2021ರ ಕಿಯಾ ಸೆಲ್ಟೊಸ್ ಕಾರಿನ ಐಎಂಟಿ ವರ್ಷನ್ ಟಿವಿ ಜಾಹೀರಾತು ಬಿಡುಗಡೆ

ಕಿಯಾ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಸೆಲ್ಟೊಸ್ ಕಾರಿನ 2021ರ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಕಂಪನಿಯು ಇದೀಗ ಹೊಸ ಕಾರಿನ ಐಎಂಟಿ(ಇಂಟಲಿಜೆನ್ಸ್ ಮ್ಯಾನುವಲ್ ಟ್ರಾನ್‌ಮಿಷನ್) ಆವೃತ್ತಿಯ ಟಿವಿ ಜಾಹೀರಾತು ಪ್ರಕಟಿಸಿದೆ.

2021ರ ಕಿಯಾ ಸೆಲ್ಟೊಸ್ ಕಾರಿನ ಐಎಂಟಿ ವರ್ಷನ್ ಟಿವಿ ಜಾಹೀರಾತು ಬಿಡುಗಡೆ

ಹೊಸ ಕಾರು ಮಾದರಿಯು ಬ್ರಾಂಡ್ ನ್ಯೂ ಲೊಗೊ ಸೇರಿದಂತೆ ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರಿನಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಜೋಡಣೆ ಮಾಡಲಾಗಿದೆ. ಹೊಸ ಕಾರಿನಲ್ಲಿ ಕಂಪನಿಯು ಇತ್ತೀಚೆಗೆ ಕ್ಲಚ್ ಲೆಸ್ ವೈಶಿಷ್ಟ್ಯತೆ ಹೊಂದಿರುವ ಐಎಂಟಿ(ಇಂಟಲಿಜೆನ್ಸ್ ಮ್ಯಾನುವಲ್ ಟ್ರಾನ್‌ಮಿಷನ್) ಆವೃತ್ತಿಯನ್ನು ಹೊಸದಾಗಿ ಅಭಿವೃದ್ದಿಗೊಳಿಸಿದ್ದು, ಹೊಸ ಆವೃತ್ತಿಯು ಮ್ಯಾನುವಲ್ ಮಾದರಿಯಲ್ಲೇ ಉತ್ತಮ ಕಾರ್ಯನಿರ್ವಹಣೆ ಬಯಸುವ ಗ್ರಾಹಕರಿಗೆ ಹೊಸ ಆವೃತ್ತಿಯು ಆಕರ್ಷಕವಾಗಿದೆ.

2021ರ ಕಿಯಾ ಸೆಲ್ಟೊಸ್ ಕಾರಿನ ಐಎಂಟಿ ವರ್ಷನ್ ಟಿವಿ ಜಾಹೀರಾತು ಬಿಡುಗಡೆ

ಸೆಲ್ಟೊಸ್ ಹೊಸ ಆವೃತ್ತಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.95 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.84 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರು ಮಾದರಿಯು ಹಳೆಯ ಆವೃತ್ತಿಗಿಂತಲೂ ರೂ. 6 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿದೆ.

2021ರ ಕಿಯಾ ಸೆಲ್ಟೊಸ್ ಕಾರಿನ ಐಎಂಟಿ ವರ್ಷನ್ ಟಿವಿ ಜಾಹೀರಾತು ಬಿಡುಗಡೆ

ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಸೆಲ್ಟೊಸ್ ಹೆಚ್‌ಟಿಎಕ್ಸ್ ಪ್ಲಸ್ 1.5 ಡೀಸೆಲ್ ಆವೃತ್ತಿಯ ಮಾರಾಟವನ್ನು ಸ್ಥಗಿತಗೊಳಿಸಿದ್ದು, ಹೆಚ್‌ಟಿಕೆ ಪ್ಲಸ್ 1.5-ಲೀಟರ್ ಪೆಟ್ರೋಲ್ ಮಾದರಿಯಲ್ಲಿ ಹೊಸದಾಗಿ ಐಎಂಟಿ(ಇಂಟಲಿಜೆನ್ಸ್ ಮ್ಯಾನುವಲ್ ಟ್ರಾನ್ಸ್‌ಮಿಷನ್) ಆಯ್ಕೆ ನೀಡಿದೆ.

ಹಾಗೆಯೇ ಟಾಪ್ ಎಂಡ್ ಮಾದರಿಯಲ್ಲಿ ಹೊಸದಾಗಿ ಕಂಪನಿಯು ಜಿಟಿಎಕ್ಸ್ ಆಪ್ಷನ್ ಆವೃತ್ತಿಯಲ್ಲಿ ಪೆಟ್ರೋಲ್ ಮ್ಯಾನುವಲ್ ಹೊಂದಿರುವ 1.4-ಲೀಟರ್ ಟರ್ಬೊ ಎಂಜಿನ್ ಆಯ್ಕೆ ನೀಡಿದ್ದು, ಪರ್ಫಾಮೆನ್ಸ್ ಪ್ರಿಯರಿಗಾಗಿ ಮಧ್ಯಮ ಕ್ರಮಾಂಕದ ಟರ್ಬೊ ಆವೃತ್ತಿ ನೀಡಲಾಗಿದೆ.

2021ರ ಕಿಯಾ ಸೆಲ್ಟೊಸ್ ಕಾರಿನ ಐಎಂಟಿ ವರ್ಷನ್ ಟಿವಿ ಜಾಹೀರಾತು ಬಿಡುಗಡೆ

ಹೊಸ ಲೊಗೊದೊಂದಿಗೆ ಸೆಲ್ಟೊಸ್ ಮಾದರಿಯ ಫೇಸ್‌ಲಿಫ್ಟ್ ಆವೃತ್ತಿಯ ಬಿಡುಗಡೆಯ ಯೋಜನೆಯಲ್ಲಿದ್ದ ಕಿಯಾ ಕಂಪನಿಗೆ ಕೋವಿಡ್ ಹಿನ್ನಡೆ ಉಂಟು ಮಾಡಿದ್ದು, ಸದ್ಯ ಈ ಹಿಂದಿನ ಮಾದರಿಯ ಎಂಜಿನ್ ಆಯ್ಕೆಯಲ್ಲಿಯೇ ತುಸು ಬದಲಾವಣೆಯೊಂದಿಗೆ ಮಾರಾಟ ಆರಂಭಿಸಿದೆ.

2021ರ ಕಿಯಾ ಸೆಲ್ಟೊಸ್ ಕಾರಿನ ಐಎಂಟಿ ವರ್ಷನ್ ಟಿವಿ ಜಾಹೀರಾತು ಬಿಡುಗಡೆ

ಇನ್ನು ಸೆಲ್ಟೊಸ್ ಹೊಸ ಕಾರಿನಲ್ಲಿ ಕಂಪನಿಯು ಸ್ಯಾಂಡ್, ಮಡ್, ಸ್ನೋ ಎನ್ನುವ ಮೂರು ಟ್ರಾಕ್ಷನ್ ಸೌಲಭ್ಯದೊಂದಿಗೆ ನಾರ್ಮಲ್, ಇಕೋ ಮತ್ತು ಸ್ಪೋರ್ಟ್ ಡ್ರೈವಿಂಗ್ ಮೋಡ್‌ಗಳನ್ನು ಜೋಡಣೆ ಮಾಡಿದ್ದು, ಹೆಚ್‌ಟಿಕೆ ಪ್ಲಸ್ ಮಾದರಿಯಲ್ಲಿ ಫ್ರ್ಯಾಬಿಕ್ ಆಸನ, ಎಲೆಕ್ಟ್ರಿಕ್ ಸನ್‌ರೂಫ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಸೌಲಭ್ಯಗಳನ್ನು ಪಡೆದುಕೊಂಡಿದೆ.

2021ರ ಕಿಯಾ ಸೆಲ್ಟೊಸ್ ಕಾರಿನ ಐಎಂಟಿ ವರ್ಷನ್ ಟಿವಿ ಜಾಹೀರಾತು ಬಿಡುಗಡೆ

ಇನ್ನುಳಿದ ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ ಎಇ, ಹೆಚ್‌ಟಿಎಕ್ಸ್ ಪ್ಲಸ್, ಜಿಟಿಎಕ್ಸ್ ಆಪ್ಷನ್ ಮತ್ತು ಜಿಟಿಎಕ್ಸ್ ಪ್ಲಸ್ ಮಾದರಿಗಳಲ್ಲಿ ಹೆಚ್ಚುವರಿಯಾಗಿ ಎಲೆಕ್ಟ್ರಾನಿಕ್ ಅಸಿಸ್ಟ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ವೆಹಿಕಲ್ ಸ್ಟ್ಯಾಬಿಲಿಟಿ ಮ್ಯಾನೆಜ್‌ಮೆಂಟ್, ಬ್ರೇಕ್ ಅಸಿಸ್ಟ್, ಆಟೋಮ್ಯಾಟಿಕ್ ಮಾದರಿಗಳಿಗಾಗಿ ಪ್ಯಾಡಲ್ ಶಿಫ್ಟರ್, ವಾಯ್ಸ್ ಕಮಾಂಡರ್, ಏರ್ ಪ್ಯೂರಿಫೈರ್ ಫೀಚರ್ಸ್‌ಗಳನ್ನು ನೀಡಲಾಗಿದೆ.

2021ರ ಕಿಯಾ ಸೆಲ್ಟೊಸ್ ಕಾರಿನ ಐಎಂಟಿ ವರ್ಷನ್ ಟಿವಿ ಜಾಹೀರಾತು ಬಿಡುಗಡೆ

ಕಿಯಾ ಕಂಪನಿಯ ಹೊಸ ಸೆಲ್ಟೊಸ್ ಕಾರಿನಲ್ಲಿ ಈ ಬಾರಿ ಮತ್ತೊಂದು ಪ್ರಮುಖ ಬದಲಾವಣೆ ಅಂದರೆ ಅದು ಹೊಸ ಕಾರಿನ ಬ್ಯಾನೆಟ್, ಟೈಲ್‌ಗೆಟ್, ಅಲಾಯ್ ವೀಲ್ಹ್ ಮತ್ತು ಸ್ಟೀರಿಂಗ್ ವೀಲ್ಹ್ ಮೇಲೆ ಹೊಸ ಲೊಗೊ ವಿನ್ಯಾಸವು ಗಮನಸೆಳೆಯುತ್ತಿದೆ.

More from DriveSpark

Article Published On: Monday, June 21, 2021, 8:45 [IST]
English summary
Kia India Introduced New Seltos iMT TVC.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+