ಸೆಕೆಂಡ್‌ ಹ್ಯಾಂಡ್‌ ಕಾರಿನ ಮಾರಾಟ ಪ್ರಮಾಣವು ಕೋವಿಡ್ ಪರಿಣಾಮದಿಂದ ದ್ವಿಗುಣ!

ಕೋವಿಡ್ ಪರಿಣಾಮದಿಂದಾಗಿ ಆರ್ಥಿಕ ಹಿಂಜರಿತ ಮತ್ತು ಹೊಸ ವಾಹನ ಬೆಲೆಯಲ್ಲಿ ಭಾರೀ ಏರಿಕೆಯಾಗಿರುವ ಹಿನ್ನಲೆಯಲ್ಲಿ ಹೊಸ ವಾಹನಗಳ ನಿರ್ವಹಣೆಯು ಸಾಕಷ್ಟು ಹೊರೆಯಾಗಿ ಪರಿಣಮಿಸುತ್ತಿದ್ದು, ಮಧ್ಯಮ ಗಾತ್ರದ ಕಾರು ಖರೀದಿದಾರರು ಹೊಸ ವಾಹನಗಳಿಂತ ಬಳಕೆ ಮಾಡಿದ ವಾಹನಗಳ ಖರೀದಿಯತ್ತ ಆಸಕ್ತಿ ತೋರುತ್ತಿದ್ದಾರೆ.

ಸೆಕೆಂಡ್‌ ಹ್ಯಾಂಡ್‌ ಕಾರಿನ ಮಾರಾಟ ಪ್ರಮಾಣವು ಕೋವಿಡ್ ಪರಿಣಾಮದಿಂದ ದ್ವಿಗುಣ!

ಆಟೋ ಉದ್ಯಮವು ಸದ್ಯ ಹಲವಾರು ಕಾರಣಗಳಿಂದ ಮಂದಗತಿಯಲ್ಲಿ ಸಾಗಿದ್ದು, ಹೊಸ ವಾಹನ ಖರೀದಿ ಯೋಜನೆಯಲ್ಲಿದ್ದ ಹಲವು ಗ್ರಾಹಕರು ಪರಿಸ್ಥಿತಿಗೆ ಅನುಗುಣವಾಗಿ ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿಯತ್ತ ಮುಖ ಮಾಡುತ್ತಿದ್ದಾರೆ. ಸೆಕೆಂಡ್ ಹ್ಯಾಂಡ್ ವಾಹನ ಮಾರಾಟ ಉದ್ಯಮವು ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳವಣಿಗೆ ಕಂಡಿದ್ದು, ಇಂದು ಮುಂದಿನ ಕೆಲ ವರ್ಷಗಳಲ್ಲಿ ಬಹುದೊಡ್ಡ ಉದ್ಯಮವಾಗಿ ಮಾರ್ಪಡಲಿದೆ ಎನ್ನಲಾಗಿದೆ.

ಸೆಕೆಂಡ್‌ ಹ್ಯಾಂಡ್‌ ಕಾರಿನ ಮಾರಾಟ ಪ್ರಮಾಣವು ಕೋವಿಡ್ ಪರಿಣಾಮದಿಂದ ದ್ವಿಗುಣ!

ಸೆಕೆಂಡ್ ಹ್ಯಾಂಡ್ ವಾಹನ ಉದ್ಯಮದಲ್ಲಿ ತೀವ್ರ ಬೆಳವಣಿಗೆ ಪ್ರಮುಖ ಕಾರಣಗಳಿದ್ದು, ಕೋವಿಡ್ ಪರಿಣಾಮ ಸ್ವಂತ ವಾಹನಗಳ ಬಳಕೆಗೆ ಸಾರ್ವಜನಿಕರ ಆಸಕ್ತಿ ಒಂದಡೆಯಾದರೆ ಹೊಸ ಮಾದರಿಯ ವಾಹನಗಳ ನಿರ್ವಹಣಾ ವೆಚ್ಚವು ದಿನದಿಂದ ಹೆಚ್ಚುತ್ತಿರುವುದು ಸಹ ಬಜೆಟ್ ಬೆಲೆಯಲ್ಲಿ ದೊರೆಯಬಹುದಾದ ಸೆಕೆಂಡ್ ಹ್ಯಾಂಡ್ ವಾಹನಗಳಿಗೆ ಆದ್ಯತೆ ಹೆಚ್ಚುತ್ತಿದೆ.

ಸೆಕೆಂಡ್‌ ಹ್ಯಾಂಡ್‌ ಕಾರಿನ ಮಾರಾಟ ಪ್ರಮಾಣವು ಕೋವಿಡ್ ಪರಿಣಾಮದಿಂದ ದ್ವಿಗುಣ!

ದುಬಾರಿ ಇಂಧನ ದರಗಳು ಮತ್ತು ಬಿಡಿಭಾಗಗಳು ದುಬಾರಿಯಾಗಿರುವುದರಿಂದ ಹೊಸ ವಾಹನಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಮೊದಲ ಬಾರಿಗೆ ವಾಹನ ಖರೀದಿಸುತ್ತಿರುವ ಗ್ರಾಹಕರು ಸಹಜವಾಗಿ ಬಳಕೆ ಮಾಡಿದ ಬಜೆಟ್ ವಾಹನಗಳ ಮಾಲೀಕತ್ವಕ್ಕೆ ಆದ್ಯತೆ ನೀಡುತ್ತಿದ್ದಾರೆ.

ಸೆಕೆಂಡ್‌ ಹ್ಯಾಂಡ್‌ ಕಾರಿನ ಮಾರಾಟ ಪ್ರಮಾಣವು ಕೋವಿಡ್ ಪರಿಣಾಮದಿಂದ ದ್ವಿಗುಣ!

ಕಳೆದ ಎರಡು ವರ್ಷಗಳ ಹಿಂದೆ ರೂ.5 ಲಕ್ಷ ಖರೀದಿ ಮಾಡಬಹುದಾಗಿದ್ದ ಹಲವಾರು ಬಜೆಟ್ ಕಾರುಗಳ ಬೆಲೆಯು ಪ್ರಸ್ತುತ ಮಾರುಕಟ್ಟೆಯಲ್ಲಿ ರೂ. 5.50 ಲಕ್ಷದಿಂದ ರೂ.6.20 ಲಕ್ಷಕ್ಕೆ ಏರಿಕೆಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲೂ ಹೆಚ್ಚಳವಾಗಿರುವುದರಿಂದ ಹೊಸ ವಾಹನ ನಿರ್ವಹಣೆಯು ಕಳೆದ ಎರಡು ವರ್ಷಗಳಲ್ಲಿ ದ್ವಿಗುಣಗೊಂಡಿದೆ.

ಸೆಕೆಂಡ್‌ ಹ್ಯಾಂಡ್‌ ಕಾರಿನ ಮಾರಾಟ ಪ್ರಮಾಣವು ಕೋವಿಡ್ ಪರಿಣಾಮದಿಂದ ದ್ವಿಗುಣ!

ಹೀಗಾಗಿ ಬಜೆಟ್ ಬೆಲೆಯಲ್ಲಿ ಸಿಗಬಹುದಾದ ಉತ್ತಮವಾದ ಸೆಕೆಂಡ್ ಹ್ಯಾಂಡ್ ವಾಹನಗಳನ್ನೇ ಖರೀದಿಸುವುದು ಹೆಚ್ಚುತ್ತಿದ್ದು, ಸೆಕೆಂಡ್ ಹ್ಯಾಂಡ್ ಉದ್ಯಮವು ಹೊಸ ಕಾರು ಮಾರುಕಟ್ಟೆಯ ಬೆಳವಣಿಗೆಯ ದರವನ್ನು ಮೀರಿಸಿ ಶೇಕಡಾ 15 ರ ದರದಲ್ಲಿ ಬೆಳವಣಿಗೆ ಸಾಧಿಸುತ್ತಿದೆ.

ಸೆಕೆಂಡ್‌ ಹ್ಯಾಂಡ್‌ ಕಾರಿನ ಮಾರಾಟ ಪ್ರಮಾಣವು ಕೋವಿಡ್ ಪರಿಣಾಮದಿಂದ ದ್ವಿಗುಣ!

ಪ್ರಸಕ್ತ ಹಣಕಾಸು ವರ್ಷದಲ್ಲಿ ಸೆಕೆಂಡ್ ಹ್ಯಾಂಡ್ ವಾಹನ ಮಾರಾಟವು ಸುಮಾರು 30.80 ಲಕ್ಷ ಯುನಿಟ್ ಆಗಿದ್ದು, ಹೊಸ ಅಧ್ಯಯನದ ಪ್ರಕಾರ ಹೊಸ ಉದ್ಯಮವು ಮುಂದಿನ ಕೆಲವು ವರ್ಷಗಳಲ್ಲಿ ಶೇಕಡಾ 12-14 ರಷ್ಟು ಬೆಳವಣಿಗೆ ದರದಲ್ಲಿ ಬೆಳೆಯಲಿದೆ ಎಂದು ಬಹಿರಂಗಪಡಿಸಿದೆ.

ಸೆಕೆಂಡ್‌ ಹ್ಯಾಂಡ್‌ ಕಾರಿನ ಮಾರಾಟ ಪ್ರಮಾಣವು ಕೋವಿಡ್ ಪರಿಣಾಮದಿಂದ ದ್ವಿಗುಣ!

ಸೆಕೆಂಡ್ ಹ್ಯಾಂಡ್ ಕಾರುಗಳ ಖರೀದಿ ಮತ್ತು ಮಾರಾಟವು 2026ರ ಹಣಕಾಸು ವರ್ಷದಲ್ಲಿ 70 ಲಕ್ಷ ಯೂನಿಟ್‌ಗಳನ್ನು ತಲುಪಲಿದೆ ಅಂದಾಜಿಸಲಾಗಿದ್ದು, ಸೆಕೆಂಡ್ ಹ್ಯಾಂಡ್ ವಾಹನ ಮಾರಾಟ ದರ ಹೆಚ್ಚಳಕ್ಕೆ ಕೋವಿಡ್, ದರ ಏರಿಕೆಯ ಜೊತೆಗೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಗುಜುರಿ ನೀತಿಯು ಕೂಡಾ ಒಂದು ಪ್ರಮುಖ ಕಾರಣವಾಗಿದೆ.

ಸೆಕೆಂಡ್‌ ಹ್ಯಾಂಡ್‌ ಕಾರಿನ ಮಾರಾಟ ಪ್ರಮಾಣವು ಕೋವಿಡ್ ಪರಿಣಾಮದಿಂದ ದ್ವಿಗುಣ!

ಈಗಾಗಲೇ ಹೊಸ ಕಾರು ಖರೀದಿಸಿ ಕೆಲ ವರ್ಷ ಬಳಕೆ ಮಾಡಿರುವ ಗ್ರಾಹಕರು ಗುಜುರಿ ನೀತಿ ಅಡಿಯಲ್ಲಿ ಬರುವ ಮುನ್ನವೇ ಉತ್ತಮ ದರದಲ್ಲಿ ಮರುಮಾರಾಟ ಹೊಸ ವಾಹನಗಳಿಗೆ ಅಪ್‌ಡೆಟ್ ಆಗುತ್ತಿರುವುದು ಕೂಡಾ ಸೆಕೆಂಡ್ ಹ್ಯಾಂಡ್ ವಾಹನ ಉದ್ಯಮ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ ಎನ್ನಬಹುದು.

ಸೆಕೆಂಡ್‌ ಹ್ಯಾಂಡ್‌ ಕಾರಿನ ಮಾರಾಟ ಪ್ರಮಾಣವು ಕೋವಿಡ್ ಪರಿಣಾಮದಿಂದ ದ್ವಿಗುಣ!

ಸೆಕೆಂಡ್ ಹ್ಯಾಂಡ್ ವಾಹನಗಳಿಗೆ ಮಹಾನಗರಗಳಿಂತಲೂ ಹೆಚ್ಚು ಟೈರ್ 2 ಮತ್ತು ಟೈರ್ 3 ಹಂತದ ನಗರಗಳಲ್ಲಿ ಹೆಚ್ಚಿನ ಮಟ್ಟದ ಬೇಡಿಕೆ ಕಂಡುಬರುತ್ತಿದ್ದು, ಹಳೆಯ ವಾಹನಗಳು ಇದೀಗ ಟೈರ್ 2 ಹಂತದ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳುತ್ತಿವೆ.

ಸೆಕೆಂಡ್‌ ಹ್ಯಾಂಡ್‌ ಕಾರಿನ ಮಾರಾಟ ಪ್ರಮಾಣವು ಕೋವಿಡ್ ಪರಿಣಾಮದಿಂದ ದ್ವಿಗುಣ!

ಇದೇ ಪ್ರಮುಖ ಕಾರು ತಯಾರಕ ಕಂಪನಿಗಳು ಸೆಕೆಂಡ್ ಹ್ಯಾಂಡ್ ವಾಹನ ಮಾರಾಟ ಉದ್ಯಮದಲ್ಲಿ ಬೆಳವಣಿಗೆ ಕಂಡು ತಮ್ಮದೆ ಆದ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಸೆಕೆಂಡ್ ಹ್ಯಾಂಡ್ ವಾಹನ ಮಾರಾಟ ಆರಂಭಿಸಿದ್ದು, ಬಹುತೇಕ ಕಾರು ಕಂಪನಿಯು ತಮ್ಮದೇ ಸೆಕೆಂಡ್ ಹ್ಯಾಂಡ್ ಸಹಭಾಗಿತ್ವ ಕಂಪನಿಗಳನ್ನು ತೆರೆದಿವೆ.

ಸೆಕೆಂಡ್‌ ಹ್ಯಾಂಡ್‌ ಕಾರಿನ ಮಾರಾಟ ಪ್ರಮಾಣವು ಕೋವಿಡ್ ಪರಿಣಾಮದಿಂದ ದ್ವಿಗುಣ!

ಮಹೀಂದ್ರಾ ಕಂಪನಿಯ ಫಸ್ಟ್ ಚಾಯ್ಸ್, ಮಾರುತಿ ಸುಜುಕಿ ಕಂಪನಿಯ ಟ್ರೂ ವ್ಯಾಲ್ಯೂ, ಫೋಕ್ಸ್‌ವ್ಯಾಗನ್ ಕಂಪನಿಯ ದಾಸ್ ವೆಲ್ಟ್ ಆಟೋ, ಹ್ಯುಂಡೈ ಕಂಪನಿ ಹೈ ಪ್ರಾಮಿಸ್ ಸೇರಿದಂತೆ ಪ್ರಮುಖ ಕಾರು ಕಂಪನಿಗಳು ಪ್ರತ್ಯೇಕ ಸೆಕೆಂಡ್ ಹ್ಯಾಂಡ್ ಪ್ಲ್ಯಾಟ್‌ಫಾರ್ಮ್ ಹೊಂದಿವೆ.

ಸೆಕೆಂಡ್‌ ಹ್ಯಾಂಡ್‌ ಕಾರಿನ ಮಾರಾಟ ಪ್ರಮಾಣವು ಕೋವಿಡ್ ಪರಿಣಾಮದಿಂದ ದ್ವಿಗುಣ!

ಅಸಂಘಟಿತವಾಗಿ ಕಾರ್ಯನಿರ್ವಹಿಸುತ್ತಿರುವ ಸೆಕೆಂಡ್ ಹ್ಯಾಂಡ್ ಕಾರು ಮಾರಾಟವನ್ನು ವ್ಯವಸ್ಥಿತವಾಗಿ ಮಾರಾಟಗೊಳಿಸುವ ಗುರಿ ಯೋಜನೆ ಹೊಂದಿರುವ ಪ್ರಮುಖ ಕಾರು ಕಂಪನಿಗಳು ಹೊಸ ಉದ್ಯಮದ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಿವೆ.

ಸೆಕೆಂಡ್‌ ಹ್ಯಾಂಡ್‌ ಕಾರಿನ ಮಾರಾಟ ಪ್ರಮಾಣವು ಕೋವಿಡ್ ಪರಿಣಾಮದಿಂದ ದ್ವಿಗುಣ!

ಅಸಂಘಟಿತವಾಗಿರುವ ಸ್ಥಳೀಯ ವ್ಯಾಪಾರಿಗಳ ಬಳಿ ಸೆಕೆಂಡ್ ಹ್ಯಾಂಡ್ ವಾಹನ ಖರೀದಿಯು ಕೆಲವು ಸಂದರ್ಭಗಳಲ್ಲಿ ಲಾಭಕ್ಕಿಂತ ಹೆಚ್ಚು ನಷ್ಟ ಅನುಭವಿಸಬೇಕಾದ ಸಂದರ್ಭಗಳು ಎದುರಾಗಬಹುದಾಗಿದ್ದು, ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳ ಗ್ರಾಹಕರ ವಿಶ್ವಾಸ ಗಳಿಸುತ್ತಿವೆ.

ಸೆಕೆಂಡ್‌ ಹ್ಯಾಂಡ್‌ ಕಾರಿನ ಮಾರಾಟ ಪ್ರಮಾಣವು ಕೋವಿಡ್ ಪರಿಣಾಮದಿಂದ ದ್ವಿಗುಣ!

ಜೊತೆಗೆ ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಮಳಿಗೆಗಳಲ್ಲಿ ಖರೀದಿಸುವ ವಾಹನಗಳಿಗೆ ಹೆಚ್ಚುವರಿಯಾಗಿ ವಾರಂಟಿ ಸಹ ದೊರೆಯಲಿದ್ದು, ಮೋಸ ವ್ಯವಹಾರಗಳಿಗೆ ಇಲ್ಲಿ ಅವಕಾಶವಿರುವುದಿಲ್ಲ.

Most Read Articles

Kannada
English summary
Indian used car market to grow 15 percent by fy 2022
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X