Just In
- 4 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 5 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 6 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 6 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- Movies Puttakkana Makkalu:ಪುಟ್ಟಕ್ಕಗೆ ಮಗಳ ಜೀವನ ಹಾಳಾಗುವ ಆತಂಕ: ಬಂಗಾರಮ್ಮನಿಗ್ಯಾಕೆ ಬೇಸರ?
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ Kia Seltos X Line ಎಸ್ಯುವಿಯ ಆಕರ್ಷಕ ಟಿವಿಸಿ ಬಿಡುಗಡೆ
ಕೊರಿಯಾ ಮೂಲದ ವಾಹನ ತಯಾರಕ ಕಂಪನಿಯಾದ Kia ಪ್ರಸ್ತುತ ದೇಶದ ಜನಪ್ರಿಯ ಕಾರು ತಯಾರಕರಲ್ಲಿ ಒಬ್ಬರು. ಈ Kia ಬ್ರ್ಯಾಂಡ್ 2019 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಸೆಲ್ಟೋಸ್ನೊಂದಿಗೆ ಪಾದಾರ್ಪಣೆ ಮಾಡಿತು ಮತ್ತು ಇದು ಕಡಿಮೆ ಅವಧಿಯಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿತು.
Kia ಇತ್ತೀಚೆಗೆ ತನ್ನ Seltos ಎಸ್ಯುವಿಯ ಹೊಸ X-Line ವೆರಿಯೆಂಟ್ ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ Kia Seltos X Line ವೆರಿಯೆಂಟ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.17.79 ಲಕ್ಷಗಳಾಗಿದೆ. ಇದೀಗ Kia ಕಂಪನಿಯು X-Line ವೆರಿಯೆಂಟ್ ಗಾಗಿ ಹೊಸ ಟಿವಿಸಿಯನ್ನು ಬಿಡುಗಡೆ ಮಾಡಿದೆ. ಈ ವಿಡಿಯೋವನ್ನು ಕಿಯಾ ಇಂಡಿಯಾ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದೆ. ಈ ವೀಡಿಯೊದಲ್ಲಿ ಸೆಲ್ಟೋಸ್ನ ಸಾಮಾನ್ಯ ಅಥವಾ ಜಿಟಿ ಲೈನ್ ಆವೃತ್ತಿಯನ್ನು X-Line ವೆರಿಯೆಂಟ್ ನಿಂದ ಬೇರ್ಪಡಿಸುವ ಎಲ್ಲಾ ಬದಲಾವಣೆಗಳನ್ನು ತೋರಿಸಲಾಗಿದೆ.
ಕಿಯಾ ಎಸ್ಯುವಿಯ ಟಾಪ್-ಎಂಡ್ ರೂಪಾಂತರವಾಗಿ Seltos X-Line ಅನ್ನು ನೀಡುತ್ತಿದೆ. ಇದನ್ನು ಸೆಲ್ಟೋಸ್ನ ಜಿಟಿ-ಲೈನ್ ಆವೃತ್ತಿಯ ಮೇಲೆ ಇರಿಸಲಾಗಿದೆ. ಹೊಸ ವೆರಿಯೆಂಟ್ ಟಾಪ್-ಸ್ಪೆಕ್ ಜಿಟಿ ಲೈನ್ ವೆರಿಯೆಂಟ್ ಅನ್ನು ಆಧರಿಸಿದೆ, ಹೊಸ ಟಾಪ್-ಆಫ್-ಲೈನ್ X Line ವೆರಿಯೆಂಟ್ ಕಾಸ್ಮೆಟಿಕ್ ವಿನ್ಯಾಸ ಮತ್ತು ಆಂತರಿಕ ಬದಲಾವಣೆಗಳೊಂದಿಗೆ ಬರುತ್ತದೆ.
ಇದರ ಬಾನೆಟ್ ಅಡಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಈ ಹೊಸ Kia Seltos X-Line ವೆರಿಯೆಂಟ್ ನಲ್ಲಿ ಸೆಗ್ಮೆಂಟ್-ಅತಿದೊಡ್ಡ 18-ಇಂಚಿನ ಕ್ರಿಸ್ಟಲ್-ಕಟ್ ಮ್ಯಾಟ್ ಗ್ರ್ಯಾಫೈಟ್ ಅಲಾಯ್ ವ್ಹೀಲ್ಗಳನ್ನು ಅಳವಡಿಸಲಾಗಿದೆ.ಇದು ಹೊಸ ಇಂಡಿಗೋ ಪೆರಾ ಲೆಥೆರೆಟ್ ಅಪ್ಹೋಲ್ಸ್ಟರಿಯನ್ನು ಪಡೆಯುತ್ತದೆ. ಈ X Line ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.
ಈ ಎಸ್ಯುವಿಯು ಆರೇಂಜ್ ಬಣ್ಣದ ಅಸ್ಸೆಂಟ್ ಗಳು ಮತ್ತು ಬಾಡಿಯ ಸುತ್ತಲೂ ಬ್ಲ್ಯಾಕ್ ಒಳಸೇರಿಸುವಿಕೆಯೊಂದಿಗೆ ಬರುತ್ತದೆ. ಈ ಆರೇಂಜ್ ಬಣ್ಣದ ಅಸ್ಸೆಂಟ್ ಗಳನ್ನು ಗ್ರಿಲ್ನ ಕೆಳ ಭಾಗದಲ್ಲಿದೆ, ಇನ್ನು ಹಿಂಭಾಗದ ಬಂಪರ್ ಮತ್ತು ಪಕ್ಕದ ಡೋರುಗಳ ಕೆಳಭಾಗದಲ್ಲಿಯು ನೀಡಲಾಗಿದೆ.
ಈ ಟಾಪ್ ವೆರಿಯೆಂಟ್ ಮುಂಭಾಗದ ಗ್ರಿಲ್, ಬಂಪರ್ ಟ್ರಿಮ್, ಆಫ್ ಫಾಗ್ ಲ್ಯಾಂಪ್ ಹೌಸಿಂಗ್ಗಳು, ಸೈಡ್ಬೋರ್ಡ್ಗಳ ಉದ್ದಕ್ಕೂ ಕ್ರೋಮ್ ಆಪ್ಲಿಕ್, ಜಿಟಿ-ಲೈನ್ ಟ್ರಿಮ್ನಂತೆಯೇ ಅಲಾಯ್ ವ್ಹೀಲ್ ಅನ್ನು ಒಳಗೊಂಡಿದೆ. ಹಿಂಭಾಗದಲ್ಲಿ ಡಾರ್ಕ್ ಕ್ರೋಮ್ ಬಾರ್ ಎಲ್ಇಡಿ ಟೈಲ್ ಲ್ಯಾಂಪ್ಗಳನ್ನು ಕನೆಕ್ಟ್ ಮಾಡುತ್ತದೆ.
ಈ 2021ರ Seltos X Line ವೆರಿಯೆಂಟ್ ಮ್ಯಾಟ್ ಬಣ್ಣವನ್ನು ಹೊಂದಿದೆ. ಇದನ್ನು 'ಎಕ್ಸ್ಕ್ಲೂಸಿವ್ ಮ್ಯಾಟ್ ಗ್ರ್ಯಾಫೈಟ್' ಎಂದು ಕರೆಯುತ್ತಾರೆ. ಕ್ರೀಮ್ ಅಂಶಗಳು ಮತ್ತು ಒಆರ್ವಿಎಮ್ಗಳು ಸ್ಪೋರ್ಟಿ ನೋಟವನ್ನು ನೀಡಲು ಅಲ್ಲಿ ಬ್ಲ್ಯಾಕ್ ಬಣ್ಣವನ್ನು ನೀಡಲಾಗಿದೆ. ಈ ಟಾಪ್-ಆಫ್-ಲೈನ್ ವೆರಿಯಂಟ್ ಪ್ರಸ್ತುತ ಟಾಪ್-ಸ್ಪೆಕ್ ಮಾದರಿಯಲ್ಲಿ ಲಭ್ಯವಿರುವ ಎಲ್ಲಾ ಫೀಚರ್ಸ್ ಗಳನ್ನು ಹೊಂದಿದೆ.
ಹೊಸ X Line ವೆರಿಯೆಂಟ್ ನಲ್ಲಿ ಹಿಂಭಾಗದ ಎಸಿ ವೆಂಟ್ಗಳು, ಎಲೆಕ್ಟ್ರಿಕಲ್ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, 360 ಡಿಗ್ರಿ ಕ್ಯಾಮೆರಾ, ಆಂಬಿಯೆಂಟ್ ಲೈಟಿಂಗ್, ಇಂಟಿಗ್ರೇಟೆಡ್ ಏರ್ ಪ್ಯೂರಿಫೈಯರ್, ಇತ್ಯಾದಿಗಳೊಂದಿಗೆ ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್ ಪಡೆಯುತ್ತದೆ. ಇನ್ನು ಇದರಲ್ಲಿ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ ಕಿಯಾ UVO ಕನೆಕ್ಟಿವಿಟಿ ಕಾರ್ ಟೆಕ್. ಇದು ಎಂಟು-ಸ್ಪೀಕರ್ ಪ್ರೀಮಿಯಂ ಬೋಸ್ ಸೌಂಡ್ ಸಿಸ್ಟಂ ಅನ್ನು ಪಡೆಯುತ್ತದೆ.
2020ರ ಆಟೋ ಎಕ್ಸ್ಪೋದಲ್ಲಿ ಕಿಯಾ X-Line ಕಾನ್ಸೆಪ್ಟ್ ಅನ್ನು ಪ್ರದರ್ಶಿಸಿದರು. ನಂತರ 2019ರ ಲಾಸ್ ಏಂಜಲೀಸ್ ಆಟೋ ಶೋನಲ್ಲಿ ತನ್ನ ಜಾಗತಿಕ ಪ್ರೀಮಿಯರ್ ನಲ್ಲಿ ಅನಾವರಣಗೊಳಿಸಿತು. 2021ರ ಕಿಯಾ Seltos X-Line ವೆರಿಯೆಂಟ್ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ.
ಇದರಲ್ಲಿ ಅದೇ 1.5-ಲೀಟರ್ ನಾಲ್ಕು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 115 ಬಿಹೆಚ್ಪಿ ಪವರ್ ಮತ್ತು 144 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5-ಲೀಟರ್ ನಾಲ್ಕು-ಪಾಟ್ ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ 113 ಬಿಹೆಚ್ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಇನ್ನು 1.4-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದೆ,
ಈ ಎಂಜಿನ್ 138 ಬಿಹೆಚ್ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದರಲ್ಲಿ ಡೀಸೆಲ್ ಎಂಜಿನ್ ನೊಂದಿಗೆ 6-ಸ್ಪೀಡ್ ಟಾರ್ಕ್ ಕರ್ನಾವಟರ್ ಹೊಂದಿದ್ದು, 1.4L ಮತ್ತು 1.5L ಪೆಟ್ರೋಲ್ ಎಂಜಿನ್ ಗಳೊಂದಿಗೆ ಕ್ರಮವಾಗಿ 7DCT ಮತ್ತು IVT ಗೇರ್ ಬಾಕ್ಸ್ ಅನ್ನು ಆಯ್ಕೆಯಾಗಿ ನೀಡಲಾಗಿದೆ.
ಇದರೊಂದಿಗೆ Kia Seltos ಮಾದರಿ ಎರಡು ಲಕ್ಷ ಯೂನಿಟ್ಗಳನ್ನು ಮಾರಾಟವಾಗಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಕೇವಲ ಎರಡು ವರ್ಷದಲ್ಲಿ Kia Seltos ಮಾದರಿಯ ಎರಡು ಲಕ್ಷ ಯೂನಿಟ್ಗಳು ಮಾರಾಟವಾಗಿವೆ. ಭಾರತದ ಗ್ರಾಹಕರು ಈ ಎಸ್ಯುವಿಯ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್ಗಳಿಗೆ ಫುಲ್ ಫಿದಾ ಆಗಿದ್ದಾರೆ. ಬಿಡುಗಡೆಯಾದಾಗಿನಿಂದ Seltos ಎಸ್ಯುವಿ ಜನಪ್ರಿಯವಾಗುವುದರ ಜೊತೆಗೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸ್ಪೋರ್ಟಿ ಲುಕ್ ಹೊಂದಿರುವ ವಾಹನಗಳು ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿದೆ. ಇದರಿಂದ Kia ಕೂಡ ತನ್ನ ಜನಪ್ರಿಯ Seltos ಎಸ್ಯುವಿಯನ್ನು ಸ್ಪೋರ್ಟಿ ಥೀಮ್ ಎಕ್ಸ್-ಲೈನ್ ವೆರಿಯೆಂಟ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿದೆ. ಈ ಕಿಯಾ Seltos X-Line ವೆರಿಯೆಂಟ್ ಕೂಡ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.