ಎಲೆಕ್ಟ್ರಿಕ್ ವಾಹನ ನೀತಿಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾದ ರಾಜ್ಯ ಸರ್ಕಾರ

ರಾಜ್ಯಕ್ಕೆ ಎಲೆಕ್ಟ್ರಿಕ್ ವಾಹನ ತಯಾರಿಸುವ ಕಂಪನಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಕರ್ನಾಟಕ ಸರ್ಕಾರವು ತನ್ನ ಎಲೆಕ್ಟ್ರಿಕ್ ವಾಹನ ನೀತಿಯನ್ನು ಬದಲಿಸಲಿದೆ. ಸ್ಥಿರ ಆಸ್ತಿಗಳ ಮೌಲ್ಯದ ಮೇಲೆ 15%ನಷ್ಟು ಕ್ಯಾಪಿಟಲ್ ಸಬ್ಸಿಡಿ ನೀಡಲು ಕರ್ನಾಟಕ ಸರ್ಕಾರವು ನಿರ್ಧರಿಸಿದೆ.

ಎಲೆಕ್ಟ್ರಿಕ್ ವಾಹನ ನೀತಿಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾದ ರಾಜ್ಯ ಸರ್ಕಾರ

ಈ ಸಬ್ಸಿಡಿಯು ಗರಿಷ್ಠ 50 ಎಕರೆ ಭೂಮಿಯನ್ನು ಒಳಗೊಂಡಿದೆ. ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ನೀತಿಯನ್ನು 2017ರಲ್ಲಿ ಜಾರಿಗೊಳಿಸಲಾಯಿತು. ಆದರೆ ಹೆಚ್ಚು ಹೂಡಿಕೆದಾರರನ್ನು ಆಕರ್ಷಿಸಲು ಈ ನೀತಿಯನ್ನು ಬದಲಿಸಬೇಕಾಗಿದೆ.

ಎಲೆಕ್ಟ್ರಿಕ್ ವಾಹನ ನೀತಿಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾದ ರಾಜ್ಯ ಸರ್ಕಾರ

ಉದ್ಯಮಿಗಳನ್ನು ಆಕರ್ಷಿಸಲು ವಿವಿಧ ರಾಜ್ಯಗಳ ನಡುವೆ ಪೈಪೋಟಿ ಎದುರಾಗಿದೆ. ಹೆಚ್ಚಿನ ವಿನಾಯಿತಿ ದೊರೆಯುತ್ತಿರುವುದರಿಂದ ಕೆಲವು ಕಂಪನಿಗಳು ಬೇರೆ ರಾಜ್ಯಗಳಿಗೆ ಸ್ಥಳಾಂತರಗೊಂಡಿವೆ.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಎಲೆಕ್ಟ್ರಿಕ್ ವಾಹನ ನೀತಿಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾದ ರಾಜ್ಯ ಸರ್ಕಾರ

ಓಲಾ ಕ್ಯಾಬ್ ಕಂಪನಿಯು ಬೆಂಗಳೂರಿನಲ್ಲಿ ನೆಲೆಯೂರಿದ್ದರೂ, ರೂ.2,400 ಕೋಟಿ ವೆಚ್ಚದಲ್ಲಿ ತನ್ನ ಹೊಸ ಉತ್ಪಾದನಾ ಘಟಕವನ್ನು ತಮಿಳುನಾಡಿನ ಹೊಸೂರಿನಲ್ಲಿ ಸ್ಥಾಪಿಸುತ್ತಿದೆ ಎಂದು ಬೊಮ್ಮಾಯಿ ಹೇಳಿದರು.

ಎಲೆಕ್ಟ್ರಿಕ್ ವಾಹನ ನೀತಿಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾದ ರಾಜ್ಯ ಸರ್ಕಾರ

ಎಲೆಕ್ಟ್ರಿಕ್ ಕಂಪನಿಗಳನ್ನು ಆಕರ್ಷಿಸಲು ನಾವು ನಮ್ಮ ನೀತಿಗಳನ್ನು ಬದಲಿಸಬೇಕು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈಗ ಕರ್ನಾಟಕ ಸರ್ಕಾರವು ಸಹ ತಮಿಳುನಾಡಿನಂತೆಯೇ ರಿಯಾಯಿತಿ ನೀಡುವ ನೀತಿಯ ಬಗ್ಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಎಲೆಕ್ಟ್ರಿಕ್ ವಾಹನ ನೀತಿಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾದ ರಾಜ್ಯ ಸರ್ಕಾರ

ಕಂಪನಿಗಳ ವಹಿವಾಟಿನ ಮೇಲೆ 1% ಉತ್ಪಾದನಾ ಸಬ್ಸಿಡಿಯನ್ನು ನೀಡುವ ಮೂಲಕ ಉತ್ತೇಜಿನ ನೀಡುವಂತಹ ಮತ್ತೊಂದು ಪ್ರಮುಖ ನಿರ್ಧಾರವನ್ನು ಕರ್ನಾಟಕದ ಸಚಿವ ಸಂಪುಟ ಸಭೆಯು ತೆಗೆದುಕೊಂಡಿದೆ.

ಎಲೆಕ್ಟ್ರಿಕ್ ವಾಹನ ನೀತಿಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾದ ರಾಜ್ಯ ಸರ್ಕಾರ

ಈ ಸಬ್ಸಿಡಿಯನ್ನು ಮೆಗಾ, ಅಲ್ಟ್ರಾ, ಸೂಪರ್ ಮೆಗಾ ಎಲೆಕ್ಟ್ರಿಕ್ ವೆಹಿಕಲ್ ಅಸೆಂಬ್ಲಿ ಹಾಗೂ ಉತ್ಪಾದನಾ ಘಟಕಗಳಿಗೆ ಕಾರ್ಯಾಚರಣೆಯ ಮೊದಲ ವರ್ಷದಿಂದ ಐದು ವರ್ಷಗಳ ಅವಧಿಗೆ ನೀಡಲಾಗುವುದು.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಎಲೆಕ್ಟ್ರಿಕ್ ವಾಹನ ನೀತಿಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾದ ರಾಜ್ಯ ಸರ್ಕಾರ

ಹೊಸ ನೀತಿಯಡಿಯಲ್ಲಿಎಲೆಕ್ಟ್ರಿಕ್ ವಾಹನ ಉತ್ಪಾದನಾ ಉದ್ಯಮಗಳಿಗೆ ಇವಿ ಲಿಥಿಯಂ ಐಯಾನ್ ಬ್ಯಾಟರಿ ಪೂರೈಕೆದಾರರು ಸೇರಿದಂತೆ ಇವಿ ಘಟಕಗಳನ್ನು ವ್ಯಾಖ್ಯಾನಿಸಲು, ಸರ್ಟಿಫೈ ಮಾಡಲು ತಾಂತ್ರಿಕ ಸಮಿತಿಯನ್ನು ರಚಿಸಲಾಗುವುದು.

ಎಲೆಕ್ಟ್ರಿಕ್ ವಾಹನ ನೀತಿಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾದ ರಾಜ್ಯ ಸರ್ಕಾರ

ಮತ್ತೊಂದು ಪ್ರಮುಖ ತಿದ್ದುಪಡಿಯಲ್ಲಿ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ನೀಡುವ ತರಬೇತಿಯನ್ನು ಉತ್ತೇಜಿಸಲು ತರಬೇತಿ ಪಡೆಯುವವರ ವೆಚ್ಚದ 50%ನಷ್ಟು ಭರಿಸಲು ಕರ್ನಾಟಕ ಸರ್ಕಾರವು ನಿರ್ಧರಿಸಿದೆ.

MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಎಲೆಕ್ಟ್ರಿಕ್ ವಾಹನ ನೀತಿಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾದ ರಾಜ್ಯ ಸರ್ಕಾರ

ಅಂದರೆ ಪ್ರತಿ ತಿಂಗಳು ಗರಿಷ್ಠ ರೂ.10,000 ಪಾವತಿಸಲಿದೆ. ಬೆಂಗಳೂರಿನ ಬಿಡದಿ ಬಳಿ ಎಲೆಕ್ಟ್ರಿಕ್ ವೆಹಿಕಲ್ ಪಾರ್ಕ್ ಸ್ಥಾಪಿಸಲು ಕರ್ನಾಟಕ ಸರ್ಕಾರವು ಸುಮಾರು 400 ಎಕರೆ ಭೂಮಿಯನ್ನು ಮೀಸಲಿಟ್ಟಿದೆ.

Most Read Articles

Kannada
English summary
Karnataka Government to amend it's electric vehicle policy. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X