ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2021ರ ಕಿಯಾ ಕೆ9 ಫೇಸ್‌ಲಿಫ್ಟ್ ಕಾರು
ಕಿಯಾ ಕಂಪನಿಯು ತನ್ನ ಹೊಸ ಕೆ9 ಫೇಸ್‌ಲಿಫ್ಟ್ ಸೆಡಾನ್ ಅನ್ನು ತಮ್ಮ ತಾಯಿನಾಡು ದಕ್ಷಿಣ ಕೊರಿಯಾದ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಫ್ಲ್ಯಾಗ್‌ಶಿಪ್ ಕಿಯಾ ಕೆ9 ಫೇಸ್‌ಲಿಫ್ಟ್ ಸೆಡಾನ್ ವಿನ್ಯಾಸದಲ್ಲಿ ಸಾಕಷ್ಟು ಹೊಸ ನವೀಕರಣಗಳನ್ನು ಪಡೆದುಕೊಂಡಿವೆ.

ಈ ಹೊಸ ಕಿಯಾ ಕೆ9 ಫೇಸ್‌ಲಿಫ್ಟ್ ಕಾರು ದಪ್ಪ ಕ್ರೋಮ್ ಸರೌಂಡ್ ಮತ್ತು ವಿ-ಆಕಾರದ ಕ್ರೋಮ್ ಇನ್ ಸರ್ಟ್ ಗಳನ್ನು ಒಳಗೊಂಡಿವೆ, ಇನ್ನು ಇದರಲ್ಲಿ ಸ್ಲೀಕರ್ ಹೆಡ್‌ಲ್ಯಾಂಪ್‌ಗಳು ಇಂಟಿಗ್ರೇಟೆಡ್ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಗಳು ವೋಲ್ವೋಸ್‌ನಿಂದ ಸ್ಫೂರ್ತಿ ಪಡೆದಂತೆ ಕಾಣುತ್ತವೆ. ನವೀಕರಿಸಿದ ಮುಂಭಾಗದ ಬಂಪರ್ ಹೆಚ್ಚು ಅಗಲವಾಗಿದೆ. ಇದರೊಂದಿಗೆ ಏರ್ ಇನ್ ಟೆಕ್ ಅನ್ನು ಹೊಂದಿದೆ.

ವಿನ್ಯಾಸ ನವೀಕರಣಗಳು ಪೂರ್ಣ-ಗಾತ್ರದ ಸೆಡಾನ್‌ಗೆ ಹೊಸ ಲುಕ್ ಅನ್ನು ನೀಡಿದೆ. ಹಿಂಭಾಗವು ಪೂರ್ಣ-ಅಗಲದ ಎಲ್ಇಡಿ ಟೈಲ್ ಲ್ಯಾಂಪ್ ಸೆಟಪ್ ಅನ್ನು ಹೆಚ್ಚು ಆಧುನಿಕತೆಯನ್ನು ಸೇರಿಸುತ್ತದೆ ನಂಬರ್ ಪ್ಲೇಟ್ ಅನ್ನು ಬಂಪರ್‌ಗೆ ಮರುಹೊಂದಿಸಲಾಗುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಕ್ರೋಮ್ ಟಿಪ್ಸ್ ಗಳೊಂದಿಗೆ ಡ್ಯುಯಲ್ ಎಕ್ಸಾಸ್ಟ್ ಪೈಪ್‌ಗಳು 2021ರ ಕಿಯಾ ಕೆ9 ಫೇಸ್‌ಲಿಫ್ಟ್ ಸೆಡಾನ್ ಮಾದರಿಗೆ ಸ್ಪೋರ್ಟಿ ವೈಬ್ ನೀಡಿದೆ. ಇನ್ನು ಈ ಕಾರಿನಲ್ಲಿ ಕ್ರೋಮ್ಡ್ ವಿಂಡೋ ಲೈನ್ ಮತ್ತು 19 ಇಂಚಿನ ವ್ಹೀಲ್ ಗಳನ್ನು ಹೊಂದಿವೆ.

ಇನ್ನು ಹೊಸ ಕಾರ್ಪೊರೇಟ್ ಬ್ಯಾಡ್ಜ್ ಮತ್ತು ಶಾರ್ಕ್ ಫಿನ್ ಆಂಟೆನಾ ಇತರ ಗಮನಾರ್ಹ ಅಂಶಗಳನ್ನು ಕೂಡ ಒಳಗೊಂಡಿದೆ. ಒಟ್ಟಾರೆಯಾಗಿ ಕಿಯಾ ಕೆ9 ಫೇಸ್‌ಲಿಫ್ಟ್ ಕಾರು ವಿನ್ಯಾಸ ನವೀಕರಣಗಳೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಕಿಯಾ ಕೆ9 ಫೇಸ್‌ಲಿಫ್ಟ್ ಸೆಡಾನ್ ಟಾಪ್ ಸ್ಪೆಕ್ ರೂಪಾಂತರವು ಆಲ್-ವ್ಹೀಲ್-ಡ್ರೈವ್ ಸಿಸ್ಟಂ ಅನ್ನು ಹೊಂದಿರುತ್ತದೆ. ಇದರೊಂದಿಗೆ ಹೊಸ ಕಿಯಾ ಸೆಡಾನ್ ಕಾರು ಹಲವಾರು ಅತ್ಯಾಧುನಿಕ ತಂತ್ರಜ್ಙಾನಗಳನ್ನು ಒಳಗೊಂಡಿರುತ್ತದೆ.

ಈ ಹೊಸ ಕಾರಿನಲ್ಲಿ 3.0-ಲೀಟರ್ ಟಿ-ಜಿಡಿ ವಿ6 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 370 ಬಿಹೆಚ್‍ಪಿ ಪವರ್ ಮತ್ತು 510 ಎನ್ಎಂ,ಟಾರ್ಕ್ ಅನ್ನು ಉತ್ಪಾಡಿಸುವ ಸಾಮರ್ಥ್ಯವನ್ನು ಹೊಂದಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಇನ್ನು ಈ ಕಿಯಾ ಕೆ9 ಫೇಸ್‌ಲಿಫ್ಟ್ ಕಾರಿನಲ್ಲಿ 3.8 ವಿ6 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 315 ಬಿಹೆಚ್‍ಪಿ ಪವರ್ ಮತ್ತು 397 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 5.0-ಲೀಟರ್ ವಿ8 ಎಂಜಿನ್ ಅನ್ನು ಕೂಡ ಹೊಂದಿದ್ದು, ಈ ಎಂಜಿನ್ 425 ಬಿಹೆಚ್‍ಪಿ ಪವರ್ ಮತ್ತು 520 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ಗಳೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಶೀಘ್ರದಲ್ಲೇ ಈ ಹೊಸ ಕಿಯಾ ಕೆ9 ಫೇಸ್‌ಲಿಫ್ಟ್ ಕಾರು ದಕ್ಷಿಣ ಕೊರಿಯಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ನಂತರ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಇನ್ನು ಭಾರತದಲ್ಲಿ ಕಿಯಾ ಕೆ9 ಫೇಸ್‌ಲಿಫ್ಟ್ ಕಾರು ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ.


Click it and Unblock the Notifications








