ಬಜೆಟ್ ಬೆಲೆಯ ಕಾರುಗಳಲ್ಲಿ ಇಲ್ಲದೇ ಇರುವ ಮೂಲಭೂತ ಫೀಚರ್'ಗಳಿವು

ಇನ್ನು ಕೆಲವೇ ದಿನಗಳಲ್ಲಿ 2021 ಪೂರ್ಣಗೊಳ್ಳಲಿದೆ. ಈಗ ಮಾರಾಟವಾಗುತ್ತಿರುವ ಬಹುತೇಕ ಕಾರುಗಳು ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜಿಂಗ್, ಕೀಲೆಸ್ ಎಂಟ್ರಿಯಂತಹ ಹಲವಾರು ಫೀಚರ್ ಗಳನ್ನು ಹೊಂದಿವೆ. ಆದರೂ ಕೆಲವು ಬಜೆಟ್ ಬೆಲೆಯ ಕಾರುಗಳು ಇನ್ನೂ ಕೆಲವು ಮೂಲಭೂತ ಫೀಚರ್ ಗಳನ್ನೇ ಹೊಂದಿಲ್ಲ ಎಂಬುದು ಗಮನಾರ್ಹ.

ಬಜೆಟ್ ಬೆಲೆಯ ಕಾರುಗಳಲ್ಲಿ ಇಲ್ಲದೇ ಇರುವ ಮೂಲಭೂತ ಫೀಚರ್'ಗಳಿವು

ಕೆಲವು ಕಾರು ಮಾಲೀಕರಿಗೆ ಕಾರುಗಳಲ್ಲಿ ನೀಡಬೇಕಾದ ಮೂಲಭೂತ ಫೀಚರ್ ಗಳು ಯಾವುವು ಎಂಬುದೇ ತಿಳಿದಿರುವುದಿಲ್ಲ. ಅದರಲ್ಲೂ ವಿಶೇಷವಾಗಿ ಮೊದಲ ಬಾರಿಗೆ ಕಾರು ಖರೀದಿಸುವವರಿಗೆ ಈ ಬಗ್ಗೆ ಮಾಹಿತಿ ಇರುವುದಿಲ್ಲ. ಈ ಲೇಖನದಲ್ಲಿ ಬಜೆಟ್ ಬೆಲೆಯ ಕಾರುಗಳಲ್ಲಿ ಇಲ್ಲದೇ ಇರುವ ಕೆಲವು ಫೀಚರ್ ಗಳು ಯಾವುವು ಎಂಬುದನ್ನು ನೋಡೋಣ.

ಬಜೆಟ್ ಬೆಲೆಯ ಕಾರುಗಳಲ್ಲಿ ಇಲ್ಲದೇ ಇರುವ ಮೂಲಭೂತ ಫೀಚರ್'ಗಳಿವು

ಹೈಟ್ ಅಡ್ಜಸ್ಟ್ ಮೆಂಟ್ ಡ್ರೈವರ್ ಸೀಟ್

ಚಾಲನಾ ಕಾರ್ಯವು ನೋಡಲು ಸರಳವಾಗಿ ಕಾಣಿಸಿದರೂ ಅದು ಕಷ್ಟದ ಕೆಲಸವಾಗಿದೆ. ಕಾರು 1 ಕಿ.ಮೀ ಹೋಗುವಷ್ಟರಲ್ಲಿ ಮ್ಯಾನ್ಯುಯಲ್ ಕಾರ್ ಆಗಿದ್ದರೆ ಸುಮಾರು 20 ಬಾರಿ ಗೇರ್ ಬದಲಾಯಿಸಬೇಕು, 10 ಬಾರಿ ಬಾಹ್ಯ ಸೈಡ್ ಮಿರರ್‌ಗಳನ್ನು ನೋಡಬೇಕು, ಇಂಡಿಕೇಟರ್ ಹಾಕಬೇಕು, ಅಗತ್ಯವಿರುವಲ್ಲಿ ಹಾರ್ನ್ ಮಾಡಬೇಕು. ನಗರದ ಸಂಚಾರ ದಟ್ಟಣೆಯಲ್ಲಿ ಒಂದು ಕಿ.ಮೀ ಸಾಗುವಷ್ಟರಲ್ಲಿ ಕಾರು ಚಾಲಕ ಹೈರಣಾಗಿರುತ್ತಾನೆ.

ಬಜೆಟ್ ಬೆಲೆಯ ಕಾರುಗಳಲ್ಲಿ ಇಲ್ಲದೇ ಇರುವ ಮೂಲಭೂತ ಫೀಚರ್'ಗಳಿವು

ಈ ಹಿನ್ನೆಲೆಯಲ್ಲಿ ಕಾರು ಚಾಲಕನಿಗೆ ಆರಾಮದಾಯಕ ಪ್ರಯಾಣದ ವಾತಾವರಣವನ್ನು ಸೃಷ್ಟಿಸುವುದು ಕಾರು ತಯಾರಕ ಕಂಪನಿಗಳ ಕರ್ತವ್ಯವಾಗಿದೆ. ಈಗಿನ ಐಷಾರಾಮಿ ಕಾರುಗಳಲ್ಲಿ ಮಸಾಜ್ ಸೌಲಭ್ಯಗಳನ್ನು ಸಹ ನೀಡಲಾಗುತ್ತದೆ. ಅಂತಹುದರಲ್ಲಿ ಬಜೆಟ್ ಕಾರುಗಳಲ್ಲಿ ಕನಿಷ್ಠ ಪಕ್ಷ ಮಡಚ ಬಹುದಾದ ಒಂದು ಡ್ರೈವರ್ ಸೀಟ್ ಅನ್ನು ಒದಗಿಸಬೇಕು.

ಬಜೆಟ್ ಬೆಲೆಯ ಕಾರುಗಳಲ್ಲಿ ಇಲ್ಲದೇ ಇರುವ ಮೂಲಭೂತ ಫೀಚರ್'ಗಳಿವು

ಫೋಲ್ಡ್ ಮಾಡಬಹುದಾದ ವಿಂಡೋ ಗ್ಲಾಸ್

1980 ರ ದಶಕದಿಂದಲೂ ಫೋಲ್ಡ್ ಮಾಡುವ ಫೀಚರ್ ಹೊಂದಿರುವ ಕಾರಿನ ವಿಂಡೋಗಳನ್ನು ನೀಡಲಾಗುತ್ತಿದೆ. ನಂತರ ಅವುಗಳನ್ನು ಕೈಯಿಂದ ತಿರುಗಿಸಬೇಕಾಗಿತ್ತು. ಆದರೆ ಈಗ ಬಟನ್ ಒತ್ತುವ ಮೂಲಕ ಕಿಟಕಿಯ ಪ್ಯಾನೆಲ್ ಗಳನ್ನು ತೆರೆಯುವ ಫೀಚರ್ ಗಳನ್ನು ಕಾರುಗಳಲ್ಲಿ ನೀಡಲಾಗುತ್ತದೆ.

ಬಜೆಟ್ ಬೆಲೆಯ ಕಾರುಗಳಲ್ಲಿ ಇಲ್ಲದೇ ಇರುವ ಮೂಲಭೂತ ಫೀಚರ್'ಗಳಿವು

ಆದರೂ ಎಲ್ಲಾ ನಾಲ್ಕು ವಿಂಡೋ ಪ್ಯಾನೆಲ್ ಗಳನ್ನು ಬಟನ್ ಮೂಲಕ ತೆರೆಯುವ ಫೀಚರ್ ಅನ್ನು ಕೆಲವು ಕಾರುಗಳಲ್ಲಿ ಮಾತ್ರ ನೀಡಲಾಗುತ್ತದೆ. ಈ ಕಾರಣಕ್ಕೆ ಹೊಸ ಕಾರು ಖರೀದಿಸುವಾಗ ಕನಿಷ್ಠ ಮುಂಭಾಗದ ವಿಂಡೋ ಗ್ಲಾಸ್ ನಲ್ಲಿ ಬಟನ್ ಫೋಲ್ಡಿಂಗ್ ಫೀಚರ್ ನೀಡಲಾಗಿದೆಯೇ ಎಂಬುದನ್ನು ಪರಿಶೀಲಿಸಿ. ಎಲ್ಲಾ ನಾಲ್ಕು ವಿಂಡೋ ಪ್ಯಾನೆಲ್ ಗಳನ್ನು ಬಟನ್ ಒತ್ತುವ ಮೂಲಕ ತೆರೆಯುವಂತಹ ಫೀಚರ್ ನೀಡಿದರೆ ತುಂಬಾ ಒಳ್ಳೆಯದು.

ಬಜೆಟ್ ಬೆಲೆಯ ಕಾರುಗಳಲ್ಲಿ ಇಲ್ಲದೇ ಇರುವ ಮೂಲಭೂತ ಫೀಚರ್'ಗಳಿವು

ಇನ್ ಡೋರ್ ಡೇ / ನೈಟ್ ಗ್ಲಾಸ್

ಕಾರು ಚಾಲನೆ ಮಾಡುವಾಗ ಹಿಂದಿನಿಂದ ಬೇರೆ ವಾಹನದ ಲೈಟ್ ಬಿದ್ದರೆ ಕೆಲವೊಮ್ಮೆ ಕಾರ್ ಅನ್ನು ಸರಿಯಾಗಿ ಮುಂದಕ್ಕೆ ಚಾಲನೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗುತ್ತದೆ. ಅಂತಹ ಸನ್ನಿವೇಶವನ್ನು ಯಾರೂ ಇಷ್ಟಪಡುವುದಿಲ್ಲ. ಈ ಸಮಸ್ಯೆಯನ್ನು ಸರಿಪಡಿಸಲು ಕಾರಿನ ಕ್ಯಾಬಿನ್‌ನಲ್ಲಿ ಕೆಲವು ಕಾರು ತಯಾರಕ ಕಂಪನಿಗಳು ಇನ್ ಡೋರ್ ಡೇ / ನೈಟ್ ಗ್ಲಾಸ್ ಫೀಚರ್ ನೀಡುತ್ತವೆ.

ಬಜೆಟ್ ಬೆಲೆಯ ಕಾರುಗಳಲ್ಲಿ ಇಲ್ಲದೇ ಇರುವ ಮೂಲಭೂತ ಫೀಚರ್'ಗಳಿವು

ಈ ಗ್ಲಾಸ್ ಬೆಳಕಿನ ಪ್ರಜ್ವಲಿಸುವಿಕೆಯನ್ನು ಕಡಿಮೆ ಮಾಡುತ್ತದೆ. ಸ್ವಲ್ಪ ಹೆಚ್ಚು ಬೆಲೆ ಬಾಳುವ ಕಾರುಗಳಲ್ಲಿ ಆಟೋಮ್ಯಾಟಿಕ್ ಆಗಿ ಡಿಮ್ ಆಗುವ ಗ್ಲಾಸ್ ಗಳನ್ನು ನೀಡಲಾಗಿರುತ್ತದೆ. ಕಡಿಮೆ ಬೆಲೆಯ ಕಾರುಗಳಲ್ಲಿ ಮ್ಯಾನುಯಲ್ ಆಗಿ ಡಿಮ್ ಆಗುವ ಗ್ಲಾಸ್ ಗಳಿರುತ್ತವೆ. ಆದರೆ ಕೆಲವೇ ಬಜೆಟ್ ಕಾರುಗಳಲ್ಲಿ ನೀಡಲಾಗುವ ಇನ್ ಡೋರ್ ಅಲ್ಲದ ಡಿಮ್ ಆಗುವ ಗ್ಲಾಸುಗಳನ್ನು ಖರೀದಿಸದೇ ಇರುವುದು ಒಳ್ಳೆಯದು.

ಬಜೆಟ್ ಬೆಲೆಯ ಕಾರುಗಳಲ್ಲಿ ಇಲ್ಲದೇ ಇರುವ ಮೂಲಭೂತ ಫೀಚರ್'ಗಳಿವು

ಸ್ಪೀಡ್ ಸೆನ್ಸಿಟಿವ್ ಡೋರ್ ಲಾಕ್

ಸ್ಪೀಡ್ ಸೆನ್ಸಿಟಿವ್ ಡೋರ್ ಲಾಕ್‌ಗಳು ಒಂದು ವಿಶಿಷ್ಟ ಫೀಚರ್ ಆಗಿದ್ದು, ಕಾರು 20 ಕಿ.ಮೀ ವೇಗವನ್ನು ಮೀರಿದರೆ ಕಾರ್ ಅನ್ನು ಲಾಕ್ ಮಾಡದಿದ್ದರೂ ಆಟೋಮ್ಯಾಟಿಕ್ ಆಗಿ ಡೋರ್ ಗಳನ್ನು ಲಾಕ್ ಮಾಡುತ್ತದೆ. ಇದು ಕಾರಿನಲ್ಲಿರಬೇಕಾದ ಅತ್ಯಂತ ಹೆಚ್ಚು ಸುರಕ್ಷತಾ ಫೀಚರ್ ಗಳಲ್ಲಿ ಒಂದಾಗಿದೆ. ಕಾರಿನ ಡೋರ್ ಅನ್ನು ಹೇಗೆ ಲಾಕ್ ಮಾಡುವುದು ಎಂದು ಎಲ್ಲರಿಗೂ ತಿಳಿದಿರುತ್ತದೆ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ಬಜೆಟ್ ಬೆಲೆಯ ಕಾರುಗಳಲ್ಲಿ ಇಲ್ಲದೇ ಇರುವ ಮೂಲಭೂತ ಫೀಚರ್'ಗಳಿವು

ಕಾರು ತಯಾರಕ ಕಂಪನಿಗಳು ಮೊದಲ ಬಾರಿಗೆ ಕಾರಿನಲ್ಲಿ ಪ್ರಯಾಣಿಸುವವರ ಸುರಕ್ಷತೆಯನ್ನು ಪರಿಗಣಿಸಬೇಕು. ಆದರೆ ಈಗ ಬಿಡುಗಡೆಯಾಗುತ್ತಿರುವ ಕೆಲವು ಅಗ್ಗದ ಕಾರುಗಳಲ್ಲಿ ಈ ಫೀಚರ್ ನೀಡುತ್ತಿಲ್ಲ. ಕಾರು ಖರೀದಿಸುವ ಮುನ್ನ ಈ ಫೀಚರ್ ಲಭ್ಯವಿದೆಯೇ ಎಂಬುದನ್ನು ಡೀಲರ್ ಬಳಿ ವಿಚಾರಿಸಿ.

ಬಜೆಟ್ ಬೆಲೆಯ ಕಾರುಗಳಲ್ಲಿ ಇಲ್ಲದೇ ಇರುವ ಮೂಲಭೂತ ಫೀಚರ್'ಗಳಿವು

ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ರೇರ್ ವೀವ್ ಮಿರರ್'ಗಳು (ORVMs)

ಸದ್ಯಕ್ಕೆ ಈ ಫೀಚರ್ ಅನ್ನು ಬಹುತೇಕ ಬಜೆಟ್ ಕಾರುಗಳಲ್ಲಿ ನೀಡುತ್ತಿಲ್ಲ. ಆದರೆ ಭವಿಷ್ಯದಲ್ಲಿ ಈ ಫೀಚರ್ ಅನಿವಾರ್ಯ ಫೀಚರ್ ಆಗುವುದರಿಂದ, ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ರೇರ್ ವೀವ್ ಮಿರರ್‌ಗಳನ್ನು ಹೊಂದಿರುವ ಕಾರ್ ಅನ್ನು ಖರೀದಿಸಿದರೆ ಒಳ್ಳೆಯದು.

ಬಜೆಟ್ ಬೆಲೆಯ ಕಾರುಗಳಲ್ಲಿ ಇಲ್ಲದೇ ಇರುವ ಮೂಲಭೂತ ಫೀಚರ್'ಗಳಿವು

ಇವುಗಳಿಂದ ಮಳೆಗಾಲದಲ್ಲಿಯೂ ಚಾಲಕ ತನ್ನ ಹಿಂದೆ ಬರುವ ವಾಹನಗಳನ್ನು ಹಾಗೂ ರಸ್ತೆಯನ್ನು ಸುಲಭವಾಗಿ ನೋಡಬಹುದು. ಸೈಡ್ ಮಿರರ್‌ಗಳಲ್ಲಿ ದೀರ್ಘಕಾಲ ನೋಡುತ್ತಿದ್ದರೆ ಅಪಘಾತಗಳಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ವಾಹನದ ಹಿಂದೆ ಏನಿದೆ ಎಂದು ತಿಳಿಯಲು ವಿಂಡ್ ಶೀಲ್ಡ್ ಅನ್ನು ವೇಗವಾಗಿ ತಿರುಗಿಸುವುದು ಉತ್ತಮ.

Most Read Articles

Kannada
English summary
List of basic features which are not available in budget cars details
Story first published: Wednesday, November 24, 2021, 19:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X