ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ Jeep India

ಅಮೆರಿಕ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಜೀಪ್ 2021ರ ಸೆಪ್ಟೆಂಬರ್ ತಿಂಗಳ ಕಾರು ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ವರದಿ ಪ್ರಕಾರ, ಕಳೆದ ತಿಂಗಳು ಜೀಪ್ ಕಂಪನಿಯು ಒಟ್ಟು 1377 ಯುನಿಟ್ ಗಳನ್ನು ಮಾರಾಟಗೊಳಿಸಿವೆ.

ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ Jeep India

ಜೀಪ್ ಇಂಡಿಯಾ ಕಳೆದ ತಿಂಗಳ ಮಾರಾಟವನ್ನು ತಿಂಗಳಿಗೊಮ್ಮೆ (MoM) ಮಾರಾಟಕ್ಕೆ ಹೋಲಿಸಿದರೆ ಶೇ,13 ರಷ್ಟು ಬೆಳವಣಿಗೆಯನ್ನು ಕಂಡಿದೆ. ಅದೇ ಸಮಯದಲ್ಲಿ, ಕಂಪನಿಯು ಒಂದು ವರ್ಷದ ಹಿಂದೆ ಸೆಪ್ಟೆಂಬರ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ,144 ರಷ್ಟು ಬೆಳವಣಿಗೆಯನ್ನು ಕಂಡಿದೆ, ಇದು ಖಂಡಿತವಾಗಿಯೂ ಭರವಸೆಯ ಸಂಖ್ಯೆಯಾಗಿದೆ. ಇನ್ನು ಜೀಪ್ ಕಂಪಾಸ್ ಎಸ್‍ಯುವಿಯನ್ನು ನವೀಕರಿಸಿ ಬಿಡುಗಡೆಗೊಳಿಸಿದ ಬಳಿಕ ಮಾರಾಟದಲ್ಲಿ ಬೆಳವಣಿಗೆಯನ್ನು ಕಂಡಿದೆ. ಅಲ್ಲದ್ಪೇ ಕರೋನಾ ಆತಂಕ ಕಡಿಮೆಯಾಗಿರುವುದು ಕೂಡ ಜೀಪ್ ಕಂಪನಿಯ ಎಸ್‍ಯುವಿಗಳ ಮಾರಾಟ ಹೆಚ್ಚಳಕ್ಕೆ ಕಾರಣವಾಗಿದೆ.

ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ Jeep India

ಕಂಪನಿಯ ಮಾರಾಟದ ಕಾರ್ಯಕ್ಷಮತೆಯ ಕುರಿತು ಪ್ರತಿಕ್ರಿಯಿಸಿದ ಜೀಪ್ ಇಂಡಿಯಾದ ಮುಖ್ಯಸ್ಥ ನಿಪುನ್ ಮಹಾಜನ್, ಬ್ರ್ಯಾಂಡ್ ಜೀಪ್ ಒಂದು ಉತ್ತೇಜಕ ಬೆಳವಣಿಗೆಯ ಪಥದಲ್ಲಿದೆ. ನಮ್ಮ ಮಾರಾಟವು ಹೆಚ್ಚಿನ ವೇಗವನ್ನು ಪಡೆದುಕೊಂಡಿದೆ, 2021ರ ಸೆಪ್ಟೆಂಬರ್144 ಶೇಕಡ ವಾರ್ಷಿಕ ಬೆಳವಣಿಗೆಯನ್ನು ಕಂಡಿದೆ.

ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ Jeep India

ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಹೊಸ ಜೀಪ್ ಕಂಪಾಸ್ ಅನ್ನು ಭಾರತೀಯ ಗ್ರಾಹಕರು ಉತ್ತಮವಾಗಿ ಸ್ವೀಕರಿಸಿದ್ದಾರೆ. ನಮ್ಮ ನೆಟ ವರ್ಕ್ ಪಾಲುದಾರರಿಂದ ನಂತರ ಉತ್ತಮ ಮಾರಾಟ ಮತ್ತು ಗ್ರಾಹಕರ ತೃಪ್ತಿಯನ್ನು ಖಚಿತಪಡಿಸಿಕೊಳ್ಳಲು ಪ್ರಭಾವಶಾಲಿ ಪ್ರಯತ್ನಗಳನ್ನು ಮಾಡಿದ್ದಾರೆ, ವಿಶೇಷವಾಗಿ ಲಾಕ್ ಡೌನ್ ಸಮಯದಲ್ಲಿ. ನಮ್ಮ ಎರಡನೇ ತ್ರೈಮಾಸಿಕ ಸಾಧನೆ, ಈ ವರ್ಷ ವಿಶೇಷವಾಗಿ ಒಳ್ಳೆಯದು ಮತ್ತು ಈ ವೇಗವನ್ನು ವರ್ಷದ ಉಳಿದವರೆಗೂ ಮುಂದುವರಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.

ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ Jeep India

ಜೀಪ್ ಕಂಪನಿಯು ಈ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತು. ಈ ಹೊಸ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯು ಆಂತರಿಕ ಮತ್ತು ಬಾಹ್ಯ ನವೀಕರಣಗಳೊಂದಿಗೆ ಪರಿಚಯಿಸಿದ್ದರು. 2021ರ ಜೀಪ್ ಕಂಪಾಸ್ ಎಸ್‍ಯುವಿಯು ಸ್ಪೋರ್ಟ್ಸ್, ಲಾಂಗಿಟ್ಯೂಡ್, ಲಿಮಿಟೆಡ್, ಲಿಮಿಟೆಡ್ (ಒ),ಮತ್ತು ಹೊಸದಾಗಿ ಸೇರಿಸಲಾದ ಟಾಪ್-ಎಂಡ್ ಮಾಡೆಲ್ ಎಸ್ ಎಂಬ ವೆರಿಯೆಂಟ್ ಗಳಲ್ಲಿ ಲಭ್ಯವಿದೆ.

ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ Jeep India

ಮೂರು ವರ್ಷಗಳ ಬಳಿಕ ಜೀಪ್ ಕಂಪಾಸ್ ಮಿಡ್-ಲೈಫ್ ನವೀಕರಣವನ್ನು ಪಡೆದುಕೊಂಡಿತ್ತು, ಇತ್ತೀಚೆಗೆ ಇದೇ ತಿಂಗಳಲ್ಲಿ ಜೀಪ್ ಇಂಡಿಯಾ ಕಂಪನಿಯು ತನ್ನ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಬೆಲೆ ಏರಿಕೆ ಮಾಡಿದೆ. ಸ್ಪೋರ್ಟ್ ಮತ್ತು ಲಾಂಗಿಟ್ಯೂಡ್ (O) ವೆರಿಯಂಟ್‌ಗಳ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳು ಇದರ ಬೆಲೆಯನ್ನು ರೂ,10,000 ಹೆಚ್ಚು ಮಾಡಿದ್ದಾರೆ. ಉಳಿದಂತೆ ಎಸ್‌ಯುವಿಯ ಟಾಪ್-ಸ್ಪೆಕ್ ವೆರಿಯಂಟ್‌ಗಳ ಬೆಲೆಯನ್ನು ರೂ,20,000 ಗಳವರೆಗೆ ಹೆಚ್ಚಿಸಲಾಗಿದೆ.

ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ Jeep India

ಬೆಲೆ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಂಡ 2021ರ ಜೀಪ್ ಕಂಪಾಸ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುದಾದರೆ, ಕೆಲವು ಸೂಕ್ಷ್ಮ ನವೀಕರಣಗಳನ್ನು ಪಡೆದುಕೊಂಡಿದ್ದರೆ, ಫೀಚರ್ ಗಳ ವಿಭಾಗದಲ್ಲಿ ಗಣನೀಯ ನವೀಕರಣಗಳನ್ನು ಪಡೆದುಕೊಂಡಿದೆ. ಹೊರಗಿನ ನವೀಕರಣಗಳು ಹತ್ತಿರದಿಂದ ಗಮನಿಸಿದರೆ ಮಾತ್ರ ತಿಳಿಯುತ್ತದೆ.

ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ Jeep India

ಈ ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಒಳಭಾಗದಲ್ಲಿ ಸೂಕ್ಷ್ಮ ನವೀಕರಣಗಳು ಮತ್ತು ಬದಲಾವಣೆಗಳನ್ನು ಒಳಗೊಂಡಿದೆ. ಜೀಪ್ ಕಂಪಾಸ್‌ನ ಕ್ಯಾಬಿನ್ ಮೊದಲಿಗಿಂತ ಹೆಚ್ಚು ಪ್ರೀಮಿಯಂ ಆಗಿದೆ. ಈ ಎಸ್‍ಯುವಿಯ ಒಳಭಾಗದಲ್ಲಿ ಹಲವಾರು ಪ್ರೀಮಿಯಂ ಫೀಚರ್ ಗಳನ್ನು ಒಳಗೊಂಡಿವೆ.ಈ ಎಸ್‍ಯುವಿಯಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಾಣಿಕೆಯೊಂದಿಗೆ 10.1-ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಹೊಂದಿದೆ.

ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ Jeep India

ಇದು ಆಂಡ್ರಾಯ್ಡ್ ಆಧಾರಿತ ಆಪರೇಟಿಂಗ್ ಸಿಸ್ಟಂ ಹೊಂದಿರುವ ಎಫ್‌ಸಿಎಯ ಹೊಸ ಯುಕನೆಕ್ಟ್ 5 ತಂತ್ರಜ್ಞಾನವನ್ನು ಒಳಗೊಂಡಿದೆ.ಇದ್ದರಿಂದ ಇದು ಈಗ ವಾಯ್ಸ್ ಕಮಾಂಡ್ ಅಸಿಸ್ಟ್ ಮತ್ತು ಓವರ್-ದಿ-ಏರ್ (ಒಟಿಎ) ಅಪ್‌ಡೇಟ್‌ ಫೀಚರ್ ಗಳನ್ನು ಒಳಗೊಂಡಿವೆ. ಹಿಲ್ ಅಸಿಸ್ಟ್ (ಎಚ್‌ಎ) ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ (ಎಚ್‌ಡಿಸಿ) ಎಂಬ ಮೋಡ್ ಗಳನ್ನು ಈ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಕೂಡ ಒಳಗೊಂಡಿದೆ.

ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ Jeep India

ಈ ಜೀಪ್ ಕಂಪಾಸ್ ಎಸ್‍ಯುವಿಯಲ್ಲಿ ಹೊಸದಾಗಿ 1.4 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಕೂಡ ಅಳವಡಿಸಲಾಗಿದೆ. ಇದರಲ್ಲಿ 1.4 ಲೀಟರ್ ಟರ್ಬೊ-ಪೆಟ್ರೋಲ್ 163 ಬಿಹೆಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, 2.0 ಲೀಟರ್ ಡೀಸೆಲ್ ಎಂಜಿನ್ 173 ಬಿಹೆಚ್‌ಪಿ ಮತ್ತು 350 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ,

ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ Jeep India

ಈ ಎರಡು ಎಂಜಿನ್‌ಗಳು ಸ್ಟ್ಯಾಂಡರ್ಡ್‌ ಆಗಿ ಆರು-ಸ್ಪೀಡ್ ಮ್ಯಾನ್ಯುವಲ್‌ ಗೇರ್ ಬಾಕ್ಸ್ ನೊಂದಿಗೆ ಬರುತ್ತವೆ. ಕಂಪಾಸ್ ಪೆಟ್ರೋಲ್ ಏಳು-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆಯುತ್ತದೆ ಮತ್ತು ಡೀಸೆಲ್ ಒಂಬತ್ತು-ಸ್ಪೀಡ್ ಟಾರ್ಕ್ ಕರ್ನವಾಟರ್ ಆಯ್ಕೆಯನ್ನು ಹೊಂದಿದೆ.

ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ Jeep India

ಇನ್ನು ಇತ್ತೀಚೆಗೆ ಜೀಪ್ ಕಂಪನಿಯು ಹೊಸ ಕಮಾಂಡರ್ ಎಸ್‌ಯುವಿಯನ್ನು ಬ್ರೆಜಿಲ್‌ನಲ್ಲಿ ಇತ್ತೀಚೆಗೆ ಅನಾವರಣಗೊಳಿಸಿತ್ತು. ಇದನ್ನು ಕಂಪಾಸ್ ಐದು ಸೀಟಿನ ಮಾದರಿಗೆ ಹೋಲಿಸಿದರೆ ಗಮನಾರ್ಹ ವ್ಯತ್ಯಾಸಗಳನ್ನು ಹೊಂದಿದೆ. ಅಲ್ಲದೇ ಹೊಸ ಜೀಪ್ ಕಮಾಂಡರ್ ಎಸ್‍ಯುವಿಯು ಹೆಚ್ಚು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಈ ಹೊಸ ಮಾದರಿಯನ್ನು ಆಂತರಿಕವಾಗಿ ಜೀಪ್ ಲೋ-ಡಿ ಎಂದು ಕರೆಯಲಾಗುತ್ತಿತ್ತು. ಇದು ಕಂಪಾಸ್ ಎಸ್‌ಯುವಿಗಿಂತ ಉದ್ದವಾದ ಹೆಚ್ಚು ವಿಶಾಲವಾದ ಮತ್ತು ಪ್ರೀಮಿಯಂ ಆವೃತ್ತಿಯಾಗಿದೆ.

ಸೆಪ್ಟೆಂಬರ್ ತಿಂಗಳ ಕಾರು ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ Jeep India

ಇನ್ನು ಈ ಹೊಸ ಜೀಪ್ 7-ಸೀಟರ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಜೀಪ್ ಮೆರಿಡಿಯನ್ ಎಂಬ ಹೆಸರಿನಲ್ಲಿ ಬಿಡುಗಡೆಯಾಗಲಿದೆ. ಈ ಜೀಪ್ 7-ಸೀಟರ್ ಎಸ್‌ಯುವಿಯು ಮೊದಲು ಬ್ರೆಜಿಲ್‌ನಲ್ಲಿ ಬಿಡುಗಡೆಯಾಗಲಿದೆ, ಭಾರತದಲ್ಲಿ ಈ ಎಸ್‍ಯುವಿಯು 2022ರ ಮಧ್ಯದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

More from DriveSpark

Article Published On: Monday, October 11, 2021, 10:13 [IST]
English summary
Jeep india sold 1377 units in september 2021 details
Read more on ಜೀಪ್ jeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+