ಕೋವಿಡ್ ಹಿನ್ನಲೆಯಲ್ಲಿ ವಾರಂಟಿ ಅವಧಿಯನ್ನು ವಿಸ್ತರಿಸಿದ ಇಸುಝು

ಇಸುಝು ಕಂಪನಿಯು ಕೋವಿಡ್ ಪರಿಣಾಮ ತನ್ನ ಗ್ರಾಹಕರಿಗೆ ಹೆಚ್ಚುವರಿ ವಾರಂಟಿ ಆಫರ್ ಘೋಷಿಸಿದ್ದು, ಏಪ್ರಿಲ್ ಮತ್ತು ಮೇ ಅವಧಿಯಲ್ಲಿ ಕೊನೆಗೊಂಡಿರುವ ವಾರಂಟಿ ಅವಧಿಯನ್ನು ಮುಂದಿನ ಜುಲೈ ಅಂತ್ಯದ ತನಕ ವಿಸ್ತರಿಸಿದೆ.

ಕೋವಿಡ್ ಹಿನ್ನಲೆಯಲ್ಲಿ ವಾರಂಟಿ ಅವಧಿಯನ್ನು ವಿಸ್ತರಿಸಿದ ಇಸುಝು

ಕೋವಿಡ್ 2ನೇ ಅಲೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಹೊಸ ವಾಹನ ಮಾರಾಟಕ್ಕೆ ಕೆಲವು ಕಡೆಗಳಲ್ಲಿ ಷರತ್ತು ಬದ್ದ ಅವಕಾಶಗಳಿದ್ದರೂ ಗ್ರಾಹಕರ ಸೇವೆಗಳು ಆಟೋ ಉತ್ಪಾದನಾ ಕಂಪನಿಗಳಿಗೆ ಸವಾಲಾಗಿ ಪರಿಣಮಿಸಿವೆ. ಇದರಿಂದ ಲಾಕ್‌ಡೌನ್ ಅವಧಿಯಲ್ಲಿ ನಿಗದಿತ ಅವಧಿಯ ಸೇವೆಗಳನ್ನು ಪಡೆದುಕೊಳ್ಳಬೇಕಿದ್ದ ವಾಹನಗಳ ವಾರಂಟಿ ಅವಧಿಯು ಇಸುಝು ಕಂಪನಿಯು ಎರಡು ತಿಂಗಳಿಗಳಿಗೆ ಹೆಚ್ಚಿಸಿದೆ.

ಕೋವಿಡ್ ಹಿನ್ನಲೆಯಲ್ಲಿ ವಾರಂಟಿ ಅವಧಿಯನ್ನು ವಿಸ್ತರಿಸಿದ ಇಸುಝು

ಲಾಕ್‌ಡೌನ್ ಸಂದರ್ಭದಲ್ಲಿ ಸ್ಟ್ಯಾಂಡರ್ಡ್ ವಾರಂಟಿ ಸೇವೆಗಳ ಪೂರೈಕೆಯು ಹೊಸ ಸವಾಲಾಗುತ್ತಿದ್ದು, ಗ್ರಾಹಕರು ಮನೆಯಿಂದ ವಾಹನಗಳನ್ನು ಹೊರತೆಗೆಯುವಂತಿಲ್ಲ. ಇದರಿಂದ ಪರಿಸ್ಥಿತಿ ಅನುಗುಣವಾಗಿ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ತಮ್ಮ ವಾಹನಗಳ ವಾರಂಟಿ ಅವಧಿಯನ್ನು ಹೆಚ್ಚಿಸಿವೆ.

ಕೋವಿಡ್ ಹಿನ್ನಲೆಯಲ್ಲಿ ವಾರಂಟಿ ಅವಧಿಯನ್ನು ವಿಸ್ತರಿಸಿದ ಇಸುಝು

ಇಸುಝು ಕಂಪನಿಯು ತನ್ನ ಪ್ರಮುಖ ಪಿಕ್ಅಪ್ ಮತ್ತು ಕಾರುಗಳ ಸ್ಟ್ಯಾಂಡರ್ಡ್ ವಾರಂಟಿ, ಪಾವತಿ ಮಾಡಲಾದ ವಾರಂಟಿ, ಆಫರ್‌ಗಳ ಅಡಿಯಲ್ಲಿ ನೀಡಲಾಗಿರುವ ಹೆಚ್ಚುವರಿ ವಾರಂಟಿಗಳನ್ನು ಜುಲೈ 31ರ ತನಕ ವಿಸ್ತರಿಸಲಾಗಿದ್ದು, ವಾರಂಟಿ ಅವಧಿ ವಿಸ್ತರಣೆಯಿಂದಾಗಿ ಗ್ರಾಹಕರ ಸೇವೆಗಳನ್ನು ಹೊಸ ಸುರಕ್ಷಾ ಮಾರ್ಗಸೂಚಿಗಳೊಂದಿಗೆ ಪೂರ್ಣಗೊಳಿಸಲು ಸಹಕಾರಿಯಾಗಲಿದೆ.

ಕೋವಿಡ್ ಹಿನ್ನಲೆಯಲ್ಲಿ ವಾರಂಟಿ ಅವಧಿಯನ್ನು ವಿಸ್ತರಿಸಿದ ಇಸುಝು

ವಿಸ್ತರಿತ ವಾರಂಟಿ ಅವಧಿಯಿಂದಾಗಿ ಗ್ರಾಹಕರು ಮುಂದಿನ ದಿನಗಳಲ್ಲಿ ಪರಿಸ್ಥಿತಿ ತುಸು ಸುಧಾರಣೆಗೊಂಡ ನಂತರ ಸ್ಟ್ಯಾಂಡರ್ಡ್ ಕಾರ್ ಸರ್ವಿಸ್‌ಗಳನ್ನು ಪಡೆದುಕೊಳ್ಳಬಹುದಾಗಿದ್ದು, ಸುರಕ್ಷತೆಯ ದೃಷ್ಠಿಯಿಂದ ವಾಹನಗಳ ಖರೀದಿ ಮತ್ತು ಗ್ರಾಹಕರ ಸೇವಾ ಮಾಹಿತಿಗಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಕೋವಿಡ್ ಹಿನ್ನಲೆಯಲ್ಲಿ ವಾರಂಟಿ ಅವಧಿಯನ್ನು ವಿಸ್ತರಿಸಿದ ಇಸುಝು

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಪ್ಯಾಸೆಂಜರ್ ಕಾರು ವಿಭಾಗದಲ್ಲಿ ಇಸುಝು ಕಂಪನಿಯು ಎಂಯುಎಕ್ಸ್, ಡಿ-ಮ್ಯಾಕ್ಸ್ ವಿ-ಕ್ರಾಸ್ ಮತ್ತು ಹೈ ಲ್ಯಾಂಡರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಇತ್ತೀಚೆಗೆ ಕಂಪನಿಯು ಎಂಯುಎಕ್ಸ್, ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾದರಿಗಳ ಬಿಎಸ್-6 ಮಾದರಿಗಳ ಮಾರಾಟಕ್ಕೆ ಚಾಲನೆ ನೀಡಿದೆ.

MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ಕೋವಿಡ್ ಹಿನ್ನಲೆಯಲ್ಲಿ ವಾರಂಟಿ ಅವಧಿಯನ್ನು ವಿಸ್ತರಿಸಿದ ಇಸುಝು

ಹೊಸ ಡಿ-ಕ್ರಾಸ್ ವಿ-ಕ್ರಾಸ್ ಲೈಫ್‌ಸ್ಟೈಲ್ ಪಿಕ್‌ಅಪ್ ಎಸ್‌ಯುವಿ ಮಾದರಿಯು ಹಳೆಯ ಆವೃತ್ತಿಗಿಂತಲೂ ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ವಿನೂತನ ಹೈ-ಲ್ಯಾಂಡರ್ ಬೆಸ್ ವೆರಿಯೆಂಟ್‌ನೊಂದಿಗೆ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಾಗಿದೆ.

ಕೋವಿಡ್ ಹಿನ್ನಲೆಯಲ್ಲಿ ವಾರಂಟಿ ಅವಧಿಯನ್ನು ವಿಸ್ತರಿಸಿದ ಇಸುಝು

ಹೈ-ಲ್ಯಾಂಡರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 16.98 ಲಕ್ಷ ಬೆಲೆ ಹೊಂದಿದ್ದರೆ, ಜೆಡ್ ಸೀರಿಸ್ ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ರೂ. 19.98 ಲಕ್ಷದಿಂದ ರೂ.24.49 ಲಕ್ಷ ಬೆಲೆ ಹೊಂದಿವೆ.

MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ಕೋವಿಡ್ ಹಿನ್ನಲೆಯಲ್ಲಿ ವಾರಂಟಿ ಅವಧಿಯನ್ನು ವಿಸ್ತರಿಸಿದ ಇಸುಝು

ಹೊಸ ಎಮಿಷನ್‌ನೊಂದಿಗೆ ಹೊಸ ಕಾರು ಮಾದರಿಗಳ ಎಂಜಿನ್ ಆಯ್ಕೆಯಲ್ಲಿ ಹೊಸ ಬದಲಾವಣೆ ಪರಿಚಯಿಸಿರುವ ಇಸುಝು ಕಂಪನಿಯು ಎಂಯು-ಎಕ್ಸ್ ಮಾದರಿಯಲ್ಲಿ 4x2 ಆಟೋಮ್ಯಾಟಿಕ್ ಮತ್ತು 4x4 ಆಟೋಮ್ಯಾಟಿಕ್ ಮಾದರಿಗಳೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 33.23 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 35.19 ಲಕ್ಷ ಬೆಲೆ ಹೊಂದಿದೆ.

More from DriveSpark

Article Published On: Friday, June 4, 2021, 15:48 [IST]
English summary
Isuzu Extends Warranty & Free Service Period In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+