ಮೆರಿಡಿಯನ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಜೀಪ್ ಹೊಸ 7 ಸೀಟರ್ ಎಸ್‌ಯುವಿ

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಪ್ರಮುಖ ಬದಲಾವಣೆಗಳನ್ನು ಪರಿಚಯಿಸುತ್ತಿರುವ ಜೀಪ್ ಇಂಡಿಯಾ ಕಂಪನಿಯು ಮುಂದಿನ ಎರಡು ವರ್ಷಗಳಿಗೆ ನಾಲ್ಕು ಹೊಸ ಕಾರುಗಳ ಬಿಡುಗಡೆಗಾಗಿ ಬೃಹತ್ ಯೋಜನೆ ರೂಪಿಸುತ್ತಿದ್ದು, ಹೊಸ 7 ಸೀಟರ್ ಎಸ್‌ಯುವಿ ಆವೃತ್ತಿಯನ್ನು ಮುಂಬರುವ ಕೆಲವೇ ದಿನಗಳಲ್ಲಿ ಅನಾವರಣಗೊಳಿಸುವ ಸಿದ್ದತೆಯಲ್ಲಿದೆ.

ಬಿಡುಗಡೆಯಾಗಲಿದೆ ಜೀಪ್ ಹೊಸ 7 ಸೀಟರ್ ಎಸ್‌ಯುವಿ

ಜೀಪ್ ಇಂಡಿಯಾ ಕಂಪನಿಯು ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಕಂಪಾಸ್ ಮತ್ತು ರ‍್ಯಾಂಗ್ಲರ್ ಆಫ್ ರೋಡ್ ಎಸ್‌ಯುವಿ ಆವೃತ್ತಿಯನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಕಾರುಗಳ ಮಾರಾಟ ಆರಂಭಿಸುವ ಸಿದ್ದತೆಯಲ್ಲಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 7 ಸೀಟರ್ ಸೌಲಭ್ಯದ ಫುಲ್ ಸೈಜ್ ಎಸ್‌ಯುವಿ ಮತ್ತು ಸಬ್ ಫೋರ್ ಮೀಟರ್ ವೈಶಿಷ್ಟ್ಯತೆಯ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಸಹ ಬಿಡುಗಡೆ ಮಾಡುತ್ತಿದೆ.

ಬಿಡುಗಡೆಯಾಗಲಿದೆ ಜೀಪ್ ಹೊಸ 7 ಸೀಟರ್ ಎಸ್‌ಯುವಿ

2020ರಲ್ಲೇ ಬಿಡುಗಡೆಯಾಗಬೇಕಿದ್ದ ಎರಡು ಹೊಸ ಕಾರು ಮಾದರಿಗಳನ್ನು ಕೋವಿಡ್‌ನಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಬಿಡುಗಡೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಿದ್ದ ಜೀಪ್ ಕಂಪನಿಯು ಇದೀಗ ಹೊಸ ಕಾರುಗಳ ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ತೀವ್ರಗೊಳಿಸಿದೆ.

ಬಿಡುಗಡೆಯಾಗಲಿದೆ ಜೀಪ್ ಹೊಸ 7 ಸೀಟರ್ ಎಸ್‌ಯುವಿ

ಹೊಸ 7 ಸೀಟರ್ ಎಸ್‌ಯುವಿ ಕಾರು ಮಾದರಿಯು ಈ ವರ್ಷಾಂತ್ಯದೊಳಗೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದ್ದು, ಹೊಸ ಕಾರು ಮೆರಿಡಿಯನ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಬಿಡುಗಡೆಯಾಗಲಿದೆ ಜೀಪ್ ಹೊಸ 7 ಸೀಟರ್ ಎಸ್‌ಯುವಿ

ಜೀಪ್ ಇಂಡಿಯಾ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ನಾಲ್ಕು ಹೊಸ ಕಾರು ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಹೊಸ 7 ಸೀಟರ್ ಮಾದರಿಯನ್ನು ಮುಂಬರುವ ಅಗಸ್ಟ್ ಹೊತ್ತಿಗೆ ಉತ್ಪಾದನಾ ಆವೃತ್ತಿಯೊಂದಿಗೆ ಅನಾವರಣಗೊಳಿಸುವ ಸಾಧ್ಯತೆಗಳಿವೆ.

ಬಿಡುಗಡೆಯಾಗಲಿದೆ ಜೀಪ್ ಹೊಸ 7 ಸೀಟರ್ ಎಸ್‌ಯುವಿ

ಹೊಸ ಎಸ್‌ಯುವಿ ಕಾರನ್ನು ಜೀಪ್ ಕಂಪನಿಯು ಈಗಾಗಲೇ ವಿದೇಶಿ ಮಾರುಕಟ್ಟೆಯಲ್ಲಿ ಗ್ರ್ಯಾಂಡ್ ಕಂಪಾಸ್ ಅಥವಾ ಗ್ರಾಂಡ್ ಕಮಾಂಡರ್ ಹೆಸರಿನಲ್ಲಿ ಮಾರಾಟಗೊಳ್ಳುತ್ತಿದ್ದು, ಹೊಸ ಎಸ್‌ಯುವಿ ಕಾರು ಭಾರತದಲ್ಲಿ ಮೆರಿಡಿಯನ್ ಹೆಸರಿನೊಂದಿಗೆ ಬಿಡುಗಡೆಗೊಳಿಸುವ ಸುಳಿವು ಸಿಕ್ಕಿದೆ.

ಬಿಡುಗಡೆಯಾಗಲಿದೆ ಜೀಪ್ ಹೊಸ 7 ಸೀಟರ್ ಎಸ್‌ಯುವಿ

ಸದ್ಯಕ್ಕೆ ಜೀಪ್ ಕಂಪನಿಯು ಹೆಚ್6 ಎನ್ನುವ ಕೋಡ್ ನೆಮ್ ಆಧಾರದ ಮೇಲೆ ರೋಡ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಎರಡು ಮಾದರಿಯಲ್ಲೂ ಕಾರುಗಳನ್ನು ಹೊರತರುತ್ತಿರುವ ಜೀಪ್ ಇಂಡಿಯಾ ಕಂಪನಿಯು 5 ಸೀಟರ್ ಕಂಪ್ಯಾಕ್ಟ್ ಎಸ್‌ಯುವಿ ಜೊತೆ 7 ಸೀಟರ್ ಎಸ್‌ಯುವಿ ಬಿಡುಗಡೆಗೊಳಿಸುತ್ತಿದೆ.

ಬಿಡುಗಡೆಯಾಗಲಿದೆ ಜೀಪ್ ಹೊಸ 7 ಸೀಟರ್ ಎಸ್‌ಯುವಿ

ಜೀಪ್ ಹೊಸ 7 ಸೀಟರ್ ಎಸ್‌ಯುವಿ ಕಾರುನ್ನು ಜೀಪ್ ಕಂಪನಿಯು ಡೀಸೆಲ್ ಎಂಜಿನ್‌ನಲ್ಲಿ ಮಾತ್ರವೇ ಬಿಡುಗಡೆ ಮಾಡಲಿದೆ ಎನ್ನಲಾಗಿದ್ದು, 2.0-ಲೀಟರ್ ಸಾಮರ್ಥ್ಯದ ನಾಲ್ಕು ಸಿಲಿಂಡರ್ ಪ್ರೇರಣೆಯ ಮಲ್ಟಿಜೆಟ್ ಟರ್ಬೊ-ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ.

ಬಿಡುಗಡೆಯಾಗಲಿದೆ ಜೀಪ್ ಹೊಸ 7 ಸೀಟರ್ ಎಸ್‌ಯುವಿ

ಹೊಸ ಮಲ್ಟಿ ಜೆಟ್ ಟರ್ಬೊ ಡೀಸೆಲ್ ಮಾದರಿಯು ಗರಿಷ್ಠ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಆಯ್ಕೆಯೊಮದಿಗೆ 200-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದ್ದು, ಆಫ್ ರೋಡ್ ಕೌಶಲ್ಯದಲ್ಲೂ ಗಮನಸೆಳೆಯಲಿರುವ ಹೊಸ ಕಾರಿನಲ್ಲಿ 4x4 ಡ್ರೈವ್ ಸಿಸ್ಟಂ ಜೋಡಣೆ ಮಾಡಲಾಗುತ್ತಿದೆ.

ಬಿಡುಗಡೆಯಾಗಲಿದೆ ಜೀಪ್ ಹೊಸ 7 ಸೀಟರ್ ಎಸ್‌ಯುವಿ

ಆ ಮೂಲಕ ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಂಜಿ ಗ್ಲೊಸ್ಟರ್, ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರು ಮಾದರಿಗಳಿಗೆ ಹೊಸ ಕಾರು ಪ್ರಬಲ ಪೈಪೋಟಿ ನೀಡಲಿದ್ದು, ಹೊಸ ಕಾರಿನ ಬೆಲೆ ಕೂಡಾ ಪ್ರತಿಸ್ಪರ್ಧಿ ಕಾರುಗಳಿಂತಲೂ ಉತ್ತಮವಾಗಿರಲಿದೆ.

Article Published On: Saturday, July 3, 2021, 14:49 [IST]
English summary
Jeep 7 Seater SUV Could Know As Meridian In India. Read in Kannada.
Read more on ಜೀಪ್ jeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+