7-ಸೀಟರ್ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಕಿಯಾ ಸೊನೆಟ್ ಎಸ್‍ಯುವಿ
ಕಿಯಾ ಮೋಟಾರ್ಸ್ ಕಂಪನಿಯು ಕಳೆದ ವರ್ಷ ಭಾರತ ಸೇರಿಂದತೆ ಆಯ್ದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸೊನೆಟ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆ ಮಾಡಿತು. ಕಿಯಾ ಸೊನೆಟ್ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯು ಭಾರತದಲ್ಲಿ ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ.

ಭಾರತದಲ್ಲಿ ಮಾರಾಟವಾಗುವ ಕಿಯಾ ಸೊನೆಟ್ 4 ಮೀಟರ್‌ಗಿಂತ ಕಡಿಮೆ ಉದ್ದದಲ್ಲಿದ್ದರೆ, ಇತರ ಮಾರುಕಟ್ಟೆಗಳಲ್ಲಿ ಮಾರಾಟವಾದ ಸೋನೆಟ್ 4 ಮೀಟರ್‌ಗಿಂತ ಹೆಚ್ಚು ಉದ್ದವಿದೆ. ವರದಿಗಳ ಪ್ರಕಾರ, ಕಿಯಾ ಮೋಟಾರ್ಸ್ ಕಂಪನಿಯು ಮೂರು ಸಾಲಿನ 7 ಸೀಟರ್ ಎಸ್‍ಯುವಿಯನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಈ ಹೊಸ ಸೊನೆಟ್ 7 ಸೀಟರ್ ಎಸ್‍ಯುವಿಯು ಇದೇ ತಿಂಗಳ 8ರಂದು ಅನಾವರಣವಾಗಲಿದೆ ಎಂದು ಹೇಳಲಾಗುತ್ತಿದೆ.

ಕಿಯಾ ಸೊನೆಟ್ 7 ಸೀಟರ್ ಎಸ್‍ಯುವಿಯು ಇಂಡೋನೇಷ್ಯಾದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇಂಡೋನೇಷ್ಯಾದಲ್ಲಿ 5 ಸೀಟರ್ ಮಾದರಿ ಈಗಾಗಲೇ ಮಾರಾಟದಲ್ಲಿದೆ, ಇದು 4,120 ಎಂಎಂ ಉದ್ದವನ್ನು ಹೊಂದಿದೆ. ಇಂಡಿಯಾ-ಸ್ಪೆಕ್ ಕಿಯಾ ಸೊನೆಟ್ 3,995 ಎಂಎಂ ಉದ್ದವಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಈ ಎರಡೂ ಆವೃತ್ತಿಗಳನ್ನು ಆಂಧ್ರಪ್ರದೇಶದ ಕಿಯಾ ಮೋಟಾರ್ಸ್‌ನ ಅನಂತಪುರ ಉತ್ಪಾದನಾ ಕೇಂದ್ರದಲ್ಲಿ ಉತ್ಪಾದಿಸಲಾಗಿದೆ. 7-ಸೀಟರ್ ಕಿಯಾ ಸೊನೆಟ್ ಎಸ್‍ಯುವಿಯು ಸದ್ಯ ಮಾರುಕಟ್ಟೆಯಲ್ಲಿರುವ 5 ಸೀಟರ್ ಎಸ್‍ಯುವಿಗೆ ಹೋಲುವ ರೀತಿ ಇರುತ್ತದೆ ಎಂದು ವರದಿಗಳಾಗಿದೆ.

ಇದಕ್ಕೆ ಉತ್ತಮ ಉದಾಹರಣೆ ಜೀಪ್ ಮತ್ತು ಜೀಪ್ 7-ಸೀಟರ್ ಹಾಗೆ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಆಗಿದೆ. ಅಂದರೆ ಮೂರನೇ ಸಾಲಿಗೆ ಬೂಟ್ ಜಾಗವನ್ನು ಬಳಸಲಾಗುತ್ತದೆ. ಮೂರನೆಯ ಸಾಲು ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅಂದರೆ ವಯಸ್ಕರರು ಮೂರನೇ ಸಾಲಿನಲ್ಲಿ ಬಿಗಿಯಾಗಿ ಕುಳಿತುಕೊಳ್ಳಬೇಕಾಗುತ್ತದೆ. ಹೆಚ್ಚಿನ 7-ಸೀಟರ್ ಎಸ್‍ಯುವಿಗಳು ಇದೇ ಮಾದರಿಯಲ್ಲಿರುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

7-ಸೀಟರ್ ಎಸ್‍ಯುವಿಗಳಲ್ಲಿ ಹೆಚ್ಚಿನ ಬೂಟ್ ಸ್ಪೇಸ್ ಲಭ್ಯವಿರುವುದಿಲ್ಲ. ಇನ್ನು ಕಿಯಾ ಸೊನೆಟ್ 7-ಸೀಟರ್ ಎಸ್‍ಯುವಿಯಲ್ಲಿ ಮೂರನೇ ಸಾಲಿನ ಸೀಟನ್ನು 50:50 ಸ್ಪ್ಲಿಟ್ ಆಗಿ ಮಾಡಚುವ ಆಯ್ಕೆಯನ್ನು ನೀಡಬಹುದು. ಹೀಗೆ ನೀಡಿದರೆ ಹೆಚ್ಚಿನ ಬೂಟ್ ಸ್ಪೇಸ್ ಲಭ್ಯವಾಗುತ್ತದೆ.

ಇನ್ನು ಇಂಡೋನೇಷ್ಯಾದಲ್ಲಿ ಬಿಡುಗಡೆಗೊಳಿಸಲಿರುವ ಸೊನೆಟ್ 7-ಸೀಟರ್ ಎಸ್‍ಯುವಿಯಲ್ಲಿ 1.5-ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 113 ಬಿಹೆಚ್‍ಪಿ ಪವರ್ ಮತ್ತು 144 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇನ್ನು ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಬಹುದು. ಕಿಯಾ ಸೊನೆಟ್ 7-ಸೀಟರ್ ಎಸ್‍ಯುವಿಯ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿಲ್ಲ. ಈ ಎಸ್‍ಯುವಿಯು ಅನಾವರಣಗೊಂಡ ಬಳಿಕ ಹೆಚ್ಚಿನ ಮಾಹಿತಿ ಬಹಿರಂಗವಾಗುತ್ತದೆ.

ಭಾರತದಲ್ಲಿ ಮಾರಾಟವಾಗುವ ಕಿಯಾ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯು ಪೆಟ್ರೋಲ್ ಮತ್ತು ಎರಡು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.2-ಲೀಟರ್ ಯುನಿಟ್ ಮತ್ತು 1.0-ಲೀಟರ್ ಟರ್ಬೊ-ಚಾರ್ಜ್ಡ್ ಪೆಟ್ರೋಲ್ ಅನ್ನು ಹೊಂದಿದೆ.

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೊನೆಟ್ ಅತಿ ಹೆಚ್ಚು ಪೈಪೋಟಿ ಹೊಂದಿರುವ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಕಿಯಾ ಸೊನೆಟ್ ತನ್ನ ಪ್ರತಿಸ್ಪರ್ಧಿಗಳಿಗೆ ಪ್ರಬಲ ಪೈಪೋಟಿಯನ್ನು ನೀಡುತ್ತಿದೆ.ಇನ್ನು ಮುಂದಿನ ವರ್ಷಗಳಲ್ಲಿ ಕಿಯಾ ಸೊನೆಟ್ 7-ಸೀಟರ್ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications








