ಹಾರುವ ಕಾರಿಗೆ ಸುರಕ್ಷತಾ ಪ್ರಮಾಣ ಪತ್ರ ಪಡೆದ ಸ್ಕೈ ಡ್ರೈವ್ ಕಂಪನಿ

ಪ್ರಪಂಚದಾದ್ಯಂತ ಆಟೋ ಮೊಬೈಲ್ ಉದ್ಯಮದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ. 40, 50 ವರ್ಷಗಳ ಹಿಂದೆ ಹೊಗೆ ಬಿಡದ, ಪೆಟ್ರೋಲ್, ಡೀಸೆಲ್ ಇಲ್ಲದೇ ಚಾಲನೆಯಾಗುವ ವಾಹನಗಳು ಬರುತ್ತವೆ ಎಂದು ಯಾರೂ ಊಹೆ ಮಾಡಿರಲಿಲ್ಲ. ಆದರೆ ಇಂದು ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಮೂಲಕ ಎಲ್ಲವೂ ಸಾಧ್ಯವಾಗಿದೆ.

ಹಾರುವ ಕಾರಿಗೆ ಸುರಕ್ಷತಾ ಪ್ರಮಾಣ ಪತ್ರ ಪಡೆದ ಸ್ಕೈ ಡ್ರೈವ್ ಕಂಪನಿ

ಭವಿಷ್ಯದಲ್ಲಿ ಹಾರುವ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಹಾರುವ ವಾಹನಗಳು ಬಳಕೆಗೆ ಬರುವ ದಿನಗಳು ದೂರವಿಲ್ಲವೆಂದೇ ಹೇಳಬಹುದು. ವಿಶ್ವದಾದ್ಯಂತ ಹಲವಾರು ಕಂಪನಿಗಳು ಹಾರುವ ಕಾರು, ಬೈಕುಗಳನ್ನು ಅಭಿವೃದ್ಧಿಪಡಿಸುತ್ತಿವೆ. ಅಂತಹ ಕಂಪನಿಗಳಲ್ಲಿ ಜಪಾನಿನ ಟೋಕಿಯೊ ಮೂಲದ ಸ್ಕೈ ಡ್ರೈವ್ (SkyDrive) ಎಂಬ ಸ್ಟಾರ್ಟ್‌ಅಪ್ ಕಂಪನಿ ಸಹ ಸೇರಿದೆ.

ಹಾರುವ ಕಾರಿಗೆ ಸುರಕ್ಷತಾ ಪ್ರಮಾಣ ಪತ್ರ ಪಡೆದ ಸ್ಕೈ ಡ್ರೈವ್ ಕಂಪನಿ

ಸ್ಕೈ ಡ್ರೈವ್ ಕಂಪನಿಯು ಈ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳನ್ನು ಆರಂಭಿಸಿದೆ. ಸ್ಕೈ ಡ್ರೈವ್ ಕಂಪನಿಯು ಇತ್ತೀಚೆಗೆ eVTOL (ವರ್ಟಿಕಲ್ ಡಿಪಾರ್ಚರ್ ಮತ್ತು ಲ್ಯಾಂಡಿಂಗ್ ಎಲೆಕ್ಟ್ರಿಕ್ ಪ್ಲೇನ್) ಎಂಬ ಫ್ಲೈಯಿಂಗ್ ಕಾರ್ ಕಾನ್ಸೆಪ್ಟ್ ಅನ್ನು ಬಿಡುಗಡೆಗೊಳಿಸಿದೆ. ಇದೇ ವೇಳೆ ಜಪಾನ್ ಸರ್ಕಾರವು ಈ ಹಾರುವ ಕಾರಿಗೆ ಅನುಮತಿ ನೀಡಿದೆ ಎಂದು ವರದಿಯಾಗಿದೆ. ಇದರಿಂದ ಕಂಪನಿಯು ಈ ಕಾನ್ಸೆಪ್ಟ್ ಆಧಾರದ ಮೇಲೆ ಹಾರುವ ಕಾರುಗಳನ್ನು ಅಭಿವೃದ್ಧಿಪಡಿಸಬಹುದು.

ಹಾರುವ ಕಾರಿಗೆ ಸುರಕ್ಷತಾ ಪ್ರಮಾಣ ಪತ್ರ ಪಡೆದ ಸ್ಕೈ ಡ್ರೈವ್ ಕಂಪನಿ

ವಿಮಾನಗಳು ಅಥವಾ ಹೆಲಿಕಾಪ್ಟರ್‌ಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವರ್ಟಿಕಲ್ ಟೇಕ್‌ಆಫ್ ಹಾಗೂ ಲ್ಯಾಂಡಿಂಗ್ ಅನುಕೂಲಕರವಾಗಿದ್ದು, ಅವುಗಳು ಪಾಯಿಂಟ್ ಟು ಪಾಯಿಂಟ್ ಪ್ರಯಾಣವನ್ನು ಸುಲಭಗೊಳಿಸುತ್ತವೆ. ಬ್ಯಾಟರಿ ಗಾತ್ರ, ವಾಯು ಸಂಚಾರ ನಿಯಂತ್ರಣ ಹಾಗೂ ಇತರ ಮೂಲಸೌಕರ್ಯಗಳು ಅವುಗಳನ್ನು ಕಮರ್ಷಿಯಲ್ ಮಾಡುವಾಗ ಮುಖ್ಯವಾಗುತ್ತವೆ.

ಹಾರುವ ಕಾರಿಗೆ ಸುರಕ್ಷತಾ ಪ್ರಮಾಣ ಪತ್ರ ಪಡೆದ ಸ್ಕೈ ಡ್ರೈವ್ ಕಂಪನಿ

ಸ್ಕೈ ಡ್ರೈವ್ ಕಂಪನಿಯು ಜಪಾನ್‌ನ ಭೂ, ಮೂಲಸೌಕರ್ಯ, ಸಾರಿಗೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ (MLIT) ಸುರಕ್ಷತಾ ಪ್ರಮಾಣ ಪತ್ರವನ್ನು ಪಡೆದಿದೆ. ಈ ಸುರಕ್ಷತಾ ಪ್ರಮಾಣ ಪತ್ರವು ಸ್ಕೈ ಡ್ರೈವ್‌ ಕಂಪನಿಗೆ ಮುಂದಿನ ಹಂತಕ್ಕೆ ಹೋಗಲು ದೊಡ್ಡ ಉತ್ತೇಜನವಾಗಿದೆ. ಕಂಪನಿಯು 2018 ರಲ್ಲಿ ಮೊದಲ ಬಾರಿಗೆ ತನ್ನ ಫ್ಲೈಯಿಂಗ್ ಕಾರ್ ಮೂಲ ಮಾದರಿಯನ್ನು ಪ್ರದರ್ಶಿಸಿತು.

ಹಾರುವ ಕಾರಿಗೆ ಸುರಕ್ಷತಾ ಪ್ರಮಾಣ ಪತ್ರ ಪಡೆದ ಸ್ಕೈ ಡ್ರೈವ್ ಕಂಪನಿ

2018 ರಲ್ಲಿ ಪ್ರದರ್ಶಿಸಿದ ನಂತರ ಮೊದಲ ಯಶಸ್ವಿ ಹಾರಾಟ ಪರೀಕ್ಷೆಯನ್ನು 2020 ರಲ್ಲಿ ನಡೆಸಲಾಯಿತು. ಸ್ಕೈಡ್ರೈವ್ ಫ್ಲೈಯಿಂಗ್ ಕಾರು ಮಾದರಿಯಾದ ನೇಮೆಟ್ ಎಸ್‌ಡಿ 03 ಅನ್ನು ಒಟ್ಟು 8 ಪ್ರೊಪಲ್ಷನ್ ಮೋಟರ್‌ಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಈ ಕಾರು ಪ್ರತಿ ಗಂಟೆಗೆ ಗರಿಷ್ಠ 48 ಕಿ.ಮೀ ವೇಗದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಹಾರುವ ಕಾರಿಗೆ ಸುರಕ್ಷತಾ ಪ್ರಮಾಣ ಪತ್ರ ಪಡೆದ ಸ್ಕೈ ಡ್ರೈವ್ ಕಂಪನಿ

ಸದ್ಯಕ್ಕೆ ಈ ಕಾರ್ ಅನ್ನು ಕೇವಲ 10 ನಿಮಿಷಗಳ ಕಾಲ ಹಾರಾಟ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿ ಕೊಂಡಿರುವ ಸ್ಕೈ ಡ್ರೈವ್ ಕಂಪನಿಯು ಈಗ ಸುರಕ್ಷತಾ ಪ್ರಮಾಣ ಪತ್ರವನ್ನು ಪಡೆದಿದೆ. ಕಂಪನಿಯು ಈ ಕಾರ್ ಅನ್ನು ಈಗ ಹೆಚ್ಚು ಸಮಯ ಹಾರಲು ಸಾಧ್ಯವಾಗುವಂತೆ ನವೀಕರಿಸಲು ನಿರ್ಧರಿಸಿದೆ. ಈ ಹಾರುವ ಕಾರು ಕೇವಲ 30 ಕೆ.ಜಿ ತೂಕವನ್ನು ಹೊಂದಿದೆ.

ಹಾರುವ ಕಾರಿಗೆ ಸುರಕ್ಷತಾ ಪ್ರಮಾಣ ಪತ್ರ ಪಡೆದ ಸ್ಕೈ ಡ್ರೈವ್ ಕಂಪನಿ

ಸ್ಕೈ ಡ್ರೈವ್ ಎಸ್‌ಡಿ 03 ಫ್ಲೈಯಿಂಗ್ ಕಾರ್ ತೆರೆದ ಕ್ಯಾಬಿನ್ ಅನ್ನು ಹೊಂದಿದೆ. ಸದ್ಯ ಒಬ್ಬರೇ ಕುಳಿತು ಈ ವಾಹನವನ್ನು ನಿಯಂತ್ರಿಸಬಹುದಾಗಿದೆ. ಆದರೆ ಭವಿಷ್ಯದಲ್ಲಿ ಹಾರುವ ವಾಹನಗಳು ಹೆಚ್ಚು ಜನರು ಕುಳಿತುಕೊಳ್ಳುವಂತೆ ಸಿದ್ಧವಾಗುವ ಸಾಧ್ಯತೆಗಳಿವೆ. ಟೋಕಿಯೊ ಮೂಲದ ಸ್ಕೈಡ್ರೈವ್ ಕಂಪನಿಯು 2025 ರ ವೇಳೆಗೆ ಜಪಾನ್‌ನ ಒಸಾಕಾ ಬೇ ಪ್ರದೇಶದಲ್ಲಿ ಟ್ಯಾಕ್ಸಿ ಸೇವೆಯನ್ನು ಒದಗಿಸಲು ಸಜ್ಜಾಗುತ್ತಿದೆ.

ಹಾರುವ ಕಾರಿಗೆ ಸುರಕ್ಷತಾ ಪ್ರಮಾಣ ಪತ್ರ ಪಡೆದ ಸ್ಕೈ ಡ್ರೈವ್ ಕಂಪನಿ

ಕೆಲಸದ ಸ್ಥಳದಲ್ಲಿ ವಿಶೇಷವಾಗಿ ಪರ್ವತ ಪ್ರದೇಶಗಳಲ್ಲಿ ಲಾಜಿಸ್ಟಿಕ್ಸ್ ಅನ್ನು ಸಂಸ್ಕರಿಸಲು ಈ ಉತ್ಪನ್ನವು ಅತ್ಯಗತ್ಯವಾಗಿರುತ್ತದೆ ಎಂದು ಕಂಪನಿ ಹೇಳಿದೆ. ಇದರ ಮಧ್ಯೆ ಸ್ಕೈ ಡ್ರೈವ್ ಕಂಪನಿಯು 2023 ರ ವೇಳೆಗೆ ವೊಲೊಕಾಪ್ಟರ್‌ನಂತಹ ಫ್ಲೈಯಿಂಗ್ ಟ್ಯಾಕ್ಸಿ ಕಂಪನಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದೆ. ಸ್ಕೈ ಡ್ರೈವ್ ಎಸ್‌ಡಿ 03 ಹಾರುವ ಕಾರಿನಲ್ಲಿರುವ ಪ್ರಮುಖ ಅಸುರಕ್ಷಿತ ವೈಶಿಷ್ಟ್ಯವೆಂದರೆ ಅದರ ಓಪನ್ ಕ್ಯಾಬಿನ್.

ಹಾರುವ ಕಾರಿಗೆ ಸುರಕ್ಷತಾ ಪ್ರಮಾಣ ಪತ್ರ ಪಡೆದ ಸ್ಕೈ ಡ್ರೈವ್ ಕಂಪನಿ

ಈ ಓಪನ್ ಕ್ಯಾಬಿನ್ ಅಪಘಾತಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ. ಸ್ಕೈ ಡ್ರೈವ್ ಕಂಪನಿಯು ಈ ಬಗ್ಗೆ ಗಮನ ಹರಿಸಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವ ನಿರೀಕ್ಷೆಗಳಿವೆ. ಆದರೆ ಕಂಪನಿಯು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಜಪಾನಿನ ಮತ್ತೊಂದು ಸ್ಟಾರ್ಟ್ ಅಪ್ ಕಂಪನಿಯಾದ ALI ಟೆಕ್ನಾಲಜೀಸ್ ಇತ್ತೀಚೆಗೆ ಇದೇ ರೀತಿಯ ಹೋವರ್‌ಬೈಕ್ ಅನ್ನು ಬಿಡುಗಡೆಗೊಳಿಸಿತ್ತು.

ಹಾರುವ ಕಾರಿಗೆ ಸುರಕ್ಷತಾ ಪ್ರಮಾಣ ಪತ್ರ ಪಡೆದ ಸ್ಕೈ ಡ್ರೈವ್ ಕಂಪನಿ

ALI ಟೆಕ್ನಾಲಜೀಸ್, Mitsubishi Electric ಹಾಗೂ Giacera ಕಂಪನಿಗಳ ಬೆಂಬಲವನ್ನು ಹೊಂದಿದೆ. ಕಂಪನಿಯು ತನ್ನ ಉತ್ಪನ್ನಗಳನ್ನು 6,80,000 ಡಾಲರ್ ನಷ್ಟು ಕಡಿಮೆ ಬೆಲೆಗೆ ಗ್ರಾಹಕರಿಗೆ ತಲುಪಿಸಲು ನಿರ್ಧರಿಸಿದೆ. ಎಸ್‌ಡಿ 03 ಹಾರುವ ಕಾರಿಗೆ ಸಂಬಂಧಿಸಿದಂತೆ, ಸ್ಕೈ ಡ್ರೈವ್ ಕಂಪನಿಯು ಈ ಕಾರ್ ಅನ್ನು ಪ್ರತ್ಯೇಕವಾಗಿ ಮಾರಾಟ ಮಾಡುವ ಬದಲು ತನ್ನ ಡ್ರೋನ್ ಸೇವೆಯ ಭಾಗವಾಗಿ ಬಳಸಲಿದೆ ಎಂದು ಹೇಳಲಾಗಿದೆ.

ಹಾರುವ ಕಾರಿಗೆ ಸುರಕ್ಷತಾ ಪ್ರಮಾಣ ಪತ್ರ ಪಡೆದ ಸ್ಕೈ ಡ್ರೈವ್ ಕಂಪನಿ

ಸ್ಕೈಡ್ರೈವ್ ಕಂಪನಿಯು 2012ರಲ್ಲಿ ಕಾರ್ಟಿವೇಟರ್ ಹೆಸರಿನಲ್ಲಿ ಈ ಯೋಜನೆಯನ್ನು ಆರಂಭಿಸಿತು. ಟೊಯೋಟಾ ಮೋಟಾರ್, ಪ್ಯಾನಾಸೋನಿಕ್ ಕಾರ್ಪೊರೇಷನ್ ಹಾಗೂ ವೀಡಿಯೊ ಗೇಮ್ ತಯಾರಕ ಬಂದೈ ನಾಮ್ಕೊ ಮುಂತಾದ ಕಂಪನಿಗಳು ಈ ಯೋಜನೆಗೆ ಧನಸಹಾಯ ಮಾಡಿವೆ. ಮೂರು ವರ್ಷಗಳ ಹಿಂದೆ ಇದೇ ರೀತಿಯ ಪರೀಕ್ಷೆಯನ್ನು ನಡೆಸಲಾಗಿತ್ತದರೂ ಆ ಪರೀಕ್ಷೆ ವಿಫಲವಾಗಿತ್ತು.

Most Read Articles

Kannada
English summary
Japan based skydrive company s flying car receives safety certificate details
Story first published: Saturday, November 6, 2021, 16:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X