ನವೆಂಬರ್ ತಿಂಗಳಿನಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟವಾಯ್ತು Kia Carnival ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಕಾರು ಮಾರಾಟ ಇದೀಗ ನಿಧಾನಗತಿಯ ಮೂಲಕ ಸಾಗುತ್ತಿದೆ. ಪ್ರಾಥಮಿಕವಾಗಿ ಜಾಗತಿಕ ಸೆಮಿಕಂಡಕ್ಟರ್ ಚಿಪ್ ಕೊರತೆಯಿಂದ ಉಂಟಾಗುವ ಉತ್ಪಾದನಾ ನಿರ್ಬಂಧಗಳಿಂದಾಗಿ ವಾಹನಗಳ ಮಾರಾಟ ಮೇಲೆ ಪರಿಣಾಮ ಬೀರಿದೆ.

ನವೆಂಬರ್ ತಿಂಗಳಿನಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟವಾಯ್ತು Kia Carnival ಕಾರು

ಇದರ ನಡುವೆ ಹಲವು ಕಾರುಗಳು ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ಕಾಣಿಸಿಕೊಂಡಿದೆ. ಇದರಲ್ಲಿ ಕಿಯಾ ಕಾರ್ನಿವಲ್ ಕೂಡ ಒಂದಾಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ನಡೆದ 2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾದ ಈ ಕಾರ್ನಿವಲ್ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಮೋಟಾರ್ಸ್‌ನ ಎರಡನೇ ಮಾದರಿಯಾಗಿದೆ. ಪ್ರೀಮಿಯಂ ಕಿಯಾ ಕಾರ್ನಿವಲ್(Kia Carnival) ಭಾರತೀಯ ಮಾರುಕಟ್ತೆಯಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಭಾರತದಲ್ಲಿ ಮಾರಾಟವಾದ ಕಾರು ಈಗ ಅಂತರರಾಷ್ಟ್ರೀಯ ಆವೃತ್ತಿಗಿಂತ ಒಂದು ತಲೆಮಾರಿನ ಹಿಂದೆ ಇದೆ.

ನವೆಂಬರ್ ತಿಂಗಳಿನಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟವಾಯ್ತು Kia Carnival ಕಾರು

ಆದರೆ ಇದು ಇನ್ನೂ ಖರೀದಿದಾರರನ್ನು ಆಕರ್ಷಿಸಲು ನಿರ್ವಹಿಸುತ್ತದೆ. ಕಿಯಾ ಕಂಪನಿಯು 2021ರ ನವೆಂಬರ್ ತಿಂಗಳಿನಲ್ಲಿ ಕಾರ್ನಿವಲ್‌ನ 636 ಯೂನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಇದು ಅದರ ಪ್ರೀಮಿಯಂ ಬೆಲೆಯನ್ನು ಪರಿಗಣಿಸಿ ಯೋಗ್ಯ ಸಂಖ್ಯೆಯಾಗಿದೆ.

ನವೆಂಬರ್ ತಿಂಗಳಿನಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟವಾಯ್ತು Kia Carnival ಕಾರು

ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಕಾರ್ನಿವಲ್ ಮಾದರಿಯ 400 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ. 59.0 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇನ್ನು ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಕಾರ್ನಿವಲ್ ಮಾದರಿಯ ಒಟ್ಟು 400 ಯೂನಿಟ್‌ಗಳು ಮಾರಾಟವಾಗಿತ್ತು.

ನವೆಂಬರ್ ತಿಂಗಳಿನಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟವಾಯ್ತು Kia Carnival ಕಾರು

ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ. 59.0 ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ, ಸದ್ಯಕ್ಕೆ, ಕಿಯಾ ಕಾರ್ನಿವಲ್ ಅನ್ನು ನಾಲ್ಕು ವಿಭಿನ್ನ ರೂಪಾಂತರಗಳಲ್ಲಿ ಮೂಲ ಪ್ರೀಮಿಯಂ ಟ್ರಿಮ ಬೆಲೆಯು ರೂ.24.95 ಲಕ್ಷವಾದರೆ, ಟಾಪ್-ಎಂಡ್ ಲಿಮೋಸಿನ್‌ಗಾಗಿ ರೂ.33.99 ಲಕ್ಷದವರೆಗೆ ಬೆಲೆಯನ್ನು ಹೊಂದಿದೆ.

ನವೆಂಬರ್ ತಿಂಗಳಿನಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟವಾಯ್ತು Kia Carnival ಕಾರು

ಹೊಸ ಕಿಯಾ ಕಾರ್ನಿವಲ್ ಎಂಪಿವಿಯಲ್ಲಿ 8 ಇಂಚಿನ ಇನ್ಫೋಟೈನ್‌ಮೆಂಟ್, ಒಟಿಎ ಮ್ಯಾಪ್ ಅಪ್ ಡೇಟ್, ಯುವಿಒ ಸಪೋರ್ಟ್, ಇಸಿಎಂ ಮಿರರ್, ಹಿಂಭಾಗದ ಪ್ರಯಾಣಿಕರಿಗಾಗಿ ಸಿಂಗಲ್ 10.1 ಇಂಚಿನ ಡಿಸ್‌ಪ್ಲೇ, ಸ್ಮಾರ್ಟ್ ಪ್ಯೂರ್ ಏರ್ ಪ್ಯೂರಿಫೈಯರ್ ಗಳನ್ನು ಒಳಗೊಂಡಿದೆ.

ನವೆಂಬರ್ ತಿಂಗಳಿನಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟವಾಯ್ತು Kia Carnival ಕಾರು

ಇದರ ಜೊತೆಗೆ ಸಂಪೂರ್ಣ ಸುಸಜ್ಜಿತವಾದ ಲಿಮೋಸಿನ್ ಪ್ಲಸ್ ಮಾದರಿಯು ಹರ್ಮನ್ ಕಾರ್ಡನ್ ಪ್ರೀಮಿಯಂ 8 ಸ್ಪೀಕರ್ ಆಡಿಯೋ ಸಿಸ್ಟಂ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 10 ವೇ ಪವರ್ ಡ್ರೈವರ್ ಸೀಟ್, ಡ್ರೈವರ್ ಸೀಟ್ ವೆಂಟಿಲೇಷನ್, ಲೆದರ್ ನಿಂದ ವ್ರಾಪ್ ಮಾಡಲಾದ ಸ್ಟೀಯರಿಂಗ್ ವ್ಹೀಲ್ ಹಾಗೂ ಗೇರ್ ನಾಬ್, ಪ್ರೀಮಿಯಂ ವುಡ್ ಗಾರ್ನಿಷ್, ಡ್ಯುಯಲ್ 10.1 ಇಂಚಿನ ಹಿಂಭಾಗದ ಡಿಸ್ಪ್ಲೇ, ಟಿಪಿಎಂಎಸ್ ಫೀಚರ್ ಗಳನ್ನು ಹೊಂದಿವೆ.

ನವೆಂಬರ್ ತಿಂಗಳಿನಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟವಾಯ್ತು Kia Carnival ಕಾರು

ಕಿಯಾ ಕಾರ್ನಿವಲ್ ಈಗ 18 ಇಂಚಿನ ಕ್ರಿಸ್ಟಲ್ ಕಟ್ ಅಲಾಯ್ ವ್ಹೀಲ್‌ಗಳನ್ನು ಎಲ್ಲಾ ಮಾದರಿಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಹೊಂದಿದೆ. ಹೆಚ್ಚುವರಿಯಾಗಿ ಪ್ರೀಮಿಯಂ ಲೆಥರೆಟ್ ಸೀಟುಗಳನ್ನು ಈಗ ಪ್ರೇಸ್ಟಿಜ್, ಲಿಮೋಸಿನ್ ಹಾಗೂ ಲಿಮೋಸಿನ್ ಪ್ಲಸ್ ಮಾದರಿಗಳಲ್ಲಿ ಕೂಡ ನೀಡಲಾಗುತ್ತದೆ.

ನವೆಂಬರ್ ತಿಂಗಳಿನಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟವಾಯ್ತು Kia Carnival ಕಾರು

ಹೆಚ್ಚುವರಿ ಬೆಂಬಲ, ಸೌಕರ್ಯವನ್ನು ನೀಡಲು ಡೈಮಂಡ್ ಶೇಪ್ ಕ್ವಿಲ್ಟಿಂಗ್‌ನೊಂದಿಗೆ ಬ್ರಾಂಡ್ ವಿಐಪಿ ಸೀಟಿನೊಂದಿಗೆ ಟಾಪ್ ಮಾದರಿಯನ್ನು ನೀಡಲಾಗಿದೆ. 2021ರ ಎಂಪಿವಿಯ ಒಟ್ಟಾರೆ ನೋಟವನ್ನು ಹೆಚ್ಚಿಸುತ್ತವೆ. ಉಳಿದ ಫೀಚರ್ ಗಳು, ಬಣ್ಣಗಳು ಹಾಗೂ ಎಂಜಿನ್ ಆಯ್ಕೆಗಳು ಹಿಂದಿನ ಮಾದರಿಯಂತೆಯೇ ಇರುತ್ತದೆ.

ನವೆಂಬರ್ ತಿಂಗಳಿನಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟವಾಯ್ತು Kia Carnival ಕಾರು

ಇನ್ನು ಎಂಪಿವಿಯ ಮೆಕ್ಯಾನಿಕಲ್‌ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಕಿಯಾ ಕಾರ್ನಿವಲ್ ಎಂಪಿವಿಯಲ್ಲಿ 2.2 ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 197 ಬಿ‌ಹೆಚ್‌ಪಿ ಪವರ್ ಹಾಗೂ 440 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಎಂಟು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್ ಬಾಕ್ಸ್'ಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ. ಈ ಕಿಯಾ ಕಾರ್ನಿವಲ್ ಎಂಪಿವಿಯನ್ನು ಕಂಪ್ಲೀಟ್ಲಿ ನಾಕ್ ಡೌನ್ (ಸಿಕೆಡಿ) ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ.

ನವೆಂಬರ್ ತಿಂಗಳಿನಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟವಾಯ್ತು Kia Carnival ಕಾರು

ನಂತರ ಆಂಧ್ರಪ್ರದೇಶದಲ್ಲಿರುವ ಕಿಯಾ ಕಂಪನಿಯ ಉತ್ಪಾದನಾ ಘಟಕದಲ್ಲಿ ಜೋಡಿಸಲಾಗುತ್ತದೆ. ಭಾರತದಲ್ಲಿ ಬಿಡುಗಡೆಯಾಗಿರುವ 2021ರ ಕಾರ್ನಿವಲ್ ಎಂಪಿವಿಯನ್ನು ಕಿಯಾ ಕಂಪನಿಯು ಹೊಸ ಲೋಗೋ ಹಾಗೂ ಸುಧಾರಿತ ಮಾದರಿಗಳೊಂದಿಗೆ ಅಪ್ ಡೇಟ್ ಮಾಡಿದೆ. ಈ ಮೂಲಕ ಈ ಸೆಗ್ ಮೆಂಟ್ ಗ್ರಾಹಕರಿಗೆ ಹೆಚ್ಚು ಆಯ್ಕೆಯನ್ನು ನೀಡುತ್ತದೆ. ಕಾರ್ನಿವಲ್ ಎಂಪಿವಿಯು ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ. ಇದರಿಂದ ಈ ಬೆಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ದೊರೆಯುವ ಏಕೈಕ ಐಷಾರಾಮಿ ಎಂಪಿವಿಯಾಗಿದೆ,

ನವೆಂಬರ್ ತಿಂಗಳಿನಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟವಾಯ್ತು Kia Carnival ಕಾರು

ಕಿಯಾ ಇಂಡಿಯಾ(Kia India) 2021ರ ನವೆಂಬರ್ ತಿಂಗಳ ಮಾಸಿಕ ಮಾರಾಟ ವರದಿಯನ್ನು ಇತ್ತೀಚೆಗೆ ಪ್ರಕಟಿಸಿತ್ತು. ವರದಿಗಳ ಪ್ರಕಾರ, ಕಿಯಾ ಇಂಡಿಯಾ ಕಂಪನಿಯು ಕಳೆದ ತಿಂಗಳಿನಲ್ಲಿ 14,214 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಿಯಾ ಕಂಪನಿಯ ಕಳೆದ ವರ್ಷದ ನವೆಂಬರ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.32.3 ರಷ್ಟು ಕುಸಿತವಾಗಿದೆ.

ನವೆಂಬರ್ ತಿಂಗಳಿನಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟವಾಯ್ತು Kia Carnival ಕಾರು

ಇನ್ನು 2021ರ ಅಕ್ಟೋಬರ್ ತಿಂಗಳಿನಲ್ಲಿ 16,331 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.13 ರಷ್ಟು ಕುಸಿತವನ್ನು ಕಂಡಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ವಾಹನಗಳ ಮಾರಾಟದಲ್ಲಿ ಭಾರೀ ಕುಸಿತವನ್ನು ಕಂಡಿದೆ. ಇದಕ್ಕೆ ಕೊರೋನಾ, ಚಿಪ್ ಕೊರತೆ ಮತ್ತು ಇತರೆ ಹಲವು ಕಾರಣಗಳಿವೆ.

Most Read Articles

Kannada
English summary
Kia carnival registers 59 percent sales growth in november 2021 details
Story first published: Wednesday, December 15, 2021, 10:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X