ಹೈ ಲ್ಯಾಂಡರ್ ವೆರಿಯೆಂಟ್ ಪಡೆದುಕೊಳ್ಳಲಿದೆ 2021ರ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್
ಇಸುಝು ಇಂಡಿಯಾ ಕಂಪನಿಯು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಹೊಸ ಆವೃತ್ತಿಯನ್ನು ಇದೇ ತಿಂಗಳಾಂತ್ಯಕ್ಕೆ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿನ ಆವೃತ್ತಿಗಿಂತಲೂ ಹಲವಾರು ಹೊಸ ಬದಲಾವಣೆ ಪಡೆದುಕೊಳ್ಳಲಿದೆ.

ಆಟೋ ಉದ್ಯಮದಲ್ಲಿನ ಏರಿಳಿತದಿಂದಾಗಿ ಬಿಎಸ್-6 ಡಿ-ಕ್ರಾಸ್ ವಿ-ಕ್ರಾಸ್ ಲೈಫ್‌ಸ್ಟೈಲ್ ಪಿಕ್‌ಅಪ್ ಟ್ರಕ್ ಮಾದರಿಯ ಬಿಡುಗಡೆಯನ್ನು ಮುಂದೂಡಿಕೆ ಮಾಡುತ್ತಾ ಬಂದಿದ್ದ ಇಸುಝು ಕಂಪನಿಯ ಇದೀಗ ಬಿಡುಗಡೆಗಾಗಿ ಸಿದ್ದಗೊಳ್ಳುತ್ತಿದ್ದು, ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ಉತ್ಪಾದನಾ ಮಾದರಿಯ ಟೀಸರ್ ಚಿತ್ರವನ್ನು ಸಹ ಹಂಚಿಕೊಂಡಿದೆ.

2020ರ ಏಪ್ರಿಲ್ 1ರಿಂದ ಜಾರಿಗೆ ಬಂದ ಹೊಸ ಎಮಿಷನ್‌ಗೆ ಅನುಗುಣವಾಗಿ ಎಂಜಿನ್ ಹೊಂದಿರುವ ವಿ-ಕ್ರಾಸ್ ಪಿಕ್‌ಅಪ್ ಎಸ್‌ಯುವಿ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಸ್ಟ್ಯಾಂಡರ್ಡ್, ಹೈ ಜೆಡ್, ಜೆಡ್ ಪ್ರೆಸ್ಟಿಸ್ ಮಾದರಿಗಳೊಂದಿಗೆ ಹೊಸದಾಗಿ ಹೈ ಲ್ಯಾಂಡರ್ ಮಾದರಿಯನ್ನು ಪರಿಚಯಿಸಲಾಗುತ್ತಿದೆ.

ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾದರಿಯು ಸದ್ಯ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪೂರ್ಣಗೊಳಿಸುತ್ತಿದ್ದು, ಹೊಸ ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಮಾದರಿಯನ್ನು ಆಟೋಮ್ಯಾಟಿಕ್ ಎಂಜಿನ್ ಆಯ್ಕೆಯೊಂದಿಗೆ ವಿನ್ಯಾಸದಲ್ಲೂ ಸಾಕಷ್ಟು ಹೊಸ ಬದಲಾವಣೆಗಳನ್ನು ತಂದಿದೆ.

ಹೊಸ ಪಿಕ್ಅಪ್ ಎಸ್‌ಯುವಿಯ ಒಳಭಾಗದಲ್ಲಿನ ಬದಲಾದ ತಾಂತ್ರಿಕ ಅಂಶಗಳ ಕುರಿತಾಗಿ ಅಷ್ಟಾಗಿ ಲಭ್ಯವಾಗಿಲ್ಲವಾದರೂ ಹೊರಭಾಗದಲ್ಲಿನ ವಿನ್ಯಾಸದಲ್ಲಿ ಕೆಲವು ಪ್ರಮುಖ ಬದಲಾವಣೆ ಪರಿಚಯಿಸಲಾಗಿದ್ದು, ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ಟೈಲ್‌ಗೆಟ್ ವಿಭಾಗವನ್ನು ಬದಲಾವಣೆಯಾಗಿರುವುದು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿದೆ.

ಬಿಎಸ್-6 ವಿ-ಕ್ರಾಸ್ ಮಾದರಿಯು ಈ ಬಾರಿ ಬಿಎಸ್-4 ಮಾದರಿಯೆಂತೆ ಎರಡು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಾಗಲಿದ್ದು, ಗ್ರಾಹಕರ ತಮ್ಮ ಬೇಡಿಕೆಗೆ ಅನುಗುಣವಾಗಿ 1.9-ಲೀಟರ್ ಡೀಸೆಲ್ ಮತ್ತು 2.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಆಯ್ಕೆ ಮಾಡಬಹುದಾಗಿದೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಇದರಲ್ಲಿ 1.9-ಲೀಟರ್ ಡೀಸೆಲ್ ಮಾದರಿಯೇ ಟಾಪ್ ಎಂಡ್ ಮಾದರಿಯಾಗಿ ಮಾರಾಟವಾಗಲಿದ್ದು, 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 148-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

2.5-ಲೀಟರ್ ಡೀಸೆಲ್ ಮಾದರಿಯು 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 135-ಬಿಎಚ್‌ಪಿ ಮತ್ತು 320-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಎರಡು ಮಾದರಿಗಳಲ್ಲೂ 4x4 ಡ್ರೈವ್ ಟೆಕ್ನಾಲಜಿ ಬಳಕೆ ಮಾಡಲಾಗಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ಎಂಜಿನ್‌ನಿಂದಾಗಿ ಪಿಕ್‌ಅಪ್ ಎಸ್‌ಯುವಿ ಬೆಲೆಯಲ್ಲೂ ತುಸು ದುಬಾರಿಯಾಗಲಿದ್ದು, ಬಿಎಸ್ 4 ಮಾದರಿಗಿಂತಲೂ ತುಸು ದುಬಾರಿಯಾಗಲಿರುವ ಹೊಸ ಪಿಕ್ಅಪ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 18 ಲಕ್ಷದಿಂದ ರೂ. 21 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.


Click it and Unblock the Notifications








