಿಸಿದ್ದು, ಡಿಸೆಂಬರ್ 11ರಿಂದಲೇ ಆರಂಭವಾಗಿರುವ ಹೊಸ ಅಭಿಯಾನವು 20ರ ತನಕ ನಡೆಯಲಿದೆ. ಒಟ್ಟು ಹತ್ತು ದಿನಗಳ ಕಾಲ ನಡೆಯಲಿರುವ ಸ್ಮಾರ್ಟ್ ಕೇರ್ ಕ್ಲಿನಿಕ್ ಅಭಿಯಾನದಲ್ಲಿ ಹ್ಯುಂಡೈ ಗ್ರಾಹಕರು ಹಲವಾರು ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದ್ದು, ಬಿಡಿಭಾಗಗಳು ಮತ್ತು ಬಿಡಿಭಾಗಗಳ ಸೇವೆಗಳ ಮೇಲೆ ಹೆಚ್ಚಿನ ರಿಯಾಯ್ತಿ ಘೋಷಣೆ ಮಾಡಿದೆ.

25ನೇ ವರ್ಷದ ಸಂಭ್ರಮಕ್ಕಾಗಿ ಸ್ಮಾರ್ಟ್ ಕೇರ್ ಕ್ಲಿನಿಕ್ ಅಭಿಯಾನ ಘೋಷಿಸಿದ ಹ್ಯುಂಡೈ ಇಂಡಿಯಾ

ಹ್ಯುಂಡೈ ಕಾರು ಮಾಲೀಕರಿಗೆ ಕಂಪನಿಯ ನಿಗದಿತ ಅವಧಿಯಲ್ಲಿ ಬಿಡಿಭಾಗಗಳ ಸೇವೆಗಳನ್ನು ರಿಯಾಯ್ತಿ ದರದಲ್ಲಿ ಒದಗಿಸುತ್ತಿದ್ದು, ಗ್ರಾಹಕರು ಬಿಡಿಭಾಗಗಳ ಮೇಲೆ ಶೇ.10 ರಷ್ಟು, ಬಿಡಿಭಾಗಗಳ ಸೇವಾ ದರಗಳ ಮೇಲೆ ಶೇ.20 ರಷ್ಟು ರಿಯಾಯ್ತಿ ನೀಡಿದೆ.

25ನೇ ವರ್ಷದ ಸಂಭ್ರಮಕ್ಕಾಗಿ ಸ್ಮಾರ್ಟ್ ಕೇರ್ ಕ್ಲಿನಿಕ್ ಅಭಿಯಾನ ಘೋಷಿಸಿದ ಹ್ಯುಂಡೈ ಇಂಡಿಯಾ

ಜೊತೆಗೆ ಕಂಪನಿಯು ಬಿಡಿಭಾಗಗಳ ಸೇವೆ ನಂತರ ಗ್ರಾಹಕರ ಬೇಡಿಕೆ ಆಧಾರದ ಮೇಲೆ ಶೇ.20 ರಷ್ಟು ರಿಯಾಯ್ತಿ ದರ ಕಾರನ್ನು ಸಂಪೂರ್ಣವಾಗಿ ಸ್ಯಾನಿಟೇಜ್ ಮಾಡಲಿದ್ದು, ಅಭಿಯಾನದಲ್ಲಿ ಭಾಗಿಯಾಗುವ 1 ಸಾವಿರ ಲಕ್ಕಿ ಗ್ರಾಹಕರಿಗೆ ಕಂಪನಿಯು ಉಚಿತವಾಗಿ ಎಂಜಿನ್ ಆಯಿಲ್ ಮತ್ತು ಆಯಿಲ್ ಫಿಲ್ಟರ್ ಬದಲಿಸಿಕೊಡಲು ನಿರ್ಧರಿಸಿದೆ.

25ನೇ ವರ್ಷದ ಸಂಭ್ರಮಕ್ಕಾಗಿ ಸ್ಮಾರ್ಟ್ ಕೇರ್ ಕ್ಲಿನಿಕ್ ಅಭಿಯಾನ ಘೋಷಿಸಿದ ಹ್ಯುಂಡೈ ಇಂಡಿಯಾ

ಹ್ಯುಂಡೈ ಕಂಪನಿಯು ಭಾರತದಲ್ಲಿ 25ನೇ ವರ್ಷ ಪೂರ್ಣಗೊಳಿಸಿದ ಸಂಭ್ರಮದಲ್ಲಿ ಅಸ್ತಿತ್ವ ಗ್ರಾಹಕರಿಗೆ ಮಾತ್ರವನ್ನು ಹೊಸ ಕಾರು ಖರೀದಿದಾರರಿಗೂ ಹಲವಾರು ಆಫರ್ಗಳನ್ನು ಘೋಷಣೆ ಮಾಡಿದ್ದು, ಹೊಸ ಆಫರ್‌ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿವೆ.

25ನೇ ವರ್ಷದ ಸಂಭ್ರಮಕ್ಕಾಗಿ ಸ್ಮಾರ್ಟ್ ಕೇರ್ ಕ್ಲಿನಿಕ್ ಅಭಿಯಾನ ಘೋಷಿಸಿದ ಹ್ಯುಂಡೈ ಇಂಡಿಯಾ

ಹ್ಯುಂಡೈ ಕಂಪನಿಯು ಹೊಸ ಕಾರು ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಳ್ಳುತ್ತಿದ್ದು, ಕೋವಿಡ್ ಪರಿಣಾಮ ತಗ್ಗಿರುವ ಏರಿಳಿತವಾಗುತ್ತಿರುವ ಹೊಸ ವಾಹನಗಳ ಮಾರಾಟವನ್ನು ಸುಧಾರಿಸಲು ಹಲವು ಹೊಸ ಕೊಡುಗೆಗಳನ್ನು ಪ್ರಕಟಿಸುತ್ತಿದೆ.

25ನೇ ವರ್ಷದ ಸಂಭ್ರಮಕ್ಕಾಗಿ ಸ್ಮಾರ್ಟ್ ಕೇರ್ ಕ್ಲಿನಿಕ್ ಅಭಿಯಾನ ಘೋಷಿಸಿದ ಹ್ಯುಂಡೈ ಇಂಡಿಯಾ

ಕೋವಿಡ್‌ ಪರಿಣಾಮ ಏರಿಳಿತವಾಗಿರುವ ಹೊಸ ವಾಹನಗಳ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಮುಂದಾಗಿರುವ ಪ್ರಮುಖ ಕಾರು ಕಂಪನಿಗಳು ವರ್ಷಾಂತ್ಯದಲ್ಲಿ ವಾಹನ ಖರೀದಿದಾರರನ್ನು ಸೆಳೆಯಲು ವಿವಿಧ ಆಫರ್‌ಗಳನ್ನು ಘೋಷಣೆ ಮಾಡುತ್ತಿದ್ದು, ಹ್ಯುಂಡೈ ಇಂಡಿಯಾ ಕಂಪನಿಯು ಸಹ ಡಿಸೆಂಬರ್ ಅವಧಿಯಲ್ಲಿ ವಿವಿಧ ಕಾರುಗಳ ಖರೀದಿ ಮೇಲೆ ಆಕರ್ಷಕ ಆಫರ್ ನೀಡುತ್ತಿದೆ.

25ನೇ ವರ್ಷದ ಸಂಭ್ರಮಕ್ಕಾಗಿ ಸ್ಮಾರ್ಟ್ ಕೇರ್ ಕ್ಲಿನಿಕ್ ಅಭಿಯಾನ ಘೋಷಿಸಿದ ಹ್ಯುಂಡೈ ಇಂಡಿಯಾ

ಹ್ಯುಂಡೈ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ಗರಿಷ್ಠ ಮಟ್ಟದ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

25ನೇ ವರ್ಷದ ಸಂಭ್ರಮಕ್ಕಾಗಿ ಸ್ಮಾರ್ಟ್ ಕೇರ್ ಕ್ಲಿನಿಕ್ ಅಭಿಯಾನ ಘೋಷಿಸಿದ ಹ್ಯುಂಡೈ ಇಂಡಿಯಾ

ಹೊಸ ವಾಹನಗಳ ಮಾರಾಟಕ್ಕೆ ಪೂರಕವಾಗಿ ಬಹುತೇಕ ಆಟೋ ಕಂಪನಿಗಳು ಹಲವಾರು ಆಫರ್ ನೀಡುತ್ತಿರುವುದಲ್ಲದೆ ಸರಳ ಸಾಲ ಸೌಲಭ್ಯಗಳನ್ನು ಒದಗಿಸುತ್ತಿರುವುದು ಕಾರು ಖರೀದಿಗೆ ಪ್ರಮುಖ ಆಕರ್ಷಣೆಯಾಗಿದ್ದು, ಹ್ಯುಂಡೈ ಕಂಪನಿಯು ಸ್ಯಾಂಟ್ರೋ, ಗ್ರಾಂಡ್ ಐ10 ನಿಯೋಸ್, ಐ20 ಮತ್ತು ಔರಾ ಕಾರುಗಳ ಮೇಲೆ ಉತ್ತಮ ಆಫರ್‌ಗಳನ್ನು ನೀಡಿದೆ.

25ನೇ ವರ್ಷದ ಸಂಭ್ರಮಕ್ಕಾಗಿ ಸ್ಮಾರ್ಟ್ ಕೇರ್ ಕ್ಲಿನಿಕ್ ಅಭಿಯಾನ ಘೋಷಿಸಿದ ಹ್ಯುಂಡೈ ಇಂಡಿಯಾ

ಎಂಟ್ರಿ ಲೆವಲ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಾದ ಗ್ರಾಂಡ್ ಐ10 ನಿಯೋಸ್ ಆವೃತ್ತಿಯ ಮೇಲೆ ಹ್ಯುಂಡೈ ಕಂಪನಿಯು ಗರಿಷ್ಠ ರೂ. 50 ಸಾವಿರ ತನಕ ಉಳಿತಾಯ ಮಾಡಬಹುದಾಗಿದ್ದು, ಎಕ್ಸ್‌ಚೆಂಜ್ ಮತ್ತು ಕ್ಯಾಶ್ ಬ್ಯಾಕ್ ಆಫರ್ ಒಳಗೊಂಡಿರಲಿದೆ.

25ನೇ ವರ್ಷದ ಸಂಭ್ರಮಕ್ಕಾಗಿ ಸ್ಮಾರ್ಟ್ ಕೇರ್ ಕ್ಲಿನಿಕ್ ಅಭಿಯಾನ ಘೋಷಿಸಿದ ಹ್ಯುಂಡೈ ಇಂಡಿಯಾ

ಔರಾ ಕಂಪ್ಯಾಕ್ಟ್ ಸೆಡಾನ್ ಕಾರು ಮಾದರಿಯ ಮೇಲೆ ಹ್ಯುಂಡೈ ಕಂಪನಿಯು ರೂ.50 ಸಾವಿರ ತನಕ ಉಳಿತಾಯಕ್ಕೆ ಅವಕಾಶ ನೀಡಿದ್ದು, ವಾಣಿಜ್ಯ ಬಳಕೆಗಾಗಿ ಖರೀದಿಗೆ ಲಭ್ಯವಿರುವ ಎಕ್ಸೆಂಟ್ ಪ್ರೈಮ್ ಕಾರು ಮಾದರಿಯ ಮೇಲೂ ಗರಿಷ್ಠ ನಗದು ರಿಯಾಯ್ತಿ ಪಡೆದುಕೊಳ್ಳಬಹುದಾಗಿದೆ.

25ನೇ ವರ್ಷದ ಸಂಭ್ರಮಕ್ಕಾಗಿ ಸ್ಮಾರ್ಟ್ ಕೇರ್ ಕ್ಲಿನಿಕ್ ಅಭಿಯಾನ ಘೋಷಿಸಿದ ಹ್ಯುಂಡೈ ಇಂಡಿಯಾ

ಜೊತೆಗೆ ಕಂಪನಿಯು ಔರಾ ಕಾರಿನ ಸಿಎನ್‌ಜಿ ಮಾದರಿಯ ಮೇಲೂ ಅತ್ಯುತ್ತಮ ಆಫರ್‌ಗಳನ್ನು ನೀಡುತ್ತಿದ್ದು, ನಿಗದಿತ ಅವಧಿಯ ಕಾರು ಖರೀದಿಸುವ ಗ್ರಾಹಕರಿಗೆ ಆಕರ್ಷಕ ಡಿಸ್ಕೌಂಟ್ ಜೊತೆ ಹೆಚ್ಚುವರಿ ವಾರಂಟಿ ಆಫರ್ ನೀಡಲಿದೆ.

25ನೇ ವರ್ಷದ ಸಂಭ್ರಮಕ್ಕಾಗಿ ಸ್ಮಾರ್ಟ್ ಕೇರ್ ಕ್ಲಿನಿಕ್ ಅಭಿಯಾನ ಘೋಷಿಸಿದ ಹ್ಯುಂಡೈ ಇಂಡಿಯಾ

ಹಾಗೆಯೇ ಹ್ಯುಂಡೈ ಕಂಪನಿಯು ತನ್ನ ಮತ್ತೊಂದು ಜನಪ್ರಿಯ ಕಾರು ಮಾದರಿಯಾದ ಸ್ಯಾಂಟ್ರೋ ಹ್ಯಾಚ್‌ಬ್ಯಾಕ್ ಕಾರು ಖರೀದಿಯ ಮೇಲೆ ರೂ.40 ಸಾವಿರದಷ್ಟು ಎಕ್ಸ್‌ಚೆಂಜ್ ಆಫರ್ ಮತ್ತು ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿದ್ದು, ಸ್ಯಾಂಟ್ರೊ ಕಾರಿನ ಸಿಎನ್‌ಜಿ ಮಾದರಿಯು ಸಹ ಹೊಸ ಆಫರ್ ಒಳಗೊಂಡಿದೆ.

25ನೇ ವರ್ಷದ ಸಂಭ್ರಮಕ್ಕಾಗಿ ಸ್ಮಾರ್ಟ್ ಕೇರ್ ಕ್ಲಿನಿಕ್ ಅಭಿಯಾನ ಘೋಷಿಸಿದ ಹ್ಯುಂಡೈ ಇಂಡಿಯಾ

ಹೊಸ ಆಫರ್‌ಗಳಲ್ಲಿ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯ ಮೇಲೆ ಕಂಪನಿಯು ರೂ. 40 ಸಾವಿರದಷ್ಟು ವಿವಿಧ ಆಫರ್‌ಗಳನ್ನು ನೀಡುತ್ತಿದ್ದು, ಹೊಸ ಆಫರ್‌ಗಳು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಗಳ ಮೇಲೂ ಅನ್ವಯವಾಗಲಿದೆ. ಹೊಸ ಆಫರ್‌ಗಳಲ್ಲಿ ಸ್ಯಾಂಟ್ರೋ, ಔರಾ, ಗ್ರಾಂಡ್ ಐ10 ನಿಯೋಸ್ ಮತ್ತು ಐ20 ಹೊರತುಪಡಿಸಿ ವೆನ್ಯೂ, ಕ್ರೆಟಾ, ವೆರ್ನಾ, ಅಲ್ಕಾಜರ್ ಮತ್ತು ಕೊನಾ ಇವಿ ಕಾರುಗಳ ಮೇಲೆ ಯಾವುದೇ ಆಫರ್ ನೀಡಲಾಗಿಲ್ಲ.

Most Read Articles

Kannada
English summary
Hyundai india announces nationwide smart care clinic details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X