ಪ್ರತಿಷ್ಠಿತ ಜರ್ಮನ್ ಪ್ರಿಮಿಯಂ ಕಾರ್ ಆಫ್ ದಿ ಇಯರ್ ಪ್ರಶಸ್ತಿ ಗೆದ್ದ ಕಿಯಾ ಇವಿ6
ವಿಶ್ವಾದ್ಯಂತ ಪ್ರಮುಖ ಕಾರು ಕಂಪನಿಗಳ ನಡುವೆ ಎಲೆಕ್ಟ್ರಿಕ್ ಕಾರು ಉತ್ಪಾದನೆಯಲ್ಲಿ ಭಾರೀ ಪೈಪೋಟಿ ಶುರುವಾಗಿದ್ದು, ದಕ್ಷಿಣ ಕೊರಿಯಾದ ಕಿಯಾ ಕಂಪನಿ ನಿರ್ಮಾಣದ ಇವಿ6 ಕ್ರಾಸ್ ಓವರ್ ಎಲೆಕ್ಟ್ರಿಕ್ ಎಸ್‌ಯುವಿಯು ಪ್ರಮುಖ ಇವಿ ಕಾರುಗಳನ್ನು ಹಿಂದಿಕ್ಕಿ ಪ್ರತಿಷ್ಠಿತ ಜರ್ಮನ್ ಪ್ರಿಮಿಯಂ ಕಾರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ನ್ಯೂ ಎನರ್ಜಿ ವಿಭಾಗದಲ್ಲಿ ಜರ್ಮನ್ ನಿರ್ಮಾಣದ ಪ್ರಮುಖ ಎಲೆಕ್ಟ್ರಿಕ್ ಕಾರುಗಳನ್ನು ಹಿಂದಿಕ್ಕಿರುವ ಕಿಯಾ ಇವಿ6 ಮಾದರಿಯ ಪ್ರತಿಷ್ಠಿತ 2022ರ ಜರ್ಮನ್ ಪ್ರಿಮಿಯಂ ಕಾರ್ ಆಫ್ ದಿ ಇಯರ್ ಪ್ರಶಸ್ತಿ ಪಡೆದುಕೊಂಡಿದ್ದು, ಹೊಸ ಕಾರು ಯುರೋಪ್ ಮತ್ತು ಅಮೆರಿಕದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವುವಾಗಲೇ ಪ್ರತಿಷ್ಠಿತ ಪ್ರಶಸ್ತಿ ಘೋಷಣೆಯಾಗಿರುವುದು ಹೊಸ ಕಾರಿನ ಬೇಡಿಕೆ ಮತ್ತಷ್ಟು ಹೆಚ್ಚಳವಾಗಲಿದೆ.

ಜರ್ಮನ್ ಪ್ರಿಮಿಯಂ ಕಾರ್ ಆಫ್ ದಿ ಇಯರ್‌ನ ನ್ಯೂ ಎನರ್ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಕಿಯಾ ಇವಿ6 ಮಾದರಿಯು ಫೋಕ್ಸ್‌ವ್ಯಾಗನ್ ಐಡಿ 6, ಆಡಿ ಕ್ಯೂ4 ಇ-ಟ್ರಾನ್ ಮಾದರಿಗಳನ್ನು ಹಿಂದಿಕ್ಕಿ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಸದ್ಯ ಕಿಯಾ ಇವಿ6 ಮಾದರಿಯು ಅಮೆರಿಕ ಮತ್ತು ಯುರೋಪಿನ ಕೆಲವೇ ರಾಷ್ಟ್ರಗಳಲ್ಲಿ ಮಾರಾಟಗೊಳ್ಳುತ್ತಿದ್ದು, ಹೊಸ ಕಾರು ಶೀಘ್ರದಲ್ಲೇ ಪ್ರಮುಖ ಮಾರುಕಟ್ಟೆಗಳಲ್ಲಿ ಮಾರಾಟಗೊಳ್ಳಲು ಸಿದ್ದವಾಗುತ್ತಿದೆ.

ಅಮೆರಿಕ ಮತ್ತು ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಲಾಗುತ್ತಿದ್ದು, ಡೀಸೆಲ್ ಕಾರುಗಳ ಮಾರಾಟದಲ್ಲಿ ಸಾಕಷ್ಟು ಇಳಿಕೆಯಾಗಿದೆ. ಡೀಸೆಲ್ ಕಾರುಗಳ ಬಳಕೆಗೆ ಹಲವಾರು ನಿರ್ಬಂಧ ವಿಧಿಸುತ್ತಿರುವ ಹಿನ್ನಲೆಯಲ್ಲಿ ಎಲೆಕ್ಟ್ಕಿಕ್ ವಾಹನಗಳ ಮಾರಾಟ ಮತ್ತು ಬಳಕೆಗೆ ಸಾಕಷ್ಟು ವಿನಾಯ್ತಿಗಳನ್ನು ನೀಡುತ್ತಿರುವುದೇ ಇವಿ ವಾಹನಗಳ ಬಳಕೆ ಹೆಚ್ಚಳವಾಗಲು ಪ್ರಮುಖ ಕಾರಣವಾಗಿದೆ.

ಮಾಲಿನ್ಯ ತಡೆ ಮತ್ತು ಭವಿಷ್ಯದ ದೃಷ್ಠಿಯಿಂದ ಇಂಧನದ ಮೇಲೆ ಅವಂಲನೆಯನ್ನು ತಪ್ಪಿಸಲು ಎಲೆಕ್ಟ್ರಿಕ್ ಬ್ಯಾಟರಿ ಚಾಲಿತ ವಾಹನಗಳ ಬಳಕೆಯತ್ತ ಗಮನಹರಿಸಲಾಗುತ್ತಿದ್ದು, ಸರ್ಕಾರದ ನಿರ್ಣಯಗಳಿಗೆ ಪೂರಕವಾಗಿ ಆಟೋ ಉತ್ಪಾದನಾ ಕಂಪನಿಗಳು ಸಹ ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳ ಮಾದರಿಗಳ ಮಾರಾಟದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ.

ಕಿಯಾ ಕಂಪನಿಯು ಕೂಡಾ ವಿಶ್ವಾದ್ಯಂತ ಪ್ರಮುಖ ರಾಷ್ಟ್ರಗಳಲ್ಲಿ ತನ್ನ ಹೊಸ ಇವಿ6 ಮಾದರಿಯನ್ನು ಪರಿಚಯಿಸಿದ್ದು, ಆಕರ್ಷಕ ವಿನ್ಯಾಸದೊಂದಿಗೆ ಎಲೆಕ್ಟ್ರಿಕ್ ಎಸ್‌ಯುವಿಯು ಕಾರು ಖರೀದಿದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.

ಮಧ್ಯಮ ಕ್ರಮಾಂಕದ ಐಷಾರಾಮಿ ಕಾರು ಮಾದರಿಯಾಗಿರುವ ಇವಿ6 ಮಾದರಿಯಲ್ಲಿ ಸಾಕಷ್ಟು ಹೊಸ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಹೊಸ ಕಾರು ಪ್ರತಿ ಚಾರ್ಜ್‌ಗೆ ಗರಿಷ್ಠ 528 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಸೂಪರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ಗರಿಷ್ಠ ಪ್ರಮಾಣ ಚಾರ್ಜ್ ಮಾಡಬಹುದಾಗಿದ್ದು, 77.4 kWh ಹೈ ವೋಲ್ಟೆಜ್ ಬ್ಯಾಟರಿಯೊಂದಿಗೆ ಅತ್ಯುತ್ತಮ ಫರ್ಪಾಮೆನ್ಸ್ ಮಾದರಿಯಾಗಿ ಗುರುತಿಸಿಕೊಂಡಿದೆ.

ಇವಿ6 ಕ್ರಾಸ್ ಓವರ್ ಎಸ್‌ಯುವಿ ಮಾದರಿಯು ಇ-ಜಿಎಂಪಿ ಪ್ಲ್ಯಾಟ್‌ಫಾರ್ಮ್ ಆಧರಿಸಿ ಅಭಿವೃದ್ದಿಗೊಂಡಿದ್ದು, 576-ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಹೊಸ ಕಾರು 400ವಿ ಮತ್ತು 800ವಿ ಸೂಪರ್ ಫಾಸ್ಟ್ ಚಾರ್ಜಿಂಗ್ ಸರ್ಪೋಟ್ ಹೊಂದಿದೆ.

ಸೂಪರ್ ಫಾಸ್ಟ್ ಚಾರ್ಜರ್ ಮೂಲಕ ಕೇವಲ 5 ನಿಮಿಷ ಚಾರ್ಜ್ ಮಾಡಿದರೆ 112 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದ್ದು, 18 ನಿಮಿಷ ಚಾರ್ಜ್ ಮಾಡಿದ್ದಲ್ಲಿ 330 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಲು 50 ನಿಮಿಷ ಕಾಲ ಸಮಯಾವಕಾಶ ತೆಗೆದುಕೊಳ್ಳಲಿದ್ದು, ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆದಲ್ಲಿ 528 ಕಿ.ಮೀ ಮೈಲೇಜ್ ಹಿಂಪಡೆಯಬಹುದಾಗಿದೆ. ಹೊಸ ಕಾರಿನಲ್ಲಿ ಹಲವಾರು ಹೊಸ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ಗಳಿಂದಾಗಿ ತುಸು ದುಬಾರಿಯಾಗಿದ್ದು, ಈ ಹೊಸ ಕಾರು ಸದ್ಯಕ್ಕೆ ಅಮೆರಿಕ ಮತ್ತು ಯುರೋಪಿನ ಕೆಲವೇ ಕೆಲವು ರಾಷ್ಟ್ರಗಳಿಗಾಗಿ ಮಾತ್ರ ಅಭಿವೃದ್ದಿಪಡಿಸಲಾಗಿದೆ.

ಡೀಸೆಲ್ ಕಾರುಗಳ ಬಳಕೆಗೆ ಹಲವಾರು ನಿರ್ಬಂಧ ವಿಧಿಸುತ್ತಿರುವ ಹಿನ್ನಲೆಯಲ್ಲಿ ಎಲೆಕ್ಟ್ಕಿಕ್ ವಾಹನಗಳ ಮಾರಾಟ ಮತ್ತು ಬಳಕೆಗೆ ಸಾಕಷ್ಟು ವಿನಾಯ್ತಿಗಳನ್ನು ನೀಡುತ್ತಿರುವುದೇ ಇವಿ ವಾಹನಗಳ ಬಳಕೆ ಹೆಚ್ಚಳವಾಗಲು ಪ್ರಮುಖ ಕಾರಣವಾಗಿದೆ.

ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಸದ್ಯ ಜಾಗತಿಕವಾಗಿ ಗುರುತಿಸಿಕೊಂಡಿರುವ ಅಮೆರಿಕದ ಟೆಸ್ಲಾ ಕಂಪನಿಗೆ ಪೈಪೋಟಿಯಾಗಿ ಕಿಯಾ ತನ್ನ ಹೊಸ ಇವಿ6 ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಇವಿ6 ಮಾದರಿಯು ಪ್ರತಿಸ್ಪರ್ಧಿ ಟೆಸ್ಲಾ ಇವಿ ಕಾರುಗಳಿಂತಲೂ ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.


Click it and Unblock the Notifications








