ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಹಾಗೂ ಹೈ-ಲ್ಯಾಂಡರ್ ಪಿಕ್ಅಪ್ ಮಾದರಿಗಳ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ
ಇಸುಝು ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಮಾದರಿಯನ್ನು ಕಳೆದ ವಾರವಷ್ಟೇ ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಪಿಕ್ಅಪ್ ಮಾದರಿಯು ಹೈ ಲ್ಯಾಂಡರ್ ಆವೃತ್ತಿ ಸೇರಿದಂತೆ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಹೊಸ ಡಿ-ಕ್ರಾಸ್ ವಿ-ಕ್ರಾಸ್ ಲೈಫ್‌ಸ್ಟೈಲ್ ಪಿಕ್‌ಅಪ್ ಟ್ರಕ್ ಮಾದರಿಯು ಹಳೆಯ ಆವೃತ್ತಿಗಿಂತಲೂ ಹಲವಾರು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಗೊಂಡಿದ್ದು, ಹೊಸ ಡಿ-ಕ್ರಾಸ್ ವಿ-ಕ್ರಾಸ್ ಪಿಕ್‌ಅಪ್ ಎಸ್‌ಯುವಿ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಹೊಸದಾಗಿ ಹೈ-ಲ್ಯಾಂಡರ್ ವೆರಿಯೆಂಟ್‌ನೊಂದಿಗೆ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಬೆಲೆಗಳಿಗೆ ಅನುಗುಣವಾಗಿ ಹೊಸ ಪಿಕ್ಅಪ್ ಮಾದರಿಯು ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ಆಸಕ್ತ ಗ್ರಾಹಕರಿಗೆ ಕಂಪನಿಯು ಹೆಚ್ಚುವರಿ ದರ ಒಳಗೊಂಡ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದೆ.

ಇಸುಝು ಡಿ-ಕ್ರಾಸ್ ವಿ-ಕ್ರಾಸ್ ಪಿಕ್ಅಪ್ ಮಾದರಿಯಲ್ಲಿ ಆರಂಭಿಕ ಮಾದರಿಯಾದ ಹೈ-ಲ್ಯಾಂಡರ್ ಆವೃತ್ತಿಯು ಎಕ್ಸ್‌ಶೋರೂಂ ಪ್ರಕಾರ ರೂ. 16.98 ಲಕ್ಷ ಬೆಲೆ ಹೊಂದಿದ್ದರೆ, ಹೈ ಎಂಡ್ ಮಾದರಿಯಾದ ಜೆಡ್ ಸೀರಿಸ್ ಆವೃತ್ತಿಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 19.98 ಲಕ್ಷದಿಂದ ರೂ.24.49 ಲಕ್ಷ ಬೆಲೆ ಹೊಂದಿವೆ.

ಹೊಸ ವಾಹನದಲ್ಲಿ ಸ್ಟ್ಯಾಂಡರ್ಡ್ ಫೀಚರ್ಸ್ ಹೊರತುಪಡಿಸಿ ವಾಹನದ ಬಲಿಷ್ಠತೆಗೆ ಪೂರಕವಾದ ಮತ್ತಷ್ಟು ಹೊಸ ತಾಂತ್ರಿಕ ಅಂಶಗಳನ್ನು ಪಡೆದುಕೊಳ್ಳಬಹುದಾಗಿದ್ದು, ಆಕ್ಸೆಸರಿಸ್ ಪ್ಯಾಕೇಜ್ ಖರೀದಿ ಬಯಸುವ ಗ್ರಾಹಕರು ಹೆಚ್ಚುವರಿ ದರ ಪಾವತಿ ಮಾಡಬೇಕು.

ಡಿ-ಕ್ರಾಸ್ ವಿ-ಕ್ರಾಸ್ ಕಾರಿನ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಸ್ಟ್ಯಾಂಡರ್ಡ್ ಆಕ್ಸೆಸರಿಸ್‌ಗಳನ್ನು ಹೊರತುಪಡಿಸಿ ವಾಹನದ ಹೊರ ನೋಟಕ್ಕೆ ಪೂರಕವಾದ ಮತ್ತು ಒಳಭಾಗದಲ್ಲಿ ಚಾಲನೆಗೆ ಪೂರಕವಾದ ಸೌಲಭ್ಯಗಳಿದ್ದು, ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಬೆಡ್ ಲೈನರ್ ಓವರ್ ರೋಲ್, ಸ್ಪಾಯ್ಲರ್ ಒಳಗೊಂಡ ಡಿ-ಬಾಕ್ಸ್, ಹಾರ್ಡ್ ಲಿಡ್, ಸ್ಪೋರ್ಟ್ ಬಾರ್, ಪ್ಲೇಟ್ ಕ್ರಿವ್, ಫ್ರಂಟ್ ಬಂಪರ್ ಗಾರ್ಡ್, ಕ್ಯಾನೊಪಿ, ಡೋರ್ ವಿಸರ್, ರಿಯರ್ ಕಾಂಬಿ ಲ್ಯಾಂಪ್ ಗಾರ್ಡ್, ಕಾರ್ಗೊ ನೆಟ್ ಮತ್ತು ಕಾರ್ಗೊ ಬೈಕ್ ಕ್ಯಾರೇಜ್ ಹೊಂದಿದೆ.

ಹೊಸ ಪಿಕ್ಅಪ್ ವಾಹನದ ಒಳಭಾಗದಲ್ಲಿ ಸೀಟ್ ಕವರ್, ಕಾರ್ಪೆಟ್ ಪ್ಲೋರ್ ಮ್ಯಾಟ್ ಮತ್ತು ಎಮರ್ಜೆನ್ಸಿ ಟೂಲ್ ಸೆಟ್ ನೀಡಿದ್ದು, ಕ್ಯಾನೊಪಿ ಸೌಲಭ್ಯವು ಹೆಚ್ಚುವರಿ ಕ್ಯಾಬಿನ್ ರೂಂ ಬಯಸುವ ಗ್ರಾಹಕರಿಗೆ ಸಹಕಾರಿಯಾಗಿದೆ.

ಇನ್ನು ಡಿ-ಕ್ರಾಸ್ ವಿ-ಕ್ರಾಸ್ ಜೆಡ್ ಸರಣಿಯಲ್ಲಿ ಇಸುಝು ಕಂಪನಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ಜೆಡ್ 2 ವೀಲ್ಹ್ ಡ್ರೈವ್ ಆಟೋಮ್ಯಾಟಿಕ್, ಜೆಡ್ 4 ವೀಲ್ಹ್ ಡ್ರೈವ್ ಮ್ಯಾನುವಲ್ ಮತ್ತು ಜೆಡ್ ಪ್ರೆಸ್ಟಿಜ್ 4 ವೀಲ್ಹ್ ಡ್ರೈವ್ ಆಟೋಮ್ಯಾಟಿಕ್ ಮಾದರಿಗಳನ್ನು ಪರಿಚಯಿಸಲಾಗಿದೆ.

ಹೈ-ಲ್ಯಾಂಡರ್ ಮಾದರಿಯು ಬಿಎಸ್-6 ಇಸುಝು ಡಿ-ಕ್ರಾಸ್ ವಿ-ಕ್ರಾಸ್ ಮಾದರಿಯ ಬೆಸ್ ವೆರಿಯೆಂಟ್ ಆಗಿ ಮಾರಾಟಗೊಳ್ಳಲಿದ್ದು, ಹಲವಾರು ಫೀಚರ್ಸ್ ಮ್ಯಾನುವಲ್ ಕಂಟ್ರೋಲ್ ಹೊಂದಿವೆ. ಪಿಕ್ಅಪ್ ಮಾದರಿಯನ್ನು ಹೊಂದಲು ಬಯುಸುವ ಎಸ್‌ಯುವಿ ಗ್ರಾಹಕರಿಗಾಗಿ ಈ ಮಾದರಿಯನ್ನು ಆಕರ್ಷಕ ಬೆಲೆಯೊಂದಿಗೆ ಬಿಡುಗಡೆ ಮಾಡಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಬೆಸ್ ವೆರಿಯೆಂಟ್ ಸೇರಿದಂತೆ ಜೆಡ್ ಸರಣಿಯಲ್ಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿದ್ದು, ಬಿ-ಎಲ್ಇಡಿ ಪ್ರೊಜೆಕ್ಟರ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲೈಟ್ಸ್, 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಸೇರಿದಂತೆ ಆರಾಮದಾಯಕ ಆಸನ ಸೌಲಭ್ಯ ಜೋಡಿಸಿದೆ.

ಬಿಎಸ್-6 ವಿ-ಕ್ರಾಸ್ ಮಾದರಿಯಲ್ಲಿ ಈ ಹಿಂದಿನ 2.5-ಲೀಟರ್ ಡೀಸೆಲ್ ಮಾದರಿಯನ್ನು ಸ್ಥಗಿತಗೊಳಿಸಲಾಗಿದ್ದು, 1.9-ಲೀಟರ್ 4-ಸಿಲಿಂಡರ್ ಕಾಮನ್ ರೈಲ್ ಡೀಸೆಲ್ ಎಂಜಿನ್ ಅನ್ನು ಮಾತ್ರ ಮಾರಾಟ ಮಾಡುತ್ತಿದೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಹೊಸ ವಾಹನದಲ್ಲಿ ಪ್ರಯಾಣಿಕ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ಸಿ ), ಹಿಲ್ ಸ್ಟಾರ್ಟ್ ಅಸಿಸ್ಟ್ (ಎಚ್‌ಎಎಸ್), ಕ್ರೂಸ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ (ಎಚ್‌ಡಿಸಿ), ಸೈಡ್ ಏರ್‌ಬ್ಯಾಗ್, ರೂಫ್ ಕರ್ಟನ್, 18-ಇಂಚಿನ ಅಲಾಯ್ ವೀಲ್ಹ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಟ್ರಾಸ್‌ಫರ್‌ಕೇಸ್ ಪ್ರೊಟೆಕ್ಟರ್ ಫೀಚರ್ ಗಳನ್ನು ಒಳಗೊಂಡಿದೆ.


Click it and Unblock the Notifications








