ಅಕ್ಟೋಬರ್ ತಿಂಗಳಿನಲ್ಲಿ 16,331 ಕಾರುಗಳನ್ನು ಮಾರಾಟ ಮಾಡಿದ Kia India

ಕೊರಿಯಾ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಕಿಯಾ ಇಂಡಿಯಾ(Kia India) 2021ರ ಅಕ್ಟೋಬರ್ ತಿಂಗಳ ಮಾಸಿಕ ಮಾರಾಟ ವರದಿಯನ್ನು ಪ್ರಕಟಿಸಿದೆ. ವರದಿಗಳ ಪ್ರಕಾರ, ಕಿಯಾ ಇಂಡಿಯಾ ಕಂಪನಿಯು ಕಳೆದ ತಿಂಗಳಿನಲ್ಲಿ 16,331 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಅಕ್ಟೋಬರ್ ತಿಂಗಳಿನಲ್ಲಿ 16,331 ಕಾರುಗಳನ್ನು ಮಾರಾಟ ಮಾಡಿದ Kia India

ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಕಿಯಾ ಕಂಪನಿಯು 21,021 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಆದರೆ ಇದು ವರ್ಷದಿಂದ ವರ್ಷಕ್ಕೆ ಸುಮಾರು ಶೇ.22.31 ರಷ್ಟು ಮಾರಾಟದಲ್ಲಿ ಗಮನಾರ್ಹ ಕುಸಿತವನ್ನು ಕಂಡಿದೆ. ಇನ್ನು ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಕಿಯಾ ಇಂಡಿಯಾ 14,441 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.13.09 ರಷ್ಟು ಮಾರಾಟದ ಬೆಳವಣಿಗೆಯನ್ನು ಕಂಡಿದೆ. ಆದರೆ ವಾರ್ಷಿಕ ಮಾರಾಟದಲ್ಲಿ ದೊಡ್ಡ ಮಟ್ಟದ ಕುಸಿತವನ್ನು ಕಂಡಿದೆ.

ಅಕ್ಟೋಬರ್ ತಿಂಗಳಿನಲ್ಲಿ 16,331 ಕಾರುಗಳನ್ನು ಮಾರಾಟ ಮಾಡಿದ Kia India

ಕಿಯಾ ಇಂಡಿಯಾದ ಎಂಡಿ ಮತ್ತು ಸಿಇಒ ಟೇ-ಜಿನ್ ಪಾರ್ಕ್ ಅವರು ಮಾತನಾಡಿ, ನಮ್ಮ ಗ್ರಾಹಕರು ಮತ್ತು ಮಾರಾಟಗಾರರ ನಿರಂತರ ಬೆಂಬಲವು ವರ್ಷವಿಡೀ ಆರೋಗ್ಯಕರ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಲು ನಮಗೆ ಅನುವು ಮಾಡಿಕೊಟ್ಟಿದೆ. ಮುಂದಿನ ಕೆಲವು ತಿಂಗಳುಗಳವರೆಗೆ ಚೀಪ್ ಸಮಸ್ಯೆಯು ಮುಂದುವರಿಯುತ್ತದೆ. ನಮ್ಮ ಗ್ರಾಹಕರಿಗೆ ನಮ್ಮ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಅತ್ಯುತ್ತಮವಾಗಿಸಲು ಮತ್ತು ಬೇಗನೆ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ನಾವು ಭರವಸೆ ನೀಡುತ್ತೇವೆ ಎಂದು ಹೇಳಿದರು,

ಅಕ್ಟೋಬರ್ ತಿಂಗಳಿನಲ್ಲಿ 16,331 ಕಾರುಗಳನ್ನು ಮಾರಾಟ ಮಾಡಿದ Kia India

ಕಿಯಾ ಇಂಡಿಯಾ ಕಂಪನಿಯ ಮಾರಾಟದ ದೊಡ್ಡ ಭಾಗವನ್ನು ಅದರ ಎಸ್‍ಯುವಿಗಳಾದ ಸೆಲ್ಟೋಸ್ ಮತ್ತು ಸೊನೆಟ್‌ನಿಂದ ಪಡೆದುಕೊಂಡಿದೆ.ಸೆಲ್ಟೋಸ್ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾದ ಮೊದಲ ಕೊಡುಗೆಯಾಗಿದೆ, ಇನ್ನು ಭಾರತೀಯ ಮಾರುಕಟ್ಟೆಯಲ್ಲಿ 3 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲನ್ನು ಇತ್ತೀಚೆಗೆ ಸಾಧಿಸಿದೆ. ಕಿಯಾ ಇಂಡಿಯಾ 3 ಲಕ್ಷ ಯೂನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ತಲುಪಿದ ಭಾರತದ ಅತಿ ವೇಗದ ಕಾರು ತಯಾರಕವಾಗಿದೆ.

ಅಕ್ಟೋಬರ್ ತಿಂಗಳಿನಲ್ಲಿ 16,331 ಕಾರುಗಳನ್ನು ಮಾರಾಟ ಮಾಡಿದ Kia India

ಭಾರತೀಯ ಮಾರುಕಟ್ಟೆಯಲ್ಲಿ ಬ್ಲಾಕ್‌ಬಸ್ಟರ್‌ ಆಗಿರುವ ಕಿಯಾ ಸೆಲ್ಟೋಸ್ ಮತ್ತು ಸೊನೆಟ್ ಎಸ್‍ಯುವಿ ಮಾದರಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಕಿಯಾ ಸೆಲ್ಟೋಸ್ ಕಾಂಪ್ಯಾಕ್ಟ್ ಎಸ್‌ಯುವಿಯು ಅದರ ಒಟ್ಟಾರೆ ಮಾರಾಟದ ಶೇಕಡಾ 66 ರಷ್ಟಿದೆ. ಶೇಕಡಾ 32 ರಷ್ಟು ಮಾರಾಟವು ಕಿಯಾ ಸೋನೆಟ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಮಾರಾಟವಾಗಿದೆ. ಬ್ರ್ಯಾಂಡ್ ಇದುವರೆಗೆ ಕಿಯಾ ಕಾರ್ನಿವಲ್ ಎಂಪಿವಿಯ 7310 ಯುನಿಟ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟಗೊಳಿಸಿದೆ.

ಅಕ್ಟೋಬರ್ ತಿಂಗಳಿನಲ್ಲಿ 16,331 ಕಾರುಗಳನ್ನು ಮಾರಾಟ ಮಾಡಿದ Kia India

ಮಾರಾಟದಲ್ಲಿ ಕಿಯಾ ಸೆಲ್ಟೋಸ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು. ಇದೀಗ ಕಿಯಾ ಸೆಲ್ಟೋಸ್ ಎಸ್‍ಯುವಿಯ ಎರಡು ಲಕ್ಷ ಯೂನಿಟ್‌ಗಳನ್ನು ಮಾರಾಟವಾಗಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಕೇವಲ ಎರಡು ವರ್ಷದಲ್ಲಿ ಕಿಯಾ ಸೆಲ್ಟೋಸ್ ಮಾದರಿಯ ಬರೊಬ್ಬರಿ ಎರಡು ಲಕ್ಷ ಯೂನಿಟ್‌ಗಳು ಮಾರಾಟವಾಗಿವೆ.

ಅಕ್ಟೋಬರ್ ತಿಂಗಳಿನಲ್ಲಿ 16,331 ಕಾರುಗಳನ್ನು ಮಾರಾಟ ಮಾಡಿದ Kia India

ಇಂತಹ ಕಠಿಣವಾದ ಸಮಯದಲ್ಲಿಯು ಕಿಯಾ ಕಾರುಗಳು ಉತ್ತಮವಾದ ಬೇಡಿಕೆಯನ್ನು ಪಡೆದುಕೊಂಡಿದೆ. ಇದರೊಂದಿಗೆ ಕಿಯಾ ಡಿಜಿಟಲ್ ಮಾರಾಟವು ಹೆಚ್ಚಿನ ಗ್ರಾಹಕರನು ತಲುಪುತ್ತಿದೆ. ಇನ್ನು ಕಿಯಾ ಇಂಡಿಯಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ ಮಾದರಿ ಸೆಲ್ಟೋಸ್ ಎಸ್‍ಯುವಿಯಾಗಿದೆ. ಈ ಸೆಲ್ಟೋಸ್ ಎಸ್‍ಯುವಿಯು ಮಾರಾಟದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು.

ಅಕ್ಟೋಬರ್ ತಿಂಗಳಿನಲ್ಲಿ 16,331 ಕಾರುಗಳನ್ನು ಮಾರಾಟ ಮಾಡಿದ Kia India

ದೇಶಿಯ ಮಾರುಕಟ್ಟೆಯ ಗ್ರಾಹಕರ ಗಮನ ಸೆಳೆಯುವಲ್ಲಿ ಸೆಲ್ಟೋಸ್ ಎಸ್‍ಯುವಿಯು ಯಶ್ವಸಿಯಾಗಿದೆ. ಭಾರತದ ಗ್ರಾಹಕರು ಈ ಎಸ್‍‍ಯುವಿಯ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳಿಗೆ ಫುಲ್ ಫಿದಾ ಆಗಿದ್ದಾರೆ. ಬಿಡುಗಡೆಯಾದಾಗಿನಿಂದ ಸೆಲ್ಟೋಸ್ ಎಸ್‍‍ಯುವಿ ಜನಪ್ರಿಯವಾಗುವುದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ. ಮಾರಾಟದಲ್ಲಿ ಕಿಯಾ ಸೆಲ್ಟೋಸ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು.

ಅಕ್ಟೋಬರ್ ತಿಂಗಳಿನಲ್ಲಿ 16,331 ಕಾರುಗಳನ್ನು ಮಾರಾಟ ಮಾಡಿದ Kia India

ಕಿಯಾ ಇಂಡಿಯಾ ಕಂಪನಿಯು ಮಾರಾಟವನ್ನು ಮತ್ತಷ್ಟು ಹೆಚ್ಚಿಸಲು ಸೆಲ್ಟೋಸ್ ಎಸ್‍ಯುವಿಯ ಹೊಸ ಎಕ್ಸ್ ಲೈನ್ ವೆರಿಯೆಂಟ್ ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಕಿಯಾ ಸೆಲ್ಟೋಸ್ ಎಕ್ಸ್ ಲೈನ್ ವೆರಿಯೆಂಟ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.17.79 ಲಕ್ಷಗಳಾಗಿದೆ.

ಅಕ್ಟೋಬರ್ ತಿಂಗಳಿನಲ್ಲಿ 16,331 ಕಾರುಗಳನ್ನು ಮಾರಾಟ ಮಾಡಿದ Kia India

2020ರ ಆಟೋ ಎಕ್ಸ್‌ಪೋದಲ್ಲಿ ಕಿಯಾ ಎಕ್ಸ್ ಲೈನ್ ಕಾನ್ಸೆಪ್ಟ್ ಅನ್ನು ಪ್ರದರ್ಶಿಸಿದರು. ನಂತರ 2019ರ ಲಾಸ್ ಏಂಜಲೀಸ್ ಆಟೋ ಶೋನಲ್ಲಿ ತನ್ನ ಜಾಗತಿಕ ಪ್ರೀಮಿಯರ್ ನಲ್ಲಿ ಅನಾವರಣಗೊಳಿಸಿತು. 2021ರ ಕಿಯಾ ಸೆಲ್ಟೋಸ್ ಎಕ್ಸ್ ಲೈನ್ ವೆರಿಯೆಂಟ್ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಸೆಲ್ಟೋಸ್ ಎಸ್‍ಯುವಿಯ ಲೈನ್‌ಅಪ್‌ನಲ್ಲಿ ಹೊಸ ಟಾಪ್-ಆಫ್-ಲೈನ್ ವೆರಿಯೆಂಟ್ ಆಗಿದೆ. ಇದು ಟಾಪ್-ಸ್ಪೆಕ್ ಜಿಟಿ ಲೈನ್ ರೂಪಾಂತರವನ್ನು ಆಧರಿಸಿರುವ ಮಾದರಿಯಾಗಿದೆ

ಅಕ್ಟೋಬರ್ ತಿಂಗಳಿನಲ್ಲಿ 16,331 ಕಾರುಗಳನ್ನು ಮಾರಾಟ ಮಾಡಿದ Kia India

ಸೆಲ್ಟೋಸ್ ಎಸ್‍ಯುವಿಯಟಾಪ್-ಆಫ್-ಲೈನ್ ಎಕ್ಸ್ ಲೈನ್ ರೂಪಾಂತರವು ಕಾಸ್ಮೆಟಿಕ್ ವಿನ್ಯಾಸ ಮತ್ತು ಆಂತರಿಕ ಬದಲಾವಣೆಗಳನ್ನು ಪಡೆದುಕೊಂಡಿದೆ, ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸ್ಪೋರ್ಟಿ ಲುಕ್ ಹೊಂದಿರುವ ವಾಹನಗಳು ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿದೆ. ಇದರಿಂದ ಈ ಮಾದರಿಯು ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಈ ಹೊಸ ವೆರಿಯೆಂಟ್ ಮಾರಾಟದಲ್ಲಿ ಕಂಪನಿಗೆ ಹೆಚ್ಚಿನ ಕೊಡುಗೆಯನ್ನು ನೀಡಬಹುದು.

ಅಕ್ಟೋಬರ್ ತಿಂಗಳಿನಲ್ಲಿ 16,331 ಕಾರುಗಳನ್ನು ಮಾರಾಟ ಮಾಡಿದ Kia India

ಇನ್ನು ಕಿಯಾ ಇಂಡಿಯಾ ವಾರ್ಷಿಕ ಮಾರಾಟದಲ್ಲಿ ಕುಸಿತವನ್ನು ಕಂಡಿದೆ. ಆದರೆ ಮುಂದಿನ ದಿನಗಳಲ್ಲಿ ಚಿಪ್ ಸಮಸ್ಯೆಯನ್ನು ಪರಿಹರಿಸಿ ಮಾರಾಟವನ್ನು ಹೆಚ್ಚಿಸಬಹುದು. ಇನ್ನು ಹಬ್ಬದ ಸೀಸನ್ ನಲ್ಲಿ ಕಿಯಾ ಕಾರುಗಳ ಮಾರಾಟವು ಹೆಚ್ಚಾಗಬಹುದು ಎಂದು ನಿರೀಕ್ಷಿಸುತ್ತೇವೆ.

More from DriveSpark

Article Published On: Tuesday, November 2, 2021, 10:27 [IST]
English summary
Kia india sold 16331 units in october 2021 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+