ಜನವರಿ ತಿಂಗಳಿನಲ್ಲಿ ನೆಲ ಕಚ್ಚಿದ ಐಷಾರಾಮಿ ಕಾರು ಮಾರಾಟ

ಐಷಾರಾಮಿ ಕಾರುಗಳ ಸೆಗ್'ಮೆಂಟಿನಲ್ಲಿ ಬಹುತೇಕ ಕಂಪನಿಗಳ ಮಾರಾಟವು ಕುಸಿತ ದಾಖಲಿಸಿದೆ. ಜನವರಿ ತಿಂಗಳಿನಲ್ಲಿ ಒಟ್ಟು 2194 ಯುನಿಟ್ ವಾಹನಗಳು ಮಾರಾಟವಾಗಿದ್ದು, ಮಾರಾಟ ಪ್ರಮಾಣದಲ್ಲಿ 40%ನಷ್ಟು ಕುಸಿತ ಉಂಟಾಗಿದೆ.

ಜನವರಿ ತಿಂಗಳಿನಲ್ಲಿ ನೆಲ ಕಚ್ಚಿದ ಐಷಾರಾಮಿ ಕಾರು ಮಾರಾಟ

ಈ ಸೆಗ್'ಮೆಂಟಿನಲ್ಲಿ ಮರ್ಸಿಡಿಸ್ ಕಂಪನಿಯು ಮೊದಲ ಸ್ಥಾನದಲ್ಲಿದ್ದರೆ, ಬಿಎಂಡಬ್ಲ್ಯು ಹಾಗೂ ಆಡಿ ಕಂಪನಿಗಳು ಎರಡನೇ ಹಾಗೂ ಮೂರನೇ ಸ್ಥಾನದಲ್ಲಿವೆ. ಕಳೆದ ತಿಂಗಳು ಮರ್ಸಿಡಿಸ್ ಕಂಪನಿಯ ಒಟ್ಟು 859 ಯುನಿಟ್ ವಾಹನಗಳು ಮಾರಾಟವಾಗಿವೆ. ಈ ಪ್ರಮಾಣವು 2020ರ ಜನವರಿ ತಿಂಗಳಿಗೆ ಹೋಲಿಸಿದರೆ 1202 ಯುನಿಟ್'ಗಳಷ್ಟು ಅಂದರೆ 28%ನಷ್ಟು ಕಡಿಮೆಯಾಗಿದೆ.

ಜನವರಿ ತಿಂಗಳಿನಲ್ಲಿ ನೆಲ ಕಚ್ಚಿದ ಐಷಾರಾಮಿ ಕಾರು ಮಾರಾಟ

ಮರ್ಸಿಡಿಸ್ ಕಂಪನಿಯ ಮಾರುಕಟ್ಟೆ ಪಾಲು 6%ನಷ್ಟು ಬದಲಾಗಿದೆ. ಈಗ ಅದರ ಪಾಲು 39%ಗೆ ಏರಿಕೆಯಾಗಿದೆ. 2020ರ ಜನವರಿ ತಿಂಗಳಿನಲ್ಲಿ ಬಿ‌ಎಂಡಬ್ಲ್ಯು ಕಂಪನಿಯ 1345 ಯುನಿಟ್'ಗಳು ಮಾರಾಟವಾಗಿದ್ದವು. ಕಳೆದ ತಿಂಗಳು 703 ಯುನಿಟ್'ಗಳ ಮಾರಾಟದೊಂದಿಗೆ ಕಂಪನಿಯು ಎರಡನೇ ಸ್ಥಾನದಲ್ಲಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಜನವರಿ ತಿಂಗಳಿನಲ್ಲಿ ನೆಲ ಕಚ್ಚಿದ ಐಷಾರಾಮಿ ಕಾರು ಮಾರಾಟ

ಬಿ‌ಎಂಡಬ್ಲ್ಯು ಕಂಪನಿಯ ಮಾರಾಟವು 47%ನಷ್ಟು ಕುಸಿತವನ್ನು ದಾಖಲಿಸಿದೆ. ಬಿ‌ಎಂಡಬ್ಲ್ಯು ಕಂಪನಿಯ ಮಾರುಕಟ್ಟೆ ಪಾಲು 37%ನಿಂದ 32%ಗೆ ಇಳಿಕೆಯಾಗಿದೆ.ಆಡಿ ಕಂಪನಿಯು ಕಳೆದ ತಿಂಗಳು 254 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. 2020ರ ಜನವರಿಯಲ್ಲಿ ಕಂಪನಿಯ 421 ಯುನಿಟ್'ಗಳು ಮಾರಾಟವಾಗಿದ್ದವು.

ಜನವರಿ ತಿಂಗಳಿನಲ್ಲಿ ನೆಲ ಕಚ್ಚಿದ ಐಷಾರಾಮಿ ಕಾರು ಮಾರಾಟ

ಆಡಿ ಕಂಪನಿಯ ಮಾರಾಟವು 39%ನಷ್ಟು ಕಡಿಮೆಯಾಗಿದೆ. ಆದರೆ ಅದರ ಮಾರುಕಟ್ಟೆ ಪಾಲು 11.6%ನಷ್ಟಿದ್ದು ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ.ಜೆಎಲ್‌ಆರ್ ಕಂಪನಿಯು ಕಳೆದ ತಿಂಗಳು 211 ಯುನಿಟ್‌ಗಳನ್ನು ಮಾರಾಟ ಮಾಡಿದೆ. 2020ರ ಜನವರಿಯಲ್ಲಿ 409 ಯುನಿಟ್‌ಗಳನ್ನು ಮಾರಾಟ ಮಾಡಿತ್ತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಜನವರಿ ತಿಂಗಳಿನಲ್ಲಿ ನೆಲ ಕಚ್ಚಿದ ಐಷಾರಾಮಿ ಕಾರು ಮಾರಾಟ

ಜೆಎಲ್‌ಆರ್ ಕಂಪನಿ ಮಾರಾಟ ಪ್ರಮಾಣವು 48%ನಷ್ಟು ಕಡಿಮೆಯಾಗಿದೆ. ಕಂಪನಿಯ ಮಾರುಕಟ್ಟೆ ಪಾಲು 11.3%ನಿಂದ 9.6%ಗಳಿಗೆ ಇಳಿಕೆಯಾಗಿದೆ.ಕಳೆದ ತಿಂಗಳು ವೊಲ್ವೋ ಕಂಪನಿಯು 109 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ.

ಜನವರಿ ತಿಂಗಳಿನಲ್ಲಿ ನೆಲ ಕಚ್ಚಿದ ಐಷಾರಾಮಿ ಕಾರು ಮಾರಾಟ

ಪೋರ್ಷೆ ಕಂಪನಿಯು ಜನವರಿ ತಿಂಗಳಿನಲ್ಲಿ 46 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿಯ ಮಾರಾಟ ಪ್ರಮಾಣವು 4%ನಷ್ಟು ಕಡಿಮೆಯಾಗಿದೆ. ಆದರೆ ಪೋರ್ಷೆ ಕಂಪನಿಯ ಮಾರುಕಟ್ಟೆ ಪಾಲು 1.3%ನಿಂದ 2.1%ಗೆ ಏರಿಕೆಯಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಜನವರಿ ತಿಂಗಳಿನಲ್ಲಿ ನೆಲ ಕಚ್ಚಿದ ಐಷಾರಾಮಿ ಕಾರು ಮಾರಾಟ

ರೋಲ್ಸ್ ರಾಯ್ಸ್ ಕಂಪನಿಯು 7 ಯುನಿಟ್, ಫೆರಾರಿ 3 ಯುನಿಟ್, ಬೆಂಟ್ಲಿ 1 ಯುನಿಟ್ ಹಾಗೂ ಲ್ಯಾಂಬೊರ್ಗಿನಿ ಕಂಪನಿ 1 ಯುನಿಟ್ ಕಾರುಗಳನ್ನು ಮಾರಾಟ ಮಾಡಿವೆ. ಕಳೆದ ತಿಂಗಳು ಬಹುತೇಕ ಕಾರು ಕಂಪನಿಗಳ ಮಾರಾಟವು ಕಡಿಮೆಯಾಗಿದೆ. ಡಿಸೆಂಬರ್ ತಿಂಗಳವರೆಗೆ ವಾಹನಗಳ ಮಾರಾಟವು ಉತ್ತಮವಾಗಿತ್ತು.

ಜನವರಿ ತಿಂಗಳಿನಲ್ಲಿ ನೆಲ ಕಚ್ಚಿದ ಐಷಾರಾಮಿ ಕಾರು ಮಾರಾಟ

ಆದರೆ ಕಳೆದ ತಿಂಗಳು ಇಳಿಕೆ ಕಂಡುಬಂದಿದೆ. ಹಲವು ಸೆಗ್'ಮೆಂಟ್'ಗಳ ಕಾರು ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ. 2020ರ ಜನವರಿಯಲ್ಲಿ ಕಾರು ಮಾರಾಟವು ಉತ್ತಮವಾಗಿತ್ತು. ಹೊಸ ವರ್ಷದಲ್ಲಿ ಗ್ರಾಹಕರನ್ನು ಸೆಳೆಯಲು ಕಂಪನಿಗಳು ಕಸರತ್ತು ಮಾಡಬೇಕಾಗಿದೆ.

Most Read Articles
 

Kannada
English summary
Luxury car sales decreases in January 2021. Read in Kannada.
Story first published: Wednesday, February 10, 2021, 11:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X