MG ಕಂಪನಿಯ ಹೊಸ Hector Plus ಕಾರು ಖರೀದಿಸಿದ ಲಿಟಲ್ ಮಾಸ್ಟರ್!
MG Motor ಕಂಪನಿಯು ಭಾರತದಲ್ಲಿ ವಿವಿಧ ಕಾರು ಮಾದರಿಗಳೊಂದಿಗೆ ಉತ್ತಮ ಬೇಡಿಕೆ ಹೊಂದಿದ್ದು, ಮಧ್ಯಮ ಗಾತ್ರದ ಕಾರು ಮಾದರಿಗಳಾದ Hector ಮತ್ತು Hector Plus ಸರಣಿಗಳೊಂದಿಗೆ ಪ್ರಮುಖ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿವೆ.

Hector ಮತ್ತು Hector Plus ಕಾರುಗಳು ಒಂದೇ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ದಿಗೊಂಡಿದ್ದರೂ 5 ಸೀಟರ್ ಮತ್ತು 7 ಸೀಟರ್ ಮಾದರಿಗಳೊಂದಿಗೆ ಮಾರಾಟಗೊಳ್ಳುತ್ತಿದ್ದು, ಸೆಲೆಬ್ರಿಟಿ ಆಯ್ಕೆಯಲ್ಲೂ MG ಹೊಸ ಕಾರುಗಳು ಗಮನಸೆಳೆಯುತ್ತಿವೆ. ಇತ್ತೀಚೆಗೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಲಿಟಲ್ ಮಾಸ್ಟರ್ ಖ್ಯಾತಿ ಹೊಂದಿರುವ ಸುನೀಲ್ ಗವಾಸ್ಕರ್ ಅವರು ಕೂಡಾ Hector Plus ಮಾಲೀಕತ್ವ ಪಡೆದುಕೊಂಡಿದ್ದಾರೆ.

ವೃತ್ತಿ ಜೀವನದ ಶ್ರೇಷ್ಠ ಸಾಧನೆಗಳಿಗಾಗಿ ಹಲವಾರು ಕಾರುಗಳ ಉಡುಗೊರೆಗಳ ಸಂಗ್ರಹವನ್ನು ಹೊಂದಿದ್ದರು ಹೊಸ ತಲೆಮಾರಿನ ಕಾರುಗಳ ಬಗೆಗೆ ಕ್ರೇಜ್ ಹೊಂದಿರುವ ಸುನೀಲ್ ಗವಾಸ್ಕರ್ ಅವರು ಕುಟುಂಬದೊಂದಿಗೆ ಪ್ರಯಾಣಿಸಲು ವಿನೂತನ ವಿನ್ಯಾಸದ ಮತ್ತು ಅತ್ಯುತ್ತಮ ಕ್ಯಾಬಿನ್ ಸ್ಪೆಸ್ ಹೊಂದಿರುವ MG Hector Plus ಮಾದರಿಯನ್ನು ಖರೀದಿಸಿದ್ದಾರೆ.

MG Hector Plus ಮಾದರಿಯ ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯಗಳೊಂದಿಗೆ ಮಾರಾಟಗೊಳ್ಳುತ್ತಿದ್ದು, ಲಿಟಲ್ ಮಾಸ್ಟರ್ ಸುನೀಲ್ ಗವಾಸ್ಕರ್ ಅವರು 6 ಸೀಟರ್ ಸೌಲಭ್ಯದ ಹೈ ಎಂಡ್ ಹೈಬ್ರಿಡ್ ಪೆಟ್ರೋಲ್ ಮಾದರಿಯನ್ನು ಖರೀದಿಸಿದ್ದಾರೆ.

2020ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ Hector Plus ಕಾರು ಕಳೆದ ಏಪ್ರಿಲ್‌ನಲ್ಲಿ ಹೊಸ ವೆರಿಯೆಂಟ್ ಸೇರ್ಪಡೆಯೊಂದಿಗೆ ಮತ್ತಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಉನ್ನತೀಕರಣಗೊಂಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ 13.96 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.19.94 ಲಕ್ಷ ಬೆಲೆ ಹೊಂದಿದೆ.

ಹೊಸ ಕಾರಿನಲ್ಲಿ ಗ್ರಾಹಕರು ತಮ್ಮಅಗತ್ಯಕ್ಕೆ ಅನುಗುಣವಾಗಿ 1.5 ಲೀಟರ್ ಪೆಟ್ರೋಲ್, 1.5 ಲೀಟರ್ ಪೆಟ್ರೋಲ್ ಹೈಬ್ರಿಡ್ ಹಾಗೂ 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮಾಡಬಹುದಾಗಿದ್ದು, ಅತ್ಯುತ್ತಮ ಮೈಲೇಜ್ ಜೊತೆ ಪರ್ಫಾಮೆನ್ಸ್ ಮಾದರಿಯಾಗಿರುವ ಪೆಟ್ರೋಲ್ ಹೈಬ್ರಿಡ್ ಮಾದರಿಗೆ ಉತ್ತಮ ಬೇಡಿಕೆಯಿದೆ.

1.5 ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 141 ಬಿಹೆಚ್‌ಪಿ, 250 ಎನ್ಎಂ ಟಾರ್ಕ್ ಉತ್ಪಾದಿಸಿದಲ್ಲಿ 2.0 ಲೀಟರ್ ಡೀಸೆಲ್ ಎಂಜಿನ್ ಮಾದರಿಯು 168 ಬಿಹೆಚ್‌ಪಿ, 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಮೈಲ್ಡ್ ಹೈಬ್ರಿಡ್ ಮಾದರಿಯು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಆಯ್ದ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು, ಹೊಸ ಕಾರಿನ ಎಂಜಿನ್‌ಗಳನ್ನು 6 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಮತ್ತು 6 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆಯ್ಕೆಯಾಗಿ ಹೊಂದಿದೆ.

ಇದರೊಂದಿಗೆ ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ನೊಂದಿಗೆ ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಂಜಿ ಕಂಪನಿಯು ಹೊಸ ಕಾರಿನ ಮೂಲಕ ಎಂಪಿವಿ ಕಾರು ಖರೀದಿದಾರನ್ನು ಸೆಳೆಯುತ್ತಿದೆ.

ಇನ್ನು ಸ್ಟ್ಯಾಂಡರ್ಡ್ Hector ಮಾದರಿಯ ಮುಂದುವರಿದ ಭಾಗವಾಗಿರುವ Hector Plus ಮಾದರಿಯನ್ನು ಎಂಪಿಪಿ ಕಾರುಗಳಿಗೆ ಪೈಪೋಟಿಯಾಗಿ ಬಿಡುಗಡೆ ಮಾಡಲಾಗಿದ್ದು, ಪ್ರತ್ಯೇಕ ಕ್ಯಾಪ್ಟನ್ ಸೀಟ್ ಸೌಲಭ್ಯದ ಮೂಲಕ ಎಸ್‌ಯುವಿ ಕಾರು ಪ್ರಿಯರನ್ನು ಸೆಳೆಯುತ್ತಿದೆ.

ಹೊಚ್ಚ ಹೊಸ ಹೆಕ್ಟರ್ ಪ್ಲಸ್ ಕಾರಿನ ತಾಂತ್ರಿಕ ಅಂಶಗಳ ಬಗೆಗೆ ಹೇಳುವುದಾದರೇ, ಹೊಸ ಕಾರು ಸಾಮಾನ್ಯ ಹೆಕ್ಟರ್ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲೇ ಸಿದ್ದಗೊಂಡಿದ್ದು, 2+2+2, 2+3+ 2 ಮಾದರಿಯ ಆಸನ ವಿನ್ಯಾಸವನ್ನು ಪಡೆದುಕೊಂಡಿದೆ.

ಹೊಸ ಕಾರಿನ ಮಧ್ಯದ ಸಾಲಿನಲ್ಲಿರುವ ಕ್ಯಾಪ್ಟನ್ ಸೀಟ್ ಕಾರಿನ ಪ್ರಮುಖ ಆಕರ್ಷಣೆಯಾಗಿದ್ದು, ಬ್ರೌನ್ ಲೆದರ್ ಆಸನವು ಹೆಡ್ ರೆಸ್ಟ್ ಮತ್ತು ಸೆಂಟರ್ ಆರ್ಮ್ ರೆಸ್ಟ್ ಫೀಚರ್ಸ್ ಪಡೆದುಕೊಂಡಿದೆ. ಜೊತೆಗೆ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಹೊಸ ಕಾರಿನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್, ಹೊಲೊಜೆನ್ ಫ್ರಂಟ್ ಗ್ರಿಲ್, ಫ್ರಂಟ್ ಮತ್ತು ರಿಯರ್ ಬಂಪರ್, ಹೊಸ ವಿನ್ಯಾಸದ ರಿಯರ್ ಟೈಲ್ ಲೈಟ್, ಸ್ಕೀಡ್ ಪ್ಲೇಟ್, ಟೈಲ್‌ಗೆಟ್ ತೆರೆಯಲು ಲೆಗ್ ಸ್ಪೈಫ್, ಪನೊರಮಿಕ್ ಸನ್‌ರೂಫ್ ಸೌಲಭ್ಯವಿದೆ.

ಜೊತೆಗೆ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲ್, 10.4-ಇಂಚಿನ ವರ್ಟಿಕಲ್ ಇನ್ಪೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಸ್ಮಾರ್ಟ್ ಫೋನ್ ಕೆನೆಕ್ವಿಟಿ, ವೈ-ಫೈ ಸೌಲಭ್ಯ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ವಿವಿಧ ಮಾದರಿಯ ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ.

ಹೊಸ ಕಾರು 4,720-ಎಂಎಂ ಉದ್ದ, 1,835-ಎಂಎಂ ಅಗಲ, 1,760-ಎಂಎಂ ಅಗಲ ಮತ್ತು 2,720-ಎಂಎಂ ವೀಲ್ಹ್‌ಬೆಸ್ ಹೊಂದಿದ್ದು, ಇದು ಸಾಮಾನ್ಯ ಹೆಕ್ಟರ್ ಮಾದರಿಗಿಂತ 65-ಎಂಎಂ ಹೆಚ್ಚುವರಿ ಉದ್ದವನ್ನು ಪಡೆದುಕೊಂಡಿದೆ.

ಹೊಸ ಕಾರಿನಲ್ಲಿ ಮತ್ತೊಂದು ವಿಶೇಷ ಎಂದರೆ ಅದು ಐ-ಸ್ಮಾಟ್ ಟೆಕ್ನಾಲಜಿ. ಇದರಲ್ಲಿ ಇ-ಸಿಮ್ ಜೋಡಣೆ ಮಾಡಲಾಗಿದ್ದು, 55 ಕೆನೆಕ್ಟೆಡ್ ಫೀಚರ್ಸ್‌ಗಳನ್ನು ಒಳಗೊಂಡಿರುವ ಹೊಸ ತಂತ್ರಜ್ಞಾನದಲ್ಲಿ ಕಾರಿನ ತಾಂತ್ರಿಕ ಅಂಶಗಳ ಕುರಿತಾಗಿ ಕಾರಿನೊಂದಿಗೆ ಸಂಹವನ ಮಾಡಬಹುದಾದ ಸೌಲಭ್ಯ ಇದರಲ್ಲಿದೆ.

ಹೊಸ ಕೆನೆಕ್ಟೆಡ್ ಫೀಚರ್ಸ್‌ನಿಂದಾಗಿ ಹೊಸ ಕಾರಿಗೆ ಗರಿಷ್ಠ ಭದ್ರತೆ ದೊರೆಯಲಿದ್ದು, ಜೀಯೋ ಫೆನ್ಸಿಂಗ್, ವಾಯ್ಸ್ ಅಸಿಸ್ಟ್, ರಿಮೋಟ್ ಫಂಕ್ಷನ್(ಸ್ಟಾರ್ಟ್/ಸ್ಟಾಪ್), ಏರ್ ಕಂಡೀಷನ್, ಎಮರ್ಜನ್ಸಿ ಕಾಲ್ ಸೌಲಭ್ಯವಿದ್ದು, ಮನರಂಜನೆಗಾಗಿ ಹೊಸ ಕಾರಿನಲ್ಲಿ ಎಂಟು ಇನ್ಪಿನಿಟಿ ಸ್ಪೀಕರ್ಸ್ ಸೇರಿದಂತೆ ಬೂಟ್ ಸ್ಪೆಸ್ ತೆರೆಯಲು ಲೆಗ್ ಸ್ವಾಪಿಂಗ್ ಸೌಲಭ್ಯಗಳನ್ನು ನೀಡಲಾಗಿದೆ.


Click it and Unblock the Notifications