ವಾಹನ ಸವಾರರೇ ಎಚ್ಚರ: ಟ್ರಾಫಿಕ್ ನಿಯಮ ಉಲ್ಲಂಘಿಸಿದಂತೆಲ್ಲಾ ಹೆಚ್ಚಾಗಲಿದೆ ಇನ್ಸ್ಯೂರೆನ್ಸ್ ಪ್ರೀಮಿಯಂ ಮೊತ್ತ

ವಿಮಾ ನಿಯಂತ್ರಣ ಪ್ರಾಧಿಕಾರವು ರಚಿಸಿರುವ ತಂಡವು ಸ್ವಂತ ಹಾನಿ, ಥರ್ಡ್ ಪಾರ್ಟಿ ಹಾಗೂ ಇತರ ರೀತಿಯ ಮೋಟಾರು ವಿಮಾ ಕಂತುಗಳ ಜೊತೆಗೆ ಹೊಸದಾಗಿ ಸಂಚಾರ ಉಲ್ಲಂಘನೆ ಪ್ರೀಮಿಯಂಗಳನ್ನು ಸಹ ಸೇರಿಸಲು ಸೂಚಿಸಿದೆ.

ವಾಹನ ಸವಾರರೇ ಎಚ್ಚರ: ಟ್ರಾಫಿಕ್ ನಿಯಮ ಉಲ್ಲಂಘಿಸಿದಂತೆಲ್ಲಾ ಹೆಚ್ಚಾಗಲಿದೆ ಇನ್ಸ್ಯೂರೆನ್ಸ್ ಪ್ರೀಮಿಯಂ ಮೊತ್ತ

ಸಂಚಾರ ನಿಯಮ ಉಲ್ಲಂಘನೆಗಳ ಪ್ರೀಮಿಯಂ ಅನ್ನು ಐದನೇ ವಿಭಾಗವಾಗಿ ಸೇರಿಸಲು ಈ ತಂಡವು ಶಿಫಾರಸು ಮಾಡಿದೆ. ವಾಹನ ಹಾನಿ ವಿಮೆ, ಮೂಲ ತೃತೀಯ ವಿಮೆ, ಹೆಚ್ಚುವರಿ ತೃತೀಯ ವಿಮೆ ಹಾಗೂ ಕಡ್ಡಾಯ ವೈಯಕ್ತಿಕ ಅಪಘಾತ ವಿಮೆ ಪ್ರೀಮಿಯಂನಲ್ಲಿರುವ ನಾಲ್ಕು ವಿಭಾಗಗಳಾಗಿವೆ. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಹೊಸ ವಿಮೆಯ ಮಾನ್ಯತೆಗಾಗಿ ಕರಡನ್ನು ಬಿಡುಗಡೆಗೊಳಿಸಿದೆ.

ವಾಹನ ಸವಾರರೇ ಎಚ್ಚರ: ಟ್ರಾಫಿಕ್ ನಿಯಮ ಉಲ್ಲಂಘಿಸಿದಂತೆಲ್ಲಾ ಹೆಚ್ಚಾಗಲಿದೆ ಇನ್ಸ್ಯೂರೆನ್ಸ್ ಪ್ರೀಮಿಯಂ ಮೊತ್ತ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಆರ್‌ಡಿಎಐ, ಈ ಪ್ರೀಮಿಯಂ ಸ್ವಂತ ಹಾನಿ ಹಾಗೂ ಥರ್ಡ್ ಪಾರ್ಟಿ ವಿಭಾಗಗಳಿಗೆ ಅನ್ವಯಿಸುತ್ತದೆ. ಮೋಟಾರ್ ವಿಮಾ ರಕ್ಷಣೆಯ ಯಾವುದೇ ಭಾಗಕ್ಕೆ ಅನ್ವಯಿಸುತ್ತದೆ. ಮುಖ್ಯವಾಗಿ ಸ್ವಂತ ಹಾನಿ ಅಥವಾ ಮೂರನೇ ವ್ಯಕ್ತಿಯ ವಿಮೆಯನ್ನು ಖರೀದಿಸಬಹುದು ಎಂದು ಹೇಳಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವಾಹನ ಸವಾರರೇ ಎಚ್ಚರ: ಟ್ರಾಫಿಕ್ ನಿಯಮ ಉಲ್ಲಂಘಿಸಿದಂತೆಲ್ಲಾ ಹೆಚ್ಚಾಗಲಿದೆ ಇನ್ಸ್ಯೂರೆನ್ಸ್ ಪ್ರೀಮಿಯಂ ಮೊತ್ತ

ಈ ಸಂಬಂಧ ಐಆರ್‌ಡಿಎಐ ಫೆಬ್ರವರಿ 1ರವರೆಗೆ ಎಲ್ಲಾ ಸ್ಟಾಕ್ ಹೊಲ್ಡರ್'ಗಳ ಅಭಿಪ್ರಾಯವನ್ನು ಕೋರಿದೆ. ಈ ವರದಿಯಲ್ಲಿ ಎಷ್ಟು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಲಾಗುತ್ತದೆ ಎಂಬುದರ ಆಧಾರದ ಮೇಲೆ ಪ್ರೀಮಿಯಂ ಮೊತ್ತವನ್ನು ನಿಗದಿಪಡಿಸುವ ವ್ಯವಸ್ಥೆಯನ್ನು ಶಿಫಾರಸು ಮಾಡಲಾಗಿದೆ.

ವಾಹನ ಸವಾರರೇ ಎಚ್ಚರ: ಟ್ರಾಫಿಕ್ ನಿಯಮ ಉಲ್ಲಂಘಿಸಿದಂತೆಲ್ಲಾ ಹೆಚ್ಚಾಗಲಿದೆ ಇನ್ಸ್ಯೂರೆನ್ಸ್ ಪ್ರೀಮಿಯಂ ಮೊತ್ತ

ಟ್ರಾಫಿಕ್ ಉಲ್ಲಂಘನೆಯ ಪ್ರೀಮಿಯಂ ಮೊತ್ತವು ಚಾಲಕರನ್ನು ಅವಲಂಬಿಸಿರುತ್ತದೆ. ಎಷ್ಟು ಬಾರಿ ದಂಡ ಕಟ್ಟಲಾಗಿದೆ ಎಂಬುದರ ಆಧಾರದ ಮೇಲೆ ಪ್ರೀಮಿಯಂ ಮೊತ್ತವನ್ನು ನಿರ್ಧರಿಸಲಾಗುತ್ತದೆ. ವಿಮಾ ಪ್ರೀಮಿಯಂನೊಂದಿಗೆ ಸಂಚಾರ ಉಲ್ಲಂಘನೆಯನ್ನು ಲಿಂಕ್ ಮಾಡುವಂತೆ ಸೂಚಿಸಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ವಾಹನ ಸವಾರರೇ ಎಚ್ಚರ: ಟ್ರಾಫಿಕ್ ನಿಯಮ ಉಲ್ಲಂಘಿಸಿದಂತೆಲ್ಲಾ ಹೆಚ್ಚಾಗಲಿದೆ ಇನ್ಸ್ಯೂರೆನ್ಸ್ ಪ್ರೀಮಿಯಂ ಮೊತ್ತ

ಯಾವ ಯಾವ ಉಲ್ಲಂಘನೆಗಳಿಗೆ ಎಷ್ಟು ಅಂಕ ನೀಡಬೇಕು ಎಂಬ ಪಟ್ಟಿಯನ್ನು ಈ ತಂಡವು ಒದಗಿಸಿದೆ. ಈ ಪಟ್ಟಿಯ ಅನ್ವಯ ಕುಡಿದು ವಾಹನ ಚಲಾಯಿಸಿದರೆ 100 ಅಂಕ ದಂಡ, ತಪ್ಪಾದ ಸ್ಥಳದಲ್ಲಿ ಪಾರ್ಕಿಂಗ್ ಮಾಡಿದರೆ 10 ಅಂಕ ದಂಡ ವಿಧಿಸಲಾಗುತ್ತದೆ.

ವಾಹನ ಸವಾರರೇ ಎಚ್ಚರ: ಟ್ರಾಫಿಕ್ ನಿಯಮ ಉಲ್ಲಂಘಿಸಿದಂತೆಲ್ಲಾ ಹೆಚ್ಚಾಗಲಿದೆ ಇನ್ಸ್ಯೂರೆನ್ಸ್ ಪ್ರೀಮಿಯಂ ಮೊತ್ತ

ಮೋಟಾರು ವಿಮಾ ಖರೀದಿದಾರರು ಯಾವುದೇ ರೀತಿಯ ಮೋಟಾರು ವಿಮೆ, ಸ್ವಂತ ಹಾನಿ ಅಥವಾ ಥರ್ಡ್ ಪಾರ್ಟಿ ವಿಮೆಗಾಗಿ ಯಾವುದೇ ವಿಮಾದಾರರನ್ನು ಸಂಪರ್ಕಿಸಿದಾಗ ಆತನ ಸಂಚಾರ ಉಲ್ಲಂಘನೆ ಅಂಕಗಳು ಹಾಗೂ ಸಂಚಾರ ಉಲ್ಲಂಘನೆಯ ಪ್ರಮಾಣವನ್ನು ಲೆಕ್ಕ ಹಾಕಲಾಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವಾಹನ ಸವಾರರೇ ಎಚ್ಚರ: ಟ್ರಾಫಿಕ್ ನಿಯಮ ಉಲ್ಲಂಘಿಸಿದಂತೆಲ್ಲಾ ಹೆಚ್ಚಾಗಲಿದೆ ಇನ್ಸ್ಯೂರೆನ್ಸ್ ಪ್ರೀಮಿಯಂ ಮೊತ್ತ

ಇದರ ಆಧಾರದ ಮೇಲೆ ವಿಮಾ ಖರೀದಿದಾರನು ವಿಮೆಯ ಪ್ರೀಮಿಯಂ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇದರಿಂದಾಗಿ ಇನ್ನು ಮುಂದೆ ಯಾವುದೇ ವಾಹನಗಳ ಮೇಲಿರುವ ಸಂಚಾರ ಉಲ್ಲಂಘನೆಯ ಪ್ರಮಾಣವು ಸ್ಪಷ್ಟವಾಗಿ ಕಂಡು ಬರಲಿದೆ ಎಂದು ಹೇಳಲಾಗಿದೆ.

ವಾಹನ ಸವಾರರೇ ಎಚ್ಚರ: ಟ್ರಾಫಿಕ್ ನಿಯಮ ಉಲ್ಲಂಘಿಸಿದಂತೆಲ್ಲಾ ಹೆಚ್ಚಾಗಲಿದೆ ಇನ್ಸ್ಯೂರೆನ್ಸ್ ಪ್ರೀಮಿಯಂ ಮೊತ್ತ

ವಾಹನ ಮಾರಾಟದ ನಂತರ ವಾಹನ ವಿಮೆಯನ್ನು ವರ್ಗಾವಣೆ ಮಾಡಿದರೆ, ಟ್ರಾಫಿಕ್ ಉಲ್ಲಂಘನೆಯ ಪ್ರೀಮಿಯಂ ವಾಹನ ಮಾಲೀಕತ್ವದ ವರ್ಗಾವಣೆಯ ದಿನಾಂಕದಿಂದ ಆರಂಭವಾಗುತ್ತದೆ. ವಾಹನ ಮಾಲೀಕತ್ವ ವರ್ಗಾವಣೆಯ ನಂತರ ಉಂಟಾಗುವ ಸಂಚಾರ ಉಲ್ಲಂಘನೆಯನ್ನು ಅವಲಂಬಿಸಿರುತ್ತದೆ.

Most Read Articles

Kannada
English summary
IRDAI to implement traffic violation premium in vehicle insurance. Read in Kannada.
Story first published: Friday, January 22, 2021, 19:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X