ಹೊಸ ಫೀಚರ್ಸ್ ಒಳಗೊಂಡ ಸೊನೆಟ್ ಹೆಚ್‌ಟಿಎಕ್ಸ್ ಪರಿಚಯಿಸಲಿದೆ ಕಿಯಾ ಮೋಟಾರ್ಸ್

ಹೊಸ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಕಿಯಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲೇ ತನ್ನ ಕಾರುಗಳಲ್ಲಿ ಫೇಸ್‌ಲಿಫ್ಟ್ ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಗ್ರಾಹಕರ ಬೇಡಿಕೆ ಆಧರಿಸಿ ಸೊನೆಟ್ ಮಾದರಿಯ ಕೆಲವು ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸುವುದರ ಜೊತೆಗೆ ಮತ್ತೆರಡು ಹೊಸ ವೆರಿಯೆಂಟ್ ಪರಿಚಯಿಸುವ ಸುಳಿವು ನೀಡಿದೆ.

ಹೊಸ ಫೀಚರ್ಸ್ ಒಳಗೊಂಡ ಸೊನೆಟ್ ಹೆಚ್‌ಟಿಎಕ್ಸ್ ಪರಿಚಯಿಸಲಿದೆ ಕಿಯಾ ಮೋಟಾರ್ಸ್

ಕಿಯಾ ಮೋಟಾರ್ಸ್ ಕಂಪನಿಯು ಸೊನೆಟ್ ಕಾರು ಮಾದರಿಯಲ್ಲಿ ಸದ್ಯ ವಿವಿಧ ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆಗಳಿಗೆ ಅನುಗುಣವಾಗಿ 24 ವೆರಿಯೆಂಟ್‌ಗಳನ್ನು ಮಾರಾಟ ಮಾಡುತ್ತಿದ್ದು, ಹೊಸ ಆವೃತ್ತಿಗಳಲ್ಲಿ ಕೆಲವು ಬೇಡಿಕೆಯಿಲ್ಲದ ವೆರಿಯೆಂಟ್‌ಗಳನ್ನು ವೀಲಿನಗೊಳಿಸಿ ಹೊಸ ವೆರಿಯೆಂಟ್‌ಗಳೊಂದಿಗೆ ಗ್ರಾಹಕರ ಆಯ್ಕೆಯನ್ನು ಸರಳಗೊಳಿಸಲು ನಿರ್ಧರಿಸಲಾಗಿದೆ. ಹೆಚ್ಚುವರಿ ವೆರಿಯೆಂಟ್‌ಗಳಿಂದಾಗಿ ಗ್ರಾಹಕರ ಆಯ್ಕೆಯಲ್ಲಿ ಗೊಂದಲ ಉಂಟಾಗುತ್ತಿದ್ದು, ಹೊಸ ವೆರಿಯೆಂಟ್‌ಗಳು ಸೊನೆಟ್ ಕಾರಿನ ಬೇಡಿಕೆ ಹೆಚ್ಚಿಸಲಿವೆ.

ಹೊಸ ಫೀಚರ್ಸ್ ಒಳಗೊಂಡ ಸೊನೆಟ್ ಹೆಚ್‌ಟಿಎಕ್ಸ್ ಪರಿಚಯಿಸಲಿದೆ ಕಿಯಾ ಮೋಟಾರ್ಸ್

ಮಾಹಿತಿಗಳ ಪ್ರಕಾರ ಕಿಯಾ ಮೋಟಾರ್ಸ್ ಕಂಪನಿಯು ಪೆಟ್ರೋಲ್ ಮ್ಯಾನುವಲ್ ಮಾದರಿಗಳನ್ನು ಸ್ಥಗಿತಗೊಳಿಸುವ ಸಿದ್ದತೆಯಲ್ಲಿದ್ದು, 2021ರ ಮಾದರಿಯಲ್ಲಿ ಹೆಚ್‌ಟಿಎಕ್ಸ್ ಡಿಸಿಟಿ ಪೆಟ್ರೋಲ್ ಮತ್ತು ಹೆಚ್‌ಟಿಎಕ್ಸ್ ಡೀಸೆಲ್ ಮಾದರಿಯು ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಹೊಸ ಫೀಚರ್ಸ್ ಒಳಗೊಂಡ ಸೊನೆಟ್ ಹೆಚ್‌ಟಿಎಕ್ಸ್ ಪರಿಚಯಿಸಲಿದೆ ಕಿಯಾ ಮೋಟಾರ್ಸ್

ಹೊಸದಾಗಿ ಪರಿಚಯಿಸಲಾಗುತ್ತಿರುವ ಹೆಚ್‌ಟಿಎಕ್ಸ್ ಮಾದರಿಯಲ್ಲಿ ಕಿಯಾ ಮೋಟಾರ್ಸ್ ಕಂಪನಿಯು ಅಲಾಯ್ ವೀಲ್ಹ್, ಟ್ರಾಕ್ಷನ್ ಕಂಟ್ರೊಲ್ ಸೌಲಭ್ಯಗಳನ್ನು ಹೆಚ್ಚುವರಿಯಾಗಿ ಜೋಡಣೆ ಮಾಡುತ್ತಿದ್ದು, ಹೊಸ ಕಾರು ಎಂಟ್ರಿ ಲೆವಲ್ ಮಾದರಿಯಲ್ಲಿ ಅತ್ಯುತ್ತಮ ಫೀಚರ್ಸ್ ಬಯಸುವ ಗ್ರಾಹಕರಿಗೆ ಉತ್ತಮವಾಗಿದೆ.

ಹೊಸ ಫೀಚರ್ಸ್ ಒಳಗೊಂಡ ಸೊನೆಟ್ ಹೆಚ್‌ಟಿಎಕ್ಸ್ ಪರಿಚಯಿಸಲಿದೆ ಕಿಯಾ ಮೋಟಾರ್ಸ್

ಸೊನೆಟ್ ಕಾರು ಮಾದರಿಯು ಸದ್ಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 1.2-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದ್ದು, ಪ್ರತಿಸ್ಪರ್ಧಿ ಕಾರುಗಳಿಂತಲೂ ಉತ್ತಮ ಫೀಚರ್ಸ್ ಹೊಂದಿದೆ. ಭಾರತದಲ್ಲಿ ಕಿಯಾ ಮೋಟಾರ್ಸ್ ನಿರ್ಮಾಣದ ಮೂರನೇ ಕಾರು ಮಾದರಿಯಾಗಿ ಬಿಡುಗಡೆಯಾಗಿರುವ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಸಾಮಾನ್ಯ ಮಾದರಿಯ ಪೆಟ್ರೋಲ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ.

ಹೊಸ ಫೀಚರ್ಸ್ ಒಳಗೊಂಡ ಸೊನೆಟ್ ಹೆಚ್‌ಟಿಎಕ್ಸ್ ಪರಿಚಯಿಸಲಿದೆ ಕಿಯಾ ಮೋಟಾರ್ಸ್

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಸೊನೆಟ್ ಕಾರು ಆರಂಭಿಕವಾಗಿ ರೂ. 6.79 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.20 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರನ್ನು ಜಿಟಿ-ಲೈನ್ ಮತ್ತು ಟೆಕ್-ಲೈನ್ ವೆರಿಯೆಂಟ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಹೊಸ ಫೀಚರ್ಸ್ ಒಳಗೊಂಡ ಸೊನೆಟ್ ಹೆಚ್‌ಟಿಎಕ್ಸ್ ಪರಿಚಯಿಸಲಿದೆ ಕಿಯಾ ಮೋಟಾರ್ಸ್

ಜಿಟಿ-ಲೈನ್ ಮಾದರಿಯಲ್ಲಿ ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್ ಮತ್ತು ಹೆಚ್‌ಟಿಎಕ್ಸ್ ಪ್ಲಸ್ ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದಲ್ಲಿ ಜಿಟಿ ಲೈನ್‌ನಲ್ಲಿ ಜಿಟಿಎಕ್ಸ್ ಪ್ಲಸ್ ವೆರಿಯೆಂಟ್ ಖರೀದಿಗೆ ಲಭ್ಯವಿದೆ.

ಹೊಸ ಫೀಚರ್ಸ್ ಒಳಗೊಂಡ ಸೊನೆಟ್ ಹೆಚ್‌ಟಿಎಕ್ಸ್ ಪರಿಚಯಿಸಲಿದೆ ಕಿಯಾ ಮೋಟಾರ್ಸ್

ಹೊಸ ಸೊನೆಟ್ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸಬ್ ಫೋರ್ ಮೀಟರ್ ಕಾರು ಮಾದರಿಯಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ಫೀಚರ್ಸ್ ಒಳಗೊಂಡ ಸೊನೆಟ್ ಹೆಚ್‌ಟಿಎಕ್ಸ್ ಪರಿಚಯಿಸಲಿದೆ ಕಿಯಾ ಮೋಟಾರ್ಸ್

ಹೊಸ ಕಾರು ಬಿಡುಗಡೆಯಾದ ಕೆಲವೇ ತಿಂಗಳಿನಲ್ಲಿ ಹೊಸ ಕಾರು ಭಾರೀ ಪ್ರಮಾಣದಲ್ಲಿ ಮಾರಾಟವಾಗಿದ್ದು, ಶೀಘ್ರದಲ್ಲೇ ಹೊಸ ಕಾರು ವಿನೂತನ ಲೊಗೊ ಸೌಲಭ್ಯದೊಂದಿಗೆ 2021ರ ಮಾದರಿಯೊಂದಿಗೆ ಮಾರಾಟಗೊಳ್ಳುವ ಸಿದ್ದತೆಯಲ್ಲಿದೆ.

More from DriveSpark

Article Published On: Friday, April 23, 2021, 15:30 [IST]
English summary
Kia Sonet HTX Variant To Get Alloy Wheels And Traction Control Feature. Read in Kkannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+