2 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Kia Seltos

ಜನಪ್ರಿಯ ಕಾರು ತಯಾರಕರಾದ Kia ಇಂಡಿಯಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ ಮಾದರಿ Seltos ಎಸ್‍ಯುವಿಯಾಗಿದೆ. ಈ Seltos ಎಸ್‍ಯುವಿಯು ಮಾರಾಟದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ದೇಶಿಯ ಮಾರುಕಟ್ಟೆಯ ಗ್ರಾಹಕರ ಗಮನ ಸೆಳೆಯುವಲ್ಲಿ Seltos ಎಸ್‍ಯುವಿಯು ಯಶ್ವಸಿಯಾಗಿದೆ.

2 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Kia Seltos

ಭಾರತದ ಗ್ರಾಹಕರು ಈ ಎಸ್‍‍ಯುವಿಯ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳಿಗೆ ಫುಲ್ ಫಿದಾ ಆಗಿದ್ದಾರೆ. ಬಿಡುಗಡೆಯಾದಾಗಿನಿಂದ Seltos ಎಸ್‍‍ಯುವಿ ಜನಪ್ರಿಯವಾಗುವುದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ. ಮಾರಾಟದಲ್ಲಿ Kia Seltos ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು. ಇದೀಗ Kia Seltos ಎಸ್‍ಯುವಿಯ ಎರಡು ಲಕ್ಷ ಯೂನಿಟ್‌ಗಳನ್ನು ಮಾರಾಟವಾಗಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಕೇವಲ ಎರಡು ವರ್ಷದಲ್ಲಿ Kia Seltos ಮಾದರಿಯ ಎರಡು ಲಕ್ಷ ಯೂನಿಟ್‌ಗಳು ಮಾರಾಟವಾಗಿವೆ.

2 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Kia Seltos

ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಇಂಡಿಯಾ 3 ಒಟ್ಟು3 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲನ್ನು ಇತ್ತೀಚೆಗೆ ಸಾಧಿಸಿದೆ. ಕಿಯಾ ಇಂಡಿಯಾ 3 ಲಕ್ಷ ಯೂನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ತಲುಪಿದ ಭಾರತದ ಅತಿ ವೇಗದ ಕಾರು ತಯಾರಕವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬ್ಲಾಕ್‌ಬಸ್ಟರ್‌ ಆಗಿರುವ ಕಿಯಾ ಸೆಲ್ಟೋಸ್ ಮತ್ತು ಸೊನೆಟ್ ಎಸ್‍ಯುವಿ ಮಾದರಿಗಳಿಗೆ ಬೇಡಿಕೆ ಹೆಚ್ಚುತ್ತಿದೆ.

2 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Kia Seltos

Kia Seltos ಕಾಂಪ್ಯಾಕ್ಟ್ ಎಸ್‌ಯುವಿಯು ಅದರ ಒಟ್ಟಾರೆ ಮಾರಾಟದ ಶೇಕಡಾ 66 ರಷ್ಟಿದೆ. ಇಂತಹ ಕಠಿಣವಾದ ಸಮಯದಲ್ಲಿಯು ಕಿಯಾ ಕಾರುಗಳು ಉತ್ತಮವಾದ ಬೇಡಿಕೆಯನ್ನು ಪಡೆದುಕೊಂಡಿದೆ. Kia ಡಿಜಿಟಲ್ ಮಾರಾಟವು ಹೆಚ್ಚಿನ ಗ್ರಾಹಕರನು ತಲುಪುತ್ತಿದೆ.

2 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Kia Seltos

2021ರ Kia Seltos ಹೊಸ ಲೋಗೋ ಪಡೆದುಕೊಂಡಿದೆ. ಈ Seltos ಹೊಸ ಕಾರಿನಲ್ಲಿ ಕಂಪನಿಯು ಸ್ಯಾಂಡ್, ಮಡ್, ಸ್ನೋ ಎನ್ನುವ ಮೂರು ಟ್ರಾಕ್ಷನ್ ಸೌಲಭ್ಯದೊಂದಿಗೆ ನಾರ್ಮಲ್, ಇಕೋ ಮತ್ತು ಸ್ಪೋರ್ಟ್ ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿದೆ.

2 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Kia Seltos

Seltos ಹಲವು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ 1.5 ಲೀಟರ್ ಪೆಟ್ರೋಲ್, 1.5 ಲೀಟರ್ ಡೀಸೆಲ್ ಮತ್ತು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಗಳಾಗಿವೆ. ಈ ಎಸ್‍ಯುವಿ ಮಾದರಿಯ 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ 115 ಬಿ‍ಎಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 138 ಬಿಎಚ್‍ಪಿ ಪವರ್ ಮತ್ತು 242 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

2 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Kia Seltos

ಎಲ್ಲಾ ಎಂಜಿನ್ ಗಳು ಸ್ಟ್ಯಾಂಡರ್ಡ್ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಹೊಂದಿದ್ದು, 1.5 ಲೀಟರ್ ಪೆಟ್ರೋಲ್ ಸಿವಿ‍ಟಿ, 1.5 ಲೀಟರ್ ಡೀಸೆಲ್‍ಗೆ ಐವಿ‍ಟಿ ಮತ್ತು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 6 ಸ್ಪೀಡಿನ ಮ್ಯಾನುವಲ್ ಹಾಗೂ 7 ಸ್ಪೀಡಿನ ಟ್ವಿನ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳನ್ನು ಕೂಡ ಅಳವಡಿಸಲಾಗಿದೆ.

2 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Kia Seltos

Kia Seltos ನಲ್ಲಿ ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಎಸ್‌ಸಿ, ಫ್ರಂಟ್ ಆ್ಯಂಡ್ ರೇರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನದ ಫೀಚರ್ಸ್‍‍ಗಳನ್ನು ಒಳಗೊಂಡಿದೆ.

2 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Kia Seltos

Seltos ಹೈ ಎಂಡ್ ವೆರಿಯೆಂಟ್‌ಗಳಲ್ಲಿ ವಾಯ್ಸ್ ಕಮಾಂಡ್, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ಆಟೋ ಎಸಿ ಸೌಲಭ್ಯ, 6 ಹಂತಗಳಲ್ಲಿ ಅಡ್ಜಸ್ಟ್ ಮಾಡಬಹುದಾದ ಚಾಲಕನ ಸೀಟು, ರೇರ್ ಎಸಿ ವೆಂಟ್ಸ್ ಮತ್ತು 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ ಹೊಂದಿರುವ ಯುವಿಒ ಕನೆಕ್ಟ್ ಟೆಕ್ನಾಲಜಿ ಅನ್ನು ಹೊಂದಿದೆ

2 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Kia Seltos

Kia India 2021ರ ಜುಲೈ ತಿಂಗಳ ಕಾರು ಮಾರಾಟ ವರದಿಯನ್ನು ಪ್ರಕಟಿಸಿದೆ. ವರದಿಗಳ ಪ್ರಕಾರ, ಕಿಯಾ ಇಂಡಿಯಾ ಕಂಪನಿಯು ಕಳೆದ ತಿಂಗಳಿನಲ್ಲಿ ಒಟ್ಟು 15,016 ಯುನಿಟ್‌ಗಳನ್ನು ಮಾರಾಟ ಮಾಡಿದೆ. 2020ರ ಜುಲೈ ತಿಂಗಳಿನಲ್ಲಿ ಕಿಯಾ ಕಂಪನಿಯು 8502 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.76 ರಷ್ಟು ಬೆಳವಣಿಗೆಯನ್ನು ಕಂಡಿದೆ. ಇನ್ನು ಈ ವರ್ಷದ ಜೂನ್ ತಿಂಗಳಿನಲ್ಲಿ ಕಿಯಾ ಕಂಪನಿಯು 15,015 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು.

2 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Kia Seltos

ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಕೇವಲ ಒಂದು ಯುನಿಟ್ ಮಾತ್ರ ಹೆಚ್ಚು ಮಾರಾಟವಾಗಿದೆ. ಕಳೆದ ತಿಂಗಳು ಕಿಯಾ ಸೊನೆಟ್ ಮತ್ತೊಮ್ಮೆ 7,675 ಯುನಿಟ್‌ಗಳಲ್ಲಿ ಕಂಪನಿಯ ಅತ್ಯುತ್ತಮ ಮಾರಾಟವಾದ ಮಾದರಿಯಾಗಿದೆ. ನಂತರ ಕಿಯಾ ಸೆಲ್ಟೋಸ್ ಎಸ್‍ಯುವಿಯ 6,983 ಯುನಿಟ್‌ಗಳು ಮಾರಾಟವಾಗಿವೆ. ಇನ್ನು ಕಾರು ತಯಾರಕರ ಪ್ರಮುಖ ಮಾದರಿಯಾದ ಕಿಯಾ ಕಾರ್ನಿವಲ್‌ಗೆ ಸಂಬಂಧಿಸಿದಂತೆ, ಕಿಯಾ ಭಾರತದಲ್ಲಿ ಪ್ರೀಮಿಯಂ ಎಂಪಿವಿಯ 358 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ.

2 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Kia Seltos

ಜುಲೈ ತಿಂಗಳಿನಲ್ಲಿ Kia India ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಫೆಡರೇಶನ್ ಅಥವಾ FADA ಇಂಡಿಯಾ, ಪ್ರೀಮನ್ ಏಷಿಯಾ ಸಹಯೋಗದೊಂದಿಗೆ ನಡೆಸಿದ ಡೀಲರ್ ತೃಪ್ತಿ ಅಧ್ಯಯನ 2021 ರಲ್ಲಿ ಅಗ್ರಸ್ಥಾನ ಪಡೆದಿದೆ. ಕಿಯಾ ಕಂಪನಿಯು 1000 ಕ್ಕೆ 879 ಅಂಕಗಳನ್ನು ಗಳಿಸಿದರು.

2 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Kia Seltos

Kia Seltos ಮಾದರಿಯು ಭಾರತೀಯು ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಮಹೀಂದ್ರಾ ಎಕ್ಸ್‌ಯುವಿ500, ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್, ಎಂಜಿ ಹೆಕ್ಟರ್, ನಿಸ್ಸಾನ್ ಕಿಕ್ಸ್ ಮತ್ತು ರೆನಾಲ್ಟ್ ಡಸ್ಟರ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತಿದೆ.

More from DriveSpark

Article Published On: Friday, August 20, 2021, 18:32 [IST]
English summary
Kia india sold 2 lakh units of seltos suv in 2 years details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+