ಅಕ್ಟೋಬರ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಐಷಾರಾಮಿ ಕಾರುಗಳಿವು

ಈ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಐಷಾರಾಮಿ ಕಾರುಗಳನ್ನು ಮಾರಾಟ ಮಾಡಿದ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಜರ್ಮನಿ ಮೂಲದ Mercedes Benz ಕಂಪನಿಯು ಮೊದಲ ಸ್ಥಾನದಲ್ಲಿದೆ. Mercedes Benz ಈ ವರ್ಷದ ಅಕ್ಟೋಬರ್‌ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 1,001 ಕಾರುಗಳನ್ನು ಮಾರಾಟ ಮಾಡಿದೆ.

ಅಕ್ಟೋಬರ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಐಷಾರಾಮಿ ಕಾರುಗಳಿವು

2020ರ ಅಕ್ಟೋಬರ್'ನಲ್ಲಿ Mercedes Benz ಕಂಪನಿಯು ಕೇವಲ 916 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು. ಈ ಮೂಲಕ Mercedes Benz ಕಂಪನಿಯು ಈ ವರ್ಷದ ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಪ್ರಗತಿ ದಾಖಲಿಸಿದೆ. ಜರ್ಮನಿ ಮೂಲದ ಮತ್ತೊಂದು ಕಂಪನಿಯಾದ BMW ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ BMW ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 765 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ.

ಅಕ್ಟೋಬರ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಐಷಾರಾಮಿ ಕಾರುಗಳಿವು

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಈ ಸಂಖ್ಯೆ 631 ಯುನಿಟ್'ಗಳಾಗಿತ್ತು. ಇಂಗ್ಲೆಂಡ್ ಮೂಲದ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಯು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಕಂಪನಿಯು ಭಾರತದ ಟಾಟಾ ಮೋಟಾರ್ಸ್ ಕಂಪನಿಯ ಅಂಗಸಂಸ್ಥೆಯಾಗಿದೆ. ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಯು ಈ ವರ್ಷದ ಅಕ್ಟೋಬರ್‌ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 174 ಕಾರುಗಳನ್ನು ಮಾರಾಟ ಮಾಡಿದೆ.

ಅಕ್ಟೋಬರ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಐಷಾರಾಮಿ ಕಾರುಗಳಿವು

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈ ಸಂಖ್ಯೆ 163 ಯುನಿಟ್'ಗಳಾಗಿತ್ತು. ಸ್ವೀಡನ್‌ ಮೂಲದ ವೋಲ್ವೋ ಕಂಪನಿಯು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಂಪನಿಯು 153 ಯುನಿಟ್ ಕಾಟುಗಳನ್ನು ಮಾರಾಟ ಮಾಡಿತ್ತು. ಆದರೆ ಈ ಪ್ರಮಾಣವು ಈ ವರ್ಷದ ಅಕ್ಟೋಬರ್‌ನಲ್ಲಿ 120 ಯುನಿಟ್'ಗಳಿಗೆ ಇಳಿದಿದೆ. ಜರ್ಮನಿ ಮೂಲದ ಆಡಿ (Audi) ಕಂಪನಿಯು ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

ಅಕ್ಟೋಬರ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಐಷಾರಾಮಿ ಕಾರುಗಳಿವು

ಕಂಪನಿಯು ಈ ವರ್ಷದ ಅಕ್ಟೋಬರ್‌ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 105 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದರೆ, 2020ರ ಅಕ್ಟೋಬರ್'ನಲ್ಲಿ 7 ಯುನಿಟ್ ಗಳನ್ನು ಮಾರಾಟ ಮಾಡಿತ್ತು. ಜರ್ಮನಿ ಮೂಲದ ಪೋರ್ಷೆ ಕಂಪನಿ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಭಾರತದಲ್ಲಿ ಪೋರ್ಷೆ ಕಂಪನಿಯು 2020ರ ಅಕ್ಟೋಬರ್ ತಿಂಗಳಿನಲ್ಲಿ 23 ಕಾರುಗಳನ್ನು ಮಾರಾಟ ಮಾಡಿತ್ತು.

ಅಕ್ಟೋಬರ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಐಷಾರಾಮಿ ಕಾರುಗಳಿವು

ಈ ಪ್ರಮಾಣವು ಈ ವರ್ಷದ ಅಕ್ಟೋಬರ್‌ನಲ್ಲಿ 25 ಯುನಿಟ್ ಗಳಿಗೆ ಏರಿಕೆಯಾಗಿದೆ. ಇಟಲಿ ಮೂಲದ Lamborghini ಕಂಪನಿಯು ಈ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ Lamborghini ಕಂಪನಿಯು ಭಾರತದಲ್ಲಿ ಕೇವಲ ಒಂದೇ ಒಂದು ಕಾರ್ ಅನ್ನು ಮಾರಾಟ ಮಾಡಿತ್ತು. ಈಗ ಈ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಇಂಗ್ಲೆಂಡ್ ಮೂಲದ ಬೆಂಟ್ಲಿ ಈ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.

ಅಕ್ಟೋಬರ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಐಷಾರಾಮಿ ಕಾರುಗಳಿವು

ಬೆಂಟ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮಾರಾಟ ಮಾಡಿದಂತೆ ಈ ವರ್ಷ ಅಕ್ಟೋಬರ್‌ನಲ್ಲಿಯೂ ಕೇವಲ 2 ಕಾರುಗಳನ್ನು ಮಾರಾಟ ಮಾಡಿದೆ. ಇಂಗ್ಲೆಂಡ್ ಮೂಲದ ಮತ್ತೊಂದು ಕಾರು ತಯಾರಕ ಕಂಪನಿಯಾದ ರೋಲ್ಸ್ ರಾಯ್ಸ್ ಈ ಪಟ್ಟಿಯಲ್ಲಿ ಒಂಬತ್ತನೇ ಹಾಗೂ ಕೊನೆಯ ಸ್ಥಾನದಲ್ಲಿದೆ. ರೋಲ್ಸ್ ರಾಯ್ಸ್ ಕಂಪನಿಯು 2020ರ ಅಕ್ಟೋಬರ್ ತಿಂಗಳಿನಲ್ಲಿ ಕೇವಲ ಒಂದು ಕಾರ್ ಅನ್ನು ಮಾರಾಟ ಮಾಡಿತ್ತು.

ಅಕ್ಟೋಬರ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಐಷಾರಾಮಿ ಕಾರುಗಳಿವು

ಆದರೆ ಈ ವರ್ಷದ ಅಕ್ಟೋಬರ್‌ನಲ್ಲಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಒಂದೇ ಒಂದು ಕಾರ್ ಅನ್ನು ಸಹ ಮಾರಾಟ ಮಾಡಿಲ್ಲ. ಕಳೆದ ತಿಂಗಳು ರೋಲ್ಸ್ ರಾಯ್ಸ್ ಕಂಪನಿಯ ಮಾರಾಟ ಸಂಖ್ಯೆ ಶೂನ್ಯ. ಭಾರತದಲ್ಲಿ ಮಾರಾಟವಾಗುವ ಐಷಾರಾಮಿ ಕಾರುಗಳ ಪಟ್ಟಿಯಲ್ಲಿ ಜರ್ಮನಿ ಮೂಲದ ಕಂಪನಿಗಳಾದ ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು ಹಾಗೂ ಆಡಿ ಪ್ರಾಬಲ್ಯ ಹೊಂದಿವೆ ಎಂಬುದು ಈ ಅಂಕಿ ಅಂಶಗಳಿಂದ ಸಾಬೀತಾಗಿದೆ.

ಅಕ್ಟೋಬರ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಐಷಾರಾಮಿ ಕಾರುಗಳಿವು

ಭಾರತದಲ್ಲಿ ಇಂಗ್ಲೆಂಡ್ ಮೂಲದ ಕೆಲವು ಕಂಪನಿಗಳು ತಮ್ಮ ಕಾರುಗಳನ್ನು ಮಾರಾಟ ಮಾಡುತ್ತಿದ್ದರೂ ಅವುಗಳ ಮಾರಾಟ ಸಂಖ್ಯೆ ತೀರಾ ಕಡಿಮೆ. ಭಾರತದಲ್ಲಿ ಈಗ ಕಾರು ಉತ್ಪಾದನೆ ಹಾಗೂ ಮಾರಾಟ ನಿಧಾನಗತಿಯಲ್ಲಿದೆ. ಸೆಮಿಕಂಡಕ್ಟರ್ ಕೊರತೆಯಿಂದಾಗಿ ಈ ಸಮಸ್ಯೆ ಎದುರಾಗಿದೆ. ಆಧುನಿಕ ಕಾರುಗಳ ಪ್ರಮುಖ ಬಿಡಿ ಭಾಗವೆಂದು ಪರಿಗಣಿಸಲಾಗುವ ಸೆಮಿ ಕಂಡಕ್ಟರ್ ಗಳು ಕಡಿಮೆ ಸಂಖ್ಯೆಯಲ್ಲಿ ಪೂರೈಕೆಯಾಗುತ್ತಿವೆ.

ಅಕ್ಟೋಬರ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಐಷಾರಾಮಿ ಕಾರುಗಳಿವು

ಇದರಿಂದ ಕಾರುಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿಲ್ಲ. ಹೀಗಾಗಿ ಕಾರುಗಳನ್ನು ಬುಕ್ ಮಾಡಿದ ಗ್ರಾಹಕರು ಅವುಗಳ ವಿತರಣೆ ಪಡೆಯಲು ಹೆಚ್ಚು ಸಮಯ ಕಾಯಬೇಕಾಗಿದೆ. ಜೊತೆಗೆ ಕಾರುಗಳ ಬೆಲೆಯಲ್ಲಿಯೂ ಗಣನೀಯ ಏರಿಕೆಯಾಗಿದೆ. ಈ ಸಮಸ್ಯೆ ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಎದುರಾಗಿದೆ. ಇದರಿಂದ ಹಲವು ವಾಹನ ತಯಾರಕ ಕಂಪನಿಗಳು ಬಾಧಿತವಾಗಿವೆ.

ಅಕ್ಟೋಬರ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಐಷಾರಾಮಿ ಕಾರುಗಳಿವು

ಪ್ರತಿ ವರ್ಷದಂತೆ ಈ ವರ್ಷವೂ ವಾಹನ ತಯಾರಕ ಕಂಪನಿಗಳು ಹಬ್ಬದ ಸಂದರ್ಭದಲ್ಲಿ ಉತ್ತಮ ಮಾರಾಟವನ್ನು ನಿರೀಕ್ಷಿಸುತ್ತಿದ್ದವು. ಆದರೆ ಈ ವರ್ಷ ವಾಹನ ತಯಾರಕ ಕಂಪನಿಗಳಿಗೆ ಉತ್ತಮವಾಗಿಲ್ಲ. ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ​​(ಎಫ್‌ಎಡಿಎ - ಫಾಡಾ) ಈ ಹಬ್ಬದ ಋತುವು ಆಟೋ ಡೀಲರ್‌ಶಿಪ್‌ಗಳಿಗೆ ವ್ಯಾಪಾರದ ದೃಷ್ಟಿಯಿಂದ ಒಂದು ದಶಕದಲ್ಲೇ ಕೆಟ್ಟದಾಗಿದೆ ಎಂದು ಬಣ್ಣಿಸಿದೆ.

ಅಕ್ಟೋಬರ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಐಷಾರಾಮಿ ಕಾರುಗಳಿವು

ಕರೋನಾ ವೈರಸ್ ಸಾಂಕ್ರಾಮಿಕ ಹಾಗೂ ಸೆಮಿ ಕಂಡಕ್ಟರ್ ಚಿಪ್‌ಗಳ ಜಾಗತಿಕ ಕೊರತೆಯಿಂದಾಗಿ ವಾಹನಗಳಿಗೆ ಬೇಡಿಕೆ ಕುಸಿದಿದೆ ಎಂದು ಫಾಡಾ ಹೇಳಿದೆ. ಚಿಪ್ ಕೊರತೆಯಿಂದಾಗಿ ವಾಹನ ತಯಾರಕ ಕಂಪನಿಗಳು ಸರಿಯಾದ ಸಮಯಕ್ಕೆ ಡೀಲರ್‌ಗಳಿಗೆ ವಾಹನಗಳನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ.

ಅಕ್ಟೋಬರ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಐಷಾರಾಮಿ ಕಾರುಗಳಿವು

ಇದು ವಾಹನ ಮಾರಾಟದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಫಾಡಾ ಹೇಳಿದೆ. ಎಸ್‌ಯುವಿಗಳು ಹಾಗೂ ಐಷಾರಾಮಿ ವಾಹನಗಳ ಮಾರಾಟವು ಸೆಮಿ ಕಂಡಕ್ಟರ್'ಗಳ ಕೊರತೆಯಿಂದ ತೀವ್ರವಾಗಿ ತತ್ತರಿಸಿದೆ. ಜೊತೆಗೆ ಎಂಟ್ರಿ ಲೆವೆಲ್ ಪ್ಯಾಸೆಂಜರ್ ಕಾರುಗಳ ಬೇಡಿಕೆಯು ಸಹ ನಿಧಾನಗತಿಯಲ್ಲಿದೆ ಎಂದು ಫಾಡಾ ಹೇಳಿದೆ.

ಅಕ್ಟೋಬರ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಐಷಾರಾಮಿ ಕಾರುಗಳಿವು

ಇದಲ್ಲದೇ ಇಂಧನ ಬೆಲೆ ಏರಿಕೆಯಿಂದಾಗಿ ದ್ವಿಚಕ್ರ ವಾಹನಗಳ ಬೇಡಿಕೆಯೂ ಕುಸಿದಿದೆ. ಇವುಗಳ ಹೊರತಾಗಿ ಜನರು ಆರ್ಥಿಕ ಅನಿಶ್ಚಿತತೆಗಳ ನಡುವೆ ಆರೋಗ್ಯ ಸಂಬಂಧಿತ ತುರ್ತು ಸ್ಥಿತಿಗಳಿಗಾಗಿ ಹಣ ಉಳಿಸಲು ಮುಂದಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಮೌಲ್ಯದ ಖರೀದಿಗಳನ್ನು ತಪ್ಪಿಸುತ್ತಿದ್ದಾರೆ.

Most Read Articles

Kannada
English summary
List of luxury cars sold during october 2021 in domestic market details
Story first published: Friday, November 19, 2021, 14:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X