Just In
- 1 hr ago
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- 3 hrs ago
ಜಪಾನ್ನಲ್ಲಿ ಬಿಡುಗಡೆಯಾಯ್ತು ಮೇಡ್ ಇನ್ ಇಂಡಿಯಾ 2021ರ ಸುಜುಕಿ ಜಿಕ್ಸರ್ 250 ಬೈಕ್
- 3 hrs ago
ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ
- 4 hrs ago
ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್
Don't Miss!
- News
ಬೆಂಗಳೂರಿನಲ್ಲಿ ಭೀತಿ: ಕೊರೊನಾ ಹೆಚ್ಚು ರೆಮ್ಡೆಸಿವಿರ್ ಔಷಧಿ ಕಡಿಮೆ!
- Sports
ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್ಸಿಬಿ!
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Movies
40, 50, 60ರ ಸೀಕ್ರೆಟ್ ಬಿಚ್ಚಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Lifestyle
ನಿಮ್ಮ ಮಗು 10ವರ್ಷ ತಲುಪುವಾಗ ಕಲಿಸಬೇಕಾದ ಜೀವನ ಕೌಶಲ್ಯಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದ ಹ್ಯುಂಡೈ ಮೋಟಾರ್ಸ್
ಹ್ಯುಂಡೈ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಪ್ರಯಾಣಿಕ ಕಾರು ಮಾರಾಟ ಆರಂಭಿಸಿ ಯಶಸ್ವಿ 25 ವರ್ಷಗಳನ್ನು ಪೂರೈಸಿದ್ದು, ವಿವಿಧ ಕಾರು ಮಾದರಿಗಳ ಮಾರಾಟದೊಂದಿಗೆ ದೇಶದ 2ನೇ ಅತಿ ಕಾರು ಉತ್ಪಾದನಾ ಕಂಪನಿಯಾಗಿ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಕಾಯ್ದುಕೊಂಡಿದೆ.

ದೇಶಿಯ ಮಾರುಕಟ್ಟೆಗೆ ಮೊದಲ ಬಾರಿಗೆ 1996ರಲ್ಲಿ ಪ್ರವೇಶಿಸಿದ್ದ ಹ್ಯುಂಡೈ ಮೋಟಾರ್ಸ್ ಕಂಪನಿಯು ಹಲವಾರು ಸವಾಲು ಮತ್ತು ಭಾರೀ ಪ್ರತಿಸ್ಪರ್ಧೆ ನಡುವೆಯೂ ಪ್ರಸ್ತುತ ಮಾರುಕಟ್ಟೆಯಲ್ಲಿ ದೇಶದ 2ನೇ ಅತಿದೊಡ್ಡ ಕಾರು ಉತ್ಪಾದನೆ ಮತ್ತು ಮಾರಾಟ ಕಂಪನಿಯಾಗಿ ಹೊರಹೊಮ್ಮಿದೆ. ಸ್ಯಾಂಟ್ರೊ ಕಾರು ಮಾದರಿಯ ಉತ್ಪಾದನೆಯೊಂದಿಗೆ ವಿವಿಧ ಕಾರು ಮಾದರಿಗಳ ಮಾರಾಟದ ಮೂಲಕ ಸದ್ಯ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದ್ದು, ಭಾರತದಲ್ಲಿ ಇದುವರೆಗೆ ಹ್ಯುಂಡೈ ಕಂಪನಿಯು 10 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ.

ಕಾರು ಮಾರಾಟ ಆರಂಭಿಸಿದ ಆರಂಭದಲ್ಲಿ ವಾರ್ಷಿಕವಾಗಿ 8 ಸಾವಿರ ಕಾರುಗಳ ಮಾರಾಟ ಹೊಂದಿದ್ದ ಕಂಪನಿಯು ಇಂದು ವಾರ್ಷಿಕವಾಗಿ 8 ಲಕ್ಷ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಎಸ್‌ಯುವಿ ಕಾರುಗಳ ಬೇಡಿಕೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಭಾರತದಲ್ಲಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಹತ್ತು ಕಾರು ಆವೃತ್ತಿಗಳ ಮಾರಾಟ ಮಾಡುತ್ತಿರುವ ಹ್ಯುಂಡೈ ಕಂಪನಿಯು ಶೇ. 17.4ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದು, ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಸದ್ಯ ಹ್ಯುಂಡೈ ಕಂಪನಿಯು ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ.

ಹ್ಯುಂಡೈ ಎಸ್‌ಯುವಿ ವಿಭಾಗದಲ್ಲಿ ಟ್ಯುಸಾನ್, ಕ್ರೆಟಾ, ಕೊನಾ ಎಲೆಕ್ಟ್ರಿಕ್ ಮತ್ತು ವೆನ್ಯೂ ಕಾರುಗಳಿದ್ದು, ಕೇವಲ ಈ ನಾಲ್ಕು ಕಾರುಗಳ ಮಾರಾಟವೇ ಇದುವರೆಗೆ ಸುಮಾರು 10 ಲಕ್ಷ ಯುನಿಟ್‍ಗೆ ತಲುಪಿದೆ. ಇದರಲ್ಲಿ ಕ್ರೆಟಾ ಕಾರು ಮಾದರಿಯೊಂದೆ ಸುಮಾರು 6 ಲಕ್ಷ ಯುನಿಟ್ ಮಾರಾಟ ದಾಖಲೆಯನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

ಇನ್ನು ಭಾರತದಲ್ಲಿ ಸುಮಾರು 25 ವರ್ಷಗಳಿಂದ ಕಾರು ಮಾರಾಟದಲ್ಲಿ ಹಂತವಾಗಿ ಉನ್ನತಿ ಸಾಧಿಸಿರುವ ಹ್ಯುಂಡೈ ಕಂಪನಿಯು ಸುಮಾರು ರೂ.29 ಸಾವಿರ ಕೋಟಿ ಷೇರು ಮೌಲ್ಯ ಹೊಂದಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ 8ನೇ ಅತಿದೊಡ್ಡ ಕಾರು ಮಾರಾಟ ಕಂಪನಿಯಾಗಿ ಗುರುತಿಸಿಕೊಂಡಿದೆ.

ಭಾರತವನ್ನು ಪ್ರಮುಖ ಆಟೋಮೊಬೈಲ್ ಹಬ್ ಆಗಿ ಜನಪ್ರಿಯತೆ ತಂದುಕೊಡುವಲ್ಲಿ ಹ್ಯುಂಡೈ ಕಂಪನಿಯ ಪಾತ್ರ ಪ್ರಮುಖವಾಗಿದ್ದು, ಭಾರತದಿಂದಲೇ ಹ್ಯುಂಡೈ ಕಂಪನಿಯು ಸುಮಾರು 80 ರಾಷ್ಟ್ರಗಳಿಗೆ ಕಾರುಗಳ ಪೂರೈಕೆಯ ಸೌಲಭ್ಯವನ್ನು ಹೊಂದಿದೆ.

ಚೆನ್ನೈ ಹೊರವಲಯದಲ್ಲಿರುವ ಇರುಂಗಟ್ಟುಕೊಟೈನಲ್ಲಿ ಕಾರು ಉತ್ಪಾದನಾ ಘಟಕ ಆರಂಭಿಸುವ ಮೂಲಕ ಆರಂಭದಲ್ಲಿ ಕೆಲವೇ ಕೆಲವು ನಗರಗಳಲ್ಲಿ ಮಾರಾಟ ಆರಂಭಿಸಿದ್ದ ಹ್ಯುಂಡೈ ಕಂಪನಿಯು ಇದೀಗ ದೇಶಾದ್ಯಂತ 1154 ಮಾರಾಟ ಮಳಿಗೆಗಳನ್ನು ಮತ್ತು 1298 ಅಧಿಕೃತ ಸರ್ವಿಸ್ ಸೆಂಟರ್‌ಗಳ ಸೇವೆ ಹೊಂದಿದೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

2020ರಲ್ಲಿ 1,80,237 ಯುನಿಟ್ ಎಸ್‌ಯುವಿ ಕಾರು ಮಾರಾಟ ಮಾಡುವ ಮೂಲಕ ಎಸ್‌ಯುವಿ ಕಾರು ಮಾರಾಟದಲ್ಲಿ ಅಗ್ರಸ್ಥಾನಕ್ಕೇರಿರುವ ಹ್ಯುಂಡೈ ಕಂಪನಿಯು ಆರಂಭದಲ್ಲಿ ಸ್ಯಾಂಟ್ರೊ ಮತ್ತು ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ರೆಟಾ, ಐ20, ಐ10 ಕಾರುಗಳ ಮೂಲಕ ಮಾರಾಟದಲ್ಲಿ ಭಾರೀ ಪ್ರಮಾಣದ ಮುನ್ನಡೆ ಕಾಯ್ದುಕೊಂಡಿದೆ.

ಕರೋನಾ ವೈರಸ್ ಭೀತಿ ನಡುವೆಯೂ ವಾಹನ ಮಾರಾಟದಲ್ಲಿ ಹಲವು ಹೊಸ ಬದಲಾಣೆಗಳನ್ನು ಪರಿಚಯಿಸಿದ ಹ್ಯುಂಡೈ ಕಂಪನಿಯು ಸಂಕಷ್ಟದ ಪರಿಸ್ಥಿತಿಯಲ್ಲೂ ಹೊಸ ಕಾರುಗಳ ಮಾರಾಟದಲ್ಲಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಸ್ಯಾಂಟ್ರೋ, ಗ್ರಾಂಡ್ ಐ10 ನಿಯೋಸ್, ಐ20, ಐರಾ, ವೆರ್ನಾ, ಎಲಾಂಟ್ರಾ, ವೆನ್ಯೂ, ಕ್ರೆಟಾ, ಟ್ಯುಸಾನ್ ಮತ್ತು ಕೊನಾ ಎಲೆಕ್ಟ್ರಿಕ್ ಕಾರು ಮಾದರಿಗಳ ಮಾರಾಟ ಹೊಂದಿರುವ ಹ್ಯುಂಡೈ ಕಂಪನಿಯು ಶೀಘ್ರದಲ್ಲೇ ಎಸ್‌ಯುವಿ ವಿಭಾಗಗಕ್ಕೆ ಅಲ್ಕಾಜರ್ ಮಾದರಿಯನ್ನು ಪರಿಚಯಿಸಲಿದೆ.