ಸಾಂತಾ ಕ್ರೂಸ್ ಲೈಫ್‌ ಸ್ಟ್ರೈಲ್ ಪಿಕ್ಅಪ್ ಬಿಡುಗಡೆಗೆ ಸಿದ್ದವಾದ ಹ್ಯುಂಡೈ ಮೋಟಾರ್ಸ್

ವಿಶ್ವಾದ್ಯಂತ ಪ್ರಮುಖ ಮಾರುಕಟ್ಟೆಗಳಲ್ಲಿ ಲೈಫ್ ಸ್ಟೈಲ್ ಪಿಕ್‌ಅಪ್ ಟ್ರಕ್ ಮಾದರಿಗಳಿಗೆ ಹೆಚ್ಚಿನ ಬೇಡಿಕೆ ಹರಿದುಬರುತ್ತಿದ್ದು, ಹ್ಯುಂಡೈ ಇಂಡಿಯಾ ಕಂಪನಿಯು ಕೂಡಾ ಮೊದಲ ಬಾರಿಗೆ ಪಿಕ್ಅಪ್ ಟ್ರಕ್ ಸೆಗ್ಮೆಂಟ್‌ಗೆ ಭರ್ಜರಿ ಎಂಟ್ರಿ ನೀಡುತ್ತಿದೆ.

ಸಾಂತಾ ಕ್ರೂಸ್ ಲೈಫ್‌ ಸ್ಟ್ರೈಲ್ ಪಿಕ್ಅಪ್ ಬಿಡುಗಡೆಗೆ ಸಿದ್ದವಾದ ಹ್ಯುಂಡೈ ಮೋಟಾರ್ಸ್

ಅಮೆರಿಕದಂತಹ ಮುಂಚೂಣಿ ರಾಷ್ಟ್ರಗಳಲ್ಲಿ ಲೈಫ್ ಸ್ಟೈಲ್ ಪಿಕ್ಅಪ್‌ಗಳು ಯಶಸ್ವಿಯಾಗಿ ಮಾರಾಟವಾಗುತ್ತಿದ್ದು, ಹ್ಯುಂಡೈ ಕಂಪನಿಯು ವಿಶ್ವದ ಪ್ರಮುಖ ಮಾರುಕಟ್ಟೆಗಳನ್ನು ಗುರಿಯಾಗಿಸಿಕೊಂಡು ಸಾಂತಾ ಕ್ರೂಸ್ ಪಿಕ್ಅಪ್ ಮಾದರಿಯನ್ನು ಅಭಿವೃದ್ದಿಗೊಳಿಸಿದೆ. ಹ್ಯುಂಡೈ ಕಂಪನಿಯು ಹೊಸ ಸಾಂತಾ ಕ್ರೂಸ್ ಮಾದರಿಯನ್ನು ಮೊದಲ ಬಾರಿಗೆ 2015ರ ಡ್ರೆಟಾಯಿಟ್ ಅಂತರ್‌ರಾಷ್ಟ್ರೀಯ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿತ್ತು.

ಸಾಂತಾ ಕ್ರೂಸ್ ಲೈಫ್‌ ಸ್ಟ್ರೈಲ್ ಪಿಕ್ಅಪ್ ಬಿಡುಗಡೆಗೆ ಸಿದ್ದವಾದ ಹ್ಯುಂಡೈ ಮೋಟಾರ್ಸ್

ಆದರೆ ಕಾನ್ಸೆಪ್ಟ್ ಮಾದರಿಯನ್ನು ಉ್ಪಾದನಾ ಮಾದರಿಯನ್ನು ಪರಿಚಯಿಸಲು ವಿವಿಧ ಕಾರಣಾಂತರಗಳಿಂದ ಹಿಂದೆ ಸರಿದಿದ್ದ ಕಂಪನಿಯು ಇದೀಗ ಮತ್ತೆ ಸಾಂತಾ ಕ್ರೂಸ್ ಮಾದರಿಯ ಬಿಡುಗಡೆಗೆ ಆಸಕ್ತಿ ತೋರಿದ್ದು, ಹೊಸ ಕಾರನ್ನು ಸದ್ಯಕ್ಕೆ ಅಮೆರಿಕ ಮತ್ತು ಯುರೋಪಿನ ಕೆಲವು ರಾಷ್ಟ್ರಗಳಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತಿದೆ.

ಸಾಂತಾ ಕ್ರೂಸ್ ಲೈಫ್‌ ಸ್ಟ್ರೈಲ್ ಪಿಕ್ಅಪ್ ಬಿಡುಗಡೆಗೆ ಸಿದ್ದವಾದ ಹ್ಯುಂಡೈ ಮೋಟಾರ್ಸ್

ಹೊಸ ಸಾಂತಾ ಕ್ರೂಸ್ ಮಾದರಿಯನ್ನು ಇದೇ 15ರಂದು ಉತ್ಪಾದನಾ ಮಾದರಿಯೊಂದಿಗೆ ಅನಾವರಣಗೊಳಿಸಲಿರುವ ಹ್ಯುಂಡೈ ಕಂಪನಿಯು ಹೊಸ ಕಾರಿನ ಅಧಿಕೃತ ಚಿತ್ರಗಳನ್ನು ಈಗಾಗಲೇ ಹಂಚಿಕೊಂಡಿದ್ದು, ಹೊಸ ಪಿಕ್ಅಪ್ ಮಾದರಿಯು 2022ರ ಟ್ಯುಸಾನ್ ಮಾದರಿಯನ್ನು ಆಧರಿಸಿ ಅಭಿವೃದ್ದಿಗೊಂಡಿದೆ.

ಸಾಂತಾ ಕ್ರೂಸ್ ಲೈಫ್‌ ಸ್ಟ್ರೈಲ್ ಪಿಕ್ಅಪ್ ಬಿಡುಗಡೆಗೆ ಸಿದ್ದವಾದ ಹ್ಯುಂಡೈ ಮೋಟಾರ್ಸ್

ಸಾಂತಾ ಕ್ರೂಸ್‌ನಲ್ಲಿ ಪ್ಯಾರಾಮೀಟ್ರಿಕ್ ವಿನ್ಯಾಸ ನೀಡಿರುವ ಹ್ಯುಂಡೈ ಕಂಪನಿಯು ಎಲ್‌ಇಡಿ ಹೆಡ್‌ಲೈಟ್ಸ್, ಎಲ್ಇಡಿ ಟೈಲ್‌ಲೈಟ್ಸ್, ಮೊನೊ ಕೊಕ್ ಬಾಡಿ ವಿನ್ಯಾಸವು ಹೋಂಡಾ ರಿಡ್ಜ್‌ಲೈನ್ ಮಾದರಿಗೆ ಉತ್ತಮ ಪೈಪೋಟಿ ನೀಡಲಿದೆ. ಹೊಸ ಪಿಕ್ಅಪ್ ಮಾದರಿಯಲ್ಲಿ ಅಧುನಿಕ ತಂತ್ರಜ್ಞಾನ ಪ್ರೇರಿತ ಹಲವು ತಾಂತ್ರಿಕ ಅಂಶಗಳನ್ನು ಜೋಡಣೆ ಮಾಡಲಿರುವ ಕಂಪನಿಯು ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಮತ್ತು ಅತ್ಯುತ್ತಮ ಕಾರ್ ಕನೆಕ್ಟ್ ಫೀಚರ್ಸ್ ಜೋಡಿಸಲಿದೆ.

ಸಾಂತಾ ಕ್ರೂಸ್ ಲೈಫ್‌ ಸ್ಟ್ರೈಲ್ ಪಿಕ್ಅಪ್ ಬಿಡುಗಡೆಗೆ ಸಿದ್ದವಾದ ಹ್ಯುಂಡೈ ಮೋಟಾರ್ಸ್

ಹೊಸ ಸಾಂತಾ ಕ್ರೂಸ್ ಮಾದರಿಯನ್ನು ಹ್ಯುಂಡೈ ಕಂಪನಿಯು ಹೈಬ್ರಿಡ್ ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿಗಳಿದ್ದು, ಇದು ಈ ವರ್ಷದ ಕೊನೆಯಲ್ಲಿ ಯುಎಸ್ಎ ಮತ್ತು ಯುರೋಪ್ ಮಾರುಕಟ್ಟೆಗಳಲ್ಲಿ ಮಾರಾಟವಾಗಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಸಾಂತಾ ಕ್ರೂಸ್ ಲೈಫ್‌ ಸ್ಟ್ರೈಲ್ ಪಿಕ್ಅಪ್ ಬಿಡುಗಡೆಗೆ ಸಿದ್ದವಾದ ಹ್ಯುಂಡೈ ಮೋಟಾರ್ಸ್

ಭಾರತದಲ್ಲಿ ಹೊಸ ಸಾಂತಾ ಕ್ರೂಸ್ ಮಾದರಿಯು ಬಿಡುಗಡೆಯಾಗುವುದು ಅನುಮಾನವಾದರೂ ಹೊಸ ಪಿಕ್ಅಪ್ ಮಾದರಿಗಳಿಗೆ ಮಾರುಕಟ್ಟೆ ಹೆಚ್ಚುತ್ತಿರುವುದು ಮುಂಬರುವ ದಿನಗಳಲ್ಲಿ ಹೊಸ ಮಾದರಿಯ ವಾಹನಗಳು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಉಂಟು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸಾಂತಾ ಕ್ರೂಸ್ ಲೈಫ್‌ ಸ್ಟ್ರೈಲ್ ಪಿಕ್ಅಪ್ ಬಿಡುಗಡೆಗೆ ಸಿದ್ದವಾದ ಹ್ಯುಂಡೈ ಮೋಟಾರ್ಸ್

ಹ್ಯುಂಡೈ ಮೋಟಾರ್ಸ್ ಕಂಪನಿಯು ಸದ್ಯ ಭಾರತದಲ್ಲಿ ಮಧ್ಯಮ ಗಾತ್ರದ ಎಸ್‌ಯುವಿ ಮತ್ತು ಎಂಪಿವಿ ಕಾರುಗಳನ್ನು ಹೆಚ್ಚಿಸುವತ್ತ ಗಮನಹರಿಸಿದ್ದು, ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಹಲವಾರು ಹೊಸ ಕಾರು ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ದವಾಗಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಸಾಂತಾ ಕ್ರೂಸ್ ಲೈಫ್‌ ಸ್ಟ್ರೈಲ್ ಪಿಕ್ಅಪ್ ಬಿಡುಗಡೆಗೆ ಸಿದ್ದವಾದ ಹ್ಯುಂಡೈ ಮೋಟಾರ್ಸ್

ಭಾರತದಲ್ಲಿ ಲೈಫ್ ಸ್ಟ್ರೈಲ್ ಪಿಕ್ಅಪ್ ಮಾದರಿಗಳಿಂತಲೂ ಮಧ್ಯಮ ಕ್ರಮಾಂಕದ ಎಸ್‌ಯುವಿ ಮತ್ತು ಎಂಪಿವಿ ಕಾರುಗಳಿಗೆ ಉತ್ತಮ ಮಾರುಕಟ್ಟೆಯಿದ್ದು, ಹ್ಯುಂಡೈ ಕಂಪನಿಯು ಶೀಘ್ರದಲ್ಲೇ ಅಲ್ಕಾಜರ್ ಎನ್ನುವ 7 ಸೀಟರ್ ಎಸ್‌ಯುವಿ ಬಿಡುಗಡೆಯ ಯೋಜನೆಯಲ್ಲಿದೆ.

Most Read Articles

Kannada
English summary
Hyundai Set To Enter The Pickup Segment With New Santa Cruz. Read in Kannada.
Story first published: Saturday, April 3, 2021, 22:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X