ದುಬಾರಿ ಬೆಲೆಯ BMW M 8 ಕೂಪೆ ಕಾರು ಖರೀದಿಸಿದ ಕ್ರಿಕೆಟಿಗ ಶಿಖರ್ ಧವನ್

ಶಿಖರ್ ಧವನ್ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಅವರು ಈಗ ಹೊಸ BMW M 8 ಕೂಪೆ ಕಾರ್ ಅನ್ನು ಖರೀದಿಸಿದ್ದಾರೆ. BMW M 8 ಕೂಪೆ ಕಾರು 2020 ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಯಿತು. BMW M 8 ಕೂಪೆ ಕಾರು ಪರ್ಫಾಮೆನ್ಸ್ ಬಯಸುವ ಗ್ರಾಹಕರಿಗೆ ಸೂಕ್ತವಾಗಿದೆ.

ದುಬಾರಿ ಬೆಲೆಯ BMW M 8 ಕೂಪೆ ಕಾರು ಖರೀದಿಸಿದ ಕ್ರಿಕೆಟಿಗ ಶಿಖರ್ ಧವನ್

ಭಾರತದಲ್ಲಿ ಮಾರಾಟವಾಗುವ BMW ಕೂಪೆ ಕಾರುಗಳಲ್ಲಿ ಉತ್ತಮವಾದುದೆಂದರೆ ಅದು M 8 ಮಾದರಿಯಾಗಿದೆ. BMW M 8 ಕೂಪೆ ಕಾರು ದೇಶಿಯ ಮಾರುಕಟ್ಟೆಯಲ್ಲಿ Audi ಕಂಪನಿಯ RS 7 Sportsback ಹಾಗೂ Mercedes Benz ಕಂಪನಿಯ AMG GT 63 ಸೇರಿದಂತೆ ಇತರ ಹಲವು ಟಾಪ್ ಎಂಡ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ದುಬಾರಿ ಬೆಲೆಯ BMW M 8 ಕೂಪೆ ಕಾರು ಖರೀದಿಸಿದ ಕ್ರಿಕೆಟಿಗ ಶಿಖರ್ ಧವನ್

ಈ ಕಾರು BMW 8 ಸೀರೀಸ್ ಗ್ರ್ಯಾನ್ ಕೂಪೆ‌ನ ಎಂ ಪರ್ಫಾಮೆನ್ಸ್ ಆವೃತ್ತಿಯಾಗಿದೆ. BMW ಕಂಪನಿಯ ಇತರ ಕಾರುಗಳಂತೆ M 8 ಕೂಪೆ ಕಾರು ಸಹ ಹಲವಾರು ಫೀಚರ್ ಗಳನ್ನು ಹೊಂದಿದೆ. ಇವುಗಳಲ್ಲಿ 10.25 ಇಂಚಿನ ಇನ್ಫೋಟೇನ್‌ಮೆಂಟ್ ಸಿಸ್ಟಂ, 12.3 ಇಂಚಿನ ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್ ಪ್ರಮುಖವಾಗಿವೆ.

ದುಬಾರಿ ಬೆಲೆಯ BMW M 8 ಕೂಪೆ ಕಾರು ಖರೀದಿಸಿದ ಕ್ರಿಕೆಟಿಗ ಶಿಖರ್ ಧವನ್

BMW M 8 ಕೂಪೆ ಕಾರು ಆಂಬಿಯೆಂಟ್ ಲೈಟಿಂಗ್, ಹಾರ್ಮನ್ ಸೌಂಡ್ ಸಿಸ್ಟಂ, ಎಂ ಸ್ಪೋರ್ಟ್ ಸೀಟ್, ವೈರ್ ಲೆಸ್ ಚಾರ್ಜಿಂಗ್, ಆಪಲ್ ಕಾರ್ ಪ್ಲೇ, BMWಡಿಸ್ ಪ್ಲೇ ಕೀ ಹಾಗೂ ಪಾರ್ಕ್ ಅಸಿಸ್ಟ್ ಪ್ಲಸ್ ಫೀಚರ್'ಗಳನ್ನು ಹೊಂದಿದೆ. BMW M 8 ಕೂಪೆ ಕಾರಿನಲ್ಲಿ ಯಾವುದೇ ಸೌಕರ್ಯಗಳ ಕೊರತೆಯಿಲ್ಲ.

ದುಬಾರಿ ಬೆಲೆಯ BMW M 8 ಕೂಪೆ ಕಾರು ಖರೀದಿಸಿದ ಕ್ರಿಕೆಟಿಗ ಶಿಖರ್ ಧವನ್

BMW M 8 ಕೂಪೆ ಕಾರಿನಲ್ಲಿ 4.4 ಲೀಟರ್ ವಿ 8 ಟ್ವಿನ್ ಟರ್ಬೋಚಾರ್ಜ್ಡ್ ಎಂಜಿನ್ ಅಳವಡಿಸಲಾಗಿದೆ. ಇದು BMW ಕಂಪನಿಯ ಅತ್ಯಂತ ಶಕ್ತಿಶಾಲಿ ಎಂಜಿನ್ ಗಳಲ್ಲಿ ಒಂದಾಗಿದೆ. ಈ ಎಂಜಿನ್ ಗರಿಷ್ಠ 592 ಬಿಹೆಚ್‌ಪಿ ಪವರ್ ಹಾಗೂ 750 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ದುಬಾರಿ ಬೆಲೆಯ BMW M 8 ಕೂಪೆ ಕಾರು ಖರೀದಿಸಿದ ಕ್ರಿಕೆಟಿಗ ಶಿಖರ್ ಧವನ್

ಈ ಎಂಜಿನ್ ಅನ್ನು 8 ಸ್ಪೀಡ್ ಸ್ಟೆಪ್ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. BMW M 8 ಕೂಪೆ ಕಾರು ಎಂ ಸ್ಪೆಕ್ ಎಕ್ಸ್‌ಡ್ರೈವ್ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿದೆ. ಈ ಸಿಸ್ಟಂ ಕಾರಿನ ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಎಂಜಿನ್ ಶಕ್ತಿಯನ್ನು ರವಾನಿಸುತ್ತದೆ. ಈಗಾಗಲೇ ಹೇಳಿದಂತೆ BMW M 8 ಕೂಪೆ ಕಾರು ಹೆಚ್ಚು ಪರ್ಫಾಮೆನ್ಸ್ ನೀಡುವ ಕಾರು.

ದುಬಾರಿ ಬೆಲೆಯ BMW M 8 ಕೂಪೆ ಕಾರು ಖರೀದಿಸಿದ ಕ್ರಿಕೆಟಿಗ ಶಿಖರ್ ಧವನ್

ಈ ಕಾರು ಕೇವಲ 3.3 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಕಾರು ಮೂರು ಅಂಕಿಯ ವೇಗವನ್ನು ತ್ವರಿತವಾಗಿ ಆಕ್ಸಲರೇಟ್ ಮಾಡುವುದರಿಂದ ಅತ್ಯುತ್ತಮ ಪ್ರದರ್ಶನಗಳನ್ನು ನಿರೀಕ್ಷಿಸುವ ಗ್ರಾಹಕರನ್ನು ಆಕರ್ಷಿಸುತ್ತದೆ.

ದುಬಾರಿ ಬೆಲೆಯ BMW M 8 ಕೂಪೆ ಕಾರು ಖರೀದಿಸಿದ ಕ್ರಿಕೆಟಿಗ ಶಿಖರ್ ಧವನ್

ಈ ಕಾರು ಪ್ರತಿ ಲೀಟರ್‌ಗೆ 9.52 ಕಿ.ಮೀ ಮೈಲೇಜ್ ನೀಡುತ್ತದೆ. ಇದು ಎಆರ್‌ಎಐ ಪ್ರಮಾಣೀಕರಿಸಿದ ಮೈಲೇಜ್ ಆಗಿದೆ. ಪ್ರಾಯೋಗಿಕ ಬಳಕೆಯಲ್ಲಿ ಮೈಲೇಜ್ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ. BMW M 8 ಕೂಪೆ ಕಾರು 4,867 ಎಂಎಂ ಉದ್ದ, 1,907 ಎಂಎಂ ಅಗಲ ಹಾಗೂ 1,362 ಎಂಎಂ ಎತ್ತರವನ್ನು ಹೊಂದಿದೆ.

ದುಬಾರಿ ಬೆಲೆಯ BMW M 8 ಕೂಪೆ ಕಾರು ಖರೀದಿಸಿದ ಕ್ರಿಕೆಟಿಗ ಶಿಖರ್ ಧವನ್

BMW M 8 ಕೂಪೆ ಕಾರಿನ ವ್ಹೀಲ್‌ಬೇಸ್ ಉದ್ದ 2827ಎಂಎಂಗಳಾಗಿದ್ದರೆ, ಈ ಕಾರಿನ ಗ್ರೌಂಡ್ ಕ್ಲಿಯರೆನ್ಸ್ ಕೇವಲ 130 ಎಂಎಂಗಳಾಗಿದೆ. BMW M 8 ಕೂಪೆ ಕಾರು 1960 ಕೆ.ಜಿ ತೂಕವನ್ನು ಹೊಂದಿದೆ. ಸುಮಾರು 2 ಸಾವಿರ ಕೆ.ಜಿ ತೂಕವನ್ನು ಹೊಂದಿದ್ದರೂ BMW M 8 ಕೂಪೆ ಕಾರಿನ ಪರ್ಫಾಮೆನ್ಸ್ ಗಮನಾರ್ಹವಾಗಿದೆ.

ದುಬಾರಿ ಬೆಲೆಯ BMW M 8 ಕೂಪೆ ಕಾರು ಖರೀದಿಸಿದ ಕ್ರಿಕೆಟಿಗ ಶಿಖರ್ ಧವನ್

BMW M 8 ಕೂಪೆ 2 ಡೋರಿನ ಮಾದರಿಯಾಗಿದೆ. ಈ ಕಾರು ಗರಿಷ್ಠ 4 ಜನರನ್ನು ಮಾತ್ರ ಹೊತ್ತೊಯ್ಯಬಲ್ಲದು. ಈ ಕಾರು 420 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. BMW M 8 ಕಾರಿನಲ್ಲಿ 68 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ನೀಡಲಾಗಿದೆ. ಈ ಫ್ಯೂಯಲ್ ಟ್ಯಾಂಕ್ ಅನ್ನು ಪೂರ್ತಿಯಾಗಿ ತುಂಬಿಸಿದ ನಂತರ ಸುಮಾರು 600 ಕಿ.ಮೀಗಳವರೆಗೆ ಪ್ರಯಾಣಿಸಬಹುದು.

ದುಬಾರಿ ಬೆಲೆಯ BMW M 8 ಕೂಪೆ ಕಾರು ಖರೀದಿಸಿದ ಕ್ರಿಕೆಟಿಗ ಶಿಖರ್ ಧವನ್

BMW M 8 ಕೂಪೆ ಕಾರು ಸುರಕ್ಷತೆಯ ಜೊತೆಗೆ ಪರ್ಫಾಮೆನ್ಸ್'ನಲ್ಲೂ ಉತ್ತಮವಾಗಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ ಒಟ್ಟು 6 ಏರ್ ಬ್ಯಾಗ್ ಗಳನ್ನು ನೀಡಲಾಗಿದೆ. BMW M 8 ಕೂಪೆ ಕಾರು ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಹಾಗೂ ಸೀಟ್ ಬೆಲ್ಟ್ ಅಲಾರಂ ಅನ್ನು ಸಹ ಹೊಂದಿದೆ.

ದುಬಾರಿ ಬೆಲೆಯ BMW M 8 ಕೂಪೆ ಕಾರು ಖರೀದಿಸಿದ ಕ್ರಿಕೆಟಿಗ ಶಿಖರ್ ಧವನ್

BMW M 8 ಕೂಪೆ ಕಾರಿನಲ್ಲಿ ಹೆಡ್ ಲೈಟ್, ಟೇಲ್ ಲೈಟ್, ಡೇಟೈಮ್ ರನ್ನಿಂಗ್ ಲೈಟ್ಸ್, ಫಾಗ್ ಲೈಟ್, ಎಲ್‌ಇಡಿ ಲೈಟ್ ಸೇರಿದಂತೆ ಹಲವಾರು ಫೀಚರ್ ಗಳನ್ನು ನೀಡಲಾಗಿದೆ. BMW M 8 ಕೂಪೆ ಕಾರಿನ ಬೆಲೆ ದೆಹಲಿಯ ಆನ್ ರೋಡ್ ದರದಂತೆ ಸುಮಾರು ರೂ. 2.41 ಕೋಟಿಗಳಾಗಿದೆ.

ದುಬಾರಿ ಬೆಲೆಯ BMW M 8 ಕೂಪೆ ಕಾರು ಖರೀದಿಸಿದ ಕ್ರಿಕೆಟಿಗ ಶಿಖರ್ ಧವನ್

ಕ್ರಿಕೆಟಿಗ ಶಿಖರ್ ಧವನ್ ಈಗಾಗಲೇ ಸಾಕಷ್ಟು ದುಬಾರಿ ಕಾರುಗಳನ್ನು ಹೊಂದಿದ್ದಾರೆ ಎಂಬುದು ಗಮನಾರ್ಹ. ಇವುಗಳಲ್ಲಿ Mercedes Benz GLS 350 ಸಹ ಸೇರಿದೆ. ಇದರ ಜೊತೆಗೆ ಶಿಖರ್ ಧವನ್ Audi Q 7 ಕಾರ್ ಅನ್ನು ಹೊಂದಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಇತರ ಸ್ಟಾರ್ ಆಟಗಾರರು ಸಹ ವಿವಿಧ ದುಬಾರಿ ಕಾರುಗಳನ್ನು ಹೊಂದಿದ್ದಾರೆ.

Most Read Articles

Kannada
English summary
Indian cricketer shikhar dhawan buys bmw m8 coupe car details
Story first published: Wednesday, September 1, 2021, 14:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X