ಹೊಸ ಲೊಗೊ ಹೊಂದಿರುವ ಸೆಲ್ಟೊಸ್ ಮತ್ತು ಸೊನೆಟ್ ಅನಾವರಣಗೊಳಿಸಿದ ಕಿಯಾ ಇಂಡಿಯಾ
ದಕ್ಷಿಣ ಕೊರಿಯಾದ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿರುವ ಕಿಯಾ ಮೋಟಾರ್ಸ್ ಭಾರತ ಸೇರಿ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಕಾರು ಮಾರಾಟ ಜಾಲ ಹೊಂದಿದ್ದು, ಕಂಪನಿಯು ತನ್ನ ಕಾರು ಮಾದರಿಗಳಲ್ಲಿ ಹೊಸ ಬದಲಾವಣೆ ತರುವ ಉದ್ದೇಶದಿಂದ ವಿನೂತನ ಲೊಗೊ ಸೇರ್ಪಡೆಗೊಳಿಸಿದೆ.

ಹೊಸ ಕಾರು ಉತ್ಪನ್ನಗಳಲ್ಲಿ ಲೊಗೊ ಬದಲಾವಣೆ ಕುರಿತು ಕಳೆದ ಜನವರಿಯಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದ ಕಿಯಾ ಕಂಪನಿಯು ಇದೀಗ ಹೊಸ ಲೊಗೊ ಹೊಂದಿರುವ ಸೆಲ್ಟೊಸ್ ಮತ್ತು ಸೊನೆಟ್ ಮಾದರಿಗಳನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಭಾರತದಲ್ಲಿ ಒಟ್ಟು ಮೂರು ಕಾರು ಮಾದರಿಗಳ ಮಾರಾಟ ಹೊಂದಿರುವ ಕಿಯಾ ಕಂಪನಿಯು ಶೀಘ್ರದಲ್ಲೇ ಕಾರ್ನಿವಾಲ್ ಕಾರು ಮಾದರಿಯಲ್ಲೂ ಹೊಸ ಲೊಗೊ ನೀಡುವ ಸುಳಿವು ನೀಡಿದೆ.

ಸದ್ಯಕ್ಕೆ ಸೆಲ್ಟೊಸ್ ಮತ್ತು ಸೊನೆಟ್ ಕಾರುಗಳಲ್ಲಿ ಮಾತ್ರವೇ ಹೊಸ ಲೊಗೊ ಮಾದರಿಗಳನ್ನು ಪರಿಚಯಿಸಿರುವ ಕಿಯಾ ಕಂಪನಿಯು ಮುಂದಿನ ತಿಂಗಳಿನಿಂದ ಹೊಸ ಲೊಗೊ ಹೊಂದಿರುವ ಕಾರುಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಹೊಸ ಲೊಗೊ ಅನಾವರಣದ ಜೊತೆಗೆ ಭಾರತದಲ್ಲಿ ಕಿಯಾ ಮೋಟಾರ್ಸ್ ಕಂಪನಿಯು ಕಿಯಾ ಇಂಡಿಯಾ ಕಂಪನಿಯಾಗಿ ಗುರುತಿಸಿಕೊಳ್ಳಲಿದೆ.

ಹೊಸ ಲೊಗೊ ವಿನ್ಯಾಸವು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಲೊಗೊ ವಿನ್ಯಾಸಕ್ಕಿಂತಲೂ ಆಕರ್ಷಕವಾಗಿರಲಿದ್ದು, ಹಸ್ತಾಕ್ಷರ ಮಾದರಿಯಲ್ಲಿರುವ ಹೊಸ ಲೊಗೊ ವಿನ್ಯಾಸವು ಕಿಯಾ ಕಾರುಗಳಿಗೆ ಮತ್ತಷ್ಟು ಮೆರಗು ನೀಡಲಿದೆ.

ಹೊಸ ಕಾರುಗಳು ಬ್ಯಾನೆಟ್, ಟೈಲ್‌ಗೆಟ್, ಅಲಾಯ್ ವೀಲ್ಹ್ ಮತ್ತು ಸ್ಟೀರಿಂಗ್ ವೀಲ್ಹ್ ಮೇಲೆ ಹೊಸ ಲೊಗೊ ವಿನ್ಯಾಸವು ಗಮನಸೆಳೆಯುತ್ತಿದ್ದು, ಹೊಸ ಲೊಗೊ ಪ್ರೇರಿತ ಸೆಲ್ಟೊಸ್ ಫೇಸ್‌ಲಿಫ್ಟ್ ಬಿಡುಗಡೆಯ ಯೋಜನೆಯಲ್ಲಿದ್ದ ಕಿಯಾ ಕಂಪನಿಯು ಕೋವಿಡ್ ಪರಿಣಾಮ ಹೊಸ ಲೊಗೊ ಹೊಂದಿರುವ ಮಾದರಿಯನ್ನು ಮಾತ್ರ ಬಿಡುಗಡೆ ಮಾಡಿದೆ.

ಫೇಸ್‌ಲಿಫ್ಟ್ ಮೂಲಕ ಹೊಸ ಸೆಲ್ಟೊಸ್‌ದಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸುವ ತವಕದಲ್ಲಿದ್ದ ಕಿಯಾ ಮೋಟಾರ್ಸ್ ಕಂಪನಿಯು ಕೋವಿಡ್ ಪರಿಣಾಮ ಹೊಸ ಆವೃತ್ತಿಗಳ ಬಿಡುಗಡೆಯನ್ನು 2022ಕ್ಕೆ ಮುಂದೂಡಿಕೆ ಮಾಡಿದ್ದು, ಸದ್ಯ ಹೊಸ ಲೊಗೊ ಹೊಂದಿರುವ ಮಾದರಿಯು ಮುಂದಿನ ತಿಂಗಳಿನಿಂದ ಖರೀದಿಗೆ ಲಭ್ಯವಿರಲಿದೆ.

ಹೊಸ ಲೊಗೊ ಸೆಲ್ಟೊಸ್ ಮತ್ತು ಸೊನೆಟ್ ಮಾದರಿಗಳು ಸದ್ಯ ಮಾರುಕಟ್ಟೆಯಲ್ಲಿರುವ ಆವೃತ್ತಿಗಳಂತೆಯೇ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಲೊಗೊ ಹೊರತುಪಡಿಸಿ ಯಾವುದೇ ಬದಲಾವಣೆ ತರಲಾಗಿಲ್ಲ.

ಸದ್ಯ ಮಾರುಕಟ್ಟೆಯಲ್ಲಿರುವ ಸೆಲ್ಟೊಸ್ ಕಾರು ಮಾದರಿಯು ಬಿಎಸ್-6 ನಿಯಮ ಅನುಸಾರ ಜಿಟಿ ಲೈನ್ ಕಾರುಗಳಲ್ಲಿ 1.4-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದರೆ ಸಾಮಾನ್ಯ ಮಾದರಿಯ ಟೆಕ್-ಲೈನ್ ಕಾರುಗಳು ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಪಡೆದುಕೊಂಡಿವೆ.

ಸೆಲ್ಟೊಸ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.90 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.66 ಲಕ್ಷ ಬೆಲೆ ಹೊಂದಿದ್ದು, ಇತ್ತೀಚೆಗೆ ಕಂಪನಿಯು ಸೆಲ್ಟೊಸ್ ಮಾದರಿಯಲ್ಲಿ ಆ್ಯನಿವರ್ಸರಿ ಎಡಿಷನ್ ಬಿಡುಗಡೆಗೊಳಿಸುವ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುತ್ತಿದೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಇನ್ನು ಸೊನೆಟ್ ಕಾರು ಮಾದರಿಯು ಸದ್ಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 1.2-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದ್ದು, ಪ್ರತಿಸ್ಪರ್ಧಿ ಕಾರುಗಳಿಂತಲೂ ಉತ್ತಮ ಫೀಚರ್ಸ್ ಹೊಂದಿದೆ.

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಸೊನೆಟ್ ಕಾರು ಆರಂಭಿಕವಾಗಿ ರೂ. 6.79 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.20 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರನ್ನು ಜಿಟಿ-ಲೈನ್ ಮತ್ತು ಟೆಕ್-ಲೈನ್ ವೆರಿಯೆಂಟ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ಸೊನೆಟ್ ಮತ್ತು ಸೆಲ್ಟೊಸ್ ಕಾರುಗಳಲ್ಲಿ ಕಿಯಾ ಮೋಟಾರ್ಸ್ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸಬ್ ಫೋರ್ ಮೀಟರ್ ಮತ್ತು ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಹೊಂದಿವೆ.


Click it and Unblock the Notifications








