ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಗೊಳಿಸಲು ಮುಂದಾದ LEVC

ಚೀನಾದ ಕಾರು ತಯಾರಕ ಕಂಪನಿ ಗೀಲಿ ಒಡೆತನದ ಲಂಡನ್ ಇವಿ ಕಂಪನಿ ಲಿಮಿಟೆಡ್ (LEVC) ಶೀಘ್ರದಲ್ಲೇ ಭಾರತದಲ್ಲಿ ತನ್ನ ವ್ಯವಹಾರವನ್ನು ಆರಂಭಿಸಲಿದೆ. ಕಂಪನಿಯು ತನ್ನ ಹೊಸ ಎಲೆಕ್ಟ್ರಿಕ್ ಎಸ್‌ಯು‌ವಿಯಾದ TX ನೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ವ್ಯವಹಾರವನ್ನು ಆರಂಭಿಸುವುದಾಗಿ ಘೋಷಿಸಿದೆ. ಕಂಪನಿಯು ತನ್ನ ಮೊದಲ ಡೀಲರ್‌ಶಿಪ್ ಅನ್ನು ದೆಹಲಿಯಲ್ಲಿ ತೆರೆಯಲು ಸಿದ್ದತೆ ನಡೆಸುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಗೊಳಿಸಲು ಮುಂದಾದ LEVC

TX ಎಲೆಕ್ಟ್ರಿಕ್ ಎಸ್‌ಯು‌ವಿ ಮಾರಾಟಕ್ಕಾಗಿ LEVC ಕಂಪನಿಯು ಭಾರತದಲ್ಲಿ ಎಕ್ಸ್‌ಕ್ಲೂಸಿವ್ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವುದಾಗಿ ತಿಳಿಸಿದೆ. ಕಂಪನಿಯು ತನ್ನ ವಾಹನಗಳು ಭಾರತದಲ್ಲಿ ಹಸಿರು ಭವಿಷ್ಯವನ್ನು ಬೆಂಬಲಿಸುತ್ತವೆ ಹಾಗೂ ದೇಶದಲ್ಲಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಹೇಳಿದೆ. ಈ ಬಗ್ಗೆ LEVC ಯ ದಕ್ಷಿಣ ಏಷ್ಯಾ ಟ್ರೇಡ್ ಕಮಿಷನರ್ ಅಲನ್ ಗೆಮ್ಮೆಲ್ ಮಾಹಿತಿ ನೀಡಿದ್ದಾರೆ.

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಗೊಳಿಸಲು ಮುಂದಾದ LEVC

ಈ ಬಗ್ಗೆ ಮಾತನಾಡಿರುವ ಅವರು, LEVC ಯ ಭವಿಷ್ಯದ ಚಲನಶೀಲತೆ ಪರಿಹಾರಗಳು ಈಗ ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ. ನಮ್ಮ ವ್ಯಾಪಾರ ಮತ್ತು ಹೂಡಿಕೆ ಪಾಲುದಾರಿಕೆಯಿಂದ ಭಾರತ ಹಾಗೂ ಬ್ರಿಟನ್ ಎರಡೂ ಆರ್ಥಿಕತೆಗಳು ಬೆಳೆಯಲು ಸಹಾಯವಾಗುತ್ತದೆ. ನಮ್ಮಲ್ಲಿ ಹಲವು ಮಹತ್ವಾಕಾಂಕ್ಷೆ ಯೋಜನೆಗಳಿವೆ. ನಾವು ಒಟ್ಟಾಗಿ ಏನು ಮಾಡಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು.

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಗೊಳಿಸಲು ಮುಂದಾದ LEVC

LEVC TX ಎಲೆಕ್ಟ್ರಿಕ್ ಎಸ್‌ಯು‌ವಿಯಾಗಿದ್ದು, ಈಗ ಇದನ್ನು ಚೀನಾ ಏರ್ ಸೌತ್ ಈಸ್ಟ್ ಏಷ್ಯಾ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಎಸ್‌ಯು‌ವಿಯನ್ನು ಹೆಚ್ಚಾಗಿ ಟ್ಯಾಕ್ಸಿಯಾಗಿ ಬಳಸಲಾಗುತ್ತದೆ. ಈ ಎಲೆಕ್ಟ್ರಿಕ್ ಎಸ್‌ಯುವಿ ಸಂಪೂರ್ಣವಾಗಿ ಚಾರ್ಜ್‌ ಆದ ನಂತರ 500 ಕಿ.ಮೀಗಳಿಗಿಂತ ಹೆಚ್ಚು ದೂರ ಚಲಿಸುತ್ತದೆ ಎಂದು ಕಂಪನಿ ಹೇಳಿ ಕೊಂಡಿದೆ.

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಗೊಳಿಸಲು ಮುಂದಾದ LEVC

ಪ್ರಯಾಣಿಕರ ಅನುಕೂಲಕ್ಕಾಗಿ ಈ ಎಲೆಕ್ಟ್ರಿಕ್ ಎಸ್‌ಯು‌ವಿಯಲ್ಲಿ ಹಲವು ಆಧುನಿಕ ಸೌಲಭ್ಯಗಳನ್ನು ನೀಡಲಾಗಿದೆ. ಈ ಎಸ್‌ಯು‌ವಿಯಲ್ಲಿ ಆರು ಜನ ಪ್ರಯಾಣಿಕರು ಕೂರ ಬಹುದು. ಜೊತೆಗೆ ಅಂಗವಿಕಲ ಪ್ರಯಾಣಿಕರಿಗಾಗಿ ಗಾಲಿ ಕುರ್ಚಿ ಸೌಲಭ್ಯವನ್ನು ನೀಡಲಾಗಿದೆ. ಪ್ರಯಾಣಿಕರ ಕ್ಯಾಬಿನ್ ಅನ್ನು ವೈಯಕ್ತಿಕವಾಗಿ ಇರಿಸಲು ಡ್ರೈವರ್ ಕ್ಯಾಬಿನ್ ಅನ್ನು ಪ್ರತ್ಯೇಕವಾಗಿ ನೀಡಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಗೊಳಿಸಲು ಮುಂದಾದ LEVC

ಈ ಎಸ್‌ಯುವಿ 8.45 ಮೀಟರ್ ಟರ್ನ್ ರೇಡಿಯಸ್‌ನಲ್ಲಿ ತಿರುಗಬಹುದು ಎಂದು ಕಂಪನಿ ಹೇಳಿಕೊಂಡಿದೆ. ಇದರಿಂದ ಟ್ರಾಫಿಕ್ ಅಥವಾ ಜನ ನಿಬಿಡ ಪ್ರದೇಶಗಳಲ್ಲಿ ಚಲಿಸಲು ಸುಲಭವಾಗುತ್ತದೆ. ಎಕ್ಸ್‌ಕ್ಲೂಸಿವ್ ಮೋಟಾರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಸತ್ಯ ಬಾಗ್ಲಾ ರವರು ಮಾತನಾಡಿ, LEVC ಯಂತಹ ಐಕಾನಿಕ್ ಬ್ರ್ಯಾಂಡ್‌ನೊಂದಿಗೆ ಪಾಲುದಾರಿಕೆ ಹೊಂದಲು ನಾವು ಸಂತೋಷಪಡುತ್ತೇವೆ.

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಗೊಳಿಸಲು ಮುಂದಾದ LEVC

ಭಾರತವು ಎಲೆಕ್ಟ್ರಿಕ್ ವಾಹನಗಳಿಗೆ ಉದಯೋನ್ಮುಖ ಮಾರುಕಟ್ಟೆಯಾಗಿದೆ. LEVC ಕಂಪನಿಗೆ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಲು ಇದಕ್ಕಿಂತ ಒಳ್ಳೆಯ ಸಮಯವಿರಲು ಸಾಧ್ಯವಿಲ್ಲ. TX ಎಲೆಕ್ಟ್ರಿಕ್ ಎಸ್‌ಯು‌ವಿಯಲ್ಲಿರುವ ತಂತ್ರಜ್ಞಾನ, ವೈಶಿಷ್ಟ್ಯ ಹಾಗೂ ಪ್ರಾಯೋಗಿಕತೆಯು ಮುಂಬರುವ ದಿನಗಳಲ್ಲಿ ಭಾರತೀಯ ಗ್ರಾಹಕರನ್ನು ಆಕರ್ಷಿಸಲಿದೆ ಎಂದು ಹೇಳಿದರು.

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಗೊಳಿಸಲು ಮುಂದಾದ LEVC

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿವೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರು ಪರ್ಯಾಯ ಇಂಧನಗಳಲ್ಲಿ ಚಲಿಸುವ ವಾಹನಗಳತ್ತ ಮುಖ ಮಾಡಿದ್ದಾರೆ. ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳಿಗಿಂತ ಸಿಎನ್‌ಜಿ ವಾಹನಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನಗಳು ಪೆಟ್ರೋಲ್, ಡೀಸೆಲ್ ವಾಹನಗಳಿಗಿಂತ ದುಬಾರಿ ಎಂಬುದು ಇದಕ್ಕೆ ಪ್ರಮುಖ ಕಾರಣ.

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಗೊಳಿಸಲು ಮುಂದಾದ LEVC

ಬಹುತೇಕ ಎಲ್ಲಾ ಪ್ರಮುಖ ವಾಹನ ತಯಾರಕ ಕಂಪನಿಗಳು ಸಿಎನ್‌ಜಿ ವಾಹನಗಳನ್ನು ಬಿಡುಗಡೆಗೊಳಿಸುವಲ್ಲಿ ನಿರತವಾಗಿವೆ. ಭಾರತದಲ್ಲಿ ಈಗಾಗಲೇ ಹಲವು ಕಂಪನಿಗಳ ಸಿಎನ್‌ಜಿ ಕಾರುಗಳು ಮಾರಾಟವಾಗುತ್ತಿವೆ. ಮುಂಬರುವ ದಿನಗಳಲ್ಲಿ ಇನ್ನೂ ಹಲವು ಸಿಎನ್‌ಜಿ ಕಾರುಗಳು ಬಿಡುಗಡೆಯಾಗಲಿವೆ. ಅವು ಯಾವುವು ಎಂಬುದನ್ನು ನೋಡುವುದಾದರೆ, Maruti Suzuki ಕಂಪನಿಯು ಕೆಲವು ಸಿಎನ್‌ಜಿ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಗೊಳಿಸಲು ಮುಂದಾದ LEVC

Maruti Suzuki ಕಂಪನಿಯು Dzire ಕಾರಿನ ಸಿಎನ್‌ಜಿ ಆವೃತ್ತಿಯನ್ನು ಪರೀಕ್ಷಿಸುತ್ತಿದೆ. Maruti Suzuki ಕಂಪನಿಯು ಈಗ ಇರುವ ಎಂಜಿನ್‌ಗಳೊಂದಿಗೆ ಈ ಕಾರ್ ಅನ್ನು ಮಾರಾಟ ಮಾಡಲಿದೆ. ಈ ಎಂಜಿನ್ ಗರಿಷ್ಠ 80 ಬಿ‌ಹೆಚ್‌ಪಿ ಪವರ್ ಹಾಗೂ 113 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಸಿಎನ್‌ಜಿ ಆವೃತ್ತಿಯಲ್ಲಿರುವ ಎಂಜಿನ್ 67 ಬಿ‌ಹೆಚ್‌ಪಿ ಪವರ್ ಹಾಗೂ 95 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಗೊಳಿಸಲು ಮುಂದಾದ LEVC

Tata Motors ಕಂಪನಿಯು ತನ್ನ Tiago ಕಾರಿನ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆಗೊಳಿಸುವ ಪ್ರಕ್ರಿಯೆಯಲ್ಲಿ ನಿರತವಾಗಿದೆ. Tiago ಕಾರಿನ ಸಿಎನ್‌ಜಿ ಮಾದರಿಯಲ್ಲಿ ಯಾವುದೇ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡುವ ಸಾಧ್ಯತೆಗಲಿಲ್ಲ. ಈ ಹೊಸ ಆವೃತ್ತಿಯು ಈಗ ಇರುವ 1.2 ಲೀಟರ್ ಮೂರು ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್‌ನೊಂದಿಗೆ ಲಭ್ಯವಿರಲಿದೆ.ಈ ಎಂಜಿನ್ ಗರಿಷ್ಠ 83 ಬಿ‌ಹೆಚ್‌ಪಿ ಪವರ್ ಹಾಗೂ 113 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಸಿಎನ್‌ಜಿ ಮಾದರಿಯಲ್ಲಿ ಈ ಎಂಜಿನ್ ಇದಕ್ಕಿಂತ ಕಡಿಮೆ ಪ್ರಮಾಣದ ಪವರ್ ಉತ್ಪಾದಿಸಲಿದೆ ಎಂದು ಹೇಳಲಾಗಿದೆ. Tata Tiago ದೇಶಿಯ ಮಾರುಕಟ್ಟೆಯ ಬಹು ನಿರೀಕ್ಷಿತ ಸಿಎನ್‌ಜಿ ಕಾರುಗಳಲ್ಲಿ ಒಂದಾಗಿದೆ.

Most Read Articles

Kannada
English summary
Levc to launch its electric suv in india soon details
Story first published: Tuesday, October 26, 2021, 14:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X