3 ಡೋರುಗಳ ಡಿಫೆಂಡರ್ 90 ಎಸ್‌ಯುವಿ ಬಿಡುಗಡೆಗೊಳಿಸಿದ ಲ್ಯಾಂಡ್ ರೋವರ್

ಲ್ಯಾಂಡ್ ರೋವರ್ ಡಿಫೆಂಡರ್‌ನ 5 ಡೋರುಗಳ ಆವೃತ್ತಿಯಾದ ಡಿಫೆಂಡರ್ 110 ಎಸ್‌ಯುವಿಯನ್ನು ಕಳೆದ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈಗ ಲ್ಯಾಂಡ್ ರೋವರ್ ಡಿಫೆಂಡರ್‌ನ 3 ಡೋರುಗಳ ಆವೃತ್ತಿಯಾದ ಡಿಫೆಂಡರ್ 90 ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ.

3 ಡೋರುಗಳ ಡಿಫೆಂಡರ್ 90 ಎಸ್‌ಯುವಿ ಬಿಡುಗಡೆಗೊಳಿಸಿದ ಲ್ಯಾಂಡ್ ರೋವರ್

ಲ್ಯಾಂಡ್ ರೋವರ್ ಡಿಫೆಂಡರ್ 90 ಎಸ್‌ಯುವಿಯ ಆರಂಭಿಕ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.76.57 ಲಕ್ಷಗಳಾಗಿದೆ. ಕಂಪನಿಯು ಈ ಎಸ್‌ಯುವಿಯನ್ನು ಎಕ್ಸ್-ಡೈನಾಮಿಕ್ ಹಾಗೂ ಡಿಫೆಂಡರ್ ಎಕ್ಸ್ ಸೇರಿದಂತೆ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಿದೆ. ಈ ಎರಡೂ ಮಾದರಿಗಳು ಎಸ್, ಎಸ್‌ಇ ಹಾಗೂ ಹೆಚ್‌ಎಸ್‌ಇ ಸ್ಪೆಸಿಫಿಕೇಶನ್ ಪ್ಯಾಕ್‌ಗಳನ್ನು ಹೊಂದಿವೆ.

3 ಡೋರುಗಳ ಡಿಫೆಂಡರ್ 90 ಎಸ್‌ಯುವಿ ಬಿಡುಗಡೆಗೊಳಿಸಿದ ಲ್ಯಾಂಡ್ ರೋವರ್

ಕಂಪನಿಯು ಈ ಎಸ್‌ಯುವಿಯನ್ನು 3 ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಿದೆ. ಇವುಗಳಲ್ಲಿ ಮೊದಲನೆಯದು 2.0 ಲೀಟರ್ ಪೆಟ್ರೋಲ್ ಎಂಜಿನ್ ಆಗಿದ್ದು, ಈ ಎಂಜಿನ್ 296 ಬಿಹೆಚ್‌ಪಿ ಪವರ್ ಹಾಗೂ 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

3 ಡೋರುಗಳ ಡಿಫೆಂಡರ್ 90 ಎಸ್‌ಯುವಿ ಬಿಡುಗಡೆಗೊಳಿಸಿದ ಲ್ಯಾಂಡ್ ರೋವರ್

ಎರಡನೇಯದಾದ 3.0 ಲೀಟರ್ ಡೀಸೆಲ್ ಎಂಜಿನ್, 296 ಬಿಹೆಚ್‌ಪಿ ಪವರ್ ಹಾಗೂ 650 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಮೂರನೇಯದಾದ 3.0 ಲೀಟರ್ ಪೆಟ್ರೋಲ್ ಎಂಜಿನ್, 394 ಬಿಹೆಚ್‌ಪಿ ಪವರ್ ಹಾಗೂ 550 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

3 ಡೋರುಗಳ ಡಿಫೆಂಡರ್ 90 ಎಸ್‌ಯುವಿ ಬಿಡುಗಡೆಗೊಳಿಸಿದ ಲ್ಯಾಂಡ್ ರೋವರ್

ಲ್ಯಾಂಡ್ ರೋವರ್ ಡಿಫೆಂಡರ್ 90 ತನ್ನ 5 ಡೋರುಗಳ ಮಾದರಿಯಾದ ಲ್ಯಾಂಡ್ ರೋವರ್ ಡಿಫೆಂಡರ್ 110 ಎಸ್‌ಯುವಿಯನ್ನು ಹೋಲುತ್ತದೆ. ಆದರೆ ಡಿಫೆಂಡರ್ 90 ಸ್ವಲ್ಪ ಕಡಿಮೆ ವ್ಹೀಲ್‌ಬೇಸ್ ಹಾಗೂ ಕಡಿಮೆ ಓವರ್‌ಹ್ಯಾಂಗ್‌ಗಳನ್ನು ಹೊಂದಿದೆ.

3 ಡೋರುಗಳ ಡಿಫೆಂಡರ್ 90 ಎಸ್‌ಯುವಿ ಬಿಡುಗಡೆಗೊಳಿಸಿದ ಲ್ಯಾಂಡ್ ರೋವರ್

ಈ ಎಸ್‌ಯುವಿಯಲ್ಲಿ ಐದು ಜನರು ಆರಾಮವಾಗಿ ಕುಳಿತುಕೊಳ್ಳಬಹುದು. ಈ ಎಸ್‌ಯುವಿಯನ್ನು ಆರು ಸೀಟುಗಳಾಗಿ ಪರಿವರ್ತಿಸಬಹುದು. ಲ್ಯಾಂಡ್ ರೋವರ್ ಕಂಪನಿಯು ಈ ಎಸ್‌ಯುವಿಯಲ್ಲಿ 10 ಇಂಚಿನ ಪಿವಿ ಪ್ರೊ ಇನ್ಫೋಟೇನ್‌ಮೆಂಟ್ ಸಿಸ್ಟಂ ಅನ್ನು ಓವರ್ ದಿ ಏರ್ ಅಪ್ ಡೇಟ್'ಗಳ ಮೂಲಕ ನೀಡಿದೆ.

3 ಡೋರುಗಳ ಡಿಫೆಂಡರ್ 90 ಎಸ್‌ಯುವಿ ಬಿಡುಗಡೆಗೊಳಿಸಿದ ಲ್ಯಾಂಡ್ ರೋವರ್

ಈ ಎಸ್‌ಯುವಿಯಲ್ಲಿ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್'ಟ್ರೂಮೆಂಟ್ ಕನ್ಸೋಲ್ ಅನ್ನು ಸಹ ನೀಡಲಾಗಿದೆ. ಈ ಇನ್ಸ್'ಟ್ರೂಮೆಂಟ್ ಕನ್ಸೋಲ್‌ನಲ್ಲಿ ಫುಲ್ ಸ್ಕ್ರೀನ್ ಮ್ಯಾಪ್, ಫೋನ್ ಹಾಗೂ ಮೀಡಿಯಾ ಫಂಕ್ಷನ್'ಗಳನ್ನು ಕಸ್ಟಮೈಸ್ ಮಾಡಬಹುದು.

3 ಡೋರುಗಳ ಡಿಫೆಂಡರ್ 90 ಎಸ್‌ಯುವಿ ಬಿಡುಗಡೆಗೊಳಿಸಿದ ಲ್ಯಾಂಡ್ ರೋವರ್

ಡಿಫೆಂಡರ್ 90 ಎಸ್‌ಯುವಿಯಲ್ಲಿ ಪರ್ಮನೆಂಟ್ ಆಲ್ ವ್ಹೀಲ್ ಡ್ರೈವ್ ಸಿಸ್ಟಂ, ಟೆರೈನ್ ರೆಸ್ಪಾನ್ಸ್ 2 ಸಿಸ್ಟಂಗಳನ್ನು ನೀಡಲಾಗಿದೆ. ಈ ಎಸ್‌ಯುವಿಯು ಹೊಸ ಡಬ್ಲ್ಯುಎಡಿ ಪ್ರೋಗ್ರಾಂ ಅನ್ನು ಸಹ ಹೊಂದಿದೆ.

3 ಡೋರುಗಳ ಡಿಫೆಂಡರ್ 90 ಎಸ್‌ಯುವಿ ಬಿಡುಗಡೆಗೊಳಿಸಿದ ಲ್ಯಾಂಡ್ ರೋವರ್

ಈ ಪ್ರೋಗ್ರಾಂ, ವೆಹಿಕಲ್ ಸಿಸ್ಟಂ ಅನ್ನು ನೀರಿನ ಮೂಲಕ ಚಲಿಸುವಂತೆ ಮಾಡುತ್ತದೆ. ಡಿಫೆಂಡರ್ 90 ಬಿಡುಗಡೆಯ ಬಗ್ಗೆ ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ರೋಹಿತ್ ಸೂರಿ ಮಾತನಾಡಿದ್ದಾರೆ.

3 ಡೋರುಗಳ ಡಿಫೆಂಡರ್ 90 ಎಸ್‌ಯುವಿ ಬಿಡುಗಡೆಗೊಳಿಸಿದ ಲ್ಯಾಂಡ್ ರೋವರ್

ಈ ಬಗ್ಗೆ ಮಾತನಾಡಿದ ಅವರು, ಡಿಫೆಂಡರ್ 110 ಎಸ್‌ಯುವಿಯು ಇನ್ನೂ ಬೇಡಿಕೆ ಹೊಂದಿದೆ. ಡಿಫೆಂಡರ್ 90 ಎಸ್‌ಯುವಿ ಬಿಡುಗಡೆಯು ಡಿಫೆಂಡರ್ ಹಾಗೂ ಲ್ಯಾಂಡ್ ರೋವರ್ ಬ್ರಾಂಡ್‌ಗಳ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ನಾವು ಲ್ಯಾಂಡ್ ರೋವರ್ ಡಿಫೆಂಡರ್ 90 ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ಸಂತಸ ಪಡುತ್ತೇವೆ ಎಂದು ಹೇಳಿದರು.

More from DriveSpark

Article Published On: Thursday, July 8, 2021, 20:24 [IST]
English summary
Land Rover launches 3 door Defender 90 SUV in Indian market. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+