ಅಲ್ಯೂಮಿನಿಯಂನಿಂದ ಬ್ಯಾಟರಿಗಳನ್ನು ತಯಾರಿಸಲಿದೆ ಇಂಡಿಯನ್ ಆಯಿಲ್ ಕಾರ್ಪೊರೇಷನ್

ದಿನೇ ದಿನೇ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ. ಇದರಿಂದಾಗಿ ಜನರು ಎಲೆಕ್ಟ್ರಿಕ್ ವಾಹನಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇದರಿಂದಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳಿಗೂ ಬೇಡಿಕೆ ಹೆಚ್ಚಾಗುತ್ತಿದೆ.

ಅಲ್ಯೂಮಿನಿಯಂನಿಂದ ಬ್ಯಾಟರಿಗಳನ್ನು ತಯಾರಿಸಲಿದೆ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಈ ಹಿನ್ನೆಲೆಯಲ್ಲಿ ಹಲವಾರು ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ (ಇವಿ) ಬ್ಯಾಟರಿಗಳನ್ನು ತಯಾರಿಸಲು ಮುಂದಾಗಿವೆ. ಈಗ ಅಲ್ಟ್ರಾ-ಲೈಟ್ ಮೆಟಲ್-ಏರ್ ಬ್ಯಾಟರಿಗಳನ್ನು ತಯಾರಿಸಲು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಹಾಗೂ ಇಸ್ರೇಲಿ ಬ್ಯಾಟರಿ ಡೆವಲಪರ್ ಫಿನರ್ಜಿ ಜಂಟಿ ಉದ್ಯಮವನ್ನು (ಜೆವಿ) ಸ್ಥಾಪಿಸಿವೆ.

ಅಲ್ಯೂಮಿನಿಯಂನಿಂದ ಬ್ಯಾಟರಿಗಳನ್ನು ತಯಾರಿಸಲಿದೆ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಮಾರುತಿ ಸುಜುಕಿ ಹಾಗೂ ಅಶೋಕ್ ಲೇಲ್ಯಾಂಡ್ ಕಂಪನಿಗಳು ಈ ಜಂಟಿ ಉದ್ಯಮದ ಮೊದಲ ಗ್ರಾಹಕರಾಗಿವೆ. ಈ ಜಂಟಿ ಉದ್ಯಮದಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬದಲಿಗೆ ಅಲ್ಯೂಮಿನಿಯಂನಿಂದ ಬ್ಯಾಟರಿಗಳನ್ನು ತಯಾರಿಸಲಾಗುತ್ತದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಅಲ್ಯೂಮಿನಿಯಂನಿಂದ ಬ್ಯಾಟರಿಗಳನ್ನು ತಯಾರಿಸಲಿದೆ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಅಲ್ಯೂಮಿನಿಯಂ ನಿರ್ಮಿತ ಬ್ಯಾಟರಿಗಳು ಲಿಥಿಯಂ-ಐಯಾನ್ ಬ್ಯಾಟರಿಗಳಿಗಿಂತ ಕಡಿಮೆ ಬೆಲೆಯನ್ನು ಹೊಂದಿರುತ್ತವೆ. ಜೊತೆಗೆ ವೇಗವಾಗಿ ಚಾರ್ಜ್ ಆಗುತ್ತವೆ ಹಾಗೂ ಪೂರ್ತಿಯಾಗಿ ಚಾರ್ಜ್ ಆದ ನಂತರ ಹೆಚ್ಚು ದೂರ ಚಲಿಸುತ್ತವೆ ಎಂದು ಹೇಳಲಾಗಿದೆ.

ಅಲ್ಯೂಮಿನಿಯಂನಿಂದ ಬ್ಯಾಟರಿಗಳನ್ನು ತಯಾರಿಸಲಿದೆ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಅಲ್ಯೂಮಿನಿಯಂ ಖನಿಜವು ಭಾರತದಲ್ಲಿ ಹೇರಳವಾಗಿ ಲಭ್ಯವಿದೆ. ಅಲ್ಯೂಮಿನಿಯಂ ಅನ್ನು ಹೊರತೆಗೆಯುವ ಹಾಗೂ ಮರುಬಳಕೆ ತಂತ್ರಜ್ಞಾನವು ಭಾರತದಲ್ಲಿ ಉತ್ತಮವಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಅಲ್ಯೂಮಿನಿಯಂನಿಂದ ಬ್ಯಾಟರಿಗಳನ್ನು ತಯಾರಿಸಲಿದೆ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಇದರಿಂದಾಗಿ ಅಲ್ಯೂಮಿನಿಯಂ ಬ್ಯಾಟರಿಗಳ ಬೆಲೆ ಕಡಿಮೆಯಾಗಲಿದೆ. ಇವಿ ಬ್ಯಾಟರಿಗಳಲ್ಲಿ ಬಳಕೆಯಾಗಲಿರುವ ಅಲ್ಯೂಮಿನಿಯಂ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಪೂರಕವಾಗಿರಲಿದೆ.

ಅಲ್ಯೂಮಿನಿಯಂನಿಂದ ಬ್ಯಾಟರಿಗಳನ್ನು ತಯಾರಿಸಲಿದೆ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಐಒಸಿ ಪ್ರಕಾರ, ಈ ಜಂಟಿ ಉದ್ಯಮದಿಂದ ದೇಶವು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲು ಸಾಧ್ಯವಾಗಲಿದೆ. ಐಒಸಿ 2020ರ ಫೆಬ್ರವರಿ ತಿಂಗಳಿನಲ್ಲಿ ಫಿನೆರ್ಜಿ ಲಿಮಿಟೆಡ್‌ನಲ್ಲಿ ಕೆಲವು ಷೇರುಗಳನ್ನು ಪಡೆದುಕೊಂಡಿತ್ತು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಅಲ್ಯೂಮಿನಿಯಂನಿಂದ ಬ್ಯಾಟರಿಗಳನ್ನು ತಯಾರಿಸಲಿದೆ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಈಗ ಐಒಸಿ ಫಿನರ್ಜಿ ಪ್ರೈವೇಟ್ ಲಿಮಿಟೆಡ್ ಎಂಬ ಜಂಟಿ ಉದ್ಯಮವನ್ನು ರೂಪಿಸಿದೆ. ಕಂಪನಿಯು ಮರುಬಳಕೆಯ ಅಲ್ಯೂಮಿನಿಯಂ ಬಳಸಿ ಅಲ್ಯೂಮಿನಿಯಂ-ಏರ್ ವ್ಯವಸ್ಥೆಗಳನ್ನು ತಯಾರಿಸಲಿದೆ.

ಅಲ್ಯೂಮಿನಿಯಂನಿಂದ ಬ್ಯಾಟರಿಗಳನ್ನು ತಯಾರಿಸಲಿದೆ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಈ ಜಂಟಿ ಸಹಭಾಗಿತ್ವದಲ್ಲಿ ಐಒಸಿ ಫಿನರ್ಜಿ ಪ್ರೈವೇಟ್ ಲಿಮಿಟೆಡ್ ದೇಶದಲ್ಲಿ ಅಲ್ಯೂಮಿನಿಯಂ-ಏರ್ ಬ್ಯಾಟರಿಗಳನ್ನು ತಯಾರಿಸಲು ಕಾರ್ಖಾನೆಯನ್ನು ಸ್ಥಾಪಿಸಲು ನಿರ್ಧರಿಸಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಅಲ್ಯೂಮಿನಿಯಂನಿಂದ ಬ್ಯಾಟರಿಗಳನ್ನು ತಯಾರಿಸಲಿದೆ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಜಂಟಿ ಉದ್ಯಮ ರಚನೆಯ ಸಂದರ್ಭದಲ್ಲಿ ಮಾತನಾಡಿದ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ರವರು ಭಾರತದಲ್ಲಿ ಸ್ವಚ್ಛ, ಸುಸ್ಥಿರ, ಕೈಗೆಟುಕುವ, ಸುರಕ್ಷಿತ ಹಾಗೂ ದೀರ್ಘಕಾಲೀನ ಇಂಧನ ಆಯ್ಕೆಗಳ ಬಳಕೆಗೆ ಆದ್ಯತೆ ನೀಡಲಾಗುವುದು.

ಅಲ್ಯೂಮಿನಿಯಂನಿಂದ ಬ್ಯಾಟರಿಗಳನ್ನು ತಯಾರಿಸಲಿದೆ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಜೊತೆಗೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸುವುದಾಗಿ ತಿಳಿಸಿದರು. ಇಂಧನ ಇಲಾಖೆ ಕಾರ್ಯದರ್ಶಿ ತರುಣ್ ಕಪೂರ್ ಮಾತನಾಡಿ, ದೇಶದ ಇಂಧನ ಬೇಡಿಕೆ ವಿಶ್ವದ ಇತರ ಭಾಗಗಳಿಗಿಂತ ಹೆಚ್ಚಾಗಲಿದೆ ಎಂದು ಹೇಳಿದರು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಅಲ್ಯೂಮಿನಿಯಂನಿಂದ ಬ್ಯಾಟರಿಗಳನ್ನು ತಯಾರಿಸಲಿದೆ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕಡಿಮೆ ಬೆಲೆಯ, ಸುಸ್ಥಿರವಾದ ಹಾಗೂ ಹೆಚ್ಚಿನ ಶಕ್ತಿಯನ್ನು ಉಳಿಸಲು ಸಾಧ್ಯವಾಗುವಂತಹ ಬ್ಯಾಟರಿ ತಂತ್ರಜ್ಞಾನವನ್ನು ಪರಿಶೀಲಿಸುತ್ತಿದೆ.

ಅಲ್ಯೂಮಿನಿಯಂನಿಂದ ಬ್ಯಾಟರಿಗಳನ್ನು ತಯಾರಿಸಲಿದೆ ಇಂಡಿಯನ್ ಆಯಿಲ್ ಕಾರ್ಪೊರೇಷನ್

ಇಸ್ರೇಲ್ ಇಂಧನ ಸಚಿವ ಯುವಲ್ ಸ್ಟಾಂಟ್ಜ್ ಈ ಯೋಜನೆಯನ್ನು ಶ್ಲಾಘಿಸಿದರು. ನಂತರ ಮಾತನಾಡಿದ ಅವರು ಉಭಯ ದೇಶಗಳ ನಡುವಿನ ಸಹಕಾರವು ಮೊದಲಿಗಿಂತ ಹೆಚ್ಚು ನಿಕಟವಾಗಿರಲಿದೆ ಎಂದು ಹೇಳಿದರು.

Most Read Articles

Kannada
English summary
Indian Oil Corporation to manufacture batteries from Aluminum. Read in Kannada.
Story first published: Friday, March 19, 2021, 11:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X