ಎರಡು ವಿಮಾನ ನಿಲ್ದಾಣಗಳ ನಡುವೆ ಹಾರಾಟ ನಡೆಸಿದ ಹಾರುವ ಕಾರು

ಹಾಲಿವುಡ್ ಸಿನಿಮಾಗಳಲ್ಲಿ ಹಾರುವ ಕಾರುಗಳನ್ನು ತೋರಿಸಲಾಗುತ್ತದೆ. ಇವುಗಳನ್ನು ನೋಡುವ ವೀಕ್ಷಕರು ನಿಜ ಜೀವನದಲ್ಲಿಯೂ ಹಾರುವ ಕಾರುಗಳಿದ್ದರೆ ಎಷ್ಟು ಚಂದ ಎಂದು ಅಂದು ಕೊಳ್ಳುವುದು ಸುಳ್ಳಲ್ಲ.

ಎರಡು ವಿಮಾನ ನಿಲ್ದಾಣಗಳ ನಡುವೆ ಹಾರಾಟ ನಡೆಸಿದ ಹಾರುವ ಕಾರು

ಹಾರುವ ಕಾರುಗಳನ್ನು ನಿಜವಾಗಿಯೂ ಬಳಕೆಗೆ ತರಲು ಹಲವಾರು ಅಡೆ ತಡೆಗಳಿವೆ. ಆದರೂ ಕೆಲವು ಕಂಪನಿಗಳು ಈಗಾಗಲೇ ಹಾರುವ ಕಾರುಗಳ ಪರೀಕ್ಷೆಯನ್ನು ಆರಂಭಿಸಿವೆ. ಅವುಗಳಲ್ಲಿ ಯಶಸ್ಸನ್ನು ಸಹ ಕಂಡಿವೆ. ಅಂತಹ ಒಂದು ಹಾರುವ ಕಾರಿನ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಎರಡು ವಿಮಾನ ನಿಲ್ದಾಣಗಳ ನಡುವೆ ಹಾರಾಟ ನಡೆಸಿದ ಹಾರುವ ಕಾರು

ಪಿಎಎಲ್-ವಿ (ಪ್ರೈವೇಟ್ ಏರ್ ಲ್ಯಾಂಡ್ ವೆಹಿಕಲ್) ಡಚ್ ಮೂಲದ ಹಾರುವ ಕಾರು ತಯಾರಕ ಕಂಪನಿಯಾಗಿದೆ. ಈ ಕಂಪನಿಯ ಲಿಬರ್ಟಿ ಕಾರು ಕಳೆದ ವರ್ಷ ರಸ್ತೆಯಲ್ಲಿ ಹಾರಾಟ ನಡೆಸಲು ಅನುಮತಿ ಪಡೆದ ಮೊದಲ ಹಾರುವ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಎರಡು ವಿಮಾನ ನಿಲ್ದಾಣಗಳ ನಡುವೆ ಹಾರಾಟ ನಡೆಸಿದ ಹಾರುವ ಕಾರು

ಕ್ಲೈನ್ ​​ವಿಷನ್ ಪೇಟೆಂಟ್ ಪಡೆದ ಹಾರುವ ಕಾರನ್ನು ಸ್ಲೋವಾಕಿಯಾದ ಎರಡು ವಿಮಾನ ನಿಲ್ದಾಣಗಳ ನಡುವೆ ಪರೀಕ್ಷಿಸಲಾಗುತ್ತಿದೆ. ಈ ಮೂಲಕ ಈ ಕಾರು ಎರಡು ವಿಮಾನ ನಿಲ್ದಾಣಗಳ ನಡುವೆ ಹಾರಾಟ ನಡೆಸಿದ ಮೊದಲ ಹಾರುವ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಎರಡು ವಿಮಾನ ನಿಲ್ದಾಣಗಳ ನಡುವೆ ಹಾರಾಟ ನಡೆಸಿದ ಹಾರುವ ಕಾರು

ಈ ಹಾರುವ ಕಾರನ್ನು ಸ್ಲೊವಾಕಿಯಾದ ನೈತ್ರಾ ವಿಮಾನ ನಿಲ್ದಾಣದಿಂದ ರಾಜಧಾನಿ ಬ್ರಾಟಿಸ್ಲಾವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಹಾರಾಟ ನಡೆಸಲಾಗಿದೆ. ಈ ಹಾರಾಟದ ಅವಧಿ 35 ನಿಮಿಷಗಳಾಗಿತ್ತು.

ಎರಡು ವಿಮಾನ ನಿಲ್ದಾಣಗಳ ನಡುವೆ ಹಾರಾಟ ನಡೆಸಿದ ಹಾರುವ ಕಾರು

ಈ ಹಾರುವ ಕಾರನ್ನು ಪ್ರೊಫೆಸರ್ ಸ್ಟೀಫನ್ ಕ್ಲೈನ್ ಸಂಶೋಧಿಸಿದ್ದಾರೆ. ಹಾರಾಟ ನಡೆಸಿದ ಬಳಿಕ ಈ ವಾಹನವು 3 ನಿಮಿಷಗಳಲ್ಲಿ ಕಾರ್ ಆಗಿ ಮಾರ್ಪಟ್ಟಿತು. ಪರೀಕ್ಷಾರ್ಥ ಹಾರಾಟದ ಬಳಿಕ ಮಾತನಾಡಿದ ಸ್ಟೀಫನ್ ಕ್ಲೈನ್ ಈ ಹಾರುವ ಕಾರು ದ್ವಿ ಸಾರಿಗೆ ವಾಹನಗಳ ಹೊಸ ಯುಗಕ್ಕೆ ನಾಂದಿ ಹಾಡಲಿದೆ ಎಂದು ಹೇಳಿದರು.

ಎರಡು ವಿಮಾನ ನಿಲ್ದಾಣಗಳ ನಡುವೆ ಹಾರಾಟ ನಡೆಸಿದ ಹಾರುವ ಕಾರು

ಈ ಹಾರುವ ಮಾಡೆಲ್ 1 ಕಾರ್ ಅನ್ನು ಸ್ಲೋವಾಕಿಯಾದಲ್ಲಿ ಪರೀಕ್ಷಿಸಲಾಗುತ್ತಿದೆ. ಈ ಹಾರುವ ಕಾರಿನಲ್ಲಿ ಬಿಎಂಡಬ್ಲ್ಯುನ 158 ಬಿಹೆಚ್‌ಪಿ ಎಂಜಿನ್‌ ಅಳವಡಿಸಲಾಗಿದೆ. ಈ ಹಾರುವ ಕಾರು ಫಿಕ್ಸೆಡ್ ಫಾರ್ವರ್ಡ್ ಪ್ರೊಪಲ್ಷನ್ ಹಾಗೂ ಬ್ಯಾಲಿಸ್ಟಿಕ್ ಪ್ಯಾರಾಚೂಟ್ ಹೊಂದಿದೆ.

ಈ ಮಾಡೆಲ್ 1 ಫ್ಲೈಯಿಂಗ್ ಕಾರ್ ಇದುವರೆಗೂ 40 ಗಂಟೆಗಳಿಗಿಂತ ಹೆಚ್ಚು ಕಾಲ ಪರೀಕ್ಷಿಸಲ್ಪಟ್ಟಿದೆ. ಈ ಕಾರು 8,200 ಅಡಿಗಳಷ್ಟು ಎತ್ತರಕ್ಕೆ ಹಾರಬಲ್ಲದು. ಈ ಹಾರುವ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 190 ಕಿ.ಮೀಗಳಾಗಿದೆ.

ಎರಡು ವಿಮಾನ ನಿಲ್ದಾಣಗಳ ನಡುವೆ ಹಾರಾಟ ನಡೆಸಿದ ಹಾರುವ ಕಾರು

ಮಾಡೆಲ್ 2 ಫ್ಲೈಯಿಂಗ್ ಕಾರ್ ಕೂಡ ಹಾರಾಟಕ್ಕೆ ಸಿದ್ಧವಾಗಿದೆ. ಈ ಕಾರಿನಲ್ಲಿ 296 ಬಿಎಚ್‌ಪಿ ಎಂಜಿನ್‌ ಅಳವಡಿಸಲು ನಿರ್ಧರಿಸಲಾಗಿದೆ. ಈ ಹಾರುವ ಕಾರು ಗರಿಷ್ಠ 300 ಕಿ.ಮೀ ವೇಗದಲ್ಲಿ, 1,000 ಕಿ.ಮೀ ವ್ಯಾಪ್ತಿಯಲ್ಲಿ ಹಾರಲಿದೆ ಎಂದು ಹೇಳಲಾಗಿದೆ.

Most Read Articles

Kannada
English summary
Klein Vision Aircar V5 flying car flies between two airports. Read in Kannada.
Story first published: Friday, July 2, 2021, 14:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X