ಮಾರುತಿ ಎರ್ಟಿಗಾ ಕಾರಿಗೆ ಪೈಪೋಟಿಯಾಗಿ ಬರಲಿವೆ ಈ ಹೊಸ ಕಾರುಗಳು
ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಾರು ತಯಾರಕರು ಅನೇಕ ಹೊಸ ಎಸ್‍ಯುವಿಗಳು ಮತ್ತು ಎಂಪಿವಿಗಳನ್ನು ಯೋಜಿಸಿದ್ದಾರೆ. ಎಂಪಿವಿ ವಿಭಾಗದಲ್ಲಿ ಮಾರುತಿ ಸುಜುಕಿ ಎರ್ಟಿಗಾ ಏಪ್ರಿಲ್ 2012ರಲ್ಲಿ ಬಿಡುಗಡೆಯಾದಾಗಿನಿಂದಲೂ ಈ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ.

ಈ ಮಾರುತಿ ಸುಜುಕಿ ಎರ್ಟಿಗಾ ಮಾದರಿಯು 2018 ರಲ್ಲಿ ತನ್ನ ಎರಡನೇ ತಲೆಮಾರಿನ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಶೀಘ್ರದಲ್ಲೇ ಎರ್ಟಿಗಾ ಮಾದರಿಯು ಮಿಡ್-ಲೈಫ್ ಅಪ್‌ಡೇಟ್ ಪಡೆಯಲಿದೆ. ಜನಪ್ರಿಯ ಕಾರು ತಯಾರಕರಾದ ಹ್ಯುಂಡೈ, ಕಿಯಾ ಮತ್ತು ಎಂಜಿ ಮೋಟರ್ ಕಂಪನಿಗಳು ಕಾಂಪ್ಯಾಕ್ಟ್ ಎಂಪಿವಿ ವಿಭಾಗದಲ್ಲಿ ಎರ್ಟಿಗಾದ ಪ್ರಾಬಲ್ಯವನ್ನು ಪ್ರಶ್ನಿಸಲು ಯೋಜಿಸುತ್ತಿವೆ. ಈ ಜನಪ್ರಿಯ ಕಾರು ತಯಾರಕ ಕಂಪನಿಗಳು ಎರ್ಟಿಗಾ ಮಾದರಿಗೆ ಪೈಪೋಟಿಯಾಗಿ ಹೊಸ ಎಂಪಿವಿಯನ್ನು ಬಿಡುಗಡೆಗೊಳಿಸಲಿದೆ.

ಹೊಸ ಹ್ಯುಂಡೈ, ಕಿಯಾ ಮತ್ತು ಎಂಜಿ ಕಾಂಪ್ಯಾಕ್ಟ್ ಎಂಪಿವಿಗಳ ಅಧಿಕೃತ ಬಿಡುಗಡೆಯನ್ನು ಇನ್ನು ಕಂಪನಿಗಳು ಬಹಿರಂಗಪಡಿಸಿಲ್ಲ. ಈ ಹೊಸ ಎಂಪಿವಿ ಮಾದರಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಮೊದಲಿಗೆ ದಕ್ಷಿಣ ಕೊರಿಯಾದ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಲೆವೆಲ್ ಎಂಪಿವಿಯಲ್ಲಿ ಅಭಿವೃದ್ಧಿ ಪಡಿಸುತ್ತಿದ್ದಾರೆ. ಹೊಸ ಹ್ಯುಂಡೈ ಕಾಂಪ್ಯಾಕ್ಟ್ ಎಂಪಿವಿ ಕ್ರೆಟಾ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರಬಹುದು.

ಇದನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಬಹುದು. ಪೆಟ್ರೋಲ್ ಮಾದರಿಯು 1.5 ಎಲ್ ಎಂಜಿನ್ ಪಡೆಯುವ ಸಾಧ್ಯತೆಯಿದ್ದರೆ, ಡೀಸೆಲ್ 113 ಬಿಹೆಚ್‌ಪಿ ಉತ್ಪಾದಿಸುವ ಆಯಿಲ್ ಬರ್ನರ್ ನಿಂದ ಎಂಜಿನ್ ಆಗಿರುತ್ತದೆ.

ಕಿಯಾ ಇಂಡಿಯಾ ಕಂಪನಿಯು 2022ರ ಆರಂಭದಲ್ಲಿ ಎಲ್ಲ ವಿಭಾಗಕ್ಕೆ ಪ್ರವೇಶಿಸುವ ಯೋಜನೆಯನ್ನು ಪ್ರಕಟಿಸಿತ್ತು. ಇದು ಸೆಲ್ಟೋಸ್ ಪ್ಲಾಟ್‌ಫಾರ್ಮ್ ಆಧಾರಿತ ಕಾಂಪ್ಯಾಕ್ಟ್ 7-ಸೀಟುರುಗಳ ಎಂಪಿವಿ ಎಂದು ವರದಿಯಾಗಿದೆ.

ಹೊಸ ಕಿಯಾ 7-ಸೀಟರ್ ಎಂಪಿವಿಯ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಈ ಹೊಸ ಎಂಪಿವಿಯು 1.5 ಎಲ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರಲಿದೆ ಎಂದು ವರದಿಯಾಗಿದೆ.

ಇನ್ನು ಎಂಜಿ 360ಎಂ ಮಿಡ್-ಸೈಜ್ 7-ಸೀಟುರ್ ಎಂಪಿವಿ 2020ರ ಆಟೋ ಎಕ್ಸ್‌ಪೋದಲ್ಲಿ ಎಂಜಿ ಜಿ10 ಜೊತೆಗೆ ಪ್ರದರ್ಶಿಸಲಾಗಿತ್ತು. ಅದರ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳಲ್ಲಿದರೂ, ಈ ಮಾದರಿಯು ಬಿಡುಗಡೆಯಾದರೆ ಮಾರುತಿ ಎರ್ಟಿಗಾಗೆ ಪೈಪೋಟಿ ನೀಡುತ್ತದೆ.

ಚೀನಾ-ಸ್ಪೆಕ್ ಬಾವೊಜುನ್ 360 ಮಾದರಿಯಾಗಿ ಮಾರಾಟ ಮಾಡಲಾಗುತ್ತಿದೆ. ಈ ಎಂಪಿವಿಯು 1.5 ಎಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 103 ಬಿಹೆಚ್‌ಪಿ ಪವರ್ ಮತ್ತು 135 ಎನ್ಎಂ ಟಾರ್ಕ್ ಉತತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ.


Click it and Unblock the Notifications